Bitcoin ಹಗರಣದಿಂದ ಒಂದೇ ಕಲ್ಲಿನಲ್ಲಿ ಹಲವು ಹಕ್ಕಿ ಹೊಡೆದ್ರಾ ಸಿದ್ದರಾಮಯ್ಯ?

By Suvarna NewsFirst Published Nov 14, 2021, 7:43 PM IST
Highlights

* ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಬಿಟ್ ಕಾಯಿನ್ ಹಗರಣ
* ಕಾಂಗ್ರೆಸ್-ಬಿಜೆಪಿ ನಾಯಕರ ಆರೋಪ-ಪ್ರತ್ಯಾರೋಪ ತಾರಕಕ್ಕೆ
* ಸಿದ್ದರಾಮಯ್ಯ ಒಂದೇ ಕಲ್ಲಲ್ಲಿ ಹಲವು ಹಕ್ಕಿಗಳನ್ನು ಹೊಡೆದಿದ್ದಾರೆ ಎಂದ ಬಿಜೆಪಿ

ಬೆಂಗಳೂರು, (ನ.14): ರಾಜ್ಯ ರಾಜಕಾರಣದಲ್ಲಿ (Karnataka Politics) ಬಿಟ್ ಕಾಯಿನ್ ಹಗರಣ Bitcoin Scam) ಸಂಚಲನ ಮೂಡಿಸಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಇದರ ಮಧ್ಯೆ ಬಿಜೆಪಿ, ಸಿದ್ದರಾಮಯ್ಯ ವಿರುದ್ಧ ಬಿಜೆಪಿ (BJP) ವಾಗ್ದಾಳಿ ನಡೆಸಿದೆ.

 ಬುರುಡೆರಾಮಯ್ಯ ಎಂದು ಸಿದ್ದರಾಮಯ್ಯ (Siddaramaiah) ವಿರುದ್ಧ ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ. ಡಿಕೆಶಿ ವಿರುದ್ಧ ಮಾತನಾಡಿದ್ದ ಉಗ್ರಪ್ಪರನ್ನು ರಕ್ಷಿಸುವುದು. ಶಿಸ್ತುಕ್ರಮದಿಂದ ವಿ ಎಸ್ ಉಗ್ರಪ್ಪರನ್ನು ರಕ್ಷಿಸುವುದು. ಮೊಹಮ್ಮದ್ ನಲಪಾಡ್‌ಗೆ (Mohammed Nalapad) ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ (Youth Congress President) ತಪ್ಪಿಸುವುದು. ಡಿಕೆಶಿರನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವುದು. ದಲಿತ ವಿರೋಧಿ ಆರೋಪದಿಂದ ಪಾರಾಗುವುದು. ಬಿಜೆಪಿ ವಿರುದ್ಧ ಸಲ್ಲದ ಅಪಪ್ರಚಾರವನ್ನು ನಡೆಸುವುದು. ಹೀಗೆ ಶಂಕಿತ ಬಿಟ್​ಕಾಯಿನ್ ಹಗರಣದಿಂದ ಸಿದ್ದರಾಮಯ್ಯ ಒಂದೇ ಕಲ್ಲಿನಲ್ಲಿ ಹಲವು ಹಕ್ಕಿ ಹೊಡೆದಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟ್ವೀಟ್ ಮಾಡಿದೆ.

ನನಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸಿಗದಂತೆ ಹುನ್ನಾರ: ನಲಪಾಡ್ ಅಳಲು

√ ಡಿಕೆಶಿ ವಿರುದ್ಧ ಮಾತನಾಡಿದ್ದ ತಮ್ಮ ಆಪ್ತ ಉಗ್ರಪ್ಪ ಅವರನ್ನು ಶಿಸ್ತುಕ್ರಮದಿಂದ ರಕ್ಷಿಸುವುದು.

√ ಮೊಹಮ್ಮದ್ ನಲಪಾಡ್ ಅವರಿಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತಪ್ಪಿಸುವುದು.

√ ಡಿಕೆಶಿ ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವುದು.

2/2

— BJP Karnataka (@BJP4Karnataka)

ಬಿಟ್​ಕಾಯಿನ್ ವಿಚಾರ ಮೊದಲು ಪ್ರಸ್ತಾಪಿಸಿದ್ದು ಸಿದ್ದರಾಮಯ್ಯ. ಡಿಕೆ ಶಿವಕುಮಾರ್ (DK Shivakumar) ಬಣದ ನಲಪಾಡ್‌ಗೆ ಅಧಿಕಾರ ತಪ್ಪಿಸುವುದು, ವಿನಾಕಾರಣ ರಾಜಕೀಯ ಹುಯಿಲೆಬ್ಬಿಸುವುದೇ ಇದರ ಉದ್ದೇಶ. ಬಿಟ್ ಕಾಯಿನ್ ವಿಚಾರ ರಾಜಕೀಯ ವೈಷಮ್ಯದ ಪ್ರತಿಪಲನವಷ್ಟೆ. ಕಾಂಗ್ರೆಸ್ ನಾಯಕರಿಬ್ಬರ ನಡುವಿನ ರಾಜಕೀಯ ವೈಷಮ್ಯದ ಪ್ರತಿಫಲನ. ಅದರಿಂದಾಚೆಗೆ ಬೇರೇನಿಲ್ಲ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.

ಶಂಕಿತ ಹಗರಣದಿಂದ ಸಿದ್ದರಾಮಯ್ಯ ಒಂದೇ ಕಲ್ಲಿನಲ್ಲಿ ಹಲವು ಹಕ್ಕಿ ಹೊಡೆದಿದ್ದಾರೆ.

√ ತಮ್ಮನ್ನು ಸುತ್ತಿಕೊಂಡ ದಲಿತ ವಿರೋಧಿ ಆರೋಪದಿಂದ ತಪ್ಪಿಸಿಕೊಳ್ಳುವುದು.

√ ಬಿಜೆಪಿ ವಿರುದ್ಧ ಸಲ್ಲದ ಅಪಪ್ರಚಾರ ನಡೆಸುವುದು.

1/2

— BJP Karnataka (@BJP4Karnataka)

ಜನವರಿಯಲ್ಲಿ ನನಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸಿಗುತ್ತದೆ ಎಂಬ ಕಾರಣಕ್ಕಾಗಿ ನನ್ನನ್ನು ಸಿಲುಕಿಸಲಾಗುತ್ತಿದೆ ಎಂದು ನಲಪಾಡ್ ಆರೋಪಿಸುತ್ತಿದ್ದಾರೆ. ತಮ್ಮ ಆಪ್ತನ ಪುತ್ರ ರಕ್ಷಾ ರಾಮಯ್ಯಗಾಗಿ ಸಿದ್ದರಾಮಯ್ಯ ಅವರು ನಲಪಾಡ್ ವಿರೋಧಿಸಿದ್ದು ರಾಜ್ಯಕ್ಕೆ ತಿಳಿದಿದೆ. ಹಾಗಾದರೆ ಇದರ ಹಿಂದಿರುವುದು ಏನು ಎಂದು ಬಿಜೆಪಿ ಪ್ರಶ್ನಿಸಿದೆ.

ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ಯುವ ನಾಯಕ ಮೊಹಮ್ಮದ್ ನಲಪಾಡ್ ಹೆಸರು ಕೇಳಿಬರುತ್ತಿದ್ದು, ಅವರನ್ನ ಬಂಧಿಸಿ ತನಿಖೆ ನಡೆಸಬೇಕೆಂದು ಸಚಿವ ಅಶ್ವತ್ಥ್ ನಾರಾಯಣ (Dr CN Ashwath Narayan) ಒತ್ತಾಯಿಸಿದ್ದಾರೆ.

ಇನ್ನು ಶ್ರೀಕಿ ಜೊತೆಗಿನ ಸಂಬಂಧದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮೊಹಮ್ಮದ್ ನಲಪಾಡ್, ನನಗೆ ಶ್ರೀಕಿಯ ಪರಿಚಯವಿದ್ದಿದ್ದು ನಿಜ, ಪರಿಚಯವಿಲ್ಲ ಎಂದರೆ ತಪ್ಪಾಗುತ್ತದೆ. ನನ್ನ ತಮ್ಮನ ಸ್ನೇಹಿತ ಮನೀಶ್ ಮೂಲಕ ಶ್ರೀಕಿ ಪರಿಚಯವಾಯಿತು. ಆಧಾರ್ ಕಾರ್ಡ್ ಕೇಳಿ ಸ್ನೇಹ ಮಾಡಲು ಸಾಧ್ಯವೇ, ಆದರೆ ಈಗ ನನಗೂ ಶ್ರೀಕಿಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಶ್ರೀಕಿ ಬಿಟ್ ಕಾಯಿನ್ ವ್ಯವಹಾರದಲ್ಲಿ ಹ್ಯಾಕ್ ಮಾಡುತ್ತಾನೋ ಏನೋ ನನಗೆ ಗೊತ್ತಿಲ್ಲ, ಹ್ಯಾಕ್ ಮಾಡೋದು, ಬಿಡೋದು ಅವನ ವೈಯಕ್ತಿಕ ಕೆಲಸ, ಅದರ ಬಗ್ಗೆ ನಾವು ಚರ್ಚೆ ಮಾಡಲು ಹೋಗಿಲ್ಲ. ಫರ್ಜಿ ಕೆಫೆ ಘಟನೆ ಬಳಿಕ ನನಗೂ ಶ್ರೀಕಿಗೂ ಸಂಪರ್ಕವಿಲ್ಲ. ಇದನ್ನು ಸ್ವತಃ ಶ್ರೀಕಿಯೇ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಅದಾದ ನಂತರ ಶ್ರೀಕಿಗೂ ನನಗೂ ಯಾವುದೇ ಸಂಪರ್ಕವಿಲ್ಲ, ಬಿಟ್ ಕಾಯಿನ್ ಬಗ್ಗೆ ನಾವು ಚರ್ಚೆ ನಡೆಸಿಯೇ ಇಲ್ಲ ಎಂದು ಎಂದಿದ್ದಾರೆ.

ನಾನು ಯಾವುದೇ ತಪ್ಪು ಮಾಡಿಲ್ಲ, ನಾನು ಏಕೆ ಆತಂಕಪಡಲಿ, ಸ್ವಲ್ಪ ಸಂಶಯ ಬಂದಿದ್ದರೂ ಪೊಲೀಸರು ಬಿಡುತ್ತಿರಲಿಲ್ಲ. ಅಂದು ಫರ್ಜಿ ಕೆಫೆಗೆ ಶ್ರೀಕಿ ಆಕಸ್ಮಿಕವಾಗಿ ಬಂದಿದ್ದಷ್ಟೆ ಹೊರತು ನಾವು ಕರೆದಿಲ್ಲ. ಬಿಟ್ ಕಾಯಿನ್ ಬಗ್ಗೆ ಆತನ ಜೊತೆ ಚರ್ಚೆಯೇ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

click me!