ಯಾರ ಪಾಲಾಗಲಿದೆ ರಮೇಶ ಜಾರಕಿಹೊಳಿ ಸ್ಥಾನ ?

Kannadaprabha News   | Asianet News
Published : Aug 02, 2021, 07:26 AM IST
ಯಾರ ಪಾಲಾಗಲಿದೆ ರಮೇಶ ಜಾರಕಿಹೊಳಿ ಸ್ಥಾನ ?

ಸಾರಾಂಶ

ಅತ್ಯಾಚಾರ ಆರೋಪದಿಂದ ಸಚಿವ ಸ್ಥಾನ ಕಳೆದುಕೊಂಡಿದ್ದ ರಮೇಶ್‌ ಜಾರಕಿಹೊಳಿ  ಅವರ ಸ್ಥಾನ ಈ ಬಾರಿ ಸಹೋದರನ ಪಾಲಾಗುವ ಸಾಧ್ಯತೆ ಬೇಡಿಕೆಯನ್ನು ತಮ್ಮ ಆಪ್ತರ ಮೂಲಕ ರಮೇಶ್‌ ಮುಂದಿಟ್ಟಿದ್ದಾರೆ 

ಬೆಂಗಳೂರು (ಜು.02):  ಅತ್ಯಾಚಾರ ಆರೋಪದಿಂದ ಸಚಿವ ಸ್ಥಾನ ಕಳೆದುಕೊಂಡಿದ್ದ ರಮೇಶ್‌ ಜಾರಕಿಹೊಳಿ ಅವರ ಸ್ಥಾನ ಈ ಬಾರಿ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರಿಗೆ ಲಭಿಸುವ ಸಾಧ್ಯತೆಯಿದೆ.

ತಮ್ಮ ವಿರುದ್ಧದ ಪ್ರಕರಣದಿಂದ ಹೊರಬರುವುದು ವಿಳಂಬವಾಗುವುದಾದರೆ ಸಹೋದರ ಬಾಲಚಂದ್ರ ಅವರಿಗೆ ಸಚಿವ ಸ್ಥಾನ ನೀಡಿ ಎಂಬ ಬೇಡಿಕೆಯನ್ನು ತಮ್ಮ ಆಪ್ತರ ಮೂಲಕ ರಮೇಶ್‌ ಮುಂದಿಟ್ಟಿದ್ದಾರೆ ಎನ್ನಲಾಗಿದೆ. 

ಕುತೂಹಲ ಮೂಡಿಸಿದ ರಮೇಶ್ ಜಾರಕಿಹೊಳಿ ನಡೆ : ರಹಸ್ಯ ಭೇಟಿ

ಪ್ರಮುಖ ಖಾತೆ ನೀಡುವುದಾದರೆ ಮಾತ್ರ ತಾನು ಸಂಪುಟ ಸೇರುತ್ತೇನೆ. ಇಲ್ಲದಿದ್ದರೆ ಈಗಿರುವ ಕೆಎಂಎಫ್‌ ಅಧ್ಯಕ್ಷಗಿರಿಯೇ ಸಾಕು ಎಂಬ ಅಭಿಪ್ರಾಯವನ್ನು ಬಾಲಚಂದ್ರ ಜಾರಕಿಹೊಳಿ ಹೊರಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಸಂಪುಟ ರಚನೆ ಕಸರತ್ತು ಜೋರಾಗಿದ್ದು, ಈಗಾಗಲೇ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲಾಗುತ್ತಿದೆ. ಅನೇಕರು ಸ್ಥಾನ ಗಿಟ್ಟಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಆದರೆ ಈ ಬಾರಿ ಸಾಕಷ್ಟು ಕುತೂಹಲವಿದ್ದು ಹಳಬರು ಹೊಸಬರ ಚರ್ಚೆ ಮಾತ್ರ ಜೋರಾಗಿ ನಡೆಯುತ್ತಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌