
ಬಾಗಲಕೋಟೆ (ಏ.5): ಬಾಗಲಕೋಟೆಯ ಕಾಂಗ್ರೆಸ್ ನಲ್ಲಿ ಟಿಕೆಟ್ ಅಸಮಾಧಾನ ಶಮನ ಆಯ್ತು ಅನ್ನುವಷ್ಟರಲ್ಲಿ ವೀಣಾ ಕಾಶಪ್ಪನವರ ಮತ್ತೆ ಬಂಡಾಯದ ಬಾಂಬ್ ಸಿಡಿಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಬಾಗಲಕೋಟೆಯ ನವನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವೀಣಾ ಪ್ರಚಾರದಲ್ಲಿ ಭಾಗಿಯಾಗ್ತಾರೆ ಎಂದಿದ್ದ ಕೈ ಮುಖಂಡರಿಗೆ ಬೆಂಗಳೂರಿಂದಲೇ ವೀಣಾ ಕಾಶಪ್ಪನವರ ಬಂಡಾಯದ ಸಂದೇಶ ರವಾನೆ ಮಾಡಿದ್ದಾರೆ.
ನಮ್ಮದು ಹುಲಿಗಳ ಪಡೆ, ಒಗ್ಗಟ್ಟಾಗಿ ಕೆಲಸ ಮಾಡ್ತೀವಿ: ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್!
ತಮ್ಮ facebook ಖಾತೆಯಲ್ಲಿ "ನನ್ನ ನಡೆ ಸ್ವಾಭಿಮಾನದ ಕಡೆ"ಗೆ ಎಂದು ಪೋಸ್ಟ್ ಹಾಕುವ ಮೂಲಕ ಮತ್ತೆ ಬಂಡಾಯದ ಕಹಳೆ ಊದಿದ್ದಾರೆ. ನಿನ್ನೆಯಷ್ಟೇ ಇಳಕಲ್ ನಗರದಲ್ಲಿರುವ ಕಾಶಪ್ಪನವರ್ ನಿವಾಸಕ್ಕೆ ಸಚಿವ ಶಿವಾನಂದ ಪಾಟೀಲ್ ಭೇಟಿ ನೀಡಿದ್ದರು. ಬಳಿಕ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸಚಿವ ಶಿವಾನಂದ ಪಾಟೀಲ್ ಮತ್ತು ವಿಜಯಾನಂದ ಕಾಶಪ್ಪನವರು ಹೇಳಿದ್ದರು. ಆದರೆ ಬೆಂಗಳೂರಿನಲ್ಲೇ ಕುಳಿತು ಅಭಿಮಾನಿಗಳಿಗೆ, ಹಿತೈಶಿಗಳಿಗೆ ತಾಳ್ಮೆಯಿಂದ ಇರಿ, ನನ್ನ ಪತಿ & ನಾಯಕರ ನಿರ್ಧಾರಕ್ಕೆ ನನ್ನ ಸಮ್ಮತಿ ಇಲ್ಲ. ಹಲವಾರು ನಾಯಕರು ಪ್ರಚಾರಕ್ಕೆ ಬರ್ತಾರೆ ಎಂದು ಹೇಳಿಕೆ ಕೊಟ್ಟಿದ್ದರು. ಆದ್ರೆ ತಾನು ಯಾವುದೇ ಕಾರಣಕ್ಕೂ ಪ್ರಚಾರದಲ್ಲಿ ಭಾಗಿಯಾಗಲ್ಲ. ಗ್ರಾಮ ಪಂಚಾಯತಿ ಮಟ್ಟ, ತಾಲ್ಲೂಕು ಮಟ್ಟದಲ್ಲಿ ಸಭೆ ನಡೆಸಿ, ನಿಮ್ಮಲ್ಲರ ಅಭಿಪ್ರಾಯ, ಅನಿಸಿಕೆ ತಿಳಿದುಕೊಂಡು ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ, ನನ್ನ ಅಭಿಪ್ರಾಯ ತಿಳಿಸೊವರೆಗೂ ಸಮಾಧಾನದಿಂದ ಇರಿ ಎಂದು ಅಭಿಮಾನಿಗಳಿಗೆ ವೀಣಾ ಮನವಿ ಮಾಡಿದ್ದಾರೆ...
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.