ಸಿದ್ದರಾಮಯ್ಯನವರಿಗಾಗಿ ಅಯ್ಯಪ್ಪಸ್ವಾಮಿ ಮಾಲೆ ಹಾಕಿ ಹರಕೆ ಹೊತ್ತ ಅಭಿಮಾನಿ

By Suvarna News  |  First Published Dec 23, 2022, 8:46 PM IST

ಸಿದ್ದು ಮತ್ತೆ ಬಾದಾಮಿಯಿಂದ ಸ್ಪರ್ಧಿಸಿ ರಾಜ್ಯಕ್ಕೆ ಸಿಎಂ ಆಗಲೆಂಬ   ಅಯ್ಯಪ್ಪಸ್ವಾಮಿ ಮಾಲೆ ಹಾಕಿ ಹರಕೆ ಹೊತ್ತ ಅಭಿಮಾನಿ. ಸಿದ್ದುಗಾಗಿ ಹೆಲಿಕಾಪ್ಟರ್​ ಖರೀದಿಸುವ ಸಂಕಲ್ಪ ತೊಟ್ಟ ಅಭಿಮಾನಿಗಳು. ಬಾದಾಮಿ ಯೂತ್ ಕಾಂಗ್ರೆಸ್​ ಉಪಾದ್ಯಕ್ಷ ಹನಮಂತ ಖಾನಗೌಡರ ಎಂಬಾತನಿಂದ ಅಯ್ಯಪ್ಪಸ್ವಾಮಿಗೆ ಹರಕೆ 
 


ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್ 

ಬಾಗಲಕೋಟೆ (ಡಿ.23): ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅತ್ತ ಕ್ಷೇತ್ರಗಳ ಹುಡುಕಾಟದಲ್ಲಿ ಬ್ಯೂಸಿಯಾಗಿದ್ದರೆ ಇತ್ತ ಸ್ವಕ್ಷೇತ್ರ ಬಾದಾಮಿಯಲ್ಲಿ ಅವರ ಅಭಿಮಾನಿಗಳು ಮಾತ್ರ ಸಿದ್ದರಾಮಯ್ಯನವರನ್ನ ಮತ್ತೆ ಬಾದಾಮಿಗೆ ಕರೆತರುವ ಪ್ರಯತ್ನವನ್ನ ಮುಂದುರೆಸುತ್ತಲೇ ಇದ್ದಾರೆ. ಇವುಗಳ ಮಧ್ಯೆ ಸಿದ್ದು ಅಭಿಮಾನಿಯೊಬ್ಬರು ಅಯ್ಯಪ್ಪಸ್ವಾಮಿ ಮಾಲೆ ಧರಿಸಿ ಸಿದ್ದು ಮತ್ತೇ ಬಾದಾಮಿಯಿಂದ ಸ್ಪರ್ಧಿಸಿ ಸಿಎಂ ಆಗಲೆಂದು ಹರಕೆ ಹೊತ್ತರೆ ಮತ್ತೊಂದಡೆ ಅಭಿಮಾನಿಗಳೆಲ್ಲಾ ಸಿದ್ದುಗಾಗಿ ಹೆಲಿಕಾಪ್ಟರ್ ಖರೀದಿ ಸಂಕಲ್ಪ ತೊಟ್ಟಿದ್ದಾರೆ.  

Tap to resize

Latest Videos

undefined

ಒಂದೆಡೆ ಸಿದ್ದರಾಮಯ್ಯನವರು ಮತ್ತೇ ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಒತ್ತಾಯಿಸುತ್ತಿರೋ ಅಭಿಮಾನಿಗಳು, ಮತ್ತೊಂದೆಡೆ ಸಿದ್ದುಗಾಗಿ ಅಯ್ಯಪ್ಪಸ್ವಾಮಿಯಲ್ಲಿ ಹರಕೆ ಹೊತ್ತ ಅಭಿಮಾನಿ, ಇವುಗಳ ಮಧ್ಯೆ ಸಿದ್ದರಾಮಯ್ಯನವರಿಗಾಗಿ ಹೆಲಿಕಾಪ್ಟರ್ ಖರೀದಿ ಸಂಕಲ್ಪ ತೊಟ್ಟ ಕ್ಷೇತ್ರದ ಜನ. ಅಂದಹಾಗೆ ಇಂತಹವೊಂದು ಸಂದರ್ಭಕ್ಕೆ ಸಾಕ್ಷಿಯಾಗಿರೋದು ಮಾಜಿ ಸಿಎಂ ಸಿದ್ದರಾಮಯ್ಯನವರ ಸ್ವಕ್ಷೇತ್ರ ಬಾಗಲಕೋಟೆ ಜಿಲ್ಲೆಯ ಬಾದಾಮಿ ವಿಧಾನಸಭಾ ಮತಕ್ಷೇತ್ರ. ಕಳೆದ ಬಾರಿ 2018ರಲ್ಲಿ ಕೊನೆ ಕ್ಷಣದಲ್ಲಿ ಸಿದ್ದರಾಮಯ್ಯ ಬಾದಾಮಿಯಿಂದ ಬಂದು ಸ್ಪರ್ಧಿಸಿ ರಾಜಕೀಯ ಪುನರಜನ್ಮ ಪಡೆದುಕೊಂಡು ಜನತೆಗೆ ಮಾತುಕೊಟ್ಟಂತೆ ಕೋಟ್ಯಂತರ ಅನುದಾನ ತಂದು ಅಭಿವೃದ್ದಿಯನ್ನೂ ಸಹ ಮಾಡಿದ್ರು. 

ಆದರೆ ಈ ಬಾರಿ ಕ್ಷೇತ್ರ ದೂರವಾಗುತ್ತೇ ಅನ್ನೋ ನೆಪದಲ್ಲಿ ರಾಜ್ಯದಲ್ಲಿ ಬೇರೆ ಬೇರೆ ಕಡೆಗೆ ಕ್ಷೇತ್ರದ ಹುಡುಕಾಟದಲ್ಲಿದ್ದು, ಹೀಗಾಗಿ ಸ್ವಕ್ಷೇತ್ರ ಬಾದಾಮಿಯ ಯೂತ್​ ಕಾಂಗ್ರೆಸ್​ ಉಪಾದ್ಯಕ್ಷ, ಸಿದ್ದು ಅವರ ಕಟ್ಟಾ ಅಭಿಮಾನಿ ಹನಮಂತ ಖಾನಗೌಡರ ಇದೀಗ ಅಯ್ಯಪ್ಪಸ್ವಾಮಿ ಮಾಲೆ ಧರಿಸಿ ಸಿದ್ದರಾಮಯ್ಯನವರು ಮತ್ತೇ ಬಾದಾಮಿಯಿಂದಲೇ ಸ್ಪರ್ಧೆ ಮಾಡಬೇಕು ಮತ್ತು ಇಲ್ಲಿಂದಲೇ ಗೆದ್ದು ರಾಜ್ಯದ ಸಿಎಂ ಆಗುವಂತಾಗಲಿ ಎಂದು ಅಯ್ಯಪ್ಪ ಸ್ವಾಮಿಯಲ್ಲಿ ಹರಕೆ ಹೊತ್ತಿದ್ದಾನೆ. 
                                   
ಮಾಜಿ ಸಿಎಂ ಸಿದ್ದರಾಮಯ್ಯನವರಿಗಾಗಿ ಹೆಲಿಕಾಪ್ಟರ್ ಸಂಕಲ್ಪ:
ಇನ್ನು ಅಭಿಮಾನಿಯೊಬ್ಬ ಹರಕೆ ಹೊತ್ತಿದ್ದು ಒಂದು ಭಾಗವಾದರೆ ಮತ್ತೊಂದೆಡೆ ಸಿದ್ದರಾಮಯ್ಯನವರು ಬಾದಾಮಿ ಮತಕ್ಷೇತ್ರ ತಮಗೆ ದೂರವಾಗುತ್ತೇ, ಜನರಿಗೆ ಸ್ಪಂದಿಸೋಕೆ ಕಷ್ಟವಾಗುತ್ತೇ ಅನ್ನೋ ಕಾರಣಕ್ಕೆ ಕ್ಷೇತ್ರ ಬಿಡ್ತಿದ್ದಾರೆ ಅನ್ನೋದು ಗೊತ್ತಾಗಿ ಇದೀಗ ಸಿದ್ದು ಅಭಿಮಾನಿಗಳೆಲ್ಲಾ ಸಿದ್ದರಾಮಯ್ಯನವರಿಗಾಗಿ ಒಂದು ಹೆಲಿಕಾಪ್ಟರ್​ ಖರೀದಿಸುವ ಸಂಕಲ್ಪ ಸಹ ಮಾಡಿದ್ದಾರೆ. 

ಕೇಂದ್ರದ ₹5495 ಕೋಟಿ ಪಡೆವಲ್ಲಿ ಬಿಜೆಪಿ ಸಂಸದರು ವಿಫಲ: ಸಿದ್ದು

ಯಾವುದೇ ಕಾರಣಕ್ಕೂ ಸಿದ್ದರಾಮಯ್ಯನವರು ರಾಜ್ಯದಲ್ಲಿ ಬೇರೆ ಬೇರೆ ಕಡೆಗೆ ಕ್ಷೇತ್ರ ಹುಡುಕಿಕೊಂಡು ಹೋಗುವ ಪ್ರಮೇಯವೇ ಬೇಡ ಬದಲಾಗಿ ಅವರಿಗೆ ಸೇಪ್​ ಆಗಿರೋ ಬಾದಾಮಿಯಿಂದಲೇ ಮತ್ತೊಮ್ಮೆ ಸ್ಪರ್ಧೆ ಮಾಡಲಿ ನಾವೆಲ್ಲಾ ಅವರಿಗೆ ಒಂದು ಹೆಲಿಕಾಪ್ಟರ್ ವ್ಯವಸ್ಥೆಯನ್ನ ಮಾಡಿಕೊಡುತ್ತೇವೆ. ಆ ಮೂಲಕ ಕ್ಷೇತ್ರದ ಜನರೊಂದಿಗೆ ಬೆರೆತು ರಾಜ್ಯದ ಕೆಲ್ಸ ಮಾಡಲಿ ಎಂಬ ಆಶಯವನ್ನ ಇರಿಸಿಕೊಂಡಿದ್ದು, ಇದಕ್ಕೆ ಬಾಗಲಕೋಟೆ ಜಿಲ್ಲೆಯಾದ್ಯಂತ ಕೈ ಮುಖಂಡರು ಕಾರ್ಯಕರ್ತರು ಬೆಂಬಲಿಸಿದ್ದು, ಸಿದ್ದರಾಮಯ್ಯನವರಿಗೆ ಹೆಲಿಕಾಪ್ಟರ್​ ಕೊಡಿಸಲು ತಾವು ಸಿದ್ದವೆಂದು ಕಾಂಗ್ರೆಸ್ ಮುಖಂಡ ನಾಗರಾಜ್ ಹದ್ಲಿ ತಿಳಿಸಿದ್ದಾರೆ.

Advocates Protection Act: ವಕೀಲರ ಸುರಕ್ಷತಾ ಮಸೂದೆ ಮಂಡನೆಗೆ ಸಿದ್ದು ಆಗ್ರಹ

ಒಟ್ಟಿನಲ್ಲಿ ಸಿದ್ದರಾಮಯ್ಯನವರು ಅತ್ತ ರಾಜ್ಯದಲ್ಲಿ ಕ್ಷೇತ್ರ ಹುಡುಕಾಟದಲ್ಲಿದ್ದರೆ ಇತ್ತ ಬಾದಾಮಿ ಜನ್ರು ಮಾತ್ರ ಅವರನ್ನ ಅಷ್ಟು ಸರಳವಾಗಿ ಬಿಟ್ಟುಕೊಡೋ ಲಕ್ಷಣ ಕಾಣುತ್ತಿಲ್ಲ. ಇದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರು ಯಾವ ರೀತಿ ಸ್ಪಂದಿಸ್ತಾರೆ ಅಂತ ಕಾದು ನೋಡಬೇಕಿದೆ. 

click me!