Chikkamagaluru: ಲೋಕಸಭಾ ಚುನಾವಣೆಯಲ್ಲಿ ಪ್ರಾಮುಖ್ಯತೆ ಕಳೆದುಕೊಂಡ ಕಾಫಿನಾಡು!

Published : Apr 05, 2024, 07:11 PM IST
Chikkamagaluru: ಲೋಕಸಭಾ ಚುನಾವಣೆಯಲ್ಲಿ ಪ್ರಾಮುಖ್ಯತೆ ಕಳೆದುಕೊಂಡ ಕಾಫಿನಾಡು!

ಸಾರಾಂಶ

ಕ್ಷೇತ್ರ ಮರು ವಿಂಗಡಣೆ ಪರಿಣಾಮ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಯಿಂದ ಹಿಡಿದು ಮತ ಎಣಿಕೆ ವರೆಗಿನ ಎಲ್ಲಾ ಪ್ರಕ್ರಿಯೆಗಳೂ ಉಡುಪಿ , ಹಾಸನ ಜಿಲ್ಲಾ ಕೇಂದ್ರದಲ್ಲೇ ನಡೆಯುವ ಕಾರಣ ಚಿಕ್ಕಮಗಳೂರು ಜಿಲ್ಲೆ ಪ್ರಚಾರಕ್ಕಷ್ಟೇ ಸೀಮಿತ ಎನ್ನುವಂತಾಗಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಗೌಜು, ಗದ್ದಲಗಳಿಲ್ಲದೆ ಜಿಲ್ಲೆಯ ಮಟ್ಟಿಗೆ ಚುನಾವಣೆ ಕಣ ಮಂಕು ಕವಿದಂತಾಗಿದೆ

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಏ.5): ಕ್ಷೇತ್ರ ಮರು ವಿಂಗಡಣೆ ಪರಿಣಾಮ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಯಿಂದ ಹಿಡಿದು ಮತ ಎಣಿಕೆ ವರೆಗಿನ ಎಲ್ಲಾ ಪ್ರಕ್ರಿಯೆಗಳೂ ಉಡುಪಿ , ಹಾಸನ ಜಿಲ್ಲಾ ಕೇಂದ್ರದಲ್ಲೇ ನಡೆಯುವ ಕಾರಣ ಚಿಕ್ಕಮಗಳೂರು ಜಿಲ್ಲೆ ಪ್ರಚಾರಕ್ಕಷ್ಟೇ ಸೀಮಿತ ಎನ್ನುವಂತಾಗಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಗೌಜು, ಗದ್ದಲಗಳಿಲ್ಲದೆ ಜಿಲ್ಲೆಯ ಮಟ್ಟಿಗೆ ಚುನಾವಣೆ ಕಣ ಮಂಕು ಕವಿದಂತಾಗಿದೆ.

ಮಾಜಿ ಪ್ರಧಾನಿ ಇಂದಿರಾಗಾಂಧಿಗೆ ರಾಜಕೀಯ ಮರುಹುಟ್ಟು ಕೊಟ್ಟಿದ್ದ ಜಿಲ್ಲೆ:

ಕಾಫಿ, ಮೆಣಸು ಸಾಂಬಾರ ಪದಾರ್ಥಗಳ ಮೂಲಕ ಬ್ರಿಟಿಷರ ಕಾಲದಿಂದಲೂ ಚಿರಪರಿಚಿತ ಜಿಲ್ಲೆ ಚಿಕ್ಕಮಗಳೂರು ಅಲ್ಲದೆ ಮಾಜಿ ಪ್ರಧಾನಿ ಇಂದಿರಾಗಾಂಧಿಗೆ ರಾಜಕೀಯ ಮರುಹುಟ್ಟು ಕೊಟ್ಟಿರುವ ಪ್ರಖ್ಯಾತಿಯೂ ಹೊಂದಿದೆ. ಇಂತಹ ಜಿಲ್ಲೆ ಲೋಕಸಭಾ ಚುನಾವಣೆಯಲ್ಲಿ ಪ್ರಾಮುಖ್ಯತೆ ಕಳೆದುಕೊಳ್ಳುತ್ತಿದೆ ಎನ್ನುವ ನೋವು ಮತದಾರರದ್ದು ಲೋಕಸಭಾ ಅಖಾಡದಲ್ಲಿ ರಾಜಕೀಯ ಚಟುವಟಿಕೆಯಿಂದ ದೂರವಾಗಿದೆ. 

ಸಾಮಾನ್ಯವಾಗಿ ಪ್ರತಿ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ತುಂಬಿ ತುಳುಕುವ ಇಲ್ಲಿನ ಹೋಟೆಲ್ಗಳು, ವಸತಿ ಗೃಹಗಳಿಗೆ ಲೋಕಸಭೆ ಚುನಾವಣೆಯಲ್ಲಿ ಮಾತ್ರ ಆದಾಯ ಕಡಿಮೆ ಯಾಗುತ್ತದೆ ಎಂದು ಉದ್ಯಮಿಗಳು ಹೇಳುತ್ತಾರೆ. ನಮ್ಮ ಜಿಲ್ಲೆಯೇ ಪ್ರತ್ಯೇಕ ಕ್ಷೇತ್ರವಾಗಿದ್ದರೆ ಎಲ್ಲರಲ್ಲೂ ಆಸಕ್ತಿ ಇರುತ್ತಿತ್ತು. ಪ್ರಚಾರದ ಭರಾಟೆ, ರಾಜಕೀಯ ಚಟುವಟಿಕೆಗಳಿಂದಾಗಿ ಒಂದಷ್ಟು ವ್ಯಾಪಾರ ವಹಿವಾಟುಗಳು ಹೆಚ್ಚುತ್ತಿತ್ತು ಎನ್ನುವ ಅಭಿಪ್ರಾಯ ಸ್ಥಳೀಯರಲ್ಲಿದೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ(Udupi chikkamagaluru Loksabha)ವಾದ್ರೆ ಹಾಸನಕ್ಕೆ ಕಡೂರು ವಿಧಾನಸಭಾ ಕ್ಷೇತ್ರ ಸೇರಿಕೊಂಡಿದೆ. 

ಸಿಟಿ ಬಸ್ ಏರಿ ಡಿಫರೆಂಟ್ ಪ್ರಚಾರಕ್ಕೆ ಮುಂದಾದ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ!

ವಿಧಾನಸಭೆ ಗೆಲುವಿನ ಪ್ರೇರಣೆ : ಕಹಿ ಮರೆಯಲು ಕಸರತ್ತು

ಕಳೆದ ಬಾರಿ ಲೋಕಸಭೆ ಚುನಾವಣೆ(Lok sabha election)ಗೆ ಹೋಲಿಸಿದಲ್ಲಿ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣೆ ಚಟುವಟಿಕೆಗಳು ಚುರುಕಾಗಿದೆ. ಕಳೆದ ಬಾರಿ ಮೈತ್ರಿ ಪಕ್ಷ ಜೆಡಿಎಸ್ಗೆ ಸೀಟು ಬಿಟ್ಟುಕೊಟ್ಟಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಉತ್ಸಾಹ ಕಳೆದುಕೊಂಡಿದ್ದರು. ಆದರೆ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಐದೂ ಕ್ಷೇತ್ರವನ್ನು ಗೆದ್ದು ಬೀಗಿರುವುದರಿಂದ ಕಾರ್ಯಕರ್ತರು, ಮುಖಂಡರು ಇನ್ನೂ ಅದೇ ಗೆಲುವಿನ ಗುಂಗಿನಲ್ಲೇ ಇದ್ದಾರೆ. ಅಲ್ಲದೆ ಈ ಬಾರಿ ತಮ್ಮದೇ ಪಕ್ಷದ ಅಭ್ಯರ್ಥಿ ಕಣದಲ್ಲಿರುವ ಕಾರಣ ಲೋಕಸಭೆ ಚುನಾವಣೆಯಲ್ಲಿ ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಲು ಅದು ಪ್ರೇರಣೆ ನೀಡುತ್ತಿದೆ.  

ಚಿಕ್ಕಮಗಳೂರು: ಬಿಸಿಲು ಝಳ, ಚುನಾವಣಾ ಕಾವು ಜನರು ಸುಸ್ತೋ ಸುಸ್ತು!

ಇನ್ನು ಬಿಜೆಪಿ ಈ ಬಾರಿ ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ ಅದು ಎಂದಿನಂತೆ ಚುನಾವಣೆಯಲ್ಲಿ ಸಂಪೂರ್ಣ ಸಕ್ರಿಯವಾಗಿದೆ. ಜಿಲ್ಲೆಯ ಐದೂ ಕ್ಷೇತ್ರಗಳಲ್ಲೂ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದರೂ ಲೋಕಸಭೆ ಚುನಾವಣೆಯ ಹುಮ್ಮಸ್ಸಿಗೇನೂ ಕೊರತೆ ಆದಂತೆ ಕಂಡುಬಂದಿಲ್ಲ. ಈ ಚುನಾವಣೆಯನ್ನು ಉತ್ತಮ ಅಂತರದಿಂದ ಗೆದ್ದು ವಿಧಾನಸಭೆ ಸೋಲಿನ ಕಹಿ ಮರೆಯುವ ಪ್ರಯತ್ನ ಪಕ್ಷದ್ದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?