ಗೆದ್ದಲು ಹುಳು ಕಟ್ಟಿದ ಹಾಗೆ ನಾನು ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಮಾಡಿದ್ಕದೇನೆ. ರೈತನ ಬೆಳೆ ಒಮ್ಮೆ ನಾಶ ಆದಾಗ ಆಗುವ ನೋವು ನನಗಾಗಿದೆ. ಅದು ಮಾಸಲಾರದ ನೋವಾಗಿದೆ.
ಬಾಗಲಕೋಟೆ (ಏ.6): ಮಾ. 28 ರಂದು ಸಿಎಂ, ಡಿಸಿಎಂ ಭೇಟಿ ಮಾಡಿದ ನಂತರದ ಬೆಳವಣಿಗೆಳನ್ನು ಸಭೆಯಲ್ಲಿ ತಿಳಿಸುವ ಕೆಲಸ ಮಾಡಿದೆ. ಅನಾರೋಗ್ಯ ಕಾರಣದಿಂದ ಬಾಗಲಕೋಟೆಗೆ ಬರಲು ಆಗಲಿಲ್ಲ ಎಂದು ಕಾಂಗ್ರೆಸ್‌ನಿಂದ ಬಂಡಾಯ ಎದ್ದಿರುವ ವೀಣಾ ಕಾಶೆಪ್ಪನವರು ತಿಳಿಸಿದರು.
ಇಂದು ಬಾಗಲಕೋಟೆಯ ತಮ್ಮ ನಿವಾಸದಲ್ಲಿ ಬೆಂಬಲಿಗರ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದಿನ ಸಭೆಯಲ್ಲಿ ಮೂರ್ನಾಲ್ಕು ತರಹ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೆಲವು ಹಿರಿಯರು ಇಂದಿನ ಸಭೆಗೆ ಬಂದಿರಲಿಲ್ಲ. ಹೀಗಾಗಿ ಇಂದು ತೀರ್ಮಾನ ತಗೊಳ್ಳುವುದು ಸೂಕ್ತ ಅಲ್ಲ ಅನಿಸಿತು. ಯುಗಾದಿ ಬಳಿಕ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.
undefined
ಮುಗಿಯದ ವೀಣಾ ಕಾಶೆಪ್ಪನವರ ಮುನಿಸು; ಮತ್ತೊಮ್ಮೆ ಬೆಂಬಲಿಗರ ಸಭೆ ನಡೆಸಲು ಸಜ್ಜು!
ಸಭೆಯಲ್ಲಿ ಬಹುತೇಕರು ಬಂಡಾಯ ನಿಲ್ಲಬೇಕು ಎಂಬ ಅಭಿಪ್ರಾಯ ಕೊಟ್ಟರು. ಹಾಗಾಗಿ ನಿಮ್ಮ ಕ್ಷೇತ್ರದ ನೀವೇ ಸರ್ವೆ ಮಾಡಿ. ಬಂಡಾಯ ನಿಂತ್ಕೊಬೇಕಂದರೆ ಏನೆಲ್ಲ ಬೇಕೋ ಅವು ಅವಶ್ಯಕ. ತಮ್ಮ ತಮ್ಮ ಕ್ಷೇತ್ರದಲ್ಲಿ ಸಮರ್ಪಕವಾಗಿ ರೂಪಿಸಿಕೊಂಡು ಮಾಹಿತಿ ನೀಡುವಂತೆ ತಿಳಿಸಿದ್ದೇನೆ. ಪಕ್ಷದಲ್ಲಿ ಅಧಿಕಾರ ನೀಡಬೇಕೆಂದು ಸಲಹೆ ನೀಡಿದ್ದಾರೆ. ಕೆಲವರು ತಟಸ್ಥರಾಗಿ ಉಳಿಯಿರಿ ಅಂದಿದ್ದಾರೆ. ಇವೆಲ್ಲವನ್ನೂ ಗಮನಕ್ಕೆ ತೆಗೆದುಕೊಂಡಿದ್ದೇನೆ. ನಿರ್ಧಾರ ತೆಗೆದುಕೊಳ್ಳುವರೆಗೂ ತಟಸ್ಥಳಾಗಿರ್ತೀನಿ ಎಂದರು.
ಇದುವರೆಗೆ ತಮ್ಮ ಸಂಪರ್ಕ ಯಾರೂ ಮಾಡಿಲ್ಲವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ವೀಣಾ, ನನ್ನ ನಂಬರ್ ಸಂಯುಕ್ತಾ, ಶಿವಾನಂದ ಪಾಟೀಲ್ ಹತ್ರವೂ ಇದೆ. ಯಾರೂ ಕೂಡಾ ನನ್ನ ಸಂಪರ್ಕ ಮಾಡಿಲ್ಲ. ಜಿಪಂ ಅಧ್ಯಕ್ಷೆಯಾಗಿದ್ದಾಗ ಶಿವಾನಂದ ಪಾಟೀಲರು ಉಸ್ತುವಾರಿ ಸಚಿವರಾಗಿದ್ರು. ಅಂದಿನಿಂದ ಇಲ್ಲಿಯವರೆಗೆ ನನ್ನ ನಂಬರ ಅವರ ಬಳಿ ಇದೆ. ಅವರೂ ಕೂಡಾ ಕರೆ, ಸಂಪರ್ಕ ಮಾಡಿಲ್ಲ ಎಂದರು.
ಅಣ್ಣ ಬಂದ್ಮೇಲೆ ಅಕ್ಕಾ ಬಂದೇ ಬರ್ತಾಳೆ ಎಂಬ ಸಂಯುಕ್ತಾ ಪಾಟೀಲ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ವೀಣಾ, ಪತಿ (ವಿಜಯಾನಂದ) ಕಾಂಗ್ರೆಸ್ ಶಾಸಕರಾಗಿ ಅವರ ಜವಾಬ್ದಾರಿ ನಿಭಾಯಿಸ್ತಿದಾರೆ. ಅವರ ಜವಾಬ್ದಾರಿಗಳಿಗೆ ನಾನು ಅಡ್ಡಿ ಮಾಡಲ್ಲ. ಇದು ನನಗೆ ಅನ್ಯಾಯ ಆಗಿರೋದು. ನನ್ನ ಮನಸ್ಸಿಗೆ ನೋವಾಗಿದೆ. ವಿಜಯಾನಂದ ಕಾಶಪ್ಪನವರ ಹುನಗುಂದ ಕ್ಷೇತ್ರದ ಶಾಸಕ. ಗೆದ್ದಲು ಹುಳು ಕಟ್ಟಿದ ಹಾಗೆ ನಾನು ಸಂಘಟನೆಯನ್ನು ಇಂಚಿಂಚು ಕಟ್ಟಿದ್ದೀನಿ. ರೈತನ ಬೆಳೆ ಒಮ್ಮೆ ನಾಶ ಆದಾಗ ಆಗುವ ನೋವು ನನಗಾಗಿದೆ. ಅದು ಮಾಸಲಾರದ ನೋವಾಗಿದೆ. ಸಂಯುಕ್ತಾ ಪಾಟೀಲ ಜಿಲ್ಲೆಗೆ ಕೊಡುಗೆ ಏನೂ ಇಲ್ಲ. ಜಿಲ್ಲೆಯ ಜನರು ನನ್ನನ್ನ ಮನೆ ಮಗಳಂತೆ ನೋಡಿದ್ರು. ಆ ಜನರು ಕೂಡಾ ನೋವು ಅನುಭವಿಸ್ತಿದ್ದಾರೆ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಅಂತಾರೆ. ನಾನು ದಾವಣಗೆರೆಯಿಂದ ಬಂದವಳು. ನಾನು ಬಾಗಲಕೋಟೆ ಮನೆಮಗಳು ಅಂತೇನೆ ಎಂದು ಭಾವುಕರಾದರು.
ನಮ್ಮದು ಹುಲಿಗಳ ಪಡೆ, ಒಗ್ಗಟ್ಟಾಗಿ ಕೆಲಸ ಮಾಡ್ತೀವಿ: ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್!
ಇನ್ನು ಸಂಯುಕ್ತಾ ಪಾಟೀಲ್ ಸಹೋದರ ಹರ್ಷಗೌಡ ಪಾಟೀಲ ಬಿಜೆಪಿ ಸೇರ್ಪಡೆ ವಿಚಾರ ಪ್ರಸ್ತಾಪಿಸಿದ ವೀಣಾ ಕಾಶೆಪ್ಪನವರು, ಇದಕ್ಕೇ ಒಳ ಒಪ್ಪಂದ ರಾಜಕಾರಣ ಅಂತಾರೆ. ಅವರ ಅಪ್ಪ ಬಂದು ಕಾಂಗ್ರೆಸ್ ಪ್ರಚಾರ ಮಾಡ್ತಾರೆ. ಮಗ ಹೋಗಿ ಬಿಜೆಪಿ ಸೇರ್ಪಡೆ ಆಗ್ತಾರೆ. ಇದು ಯಾವ ರೀತಿ ರಾಜಕಾರಣ ಅಂತ ಜನರೇ ಹೇಳ್ತಾರೆ. ಇಲ್ಲಿ ಕಾಂಗ್ರೆಸ್ ಪರ ಪ್ರಚಾರ, ಅಲ್ಲಿ ಬಿಜೆಪಿ ಪರ ಪ್ರಚಾರ. ಇವರದ್ದು ಒಂದೇ ಉದ್ದೇಶ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸೋಲಿಸೋದು. ಜನ ಯಾರೂ ಮುಗ್ದರಲ್ಲ, ದಡ್ಡರಲ್ಲ. ಜನರು ತೀಕ್ಷ್ಣವಾಗಿ ರಾಜಕೀಯ ವಿಷಯಗಳನ್ನು ತೂಕ ಮಾಡ್ತಿದಾರೆ. ಇದರ ತೀರ್ಪನ್ನು ಮುಂದಿನ ದಿನಗಳಲ್ಲಿ ಜನ ನೀಡ್ತಾರೆ ಎಂದರು.