ರಾಹುಲ್ ಗಾಂಧಿ ಹುಚ್ಚ ಅಲ್ಲ, ಅರೇ ಹುಚ್ಚ!, ಯತ್ನಾಳ ಮತ್ತೊಂದು ವಿವಾದಾತ್ಮಕ ಹೇಳಿಕೆ

By Gowthami K  |  First Published May 1, 2023, 3:18 PM IST

ರಾಹುಲ್ ಗಾಂಧಿಯನ್ನು ಹುಚ್ಚ ಅಲ್ಲಾ ಅರೇ ಹುಚ್ಚ ಅಂತ ಕರೆಯಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ಹುಬ್ಬಳ್ಳಿ (ಮೇ.1): ರಾಹುಲ್ ಗಾಂಧಿ ಹುಚ್ಚ ಅಲ್ಲ  ಅರೇ ಹುಚ್ಚ ಅಂತಾನೇ ಕರೆಯಬೇಕು. ಆಲೂಗಡ್ಡೆಯಿಂದ ಚಿನ್ನ ತೆಗೆಯುತ್ತೀನಿ ಅಂತಾರೆ, ಚೀನಾ ರಾಯಭಾರಿ ಜೊತೆಗೆ ಸಭೆ ಮಾಡುತ್ತಾರೆ. ದೇಶ ವಿರೋಧಿಗಳ ಜೊತೆಗೆ ಕೈಜೋಡಿಸುತ್ತಾರೆ. ಹಾಗಿದ್ದರೆ ಇವರನ್ನು ಬುದ್ಧಿವಂತ ಕರೆಯಬೇಕಾ? ಹೀಗಿದ್ದಾಗ ರಾಹುಲ್ ಗಾಂಧಿಯವರನ್ನು ದೊಡ್ಡ ಬುದ್ದಿವಂತ ಕರೆಯಬೇಕಾ? ಹುಚ್ಚ ಅಲ್ಲಾ ಅರೇ ಹುಚ್ಚ ಅಂತ ಕರೆಯಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿರುವ ಅವರು,  ಸೋನಿಯಾಗಾಂಧಿ ವಿಷ ಕನ್ಯೆ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ವಿದೇಶದಿಂದ ಬಂದ ಸೋನಿಯಾ ವಿಷ ಕನ್ಯೆಯಾ ಅಂತ ಪ್ರಶ್ನಿಸಿದ್ದೆ. ಆದರೆ ಮೀಡಿಯಾಗಳು ಪ್ರಶ್ನಾರ್ಥಕ ಚಿಹ್ನೆಯನ್ನೇ ತೆಗೆದು ಬಿಟ್ಟಿವೆ. ಕಾಂಗ್ರೆಸ್ ನವರು ಮೋದಿ ವಿರುದ್ಧ 99 ಬಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.‌ ಹೀಗಿರುವಾಗ ನಾನು ಸೋನಿಯಾಗಾಂಧಿ ಬಗ್ಗೆ ಪ್ರಶ್ನಿಸಿದ್ದೇನೆ ಎಂದಿದ್ದಾರೆ.
 
ದಮ್ಮು ಇದ್ದರೆ ತಾಕತ್ ಇದ್ದರೆ ಜಗದೀಶ್ ಶೆಟ್ಟರ್ ಅವರನ್ನ ಸಿಎಂ ಅಭ್ಯರ್ಥಿ ಅಂತ ಕಾಂಗ್ರೆಸ್ ಘೋಷಿಸಲಿ. ಬಿಜೆಪಿಯವರ ಲಿಂಗಾಯತರನ್ನು ಓಲೈಕೆ ಮಾಡ್ತಿಲ್ಲ. ಲಿಂಗಾಯತರ ಓಲೈಕೆಗೆ ಮುಂದಾಗಿರುವುದು ಕಾಂಗ್ರೆಸ್ ನವರು, ಬಿಜೆಪಿ ಅತಿಹೆಚ್ಚು ಸೀಟುಗಳನ್ನು ಲಿಂಗಾಯತರಿಗೆ ಕೊಟ್ಟಿದೆ. ಹಾಗೊಂದು ವೇಳೆ ಲಿಂಗಾಯತರ ಮೇಲೆ ಪ್ರೀತಿ ಇದ್ದಲ್ಲಿ ಶೆಟ್ಟರ್ ರನ್ನು ಸಿಎಂ ಅಂತ ಘೋಷಿಸಲಿ. ಆ ಮೂಲಕ ಕಾಂಗ್ರೆಸ್ ದಮ್ಮು, ತಾಕತ್ ಪ್ರದರ್ಶಿಸಲಿ ಎಂದು ಸವಾಲು ಹಾಕಿದ್ದಾರೆ.

Latest Videos

undefined

Karnataka BJP Manifesto 2023: 16 ಭರವಸೆಗಳ ಬಿಜೆಪಿ ಪ್ರಣಾಳಿಕೆ ಬಿಡುಗಡೆ, ಕಾಂಗ್ರೆಸ್‌

ಈ ಹಿಂದೆ ಕೂಡ ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಾಗಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಷ ಸರ್ಪದ ಹೇಳಿಕೆ ಬೆನ್ನಲೇ ಬಸನಗೌಡ ಪಾಟೀಲ ಯತ್ನಾಳ್‌ ವಿವಾದಾತ್ಮಕ ಹೇಳಿಕೆ ನೀಡಿ  ಮೋದಿ ನಾಗರಹಾವು ಆದ್ರೆ, ಸೋನಿಯಾ ಗಾಂಧಿ ವಿಷಕನ್ಯೆನಾ ? ಎಂದು ಪ್ರಶ್ನಿಸಿದ್ದರು. ಸೋನಿಯಾ ಗಾಂಧಿ ಚೀನಾ, ಪಾಕಿಸ್ತಾನ ಏಜೆಂಟ್‌ ಆಗಿದ್ದಾರೆ. ರಾಹುಲ್‌ ಗಾಂಧಿ ಸರ್ಜಿಕಲ್‌ ಸ್ಟ್ರೈಕ್‌ ಬಗ್ಗೆ ಸಾಕ್ಷಿ ಕೇಳ್ತಾರೆ, ಅವರೊಬ್ಬ ಹುಚ್ಚ ಎಂದಿದ್ದರು.

BJP Manifesto 2023: ಪ್ರಣಾಳಿಕೆಯಲ್ಲಿ ಬಿಜೆಪಿ ಯಾವ ಕ್ಷೇತ್ರಕ್ಕೆ ಎಷ್ಟು ಭರವಸೆ ನೀಡಿದೆ?

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

click me!