ಸಿಎಂ ಆಗಬೇಕೆಂದು ಗಡ್ಡ ಬಿಟ್ಟಿದ್ದಲ್ಲ: ಸಿ.ಟಿ.ರವಿ

By Kannadaprabha NewsFirst Published Aug 2, 2021, 7:19 AM IST
Highlights
  • ನಾನಂತೂ ಮುಖ್ಯಮಂತ್ರಿ ಆಗಬೇಕು ಅನ್ನೋದಕ್ಕೆ ಗಡ್ಡ ಬಿಟ್ಟಿದ್ದಲ್ಲ - ಸಿ ಟಿ ರವಿ
  • ಗಡ್ಡ ಬಿಟ್ಟಿರುವವರು ಮುಂದಿನ ದಿನಗಳಲ್ಲಿ ಸಿಎಂ ಆಗ್ತಾ ಎಂದು ವಿಜಯನಗರ ಮೈಲಾರಲಿಂಗ ಭವಿಷ್ಯ

ಚಿಕ್ಕಮಗಳೂರು (ಆ.02): ನಾನಂತೂ ಮುಖ್ಯಮಂತ್ರಿ ಆಗಬೇಕು ಅನ್ನೋದಕ್ಕೆ ಗಡ್ಡ ಬಿಟ್ಟಿದ್ದಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಗಡ್ಡ ಬಿಟ್ಟಿರುವವರು ಮುಂದಿನ ದಿನಗಳಲ್ಲಿ ಸಿಎಂ ಆಗ್ತಾ ಎಂದು ವಿಜಯನಗರ ಮೈಲಾರಲಿಂಗ ಭವಿಷ್ಯ ನುಡಿದಿರುವ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸುದ್ದಿಗಾರರು ಭಾನುವಾರ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಕಾಲೇಜು ದಿನಗಳಿಂದಲೂ ನಿರಂತರವಾಗಿ ಗಡ್ಡ ಬಿಟ್ಟುಕೊಂಡು ಬಂದಿದ್ದೇನೆ. ಗಡ್ಡ ಬಿಡೋದು, ತಿಲಕ ಇಡುವುದು ನನ್ನ ಐಡೆಂಟಿಟಿ. ಗಡ್ಡಧಾರಿ ಅಂತ ಅವರು ಹೇಳಿದ್ದು ನಿಜವಾಗಿದ್ರೆ ಬಹಳ ಜನ ಗಡ್ಡ ಬಿಡಬಹುದು. ಯಾರಾರ‍ಯರು ಮುಖ್ಯಮಂತ್ರಿ ಆಗಬೇಕು ಅಂತಾ ಆಕಾಂಕ್ಷಿ ಇರುತ್ತಾರೋ ಅವರೆಲ್ಲ ಗಡ್ಡ ಬಿಡೋಕೆ ಪ್ರಾರಂಭಿಸಬಹುದು ಎಂದು ಹೇಳಿದರು.

ಮಾರ್ಚ್‌ನಲ್ಲಿ ​ ಗಡ್ಡಧಾರಿ ವ್ಯಕ್ತಿ ಸಿಎಂ-ಮೈಲಾರಲಿಂಗೇಶ್ವರನ ಭವಿಷ್ಯ: ಯಾರು ಆ ಗಡ್ಡಧಾರಿ?

ನನಗೆ ಪಕ್ಷ ನಿಷ್ಟೆ, ಶ್ರಮದ ಮೇಲೆ ನಂಬಿಕೆ ಇರೋದು, ಏನೇನೂ ಭಗವಂತ ಬರೆದಿದ್ದಾನೋ, ತಾಯಿಯ ಆರ್ಶಿವಾದ ಇದಿಯೋ ಗೊತ್ತಿಲ್ಲ ಎಂದ ಅವರು, ಸಿಎಂ ಆಗಬೇಕೆಂದು ಗಡ್ಡ ಬಿಟ್ಟಿದ್ದಲ್ಲ ಎಂದರು.

ಸಿಎಂ ಆಗಲು ಯೋಗಬೇಕು:

ಸಿಎಂ ರೇಸ್‌ ವಿಚಾರದಲ್ಲಿ 15 ದಿನಗಳಿಂದ ಮಾಧ್ಯಮಗಳಲ್ಲಿ ಹೆಸರು ಬರ್ತಾ ಇತ್ತು. ನಾನೊಬ್ಬನೇ ಅಲ್ಲ ಹಲವರ ಹೆಸರು ಇತ್ತು. ಸಿಎಂ ಆಗಲು ಯೋಗ ಇರಬೇಕು. ಈಗ ಬೊಮ್ಮಯಿ ಅವರಿಗೆ ಯೋಗ ಕೂಡಿ ಬಂದಿದೆ ಎಂದು ಶಾಸಕ ಸಿ.ಟಿ. ರವಿ ಹೇಳಿದರು.

ಸಿಎಂ ಒಳ್ಳೆಯ ಕೆಲ್ಸ ಮಾಡ್ತಾರೆ ಎಂಬ ನಿರೀಕ್ಷೆ ಇದೆ. ಎಲ್ಲ ರೀತಿಯ ಸಹಕಾರವನ್ನು ಕೊಡ್ತೀವಿ ಅವರು ನಮ್ಮ ಸ್ನೇಹಿತರು, ಒಡನಾಡಿಗಳು. ರಾಜ್ಯದ ಹಿತಕ್ಕೆ ಅವರು ಮಾಡುವ ಕೆಲಸಕ್ಕೆ ನಮ್ಮ ಬೆಂಬಲ ಇರುತ್ತೇ ಎಂದು ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳಿದರು.

ರಾಜ್ಯದ ಹಿತದ ಆದ್ಯತೆ ಇಟ್ಕೊಂಡು ಸಂಪುಟ ವಿಸ್ತರಣೆ ಮಾಡಲಿ. ಸಾಮಾಜಿಕ, ಪ್ರಾದೇಶಿಕ ಸಮತೋಲನ ಎರಡನ್ನು ಕಾಪಾಡಿಕೊಂಡು ವಿಸ್ತರಣೆ ಮಾಡ್ತಾರೆ ಎಂಬ ವಿಶ್ವಾಸ ಇದೆ. ಇತ್ತೀಚೆಗೆ ಪ್ರಧಾನಿಯವರು ಕೇಂದ್ರ ಸಂಪುಟವನ್ನು ವಿಸ್ತರಣೆ ಮಾಡಿದರು. ಆ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕ ಸಮತೋಲನ ಇತ್ತು. ಸಿಎಂ, ಒಳ್ಳೆ ಸಂಪುಟ ರಚನೆ ಮಾಡಿ ಅವರ ನೇತೃತ್ವದಲ್ಲೇ ಮತ್ತೆ ಚುನಾವಣೆ ಗೆದ್ದು ಬರಬೇಕು. ಆ ರೀತಿ ವಿಸ್ತರಣೆ ಮಾಡ್ತಾರೆ ಅನ್ನೋ ನಂಬಿಕೆ ಇದೆ ಎಂದು ಹೇಳಿದರು.

click me!