ಈ ಸರ್ಕಾರ ಟಿಪ್ಪು, ಔರಂಗಜೇಬನ ಸರ್ಕಾರ, ಸಿಎಂ ಬಾಯಿ ತೆಗೆದರೆ ಸಾಬರು ಅಂತಾರೆ; ಯತ್ನಾಳ್ ಟೀಕೆ

Published : Sep 16, 2025, 07:43 PM IST
Basanagouda Patil Yatnal in Koppal

ಸಾರಾಂಶ

ಸಿದ್ದರಾಮಯ್ಯ ಸರ್ಕಾರವನ್ನು 'ಟಿಪ್ಪು ಸರ್ಕಾರ' ಮತ್ತು 'ಸಾಬರ ಸರ್ಕಾರ' ಎಂದು ಕೊಪ್ಪಳದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಕಿಸಿದ್ದಾರೆ. ಮಸೀದಿ ಮುಂದೆ ಗಣಪತಿ ಮೆರವಣಿಗೆಗೆ ನಿರ್ಬಂಧ ಹೇರಿದರೆ ಮತ್ತು ಡಿಜೆಗೆ ಅನುಮತಿ ನೀಡದಿದ್ದರೆ ಸರ್ಕಾರ ಪತನವಾಗಲಿದೆ ಎಂದು ಎಚ್ಚರಿಸಿದರು.

ಕೊಪ್ಪಳ (ಸೆ.16): ಈ ಸರ್ಕಾರ ಟಿಪ್ಪು ಸರ್ಕಾರ, ಔರಂಗಜೇಬ ಸರ್ಕಾರ. ಇದು ಸಾಬರ ಸರ್ಕಾರವಾಗಿ ಪರಿವರ್ತನೆಯಾಗಿದೆ. ಸಿದ್ದರಾಮಯ್ಯ ಸಾಹೇಬರು, ಬಾಯಿ ತಗೆದರೆ ಸಾಬರು ಅಂತಾರೆ. ಮುಂದಿನ‌ ಜನ್ಮ‌ಇದ್ದರೆ ಮುಸಲ್ಮಾನ ಆಗತಿನಿ ಅಂತಾರೆ. ಮಸೀದಿಯಲ್ಲಿರೋ ಮುಲ್ಲಾಗಳಿಗೆ 6 ಸಾವಿರ ಕೊಡುತ್ತಿದಾರೆ. ಮುಸ್ಲಿಂ ಮಕ್ಕಳು ವಿದೇಶಕ್ಕೆ ಹೋದರೆ 30 ಸಾವಿರ ಕೊಡತಿದ್ದಾರೆ. ಸರ್ಕಾರ ಹಿಂದೂಗಳ ಪರವಾಗಿಲ್ಲ, ಮಸೀದಿ ಮುಂದೆ ಗಣಪತಿ ಮೆರವಣಿಗೆ ಮಾಡಬಾರದು ಎಂದರೆ, ಭಾರತದಲ್ಲಿ ಯಾಕೆ ಮಸೀದಿ ಕಟ್ಟಿದ್ದೀರಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.

ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಇಲ್ಲಿ ಜನ ಸ್ತೋಮ ಸೇರಿದ್ದು ಸನಾತನ ಹಿಂದೂ ಧರ್ಮದ ಸಲುವಾಗಿ, ಹಿಂದುಳಿದ ಎಲ್ಲರೂ ಒಂದಾಗಬೇಕು. ಧರ್ಮ ಅನ್ನೋ ಕಾಲಂನಲ್ಲಿ ಹಿಂದೂ ಅಂತಾ ಬರೆಸಬೇಕು. ಇದನ್ನು ಬಿಟ್ಟು ಕೆಲ ಸ್ವಾಮಿಗಳು ಏನೇನೋ ಮಾಡತೀದಾರೆ. ನಾನು ಮದ್ದೂರಿಗೆ ಒಬ್ಬನೇ ಹೋಗಿದ್ದೆ. ಮಂಡ್ಯ ಅಂದರೆ ಗಂಡು ಮೆಟ್ಟಿದ ನಾಡು‌. ಮದ್ದೂರಿನಲ್ಲಿ 20 ಸಾವಿರ ಹಿಂದೂ ಯುವಕರು ಸೇರಿದ್ದರು. ಇಲ್ಲಿ ಸೇರಿದ ಯಾರಿಗೂ ರೊಕ್ಕ ಕೊಟ್ಟಿಲ್ಲ, ಊಟ ಕೊಟ್ಟಿಲ್ಲ. ನನ್ನ ಸ್ವಾಗತ ಮಾಡಿದ ಪರಿ, ಎಲ್ಲ ರಾಜಕೀಯ ಪಕ್ಷಗಳಿಗೆ ಹುಚ್ಚು ಹಿಡದಿದೆ. ಯತ್ನಾಳ ಮುಗಿಸಬೇಕು ಅಂದುಕೊಂಡಿದ್ದರು, ಆದ್ರೆ ಯತ್ನಾಳ ಎದ್ದು ಬಿಟ್ಟ. ಆದರೆ ನಾನ ಎದ್ದಿಲ್ಲ, ನೀವ ಎಬ್ಬಸೀದಿರಿ ಎಂದು ಹೇಳಿದರು.

ಸಿದ್ದರಾಮಯ್ಯ ಸಾಹೇಬರು, ಬಾಯಿ ತಗೆದರೆ ಸಾಬರು ಅಂತಾರೆ. ಸಿದ್ದರಾಮಯ್ಯರಿಗೆ ಬಂಡಾರ ಹಚ್ಚಾಕ ಹೋದ್ರೆ ಸಿಟ್ಟ ಮಾಡಿಕೊಂಡಿದ್ದರು. ಮುಂದಿನ‌ ಜನ್ಮ‌ಇದ್ದರೆ ಮುಸಲ್ಮಾನ ಆಗತಿನಿ ಅಂತಾರೆ. ಇವಾಗ ಹಿಂದೂಗಳ ಪರಸ್ಥಿತಿ ಏನಾಗಿದೆ. ಮಸೀದಿಯಲ್ಲಿರೋ ಮುಲ್ಲಾಗಳಿಗೆ 6 ಸಾವಿರ ಕೊಡುತ್ತಿದಾರೆ. ಸಿದ್ದರಾಮಯ್ಯ ಮುಸ್ಲಿಂ ಹೆಣ್ಣು ಮಕ್ಕಳಿಗೆ ಕರಾಟೆ ಕಲಿಸುತ್ತಿದ್ದಾರೆ. ಏಕೆಂದರೆ ಹಿಂದೂ ಹೆಣ್ಣು ಮಕ್ಕಳ ಮೇಲೆ ದಬ್ಬಾಳಿಕೆ ಮಾಡಲು. ಮುಸ್ಲಿಂ ಮಕ್ಕಳು ವಿದೇಶಕ್ಕೆ ಹೋದರೆ 30 ಸಾವಿರ ಕೊಡತಿದ್ದಾರೆ. ಸರ್ಕಾರ ಹಿಂದೂಗಳ ಪರವಾಗಿಲ್ಲ, ಬಾಯಿ ಎತ್ತಿದರೆ ಟಿಪ್ಪು ಸುಲ್ತಾನ ಅಂತಾರೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಗಣಪತಿ ಮಸೀದಿ ಮುಂದೆ ಹೋಗಬಾರದ ಅಂತೆ. 2028ಕ್ಕೆ ನಾನು ಮತ್ತೆ ಗಂಗಾವತಿಗೆ ಬರ್ತೀನಿ. ಎಲ್ಲಿ ಬಂದ ಮಾಡಿದಾರೋ ಅಲ್ಲೆ ಒಂದು ಗಂಟೆ ಮೆರವಣಿಗೆ ಮಾಡೋಣ. ಇದೇನು ಪಾಕಿಸ್ತಾನ ಮಾಡೀರಾ? ಈದ್ ಮಿಲಾದ್ ವೇಳೆ ಕಲ್ಲು ಹೊಡೆದ ಉದಾಹರಣೆ ಇದೆಯಾ‌? ಆದರೆ ಹಲ್ಕಟ್ ನನ್ಮ ಮಕ್ಕಳ ಕಲ್ಲು ಒಗೀತಾರೆ. ಸಣ್ಣ ಮಕ್ಕಳಿಗೆ ಗಣಪತಿ ಮೇಲೆ ಉಗಳೋ ಸಂಸ್ಕ್ರತಿ ಕಲಿಸೀದಾರೆ. ಎಷ್ಟು ನೀಚ ಬುದ್ದಿ ಇದೆ ಎಂದು ಯತ್ನಾಳ್ ಆಕ್ರೋಶ ಹೊರಹಾಕಿದರು.

ಅಂಬೇಡ್ಕರ್ ಇಸ್ಲಾಂ ಸ್ವೀಕರಿಸಿದ್ದರೆ ಹಿಂದೂಗಳೇ ಇರುತ್ತಿರಲಿಲ್ಲ:

ಸನಾತನ ಧರ್ಮದವರಿಗೆ ಚಾಮುಂಡಿ ಪೂಜೆ ಮಾಡಲು ಅವಕಾಶ ಕೊಟ್ಟಿದ್ದಾರೆ. ಬಾಬಾ ಸಾಹೇಬ ಅಂಬೇಡ್ಕರ್ ಅವಕಾಶ ಕೊಟ್ಟಿದ್ದಾರೆ. ಒವೈಸಿ ದಲಿತ ಮುಸ್ಲಿಂ ಬಾಯೀ ಭಾಯೀ ಅಂತೀದಾರೆ. ನಾವೆಲ್ಲ ಬಾಬಾ ಸಾಹೇಬ್ ಅಂಬೇಡ್ಕರ್ ಫೊಟೋ ಇಟ್ಟು ಪೂಜೆ ಮಾಡಬೇಕು. ಇಸ್ಲಾಂನಲ್ಲಿ ಸಹೋದರ ಭಾವ ಇಲ್ಲ. ಅವರು ಎಂದಿಗೂ ಮತ್ತೊಂದು ಧರ್ಮ ಒಪ್ಪಲ್ಲ. ಇಸ್ಲಾಂ ಎಂದಿಗೂ ದಲಿತರನ್ನು ಒಪ್ಪಲ್ಲ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ. ಅಂಬೇಡ್ಕರ್ ಇಸ್ಲಾಂ ಧರ್ಮ ಸ್ವೀಕಾರ ಮಾಡಿದ್ದರೆ ನಾವ ಹಿಂದೂಗಳು ಈ ದೇಶದಲ್ಲಿ ಇರ್ತಾ ಇರಲಿಲ್ಲ. ಅಂಬೇಡ್ಕರ್ ಅಂತ್ಯಕ್ರಿಯೆಗೆ ಇವರು ಜಾಗ ಕೊಟ್ಟಿಲ್ಲ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಪಾಕಿಸ್ತಾನ ಮಾಡ್ತಾರೆ:

ಸನಾತನ ಧರ್ಮದವರು ಒಂದಾಗದಿದ್ದರೆ, ಸಿದ್ದರಾಮಯ್ಯನಂತವರು ಬಂದು ಪಾಕಿಸ್ತಾನ ಮಾಡ್ತಾರೆ. ಅವರ ಸಿಎಂ ಕಚೇರಿಯಿಂದ ಹಿಡಿದು ಎಲ್ಲರೂ ಮುಸ್ಲಿಂ ಇದ್ದಾರೆ. ರಾಜ್ಯದ ಪೊಲೀಸ್ ಮಾಹಾನಿರ್ದೇಶಕರು ಮುಸ್ಲಿಂ ಆಗಿದ್ದಾರೆ. ಹಿಂದೂಗಳು ಪೊಲೀಸ್ ಮಾಹಾನಿರ್ದೇಶಕರು ಆಗಬೇಕಿತ್ತು. ಚಾಮುಂಡಿ ಪೂಜೆ ಮಾಡಲು ಭಾನು ಮುಷ್ತಾಕ್ ತಂದರು. ಸಿದ್ದರಾಮಯ್ಯ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಬೇಕು ಅಂತಾರೆ. ನನಗೆ ಅನುಮಾನ ಇದೆ, ಈಗಲೇ ಮುಸ್ಲಿಂ ಆಗಿದಾರೋ ಏನೋ ಅನ್ನೋ ಅನುಮಾನ ಇದೆ ಎಂದು ಟೀಕಿಸಿದರು.

ಅಕ್ರಮ ಮಸೀದಿಗೆ ಜೆಸಿಬಿ ಕಳಿಸ್ತೀನಿ ಎಂದಿದ್ದಕ್ಕೆ ಕೇಸ್:

ನೀವು 2028ರವರೆಗೆ ಎಲ್ಲವನ್ನು ಮುಸಲ್ಮಾನರಿಗೆ ಕೊಡಿ. ನಾವು ಬಂದು ಎಲ್ಲವನ್ನು ಕಟ್ ಮಾಡತಿವಿ. ಹಾಲುಮತ ಸಮಾಜವೂ ಅವರಿಗೆ ನೆನಪಿಲ್ಲ. ನಮ್ಮ ಹೋಮ್ ಮಿನಿಸ್ಟರ್ ಗ್ರೇಟ್ ಹೋಮ್ ಮಿನಿಸ್ಟರ್, ಪರಮೇಶ್ವರ ಅವರನ್ನ ಗೃಹ ಮಂತ್ರಿ ಮಾಡಿ ಕೆಟ್ಟ ಮಾಡತೀದಾರೆ. ಸಿದ್ದರಾಮಯ್ಯ ಬಹಳ ಚಾಲು ಇದಾರೆ‌. ಡಿಕೆ ಬ್ರದರ್ಸ್ ಅಂತಾರೆ, ಹಿಂದೂಗಳಿಗೆ ಬ್ರದರ್ಸ್ ಅನ್ನ ಅಲ್ಲ. ಧರ್ಮಸ್ಥಳಕ್ಕೆ ಬಲ್ಡೋಜರ್ ಹತ್ತಸ್ತೀನಿ ಅಂದ್ರೆ ಕೇಸ್ ಇಲ್ಲ. ನಾನು ಅಕ್ರಮ ಮಸೀದಿಗೆ ಜೆಸಿಬಿ ಕಳಸ್ತೀನಿ ಅಂದೆ ನನ್ನ ಮೇಲೆ ಕೇಸ್ ಆಯ್ತು. ತುಮಕೂರಲ್ಲಿ 72, 73, 74, 75, ಹೀಗೆ ಆಗತ್ತೆ ನೂರಾಗಲಿ ಎದುರಿಸ್ತೀನಿ ಎಂದರು.

ಮುಂದಿನ ಬಾರಿ ಗಣೇಶನ ಹಿಂದೆ ಒಂದು ಜೆಸಿಬಿ ಇರುತ್ತೆ:

2028ಕ್ಕೆ ನಾನೇ ಸಿಎಂ ಆಗಿರ್ತೀನಿ. ಈಗ ನನ್ನ ಮೇಲೆ ತುಮಕೂರಲ್ಲಿ ಕೇಸ್ ಹಾಕಿದ ಫೊಲೀಸ್‌ನ ಆಗ ಕರಸ್ತೀನಿ. ಸುಮೋಟೋ ಕೇಸ್ ಹಾಕಿದಾನೆ. ಕೆಲವರಿಗೆ ಬಿಜೆಪಿಗೆ ಬರೋದು ಡೌಟ್ ಇದೆ. ಕೆಲವರು ವಿಜಯೇಂದ್ರ ಹಿಂದೆ ಅಡ್ಡಾಡತೀದಾರೆ. ಅವರಿಗೆಲ್ಲಾ ಟಿಕೆಟ್ ನಾನೇ ಕೊಡಬೇಕಲ್ಲ. ನಮ್ಮ ಕಡೆ ಕೊಟ್ಟರೆ 150 ಸೀಟ್ ಗೆಲ್ತೀವಿ. ಮುಂದೆನೂ ನನಗೆ ಟೋಪಿ ಹಾಕಿಕೊಂಡರವ ವೋಟ್ ಬೇಡಾ. ಪಕ್ಷದಿಂದ ಉಚ್ಚಾಟನೆಯಾದವರು ಸಿಎಂ ಆಗಿದಾರೆ. ನನಗೆ ಸಿದ್ದರಾಮಯ್ಯ ಉಚ್ಚಾಟನೆ ಮಾಡಿದ್ದಾರೆ ಅಂದ್ರು, ಮುಂದಿನ ಬಾರಿ ಗಣೇಶನ ಹಿಂದೆ ಒಂದು ಜೆಸಿಬಿ ಇರುತ್ತದೆ ಎಂದು ಹೇಳಿದರು.

ಪೊಲೀಸರ ಕೈಗೆ ಎಕೆ-47 ಕೊಡ್ತೀನಿ

ಈ ದೇಶದ ಮಣ್ಣಿನಲ್ಲಿ ಬೆಳೆದ ಅನ್ನ ತಿಂದು ಪಾಕಿಸ್ತಾನ ಪರ ಘೋಷಣೆ ಕೂಗತಾರೆ. ಇಂತಹ ತಾಯಿ ಗಂಡ ನನ್ನ ಮಕ್ಕಳಿಗೆ ಮೆಟ್ಟಿಲೇ ಹೊಡಿಬೇಕು. ಇದನ್ನೆಲ್ಲಾ ಅಧಿವೇಶನದಲ್ಲಿ ಮಾತಾಡಿದ್ದೇನೆ. ಮಸೀದಿ ಮುಂದೆ ಗಣಪತಿ ಯಾಕೆ ಹೋಗಬೇಕು ಅಂತಾರೆ? ಭಾರತದಲ್ಲಿ ನೀನು ಯಾಕೆ ಮಸೀದಿ ಕಟ್ಟಿದೀಪಾ ಮಗನೆ. ನಾನು ಪೊಲೀಸರ ಕೈಲಿ ಎಕೆ-47 ಕೊಡ್ತೀನಿ. ಪೊಲೀಸರಿಗೆ ಫುಲ್ ಸಫೊರ್ಟ್ ಕೊಟ್ಟಿರ್ತೀನಿ. ಅವರೇನಾದರೂ ಒಂದು ಕಲ್ಲೆಸೆದಾಗ ಪೊಲೀಸರು ಒಂದು ಹೊಡೆದರೆ ಸೀದಾ ಜನ್ನತ್ ಆಗಬೇಕು. ಮುಂದಿನ ಗಣೇಶಕ್ಕೆ ಡಿಜೆಗೆ ಅನುಮತಿ ಸಿದ್ದರಾಮಯ್ಯ ಅವಕಾಶ ಕೊಡದೆ ಹೋದ್ರೆ ಅವತ್ತೆ ಸಿದ್ದರಾಮಯ್ಯ ಸರ್ಕಾರ ಪತನ ಆಗುತ್ತದೆ ಎಂದು ಸಿಎಂ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ