ವಿಜಯಪುರದ ಶಾಸಕ ಯತ್ನಾಳ ಮತ್ತೆ ನನ್ನ ನಡುವಿನ ಸಂಬಂಧ ಸರಿ ಇಲ್ಲ, ಎಂಬುದು ಸುಳ್ಳು. ನಾವೇನು ಜಗಳವಾಡಿಲ್ಲ. ಮಾಧ್ಯಮದ ಎದುರಿಗೆ ಮಾತ್ರ ನಾವೊಂದು ಅವರೊಂದು ಹೇಳಿಕೆ ಕೊಡುತ್ತೇವೆ. ಆದರೆ, ವೈಯಕ್ತಿಕವಾಗಿ ನಾವು ಚೆನ್ನಾಗಿಯೇ ಇದ್ದೇವೆ ಎಂದು ಸಂಸದ ರಮೇಶ ಜಿಗಜಿಣಗಿ ಸ್ಪಷ್ಟಪಡಿಸಿದರು.
ಬಾಗಲಕೋಟೆ (ನ.05): ವಿಜಯಪುರದ ಶಾಸಕ ಯತ್ನಾಳ ಮತ್ತೆ ನನ್ನ ನಡುವಿನ ಸಂಬಂಧ ಸರಿ ಇಲ್ಲ, ಎಂಬುದು ಸುಳ್ಳು. ನಾವೇನು ಜಗಳವಾಡಿಲ್ಲ. ಮಾಧ್ಯಮದ ಎದುರಿಗೆ ಮಾತ್ರ ನಾವೊಂದು ಅವರೊಂದು ಹೇಳಿಕೆ ಕೊಡುತ್ತೇವೆ. ಆದರೆ, ವೈಯಕ್ತಿಕವಾಗಿ ನಾವು ಚೆನ್ನಾಗಿಯೇ ಇದ್ದೇವೆ ಎಂದು ಸಂಸದ ರಮೇಶ ಜಿಗಜಿಣಗಿ ಸ್ಪಷ್ಟಪಡಿಸಿದರು. ಬಾಗಲಕೋಟೆ ಜಿಲ್ಲೆ ಅನಗವಾಡಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಅನುಗುಣವಾಗಿ ನಾವು ಸಾಂದರ್ಭಿಕವಾಗಿ ಏನೋ ಒಂದು ಹೇಳಿಕೆ ಕೊಟ್ಟಿರುತ್ತೇವೆ.
ಅದನ್ನೇ ತಪ್ಪಾಗಿ ಭಾವಿಸಿದರೆ ಏನು ಮಾಡಲು ಸಾಧ್ಯ. ನಮ್ಮಿಬ್ಬರ ಮನಸು ಒಂದೇ ಇದೆ. ನನಗೆ ಯತ್ನಾಳ ಸಹಾಯ ಮಾಡಿದ್ದಾರೆ. ನಾನು ಸಹ ಅವರಿಗೆ ಸಹಾಯ ಮಾಡಿದ್ದೇನೆ. ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಮಾಧ್ಯಮದವರೇ ಸೃಷ್ಟಿಸಿದ ಭಿನ್ನಾಭಿಪ್ರಾಯ ಇದು ಎಂದು ಹೇಳಿದರು. ವಿಜಯಪುರದಿಂದ ಲೋಕಸಭೆ ಚುನಾವಣೆಗೆ ಸ್ಫರ್ಧೆ ಮಾಡುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಪಕ್ಷ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ, ಇಲ್ಲದಿದ್ದರೆ ಮನೆಯಲ್ಲಿ ಮೊಮ್ಮಕ್ಕಳನ್ನು ಆಡಿಸುತ್ತ ಕಾಲಕಳೆಯುತ್ತೇನೆ ಎಂದರು.
undefined
ಕಾಂಗ್ರೆಸ್‌ನವರು ದಲಿತ ಸಿಎಂ ಮಾಡಲ್ಲ: ರಾಜ್ಯದಲ್ಲಿ ಸಿಎಂ ಗದ್ದುಗೆ ದಲಿತ ಮುಖಂಡರಿಗೆ ಸಿಗಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದ ಜಿಗಜಿಣಗಿ, ಕಾಂಗ್ರೆಸ್‌ನಲ್ಲಿ ದಲಿತರನ್ನು ಯಾವುದೇ ಕಾರಣಕ್ಕೂ ಸಿಎಂ ಮಾಡುವುದಿಲ್ಲ. ಅದು ಆ ಪಕ್ಷದಲ್ಲಿರುವ ದಲಿತರ ಮುಖಂಡರ ಪಾಲಿಗೆ ಸಿಎಂ ಹುದ್ದೆ ಬರೀ ಹಗಲುಗನಸಾಗಿಯೇ ಉಳಿಯಲಿದೆ. ಕಾಂಗ್ರೆಸ್ ಮುಖಂಡರು ಪರಸ್ಪರ ಆಂತರಿಕ ಕಚ್ಚಾಟದಲ್ಲಿ ತೊಡಗಿದ್ದಾರೆ. ಅವರಿಗೆ ದಲಿತರ ಪರ ಕಾಳಜಿ ಇಲ್ಲ. ದಲಿತರನ್ನ ಸಿಎಂ ಮಾಡಬೇಕಾದರೆ ವಿಶಾಲ ಮನಸು ಬೇಕು.
ಬರದ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜಕಾರಣ ಮಾಡಿಲ್ಲ: ನಳಿನ್ ಕುಮಾರ ಕಟೀಲ್
ಆ ವಿಶಾಲ ಮನಸು ಕಾಂಗ್ರೆಸ್ ಹೈಕಮಾಂಡ್‌ನಲ್ಲಿ ಇಲ್ಲ. ಅವರದ್ದು ಸಂಕುಚಿತ ಮನಸ್ಥಿತಿ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಷ್ಟು ವರ್ಷ ಆದರೂ ಖರ್ಗೆ ಅವರಂಥ ಧೀಮಂತ ಮುಖಂಡರಿಗೆ ಕಾಂಗ್ರೆಸ್ ಸಿಎಂ ಸ್ಥಾನ ನೀಡಿಲ್ಲ. ಖರ್ಗೆ ಪಕ್ಷಕ್ಕಾಗಿ ದುಡಿದ ಅಗ್ರಗಣ್ಯರು. ಕಾಂಗ್ರೆಸ್‌ನ ಯಾವುದೇ ಮುಖಂಡರಿಗಿಂತ ಖರ್ಗೆ ಕಡಿಮೆ ಇಲ್ಲ. ಖರ್ಗೆ ಅವರ ಪ್ರಯತ್ನದಿಂದ ದೇಶದಲ್ಲಿ ಕಾಂಗ್ರೆಸ್ ಮತ್ತೆ ನೆಲೆ ಕಂಡುಕೊಳ್ಳುತ್ತಿದೆ. ಆದರೆ, ದಲಿತ ನಾಯಕರನ್ನು ಹತ್ತಿಕ್ಕುವುದು ಕಾಂಗ್ರೆಸ್ ಪಕ್ಷದ ಜಾಯಮಾನವಾಗಿದೆ ಎಂದು ಹೇಳಿದರು.