ಸಕ್ರಿಯ ರಾಜಕಾರಣದಿಂದ ಬಿಎಸ್‌ವೈ ದೂರವಾಗಿಲ್ಲ; ಚಲುವಾದಿ ನಾರಾಯಣಸ್ವಾಮಿ

By Gowthami K  |  First Published Jul 24, 2022, 7:13 PM IST

ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಪಕ್ಷದ ನಿಷ್ಠಾವಂತ ನಾಯಕರು. ಅವರು ಪಕ್ಷದಿಂದ ದೂರವಿರಲು ಸಾಧ್ಯವಿಲ್ಲ ಎಂದು  ಚಲುವಾದಿನಾರಾಯಣ ಸ್ವಾಮಿ ಹೇಳಿಕೆ ನೀಡಿದ್ದಾರೆ.


ವಿಜಯಪುರ (ಜುಲೈ 24): ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಪಕ್ಷದ ನಿಷ್ಠಾವಂತ ನಾಯಕರು. ಅವರು ಪಕ್ಷದಿಂದ ದೂರವಿರಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಚಲುವಾದಿನಾರಾಯಣ ಸ್ವಾಮಿ ಹೇಳಿದ್ದಾರೆ. ವಿಜಯಪುರಕ್ಕೆ ಭೇಟಿ ನೀಡಿದ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿದರು. ಪಕ್ಷ ಅವರಿಗೆ ಎಲ್ಲ ಸ್ಥಾನಮಾನ ನೀಡಿದೆ. ಅದು ಅವರಿಗೂ ತೃಪ್ತಿ ಇದೆ. ನಮ್ಮ ಪಕ್ಷದಲ್ಲಿ 75 ವರ್ಷ ಮೇಲ್ಪಟ್ಟವರಿಗೆ ರಾಜಕೀಯ ನಿವೃತ್ತಿ ನಿಗದಿಯಾಗಿದೆ. ಆದರೂ ಬಿಎಸ್​ವೈ ಅವರಿಗೆ ಶಕ್ತಿ ಮೀರಿ ಹೆಚ್ಚಿನ ಕಾಲಾವಕಾಶ ನೀಡಲಾಗಿದೆ. ಇದು ಸಹಜವಾಗಿ ಅವರಿಗೆ ತೃಪ್ತಿ ತಂದಿದೆ ಎಂದು ವಿಧಾನಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ಹೇಳಿದರು.ಬಿಎಸ್​ವೈ ನಾಲ್ಕು ಬಾರಿ ಸಿಎಂ ಹುದ್ದೆ ಅಲಂಕರಿಸಿದರೂ ಒಂದು ಬಾರಿಯೂ ಐದು ವರ್ಷದ ಪೂರ್ಣಾವಧಿ ಅಧಿಕಾರ ನಡೆಸಿಲ್ಲ ಎಂಬ ಪ್ರಶ್ನೆಗೆ ನಾರಾಯಣಸ್ವಾಮಿ ಉತ್ತರಿಸಿದರು. ಅದಕ್ಕೆ ವಯೋಮಿತಿಯೇ ಕಾರಣವಾಗಿದೆ. ಅದರ ಜತೆ ಅವರು ಸಿಎಂ ಆದಾಗಿನ ಸಂದರ್ಭ ಸಹ ಕಾರಣವಾಗುತ್ತದೆ. ಅವರಿಗೆ ಇನ್ನೂ ವಯಸ್ಸು ಇದ್ದಿದ್ದರೆ, ನಮ್ಮ ಪಕ್ಷದಲ್ಲಿ ಅವರೇ ನಾಯಕರಾಗಿರುತ್ತಿದ್ದರು. ಸದ್ಯ ಅವರು ಕೇವಲ ಚುನಾವಣೆ ರಾಜಕೀಯದಿಂದ ದೂರ ಉಳಿದಿದ್ದಾರೆ, ಹೊರತು ಸಕ್ರಿಯ ರಾಜಕೀಯದಿಂದಲ್ಲ ಎಂದರು.

ದಲಿತ ವಿರೋಧಿ ಕಾಂಗ್ರೆಸ್..!
75ವರ್ಷದ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷ ಕೇವಲ ದಲಿತರನ್ನು ಮತ ಬ್ಯಾಂಕ್​ಗಳನ್ನಾಗಿ ಮಾಡಿದೆ. ಆದ್ರೆ ಅವರನ್ನು ವಿದ್ಯಾವಂತರನ್ನಾಗಲು ಪ್ರಯತ್ನಿಸಲಿಲ್ಲ. ತಮ್ಮ ಮತ ಎಲ್ಲಿ ಕಳೆದು ಹೋಗುತ್ತೆ ಎನ್ನುವ ಭಯ ಅವರಲ್ಲಿದೆ. ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ಹಲವು ದಲಿತರನ್ನು ಪಕ್ಷ ಕೇವಲ ಬಳಸಿಕೊಂಡಿದೆ, ಆದರೆ ಅಧಿಕಾರ ನೀಡಿಲ್ಲ. ಬೇರೆ ಪಕ್ಷದಿಂದ ಬಂದ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನಕ್ಕೆ ಏರಿಸಿತು. ದಲಿತ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರು‌ ಹಲವು ದಶಕಗಳಿಂದ ದುಡಿದರೂ ಅವರಿಗೆ ಸಿಎಂ ಪಟ್ಟ ನೀಡದಿರುವುದು ಬೇಸರ ತಂದಿದೆ ಎಂದು ಹೇಳಿದರು.

Tap to resize

Latest Videos

ಶಿಕಾರಿಪುರ ಮಗನ ಹೆಗಲಿಗಿಟ್ಟ ಬಿಎಸ್‌ವೈ: ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಕ್ಷೇತ್ರ ಶಿಕಾರಿಪುರವನ್ನು ಮಗ ಬಿವೈ ವಿಜಯೇಂದ್ರನಿಗೆ ಬಿಟ್ಟು ಕೊಡುವುದಾಗಿ   ಬಹಿರಂಗ ಹೇಳಿಕೆ ನೀಡಿದ್ದರು. ಶಿಕಾರಿಪುರ ಕ್ಷೇತ್ರದ ಮತದಾರರಿಗೆ ಪುತ್ರ ಬಿ ವೈ ವಿಜಯೇಂದ್ರನನ್ನು ಬೆಂಬಲಿಸಲು ಬಹಿರಂಗ ಕರೆ ನೀಡಿದ ಬಿಎಸ್ ವೈ. ಶಿಕಾರಿಪುರ ತಾಲೂಕಿನ ಅಂಜನಾಪುರದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಬಹಿರಂಗ ಕರೆ ನೀಡಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಗೆ ಶಕ್ತಿಮೀರಿ ಪ್ರಯತ್ನ ಮಾಡಿದ್ದೇನೆ. ನನ್ನನ್ನು ಬೆಂಬಲಿಸಿದಂತೆ ಬಿ ವೈ ವಿಜಯೇಂದ್ರನಿಗೆ ಸಂಪೂರ್ಣ ಸಹಕಾರ ನೀಡಿ. ವಿಜಯೇಂದ್ರನನ್ನು ಒಂದು ಲಕ್ಷ ಮತಗಳ ಬಾರಿ ಅಂತರದಿಂದ ಗೆಲ್ಲಿಸಿ. ಈ ಮೂಲಕ ನಾವು ಮಾಡಿದ ಸೇವೆಗೆ ಸಾರ್ಥಕತೆ ಬರುತ್ತದೆ ಎಂದು ಯಡಿಯೂರಪ್ಪ ಹೇಳಿದ್ದರು.

ರಾಜಕೀಯ ನಿವೃತ್ತಿ ಘೋಷಿಸಿದ್ರಾ ಬಿಎಸ್ ಯಡಿಯೂರಪ್ಪ, ಬಿಜೆಪಿಯಲ್ಲಿ ತಳಮಳ!

ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ  ಚರ್ಚೆಗೆ ಗ್ರಾಸವಾಗಿತ್ತು. ಅದರಲ್ಲೂ ಪ್ರಮುಖವಾಗಿ ಬಿಜೆಪಿಯಲ್ಲಿ ಭಾರೀ ಸದ್ದು ಮಾಡಿತ್ತು. ಇದರಿಂದ ಕೆಲ ನಾಯಕರು ವಿಜಯೇಂದ್ರಗೆ ಟಿಕೆಟ್ ಕೊಡುವುದು ಬಿಡುವುದು ಹೈಕಮಾಂಡ್ ಎಂದು ಹೇಳಿಕೆ ನೀಡಿದ್ರು. ಇದರಿಂದ ಬಿಜೆಪಿ ನಾಯಕಲ್ಲಿ ಬಿಎಸ್‌ವೈ ಹೇಳಿಕೆ ಗೊಂದಲಕ್ಕೆ ಕಾರಣವಾಗಿತ್ತು. 

ವಿಜಯೇಂದ್ರ ಸ್ಪರ್ಧೆ ಬಗ್ಗೆ ಮತ್ತೊಂದು ಸ್ಪಷ್ಟನೆ ಕೊಟ್ಟ ಯಡಿಯೂರಪ್ಪ

ಈ ಗೊಂದಲದ ಬಗ್ಗೆ ಸ್ಪಷ್ಟನೆ ನೀಡಿದ್ದ ಬಿಎಸ್‌ವೈ ನಾನು ನೀಡಿದ ಹೇಳಿಕೆ ಬಗ್ಗೆ ಸಾಕಷ್ಟು ಗೊಂದಲ ಆಗಿದೆ. ನಾನು ವಿಧಾನಸಭೆ ಚುನಾವಣೆಗೆ ನಿಲ್ಲಲ್ಲ. ಆದರೆ ವಿಜಯೇಂದ್ರನ ವಿಚಾರದಲ್ಲಿ ಹೈಕಮಾಂಡ್‌ ತಿರ್ಮಾನವೇ ಅಂತಿಮ. ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಸೇರಿ ಅಂತಿಮ ತೀರ್ಮಾನವನ್ನು ಮಾಡುತ್ತಾರೆ. ಪಕ್ಷದ ತೀರ್ಮಾನವೇ ಅಂತಿಮವಾಗುತ್ತದೆ ಎಂದಿದ್ದಾರೆ.

 

click me!