Bagalkote: ಸಿದ್ದರಾಮೋತ್ಸವ ಬದಲಾಗಿ ಸಿದ್ದರಾಮ ಉರಿಸೋ ಉತ್ಸವ ಮಾಡಲಿ: ಯತ್ನಾಳ ವ್ಯಂಗ್ಯ

By Govindaraj SFirst Published Jul 10, 2022, 9:54 AM IST
Highlights

ಅದು ಸಿದ್ದರಾಮೋತ್ಸವ ಅಲ್ಲ, ಕಾಂಗ್ರೆಸ್ಸಿನವರು ಮನೆಗೆ ಹೋಗುವ ಉತ್ಸವ , ಹೀಗಾಗಿ ಅವರೆಲ್ಲಾ ಸಿದ್ದರಾಮೋತ್ಸವ ಬದಲಾಗಿ ಸಿದ್ದರಾಮ ಉರಿಸೋ ಉತ್ಸವ ಮಾಡಬೇಕಿತ್ತು ಎಂದು ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ವ್ಯಂಗ್ಯವಾಡಿದರು.

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ (ಜು.10): ಅದು ಸಿದ್ದರಾಮೋತ್ಸವ ಅಲ್ಲ, ಕಾಂಗ್ರೆಸ್ಸಿನವರು ಮನೆಗೆ ಹೋಗುವ ಉತ್ಸವ , ಹೀಗಾಗಿ ಅವರೆಲ್ಲಾ ಸಿದ್ದರಾಮೋತ್ಸವ ಬದಲಾಗಿ ಸಿದ್ದರಾಮ ಉರಿಸೋ ಉತ್ಸವ ಮಾಡಬೇಕಿತ್ತು ಎಂದು ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ವ್ಯಂಗ್ಯವಾಡಿದರು. ಬಾಗಲಕೋಟೆಗೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಉತ್ಸವ, ಬಂಡಾರ ಹಚ್ಚಿಕೊಳ್ಳೋದು,  ಕೇಸರಿ ಹಚ್ಚಿಕೊಳ್ಳೋದು ಅಂದರೆ ಸಿದ್ದರಾಮಯ್ಯ ಅವರಿಗೆ ಅಲಜಿ೯. ಹಾಲುಮತ ಪೇಟ ಹಾಕಿಕೊಂಡು ಕುಂಕುಮ ಹಚ್ಚಿಕೊಂಡ್ರೆ ಅದು ಸಿದ್ದರಾಮೋತ್ಸವ. 

ಆದರೆ ನಮಾಜ್ ಟೋಪಿ ಹಾಕಿಕೊಳ್ತಾರೆ, ಆದ್ರೆ ಕೇಸರಿ ಬಂದರೆ ನೂಕ್ತಾರೆ. ಇದ್ಯಾವ ಉತ್ಸವರಿ, ಇದು ಕೊನೆಯದ್ದು. ಇದು ಸಿದ್ದರಾಮೋತ್ಸವ ಅಲ್ಲ, ಮನೆಗೆ ಹೋಗುವ ಉತ್ಸವವಾಗಿದೆ. ರಾಜ ಮಹಾರಾಜರು ವಾನಪ್ರಸ್ಥಾಶ್ರಮಕ್ಕೆ ಹೋಗುತ್ತಿದ್ದರು‌. ಇಂತಿಷ್ಟು ವರ್ಷ ಆದಮೇಲೆ ರಾಣಿಯರನ್ನ ಕರೆದುಕೊಂಡು ಅಡವಿಗೆ ಹೋಗುತ್ತಿದ್ದರು. ಸಿದ್ದರಾಮೋತ್ಸವ ಮೂಲಕ ನಮ್ಮ ಡಿಕೆಶಿಯನ್ನ ಅರಣ್ಯಕ್ಕೆ ಕಳಿಸೋ ಪ್ರೋಗ್ರಾಮ್ ಇದಾಗಿದೆ. ಇಡೀ ಕಾಂಗ್ರೆಸ್ ಈಗ ಅರಣ್ಯಕ್ಕೆ ಹೋಗುತ್ತೆ, ರಾಹುಲ್ ಗಾಂಧಿಯಂತ ವ್ಯಕ್ತಿ ನೇತೃತ್ವ ಇರೋವಾಗ ಕಾಂಗ್ರೆಸ್ ಹೋಗೋದು ಇಟಲಿಗೆ ಎಂದು ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಹೇಳಿದರು‌.

ಮನುಷ್ಯತ್ವವೇ ಇಲ್ಲದ ಅವಿವೇಕಿ ಶಿಕ್ಷಣ ಸಚಿವ ನಾಗೇಶ್‌ ಎಡವಟ್ಟುಗಳು ಒಂದೋ, ಎರಡೋ?: ಸಿದ್ದು

ಕರ್ನಾಟಕದಲ್ಲೂ ಉತ್ತರ ಪ್ರದೇಶದ ಮಾದರಿ ವ್ಯವಸ್ಥೆ ಬೇಕು: ಕೆರೂರು ಘರ್ಷಣೆ ಗಾಯಾಳುಗಳ ಆರೋಗ್ಯ ವಿಚಾರಿಸಿದ ಬಳಿಕ ಬಾಗಲಕೋಟೆಯಲ್ಲಿ ಹೇಳಿಕೆ ನೀಡಿದ ಬಸನಗೌಡ ಪಾಟೀಲ್ ಯತ್ನಾಳ್, ಅಲ್ಪಸಂಖ್ಯಾತರ ಹೆಸರಿನಲ್ಲಿ ಹಿಂದುಗಳ‌ ಮೇಲೆ ವ್ಯವಸ್ಥಿತವಾಗಿ ಅಟ್ಯಾಕ್ ಮಾಡಲಾಗುತ್ತಿದೆ‌. ಅಲ್ಪಸಂಖ್ಯಾತರು ಇಂತಹ ಕೃತ್ಯ ‌ಮಾಡುತ್ತಿರೋದು ಬಹಳ ಆತಂಕಕಾರಿಯಾಗಿದ್ದು, ಇವರನ್ನು ಹೀಗೆ ಬಿಟ್ಟರೆ ದೇಶದಲ್ಲಿ ಹಿಂದೂಗಳು ನೆಮ್ಮದಿಯಿಂದ ಜೀವನ ಮಾಡೋದಕ್ಕೆ ಆಗೋದಿಲ್ಲ. ಸರಕಾರ ಕೇವಲ‌ ಕಠಿಣ ಕ್ರಮ ಎನ್ನುವ ವ್ಯಾಖ್ಯಾನ ಬದಲಾವಣೆ ‌ಮಾಡಿ ಕ್ರಮಗಳಾಗಬೇಕು, ಉತ್ತರಪ್ರದೇಶದಲ್ಲಿ ಹೇಗೆ ಆರೋಪಿತರ ಎನ್ ಕೌಂಟರ್ ಮಾಡುತ್ತಿದ್ದಾರೋ, ಹೇಗೆ ‌ಮನೆಗಳಿಗೆ ಬುಲ್ಡೋಜರ್ ಹಚ್ಚುತ್ತಿದ್ದಾರೋ, ಹಾಗೆ ಕರ್ನಾಟಕದಲ್ಲೂ ಪ್ರಾರಂಭ  ಮಾಡಬೇಕು. 

ನಾನು ಕರ್ನಾಟಕ ಗೃಹ ಮಂತ್ರಿಗೆ ಆಗ್ರಹ ಮಾಡುತ್ತೇನೆ. ನಿಮ್ಮ ಕಠಿಣ ಕ್ರಮ ಅನ್ನುವ ಶಬ್ದ ಬಿಟ್ಟು ಕಠಿಣ ಕ್ರಮ ಕೈಗೊಳ್ಳಬೇಕು. ಪೊಲೀಸ್ ಇಲಾಖೆ ಬರಿ ಹಿಂದುಗಳನ್ನಷ್ಟೇ ಹಿಡಿಯೋದಲ್ಲ, ಹಿಂದುಗಳು ಅಪರಾಧಿಗಳೇ ಅಲ್ಲ ಇದರಲ್ಲಿ. ಹೊಡೆದೋರು ಯಾರು ಮುಸ್ಲಿಮರು. ಮುಸ್ಲಿಂರನ್ನು ಅರೆಸ್ಟ್ ಮಾಡಬೇಕು. ಆದರೆ 11 ಜನ ಹಿಂದುಗಳನ್ನು ಅರೆಸ್ಟ್ ಮಾಡಿದ್ದಾರೆ. ಪೊಲೀಸ್ ಇಲಾಖೆ ಕಾರ್ಯವೈಖರಿ ಬದಲಾವಣೆ ಮಾಡಬೇಕು. ಘಟನೆ ನೋಡಿಕೊಂಡು ಮೂಕಪ್ರೇಕ್ಷಕರಾಗಿ ನಿಂತರೆ ಏನು? ಪೊಲೀಸರ ಕೈಯಲ್ಲಿ ಲಾಠಿ ಬಂದೂಕು ಯಾಕೆ ಕೊಟ್ಟಿದಾರೆ. ಹಲ್ಲೆಕೋರರಿಗೆ ಭಯ ಇಲ್ಲದಂಗಾಗಿದೆ. ಶಿವಮೊಗ್ಗ ಹರ್ಷ ಕೊಲೆ ಆರೋಪಿಗಳು ಜೈಲಲ್ಲಿದ್ದು ವಿಡಿಯೊ ಕಾಲ್ ಮಾಡಿ ಮಾತಾಡ್ತಾರೆ. ಹೀಗಾಗಿ ಕಠಿಣ ಕ್ರಮ‌ಕೈಗೊಳ್ಳಬೇಕು ಅನಿವಾರ್ಯವಾದರೆ ಉತ್ತರಪ್ರದೇಶ ಮಾದರಿ‌ ಕೆಲಸ‌ ಮಾಡಬೇಕು ಎಂದು ಯತ್ನಾಳ ಹೇಳಿದರು.

ರಾಜ್ಯದಲ್ಲಿ ಮತ್ತೇ ಬಿಜೆಪಿ ಸಕಾ೯ರ ಫಿಕ್ಸ್: ಬಿಜೆಪಿಗೆ ವಲಸೆ ಹೋದೋರನ್ನು ಸಿದ್ದರಾಮಯ್ಯ ವಾಪಸ್ ಕರೆಯುತ್ತಿದ್ದಾರೆ ಎಂಬ ಪ್ರಶ್ನೆ ವಿಚಾರವಾಗಿ ಮಾತನಾಡಿದ ಯತ್ನಾಳ, ಯಾರು ಬಂದರು ಯಾರು ಹೋದರು ಮುಂದಿನ ಬಾರಿ ಬಿಜೆಪಿ ಸರಕಾರವೇ ಅಧಿಕಾರಕ್ಕೆ ಬರೋದು. ಯಾರೊ ಹೋಗೋರು ಹೋಗಿ ತೆಗ್ಗಿನಲ್ಲಿ‌ ಬೀಳೋಕೆ ತಯಾರಿದ್ರೆ ಏನು ಮಾಡೋದು. ನಮ್ಮ‌ ಮುಂದಿನ ಚುನಾವಣೆ ಪ್ರಧಾನಿ ನರೇಂದ್ರ ‌ಮೋದಿ ನಾಯಕತ್ವದಲ್ಲಿ ನಡೆಯಲಿದ್ದು, ರಾಜ್ಯದಲ್ಲಿ ಸಾಮೂಹಿಕ ನಾಯಕತ್ವ ಇದೆ. ಇನ್ನು ಸಂಪುಟ ವಿಸ್ತರಣೆ ಈಗ ಯಾರು ಕೇಳ್ತಿಲ್ಲ. ನೀವು ಕೇಳುತ್ತಿದ್ದೀರಿ. ನಾವು ಎಂಎಲ್‌ಎಗಳು ಯಾರು ಸಂಪುಟ ಬದಲಾವಣೆ, ವಿಸ್ತರಣೆ ಏನು ಆಗೋದಿಲ್ಲ ಅಂತ ಹೇಳ್ತಿದ್ದೇವೆ. ದಯವಿಟ್ಟು ಇದ್ದವರು ಚೆನ್ನಾಗಿ ಮಾಡಿಕೊಂಡು ಹೋಗಿರಿ ಅಂತ ಹೇಳುತ್ತಿದ್ದೇವೆ ಎಂದು ಯತ್ನಾಳ್ ಹೇಳಿದರು.

ಹೋಮ್ ಮಿನಿಸ್ಟರ್ ಕೊಟ್ಟರೆ ಎನ್ ಕೌಂಟರ್ ಮಾಡಿ ಬರೋಬ್ಬರಿ ಇಡ್ತೀನಿ: ನಿರಂತರ ಹಿಂದೂಗಳ ಮೇಲಿನ ಹತ್ಯೆ  ವಿಚಾರವಾಗಿ ಪ್ರತಿಕ್ರಿಯೆ ನೀಡಿ, ನಾನು ಸಚಿವ ಸ್ಥಾನ ಕೇಳೋದಿಲ್ಲ, ಒಂದೊಮ್ಮೆ  ಸಚಿವ ಸ್ಥಾನ ಕೊಟ್ಟರೂ ಇನ್ನೂ ಎಂಟು ತಿಂಗಳ ಮಾತ್ರ ಬಾಕಿ ಇದೆ, ಹೀಗಾಗಿ ನಾನೇನು ಮಾಡೋದಿದೆ ಹೇಳಿ ಎಂದ ಅವರು, ನಾಳೆ ನನ್ನ ಮಂತ್ರಿ ಮಾಡಿ ವಕ್ಫ್ ಮತ್ತು ಧಾರ್ಮಿಕ ದತ್ತಿ ಕೊಟ್ಟರೆ ನಾನೇನು ಮಾಡಲಿ. ಆದರೆ ಹೋಮ್ ಪದವಿ ಕೊಟ್ಟರೆ ಬರೋಬ್ಬರಿ ಎನ್ ಕೌಂಟರ್ ಮಾಡಿ ಬರೋಬ್ಬರಿ ಇಡ್ತೀನಿ ಎಂದು ಖಡಕ್ ಆಗಿ ಯತ್ನಾಳ ಹೇಳಿದರು.

ಕೆರೂರ ಘಟನೆ ಪೋಲಿಸ್ ಇಲಾಖೆ ವೈಫಲ್ಯ: ಕೆರೂರ ಘಟನೆಯಲ್ಲಿ ಪೋಲಿಸ್ ಇಲಾಖೆ ವೈಫಲ್ಯ ಇದೆ, ಯಾಕಂದ್ರೆ ಈ ಘಟನೆಗೆ ವೈಯಕ್ತಿಕ ದ್ವೇಷ ಕಾರಣ ಅಂತ ಸಿಎಂಗೆ ರಿಪೋರ್ಟ್ ನೀಡಿದ್ದಾರೆ, ಇದು ಪೋಲಿಸ್ ಇಲಾಖೆಯ ವೈಫಲ್ಯ, ತಪ್ಪು ಮಾಹಿತಿ ನೀಡಿದವರ ವಿರುದ್ಧ ಆಕ್ಸನ್ ಮಾಡಬೇಕು ಎಂದ ಯತ್ನಾಳ, ನಮ್ಮದೇ ಸಕಾ೯ರ ಇದೆ, ನಾನು ಬಿಜೆಪಿ ಶಾಸಕನಾಗಿ ಹೇಳುತ್ತಿದ್ದೇನಲ್ಲ. ಹಿಂದೂಗಳ ಪರವಾಗಿ ಬಿಜೆಪಿ ಶಾಸಕರು ಬಿಟ್ಟು ಸಿದ್ದರಾಮಯ್ಯ ಮಾತಾಡ್ತಾರಾ. ಸಿದ್ದರಾಮಯ್ಯ ಯಾಕೆ ಪ್ರತಿಕ್ರಿಯೆ ಕೊಡ್ತಿಲ್ಲ. ಸಾಬರದ್ದು ಆಗಿದ್ದರೆ ಸಿದ್ದು 2 ದಿನ ಬಾದಾಮಿಯಲ್ಲೇ ವಾಸ್ತವ್ಯ ಮಾಡ್ತಿದ್ದರು. ಸಿದ್ದರಾಮಯ್ಯಗೆ ಹಿಂದೂಗಳ ಓಟ್ ಬೇಕಾಗಿಲ್ಲ, ಮುಖ್ಯಮಂತ್ರಿಗಳು ಸಹ ಕರೆಕ್ಟ್ ಮಾಹಿತಿ ತೆಗೆದುಕೊಳ್ಳಬೇಕು. ಪೋಲಿಸರು ತಮ್ಮ ರಕ್ಷಣೆಗೆ ಏನಾದ್ರೂ ಸಿಎಂ ಮತ್ತು ಗೃಹ ಸಚಿವರಿಗೆ ಮಾಹಿತಿ ಕೊಡ್ತಾರೆ. 

ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ, ಕೆಪಿಸಿಸಿ ರಾಜಕೀಯ ವ್ಯವಹಾರಗಳ ಸಮಿತಿ ರಚನೆ

ಎಸ್ಪಿ ಕೆರೂರಲ್ಲಿ ಕುಳಿತರೆ ಆಗೋದಿಲ್ಲ, ಒದ್ದು ತರಬೇಕು. ಪೋಲಿಸರ ಕೈವಾಡ ಇಲ್ಲ, ಪೋಲಿಸರಿಗೆ ಪ್ರೀ ಹ್ಯಾಂಡ್ ಇಲ್ಲ. ನಾವು ಗೃಹ ಮಂತ್ರಿಗಳಿಗೆ ಸಂದೇಶ ‌ಕೊಡುತ್ತೇವೆ. ನಾವು ಬರೀ ಹೇಳಿ ಹೋಗುವ ರಾಜಕಾರಣಿ ಅಲ್ಲ. ನಾವು ಇವತ್ತು ಬಂದು ಹೇಳಿದ್ದೀವಿ, ನಾಳೆಯಿಂದ ನೋಡಿ ಆಕ್ಸನ್ ಹೇಗೆ ಆಗ್ತಾವು. ಪೋಲಿಸ ಇಲಾಖೆಯಲ್ಲಿ ಒಳ್ಳೆಯ ಅಧಿಕಾರಿಗಳಿದ್ದಾರೆ. ಪ್ರೀ ಹ್ಯಾಂಡ ಕೊಡಬೇಕು. ಕೊಟ್ಟರೆ ಕಂಟ್ರೋಲ್ ಮಾಡ್ತಾರೆ. ಪ್ರೀ ಹ್ಯಾಂಡ್ ಕೊಡೋ ಕಾಲ ಬಹಳ ಸಮೀಪ ಬಂದಿದೆ. ಈ ರಾಜ್ಯಕ್ಕೆ ಪ್ರೀ ಹ್ಯಾಂಡ್ ಕೊಡೋರೆ ಬತಾ೯ರೆ ನೋಡಿ ಎಂದು ಯತ್ನಾಳ ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ, ಬಿಜೆಪಿ ಮುಖಂಡ ಮಹಾಂತೇಶ ಮಮದಾಪೂರ, ಬಾಗಲಕೋಟೆ ನಗರಸಭೆ ಉಪಾಧ್ಯಕ್ಷ ಬಸವರಾಜ್ ಅವರಾದಿ, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ಕುಮಾರಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

click me!