Uttara Kannada News: ಈಗಿನ ಕಾಂಗ್ರೆಸ್‌ ಪಕ್ಷವೇ ನಕಲಿ: ನಳಿನ್ ಕುಮಾರ ಕಟೀಲ್

By Kannadaprabha News  |  First Published Dec 21, 2022, 11:34 AM IST

ಈಗಿನ ಕಾಂಗ್ರೆಸ್‌ ಪಕ್ಷ ನಕಲಿಯಾಗಿದ್ದು, ಆ ಪಕ್ಷದ ಮುಖಂಡರು ಭಯೋತ್ಪಾದನೆ ಮತ್ತು ಭ್ರಷ್ಟಾಚಾರ ಬೆಂಬಲಿಸುತ್ತಿದ್ದಾರೆ. ಹೀಗಾಗಿಯೇ ಕಾಂಗ್ರೆಸ್‌ ಪಕ್ಷವನ್ನು ಎಲ್ಲೆಡೆ ದೂರ ಇಟ್ಟಿದ್ದು ಕಾಂಗ್ರೆಸ್‌ ಮುಕ್ತ ಭಾರತ ಆಗುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಸಂಸದ ನಳಿನಕುಮಾರ ಕಟೀಲ್‌ ಹೇಳಿದರು.


ಮುರ್ಡೇಶ್ವರ (ಡಿ.21) : ಈಗಿನ ಕಾಂಗ್ರೆಸ್‌ ಪಕ್ಷ ನಕಲಿಯಾಗಿದ್ದು, ಆ ಪಕ್ಷದ ಮುಖಂಡರು ಭಯೋತ್ಪಾದನೆ ಮತ್ತು ಭ್ರಷ್ಟಾಚಾರ ಬೆಂಬಲಿಸುತ್ತಿದ್ದಾರೆ. ಹೀಗಾಗಿಯೇ ಕಾಂಗ್ರೆಸ್‌ ಪಕ್ಷವನ್ನು ಎಲ್ಲೆಡೆ ದೂರ ಇಟ್ಟಿದ್ದು ಕಾಂಗ್ರೆಸ್‌ ಮುಕ್ತ ಭಾರತ ಆಗುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಸಂಸದ ನಳಿನಕುಮಾರ ಕಟೀಲ್‌ ಹೇಳಿದರು.

ಮುರ್ಡೇಶ್ವರದಲ್ಲಿ ಮಂಗಳವಾರ ಬಿಜೆಪಿ ರಾಜ್ಯ ಪದಾಧಿಕಾರಿಗಳ ಉದ್ಘಾಟನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷ ಗುಲಾಮಗಿರಿ ರಾಜಕಾರಣ ಮಾಡುತ್ತಿದೆ. ಇದೊಂದು ಇತಿಹಾಸ ತಿರುಚಿದ, ದೇಶಪ್ರೇಮಿಗಳಿಗೆ ಅವಮಾನ ಮಾಡಿದ ಪಕ್ಷವಾಗಿದೆ. ಸಂವಿಧಾನ ರಚಿಸಿದ ಡಾ. ಬಿ.ಆರ್‌. ಅಂಬೇಡ್ಕರ್‌ರಂತಹ ಮಹಾನ್‌ ಚೇತನರನ್ನೇ ಕಾಂಗ್ರೆಸ್‌ ಮರೆತಿದೆ. 2014ರಿಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಕೆಲಸ ಮಾಡಲಾಗಿದೆ ಎಂದರು.

Tap to resize

Latest Videos

Assembly electioin: ಬಿಜೆಪಿಗೆ 150 ಸ್ಥಾನ ಖಚಿತ: ಕೋಟಾ ಶ್ರೀನಿವಾಸ ಪೂಜಾರಿ

ಮಹಾತ್ಮಾ ಗಾಂಧೀಜಿಯವರ ರಾಮರಾಜ್ಯ ಕನಸು ನನಸು ಮಾಡಲು ನರೇಂದ್ರ ಮೋದಿ ಸರ್ಕಾರ ಮುಂದಾಗಿದೆ. ಈಗಿನದ್ದು ಸಾಂಸ್ಕೃತಿಕ ಭಾರತವಾಗಿದ್ದು, ವಿಶ್ವದೆಲ್ಲೆಡೆ ಭಾರತದ ನಿಲುವಿಗೆ ಮನ್ನಣೆ ದೊರಕುತ್ತಿದೆ. ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದಂತಹ ಸಂದರ್ಭದಲ್ಲಿ ಭಯೋತ್ಪಾದನೆ, ಭ್ರಷ್ಟಾಚಾರಕ್ಕೆ ಪ್ರೇರಣೆ ಸಿಕ್ಕಿದೆ ಎಂದು ಅವರು ಹೇಳಿದರು.

ಬಿಜೆಪಿಗೆ 150+ ಸೀಟು:

ಕಾಂಗ್ರೆಸ್‌ ವೋಟ್‌ಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಮುಂದಾಗಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್‌ಗೆ ಇಂದು ಒಡೆದು ಆಳುವ ಮತ್ತು ತುಷ್ಟೀಕರಣ ನೀತಿಯೇ ಮುಳುವಾಗಿದೆ. ಹೀಗಾಗಿ ದೇಶದ ಜನತೆ ಆ ಪಕ್ಷವನ್ನು ತಿರಸ್ಕರಿಸುತ್ತಿದ್ದು, ಕಾಂಗ್ರೆಸ್‌ ಮುಕ್ತ ಭಾರತ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಪ್ಲಸ್‌ ಸ್ಥಾನವನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಅವರು, ಚುನಾವಣೆ ತಯಾರಿ ಈಗಾಗಲೇ ಸಿದ್ಧತೆ ನಡೆಸಲಾಗಿದೆ. ಪ್ರತಿ ಬೂತ್‌ ಮಟ್ಟದ ಮನೆ ಮನೆಗಳಿಗೂ ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ತಿಳಿಸಿ ಪಕ್ಷವನ್ನು ಸದೃಢಗೊಳಿಸಲಾಗಿದೆ. ಕಾಂಗ್ರೆಸ್‌ ಒಳಜಗಳದಿಂದ ಬಿಜೆಪಿಗೆ ಹೆಚ್ಚಿನ ಲಾಭ ಆಗಲಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಸಾವರ್ಕರ, ಟಿಪ್ಪು ಇತಿಹಾಸ ಓದಲಿ: ಕಟೀಲ್‌

 ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ನ ಅಧಿಕಾರಾವಧಿಯಲ್ಲಿ ಗೋ ಹಂತಕರಿಗೆ, ಭಯೋತ್ಪಾದಕರಿಗೆ, ಡ್ರಗ್‌ ಮಾಫಿಯಾ ಮತ್ತಿತರ ಅನಧಿಕೃತ ಚಟುವಟಿಕೆಗಳನ್ನು ಬೆಂಬಲಿಸುವ ಕೆಲಸ ಮಾಡಲಾಗಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನುಕುಮಾರ ಕಟೀಲ ಆರೋಪಿಸಿದರು.

ಮುರ್ಡೇಶ್ವರದಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಕಾಂಗ್ರೆಸ್ಸಿನ ಧೋರಣೆ ಬಗ್ಗೆ ಕಿಡಿಕಾರಿದ ಅವರು, ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ ಅವರನ್ನು ತೀವ್ರವಾಗಿ ವಿರೋಧಿಸಿ ಮತಾಂಧ ಟಿಪ್ಪುವನ್ನು ಬೆಂಬಲಿಸುವ ಸಿದ್ದರಾಮಯ್ಯ ಒಮ್ಮೆ ಸಾರ್ವಕರ್‌ ಮತ್ತು ಟಿಪ್ಪು ಇತಿಹಾಸವನ್ನು ಓದಿ ತಿಳಿದುಕೊಳ್ಳಬೇಕೆಂದು ಸಲಹೆ ನೀಡಿದರು.

ಈಗಿನದ್ದು ಡೂಪ್ಲಿಕೇಟ್‌ ಕಾಂಗ್ರೆಸ್‌, ನಕಲಿ ಗಾಂಧಿಗಳು: ಸಚಿವ ಜೋಶಿ

ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ನಡುವಿನ ಮುಖ್ಯಮಂತ್ರಿ ಆಗುವ ಗಲಾಟೆಯಿಂದ ಕಾಂಗ್ರೆಸ್‌ ಪಕ್ಷ ಸೊರಗಿದೆ. ದಲಿತ ಮುಖಂಡ ಜಿ.ಪರಮೇಶ್ವರ ಅವರನ್ನು ಕಾಂಗ್ರೆಸ್‌ ಪಕ್ಷ ಮೂಲೆಗುಂಪು ಮಾಡಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರನ್ನೇ ಮರೆತಿರುವ ಕಾಂಗ್ರೆಸ್ಸಿಗೆ ಪರಮೇಶ್ವರ ಯಾವ ಲೆಕ್ಕ ಎಂದು ಟಾಂಗ್‌ ನೀಡಿದರು. ಕಾಂಗ್ರೆಸ್‌, ಜೆಡಿಎಸ್‌ ಕುಟುಂಬ ರಾಜಕಾರಣಕ್ಕೆ ಒತ್ತು ನೀಡಿದ್ದರೆ, ಬಿಜೆಪಿ ರಾಷ್ಟ್ರೀಯವಾದ ರಾಜಕಾರಣ ಮಾಡಿ ರಾಜ್ಯದಲ್ಲಿ ಗುಜರಾತಿನಂತೆ ಅತೀ ಹೆಚ್ಚು ಸ್ಥಾನ ಪಡೆಯಲಿದೆ ಎಂದು ಭವಿಷ್ಯ ನುಡಿದರು.

click me!