ಖರ್ಗೆ ಕುಟುಂಬ ಸೋಲಿಸೋದಾಗಿ ತೊಡೆ ತಟ್ಟಿದ್ದ ಚಿಂಚನಸೂರು ಮತ್ತೆ ಕಾಂಗ್ರೆಸ್ ಕದ ತಟ್ಟಿದ್ರಾ?!

By Ravi Janekal  |  First Published Mar 21, 2023, 10:08 AM IST

ಮಾಜಿ ಸಚಿವ, ರಾಜ್ಯ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಬಿಜೆಪಿ ಪ್ರಭಾವಿ ಮುಖಂಡ ಬಾಬುರಾವ್‌ ಚಿಂಚನಸೂರು(Baburao Chinchansur) ಅವರು ವಿಧಾನ ಪರಿಷತ್‌ ಸ್ಥಾನಕ್ಕೆ ಸೋಮವಾರ ಸಂಜೆ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು, ಅಂಗೀಕರಿಸಲಾಗಿದೆ ಎನ್ನಲಾಗಿದೆ.


ಯಾದಗಿರಿ (ಮಾ.21) : ಮಾಜಿ ಸಚಿವ, ರಾಜ್ಯ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಬಿಜೆಪಿ ಪ್ರಭಾವಿ ಮುಖಂಡ ಬಾಬುರಾವ್‌ ಚಿಂಚನಸೂರು(Baburao Chinchansur) ಅವರು ವಿಧಾನ ಪರಿಷತ್‌ ಸ್ಥಾನಕ್ಕೆ ಸೋಮವಾರ ಸಂಜೆ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು, ಅಂಗೀಕರಿಸಲಾಗಿದೆ ಎನ್ನಲಾಗಿದೆ.

ಬಾಬುರಾವ್‌ ಚಿಂಚನಸೂರು ಅವರ ಈ ನಡೆ ನಿರೀಕ್ಷಿಸಲಾಗುತ್ತಿತ್ತು ಎನ್ನಲಾಗಿದ್ದು, ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಮತ್ತೇ ಕಾಂಗ್ರೆಸ್‌ ಪಕ್ಷಕ್ಕೆ ಬಾಬುರಾವ್‌ ಘರ್‌ ವಾಪ್ಸಿ ಆಗಬಹುದೇ ಅನ್ನೋ ಲೆಕ್ಕಾಚಾರಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿವೆ.ಕಾಂಗ್ರೆಸ್ ಸೇರುವ ಬಗ್ಗೆ ಹೌದು ಎನ್ನುತ್ತಿವೆ ರಾಜಕೀಯ ಬೆಳವಣಿಗೆಗಳು.

Tap to resize

Latest Videos

undefined

ಚಂಚಲ ಮನಸ್ಸಿನ ಚಿಂಚನಸೂರು ಬಿಜೆಪಿಗೆ ರಾಜೀನಾಮೆ: ಇಂದು ಕಾಂಗ್ರೆಸ್‌ಗೆ ವಾಪಸ್‌

ಮಾ.8ರಂದು ನಡೆದ ಬಿಜೆಪಿ ವಿಜಯಸಂಕಲ್ಪ ಯಾತ್ರೆ(vijayasankalpa yatre) ಕಾರ್ಯಕ್ರಮದಲ್ಲಿ ಚಿಂಚನಸೂರು ಗುರಮಠಕಲ್ ಕ್ಷೇತ್ರ(gurumathkal assembly constituency)ದ ಬಿಜೆಪಿ ಅಭ್ಯರ್ಥಿ ಎಂದು ಯಡಿಯೂರಪ್ಪ(BS Yadiyurappa)ನವರೇ ಘೋಷಣೆ ಮಾಡಿದ್ದರು. ಕ್ಷೇತ್ರದಲ್ಲಿ ರೋಡ್ ಶೋ(road show) ಮಾಡುವಾಗ ಈ ಬಾರಿ ಚಿಂಚನಸೂರ ಗೆಲ್ಲಿಸುವಂತೆ ಕರೆ ನೀಡಿದ್ದ ಬಿಎಸ್ ಯಡಿಯೂರಪ್ಪ. ಆದರೆ ಅಭ್ಯರ್ಥಿ ಎಂದು ಘೋಷಣೆ ಮಾಡಿದ 12 ದಿನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಶಾಕ್ ಕೊಟ್ಟ ಚಿಂಚನಸೂರ್

ತೊಡೆ ತಟ್ಟಿದ್ದ ಚಿಂಚನಸೂರು ಇದೀಗೆ ಕಾಂಗ್ರೆಸ್ ಕದ ತಟ್ಟಿದ್ರಾ?

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(AICC president mallikarjun kharge)ಯವರನ್ನ ಸೋಲಿಸಿದಂತೆ ಆತನ ಪುತ್ರ ಶಾಸಕ ಪ್ರಿಯಾಂಕ ಖರ್ಗೆ(MLA Priyanka kharge)ಯನ್ನು ಮುಂಬರುವ ಚುನಾವಣೆಯಲ್ಲಿ ಸೋಲಿಸುವುದಾಗಿ ತೊಡೆ ತಟ್ಟಿದ್ದ ಬಾಬುರಾವ್ ಚಿಂಚನಸೂರು. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದಿದ್ದ ಪ್ರತಿಕಾಗೋಷ್ಠಿಯಲ್ಲಿಯೇ ಬಾಬುರಾವ್ ಶಪಥ ಮಾಡಿದ್ದರು. ಇದೀಗ ಮತ್ತೆ ಕಾಂಗ್ರೆಸ್ ಗೆ ರಿ-ಎಂಟ್ರಿ ಕೊಡತ್ತಿರುವ ಬಾಬುರಾವ್ ಚಿಂಚನಸೂರು. 

ಚಿಂಚನಸೂರು ಕಡೆಗಣಿಸಿತಾ ಬಿಜೆಪಿ?

ಬಿಜೆಪಿ ಸರ್ಕಾರ ಚಿಂಚನಸೂರುರನ್ನು ಕಡೆಗಣಿಸಿದ್ದಕ್ಕೆ ಬಿಜೆಪಿ ತೊರೆಯಲು ಕಾರಣ ಎಂದು ಹೇಳಲಾಗುತ್ತಿದೆ. ಸರ್ಕಾರಿ ಕಾರ್ಯಾಕ್ರಮಗಳಿಗೆ ನನಗೆ ಆಹ್ವಾನ ನೀಡ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಬಾಬುರಾವ್. ಈ ಹಿಂದೆ ತಮ್ಮನ್ನ ಬಿಟ್ಟು ವಸತಿ ಶಾಲೆ ಉದ್ಘಾಟನೆ ಮಾಡಲು ಮುಂದಾಗಿದ್ದ ಸಚಿವ ರಾಮುಲು(Sriramulu)ಗೆ ಘೇರಾವ್ ಹಾಕಿ ಪ್ರತಿಭಟಿಸಿ ಕಾರ್ಯಕ್ರಮ ರದ್ದು ಮಾಡಿದ್ದರು. ನಿಗಮ ಮಂಡಳಿ ಅದ್ಯಕ್ಷ ಹಾಗೂ ಎಮ್ಎಲ್ಸಿ ಆಗಿದ್ರೂ ಕಡೆಗಣಿಸ್ತಿರೋದಕ್ಕೆ ಅಸಮಾಧಾನಗೊಂಡಿದ್ದ ಚಿಂಚನಸೂರ. ಹೀಗಾಗಿ ಮತ್ತೆ ಕಾಂಗ್ರೆಸ್ ಗೆ ಹೋಗಲು ಮನಸ್ಸು ಮಾಡಿದ್ದರು. ಅಲ್ಲದೇ ಸಚಿವ ಸ್ಥಾನ ನೀಡುವುದಾಗಿ ಹೇಳಿ ಕೇರ್ ಮಾಡದ ರಾಜ್ಯ ಸರ್ಕಾರ. ಇದೇ ಕಾರಣಕ್ಕೆ ಫೆಬ್ರವರಿ 13 ರಂದು ರಾಜೀನಾಮೆ ನೀಡಲು ಮುಂದಾಗಿದ್ದರು. ಅಂದು ಸಿಎಂ ಬೊಮ್ಮಾಯಿ, ವಿಜಯೇಂದ್ರ ಸೇರಿ ಹಲವು ಬಿಜೆಪಿ ನಾಯಕರಿಂದ ಮನವೊಲಿಕೆ ಮಾಡಲಾಗಿತ್ತು ಒತ್ತಾಯ ಪೂರ್ವಕವಾಗಿಯೇ ಬಿಜೆಪಿಯಲ್ಲಿ ಮುಂದುವರೆದಿದ್ದ ಚಿಂಚನಸೂರು.

ಕಾಂಗ್ರೆಸ್‌ ಮುಳುಗುವ ಹಡಗು: ಚಿಂಚನಸೂರ್‌

ಕೈ ಚಾಚಿದ ಕಾಂಗ್ರೆಸ್:

ಕಲ್ಯಾಣ ಕರ್ನಾಟಕ ಭಾಗದಲ್ಲಿ ತನ್ನದೇ ಆದ ಪ್ರಾಬಲ್ಯ ಹೊಂದಿರುವ ಬಾಬು ಚಿಂಚನಸೂರ. ಇದೇ ಕಾರಣಕ್ಕೆ ಮತ್ತೆ ಚಿಂಚನಸೂರ ಕೈ ಸೇರ್ಪಡೆಗೆ ಹೈಕಮಾಂಡ್ ಅಸ್ತು ಎಂದಿದೆ. ಯಾದಗಿರಿ, ಕಲಬುರಗಿ ಹಾಗೂ ಬೀದರ್ ಜಿಲ್ಲೆಯ ಕೆಲ ಕ್ಷೇತ್ರಗಳಲ್ಲಿ ಕೋಲಿ ಸಮುದಾಯವೇ(Koli community)ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.  ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಸ್ಪರ್ಧಿಸುವ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದಲ್ಲಿ ಕೋಲಿ ಸಮುದಾಯದ ಮತಗಳು ನಿರ್ಣಾಯಕ ಹೀಗಾಗಿ ಪ್ರಿಯಾಂಕ ಖರ್ಗೆ ಸೇರಿದಂತೆ ಕೆಲ ನಾಯಕರು ಗೆಲ್ಲಲು ಚಿಂಚನಸೂರ ಕೈ ಪಡೆಗೆ ಬೇಕೆಬೇಕು. ಮತ್ತೊಂದು ಕಡೆ ಗುರುಮಠಕಲ್ ನಲ್ಲಿ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ರೆ ಸೋಲುವ ಬಗ್ಗೆ ಆಂತರಿಕ ವರದಿ ಬಂದಿತ್ತು. ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ರೆ ಸೋಲಿನ ಭೀತಿಯಲ್ಲಿದ್ದ ಬಾಬುರಾವ್ ಇವೆಲ್ಲ ಬೆಳವಣಿಗೆಗಳಿಂದ ಬಿಜೆಪಿಗೆ ರಾಜೀನಾಮೆ ನೀಡಿ ರಾಜಕೀಯ ಆರಂಭಿಸಿದ್ದ ಮಾತೃ ಪಕ್ಷಕ್ಕೆ ಮರಳಿ ಹೋಗಲು ನಿರ್ಧಿರಿಸಿರುವ ಬಾಬುರಾವ್ ಚಿಂಚನಸೂರು, ಮುಂಬರುವ ಚುನಾವಣೆ ಎದುರಿಸಲು ಪ್ಲಾನ್..!

click me!