ಕರ್ನಾಟಕ ಮುಖ್ಯಮಂತ್ರಿ ಬದಲಾವಣೆ ವಿಚಾರ : ಬಿ.ವೈ.ವಿಜಯೇಂದ್ರ ಮಹತ್ವದ ಹೇಳಿಕೆ

By Kannadaprabha NewsFirst Published Nov 15, 2021, 6:38 AM IST
Highlights
  • ಬೀಟ್‌ ಕಾಯಿನ್‌ ಅವ್ಯವಹಾರದಲ್ಲಿ ಯಾರಿದ್ದಾರೆ ಯಾರಿಲ್ಲ ಎಂಬುದು ತನಿಖೆಯಿಂದ ಹೊರಬರಬೇಕಾಗಿದೆ. 
  •  ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ, ಅಂತಹ ಸಂದರ್ಭ ಸೃಷ್ಟಿಯಾಗಿಲ್ಲ 

ಬಾಗೇಪಲ್ಲಿ (ನ.15): ಬೀಟ್‌ ಕಾಯಿನ್‌ (bitcoin) ಅವ್ಯವಹಾರದಲ್ಲಿ ಯಾರಿದ್ದಾರೆ ಯಾರಿಲ್ಲ ಎಂಬುದು ತನಿಖೆಯಿಂದ ಹೊರಬರಬೇಕಾಗಿದೆ. ಆದರೆ ಕಾಂಗ್ರೆಸ್‌ (Congress) ವಿನಾಕಾರಣ ಬೇರೆ ಬೇರೆ ರಾಜಕೀಯ (Politics) ಮುಖಂಡರುಗಳ ಹೆಸರುಗಳನ್ನು ಹೇಳುವ ಮೂಲಕ ಮುಖ್ಯಮಂತ್ರಿಗಳ ಬಗ್ಗೆ ಆಪಾಧನೆ ಮಾಡುವಂತಹ ಪ್ರಯತ್ನ ಮಾಡುತ್ತಿದ್ದಾರೆ ಇವೆಲ್ಲವೂ ಸತ್ಯಕ್ಕೆ ದೂರ ಎಂದು ಬಿಜೆಪಿ (BJP) ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ತಿಳಿಸಿದರು.

ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಪಟ್ಟಣದ ಕೆಎಸ್‌ಆರ್‌ಟಿ ಬಸ್‌ (KSRTC) ನಿಲ್ದಾಣದ ಮುಂಭಾಗದಲ್ಲಿ ಬಿಜೆಪಿ (BJP) ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬಲವರ್ಥನೆ ಮಾಡುವ ನಿಟ್ಟಿನಲ್ಲಿ ರಾಜ್ಯಾದ್ಯಾಂತ ಪ್ರವಾಸ ಕೈಗೊಂಡಿರುವುದಾಗಿ ತಿಳಿಸಿದರು.

ಬೀಟ್‌ ಕಾಯಿನ್‌ ಪ್ರಕರಣದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಜ್ಯದ ಜನರಲ್ಲಿ ಗೊಂದಲ ಸೃಷ್ಟಿಸುವ ಮೂಲಕ ವಿಧಾನ ಪರಿಷತ್‌ ಚುನಾವಣೆಯಲ್ಲಿ (MLC Election) ಯಶಸ್ವಿಯಾಗುವಂತಹ ಹುನ್ನಾರ ನಡೆಸುತ್ತಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ಯಾವುದೇ ಲಾಭ ಆಗಲ್ಲ ಎಂದರು.

ಈ ಪ್ರಕರಣದಲ್ಲಿ ಮುಖ್ಯಮಂತ್ರಿ (karnataka CM) ಬದಲಾವಣೆ ಆಗುವ ಸಂಭವ ಇದೇಯೇ ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ, ಅಂತಹ ಸಂದರ್ಭ ಸೃಷ್ಟಿಯಾಗಿಲ್ಲ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಆರ್‌.ಪ್ರತಾಪ್‌, ಸೇರಿದಂತೆ ಕಾರ್ಯಕರ್ತರು ಇದ್ದರು.

ಬಿಜೆಪಿ ನಾಯಕರ ಹೆಸರು ಹೇಳಲಿ : ಬಿಟ್‌ ಕಾಯಿನ್‌(Bitcoin) ಹಗರಣದಲ್ಲಿ ಇಬ್ಬರು ಪ್ರಭಾವಿ ನಾಯಕರಿದ್ದಾರೆ ಎನ್ನುವ ಮಾಹಿತಿ ಇದೆ. ತನಿಖೆ ಮಾಡುವ ಅಧಿಕಾರ ಇರುವುದು ಸಿಎಂಗೆ. ಅವರು ಹೆಸರು ಬಹಿರಂಗಪಡಿಸಿ ಅಂತಾ ಹೇಳಿದೆ ಯಾಕಂದ್ರೆ ಪೊಲೀಸರು ಆರೋಪಿ ಶ್ರೀಕಿಯಿಂದ(Shreeki) ಬಿಟ್‌ ಕಾಯಿನ್‌ ರಿಕವರಿ ಪಡಿದಿದ್ದಾರೆ ಅಂತಾ ಹೇಳ್ತಾರೆ ಎಂದು ಮಾಜಿ ಸಿಎಂ, ಬಾದಾ​ಮಿ ಶಾಸಕ ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ. 

ಅವರು ಬಾದಾ​ಮಿ(Badami) ನಗರದಲ್ಲಿ ಶನಿ​ವಾರ ನೂತನ ಹೊಸಗೌಡ್ರ ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಶ್ರೀಕಿಯಿಂದ ವಶಕ್ಕೆ ಪಡೆದು ಬಿಟ್‌ ಕಾಯಿನ್‌ ಯಾರ ಹತ್ತಿರ ಹೋಗಿದೆ.. ಯಾರಿಗೆ ಟ್ರಾನ್ಸಫರ್‌ ಆಗಿದೆ..? ಪೊಲೀಸರಿಗೆ ಹೋಗಿದ್ಯಾ..?, ರಾಜಕಾರಣಿಗಳಿಗೆ(Politicians)ಹೋಗಿದ್ಯಾ? ಹೇಳಬೇಕಲ್ವಾ. ಸೀಜ್‌ ಮಾಡಿದ್ದಾರೆ ಅಂತಾ ಹೇಳ್ತಾರಲ್ಲ ಹಾಗಾದ್ರೆ ಹೆಸರು ಹೇಳಬೇಕಲ್ಲ. ಇದರಲ್ಲಿ ಕಾಂಗ್ರೆಸ್‌ನವರೇ(Congress) ಇದ್ದಾರೆ ಅಂತಾ ಸಿಎಂ ಬೊಮ್ಮಾಯಿ(Basavaraj Bommai) ಹೇಳ್ತಾರೆ. ಆಯ್ತಪ್ಪ.. ಕಾಂಗ್ರೆಸ್‌ನವರೇ ಯಾರು ಅಂತಾ ಹೇಳಿ.. ಇದ್ರೆ ಅರೆಸ್ಟ್‌ ಮಾಡಿ ಎಂದು ಸವಾಲ್‌ ಹಾಕಿದರು.

ಬಿಜೆಪಿಯವರಿದ್ದಾರಾ? ಕಾಂಗ್ರೆಸ್‌ ನವರಿದ್ದಾರಾ.? ಜೆಡಿಎಸ್‌ ನವರಿದ್ದಾರಾ? ಹೇಳಬೇಕಲ್ಲ ಎಂದು ಪ್ರಶ್ನಿ​ಸಿ​ದ​ರು. ಬಿಟ್‌ ಕಾಯಿನ್‌ ಪ್ರಕರಣದಲ್ಲಿ ಸಿಎಂ ಬೊಮ್ಮಾಯಿ ತಮ್ಮ ಸ್ಥಾನ ಕಳೆದಿಕೊಳ್ಳಲಿದ್ದಾರೆಂಬ ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ(Priyank Kharge) ಹೇಳಿಕೆ ವಿಚಾರ ಪ್ರತಿಕ್ರಿಯಿಸಿದ ಅವರು, ಖರ್ಗೆಯವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಖರ್ಗೆಯವರ ಜೊತೆ ಮಾತಾಡಿಲ್ಲ, ಅವರ ಬಳಿ ಏನು ದಾಖಲೆ ಇದೆ ಅಂತಾ ಕೇಳ್ತೀನಿ ಎಂದರು.

ಬ್ರೇಕಿಂಗ್‌ ನ್ಯೂಸ್‌ ಠುಸ್ - ದೊಡ್ದ ಸುದ್ದಿ ಕೊಡುತ್ತೇನೆ ಎಂದಿದ್ದ ಕಾಂಗ್ರೆಸ್ಸಿಗ, ಈಗೇನಾಯಿತು?

ಇಬ್ಬರು ಬಿಜೆಪಿ(BJP) ನಾಯಕರು ಹೆಸರು ಹೇಳ್ತಿರಾ ಅನ್ನೋ ಪ್ರಶ್ನೆಗೆ, ನಾನ್‌ ಹೇಳಲ್ಲ ಎಂದು ತಲೆ ಅಲ್ಲಾಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ತನಿ​ಖೆ ಮಾಡ್ತಿರೋರು ಯಾರು, ಅವರೇ ಹೇಳಲಿ. ಪೊಲೀಸರು(Police) ಸ್ವತಂತ್ರವಾಗಿ ಕೆಲಸ ಮಾಡ್ತಾರಾ..? ಪೊಲೀಸರು ರಾಜ್ಯ ಸರ್ಕಾರದಡಿ ಕೆಲಸ ಮಾಡು​ತ್ತಾ​ರೆ. ಸರ್ಕಾರದ ಅಂಡರ್‌ ಕೆಲಸ ಮಾಡ್ತಾರೆ. ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌(Jagadish Shettar) ದೆಹಲಿಗೆ ಹೋಗಿರೋದು ಎಂಬು​ದು ಗೊತ್ತಿಲ್ಲ. ಅವ್ರನ್ನೇ ಕೇಳಿ, ಜಗದೀಶ್‌ ಶೆಟ್ಟರ್‌ ಮರಳಿ ಬರ್ತಾರಲ್ಲ ಅವರಿಗೆ ಕೇಳಿ ಎಂದು ಸಿದ್ದು ವ್ಯಂಗ್ಯವಾಡಿದರು.

ಬಿಟ್‌ ಕಾಯಿನ್‌ ಪ್ರಕರಣ, ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಸರ್ಜೆವಾಲಾ(Randeep Surjewala) ಹೇಳಿಕೆಗೆ ಸುರ್ಜೇವಾಲಾ ಅವರು ಹೇಳಿದ್ದನ್ನೇ ನಾನೂ ಹೇಳಿದ್ದು..! ಬಿಟ್‌ ಕಾಯಿನ್‌ ಹಗರಣದಲ್ಲಿ ಬಿಜೆಪಿ ನಾಯಕರುವ ಬಗ್ಗೆ ಅವರೇ ಹೇಳಲಿ. ಯಾರೂ ಇದ್ದಾರೆ ಅನ್ನೋದನ್ನ ಸಿಎಂ ಅಧಿಕೃತವಾಗಿ ಹೇಳಲಿ. ನಾನು ಸರ್ಕಾರ ನಡೆಸ್ತೀನಾ..? ನನಗಿರೋ ಮಾಹಿ​ತಿ ಹೇಳಿದ್ದೇನೆ, ಯಾರಿದ್ದಾರೆ ಅಂತಾ ಗೊತ್ತಿಲ್ಲ. ಪೊಲೀಸ್‌ ಇಲಾಖೆ ಅಧಿಕಾರಿ ಆಡಿಯೋ ರಿಲೀಸ್‌ ವಿಚಾರ. ಇದಕ್ಕಿಂತ ಎವಿಡೆನ್ಸ್‌ ಬೇಕಾ ಎಂದ ಮಾಜಿ ಸಿಎಂ ಸಿದ್ದರಾಮಯ್ಯ ಅವ​ರು, ಪ್ರಕರಣವನ್ನು ಮುಚ್ಚಿ ಹಾಕುವ ಅನುಮಾನ ಬರುತ್ತಿದೆ ಎಂದರು.

ಬಾಗಲಕೋಟೆ ವಿಜಯಪುರ(Bagalkote-Vijayapura) ಪರಿಷತ್‌ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನಾಳೆ ತೀರ್ಮಾನ ಮಾಡ್ತೀವಿ ಎಂದು ಪ್ರಶ್ನೆ​ಯೊಂದ​ಕ್ಕೆ ಸಿದ್ದರಾಮಯ್ಯ ಉತ್ತ​ರಿ​ಸಿ​ದ​ರು.

click me!