ಚಿಕ್ಕಮಗಳೂರು ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಶೃಂಗೇರಿ ವಿಧಾನಸಭಾ ಕ್ಷೇತ್ರದ ಟಿ.ಡಿ.ರಾಜೇಗೌಡ ದತ್ತಪೀಠ ಹಾಗೂ ಅಯೋಧ್ಯೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಜ.24) : ಚಿಕ್ಕಮಗಳೂರು ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಶೃಂಗೇರಿ ವಿಧಾನಸಭಾ ಕ್ಷೇತ್ರದ ಟಿ.ಡಿ.ರಾಜೇಗೌಡ ದತ್ತಪೀಠ ಹಾಗೂ ಅಯೋಧ್ಯೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಆಡಿಯೋ ವೈರಲ್(Audio viral) ಆಗ್ತಿದ್ದಂತೆ ಶಾಸಕರ ವಿರುದ್ಧ ಧಿಕ್ಕಾರದ ಪೋಸ್ಟ್ ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ವು. ದತ್ತಪೀಠ, ಅಯೋಧ್ಯೆಯ ಬಗ್ಗೆ ಕಾಫಿನಾಡ ಏಕೈಕ ಕಾಂಗ್ರೆಸ್ ಶಾಸಕ ಟಿ.ಡಿ ರಾಜೇಗೌಡ(MLA TD Rajegowda) ಅವ್ರದ್ದು ಎನ್ನಲಾದ ಆಡಿಯೋವಂತೂ ಮಲೆನಾಡಲ್ಲಿ ಭಾರಿ ಸಂಚಲನ ಮೂಡಿಸಿ, ಚರ್ಚೆಗೂ ಗ್ರಾಸವಾಗಿದೆ. ಕೂಡಲೇ ರಾಜೇಗೌಡ ಬಹಿರಂಗ ಕ್ಷಮೆಯಾಚಿಸಬೇಕು ಆಗ್ರಹವು ಕೇಳಿಬಂದಿದೆ.
ಶ್ರೀರಾಮ ಮಂದಿ ನಿರ್ಮಾಣದ Exclusive ವರದಿ, ಆಯೋಧ್ಯೆಯಲ್ಲಿ ಸುವರ್ಣನ್ಯೂಸ್!
ಮತ್ತೆ ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ
ದತ್ತಪೀಠ ಹಾಗೂ ಅಯೋಧ್ಯೆಯ ಹಿಂದೂಗಳ ಧಾರ್ಮಿಕ ನಂಬಿಕೆ. ಶಾಸಕ ಈ ವಿಚಾರವಾಗಿ ಮಾತನಾಡಿರೋದಂತೂ ಬಿಜೆಪಿ ಸೇರಿದಂತೆ ಹಿಂದೂ ಸಂಘಟನೆಗಳು ಕೆಂಡಾಮಂಡಲವಾಗಿದೆ. ಈ ಆಡಿಯೋ ವೈರಲ್ ನಿಂದಾಗಿ ಶಾಸಕ ಟಿ.ಡಿ ರಾಜೇಗೌಡ ವಿರುದ್ಧ ಜಿಲ್ಲಾದ್ಯಂತ ಪ್ರತಿಭಟನೆಯ ಬಿಸಿಯೂ ತಟ್ಟೋ ಸಾಧ್ಯತೆ ಇದೆ.
ಜಿಲ್ಲೆಯಲ್ಲದೇ ರಾಜ್ಯದಲ್ಲಿಯೂ ಆಡಿಯೋ ಸದ್ದು ಮಾಡ್ತಿದೆ. ಶಾಸಕ ಟಿ.ಡಿ.ರಾಜೇಗೌಡ ಸಹೋದರರೊಬ್ರು ದತ್ತಪೀಠ ಹೋರಾಟದಲ್ಲಿ ಭಾಗಿಯಾದ್ರು. ಇದ್ರೊಂದಿಗೆ ರಾಜ್ಯ ಸರ್ಕಾರ ಜಮೀನುಗಳನ್ನು ಗುತ್ತಿಗೆ ಕೊಡೋ ವಿಚಾರವಾಗಿಯೂ ಮಾತನಾಡಿರೋ ಆಡಿಯೋ ಕೂಡ ವೈರಲ್ ಆಗ್ತಿದ್ದೆ. ಇದನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಡಿ ಎನ್ ಜೀವರಾಜ್ ವಿರೋಧವ್ಯಕ್ತಪಡಿಸಿದ್ದಾರೆ. ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ. ಕೂಡಲೇ ಕ್ಷಮೆಯಾಚಿಸಿ ಅಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ , ಕೂಡ ಆಗ್ರಹಿಸದ್ದಾರೆ.
ಬಾಬ್ರಿ ಮಸೀದಿ ಕೆಡವಲು ಹೋಗಿ ಲಕ್ಷಾಂತರ ಜನರು ಬಲಿಯಾದ್ರು
ಇನ್ನು ಶಾಲು ಹಾಕಿಕೊಂಡು, ಕುಂಕುಮ ಇಟ್ಟುಕೊಂಡು ದತ್ತಪೀಠ ಅಂತ ಹೋದರೆ ಅದು ನಿಮಗೆ ಅನ್ನ ಕೊಡುತ್ತಾ ಎಂದು ಪ್ರಶ್ನಿಸಿ, ಅದೇ ಜಮೀನು-ಮನೆ-ರಸ್ತೆ ಮಾಡಿಕೊಡುತ್ತಾ. ಈ ಧೋರಣೆ ಸರಿಯಲ್ಲ ಎಂದಿದ್ದಾರೆ.
ದತ್ತಪೀಠ ಹಿಂದೂ-ಮುಸ್ಲಿಮರ ಭಾವೈಕ್ಯತಾ ಕೇಂದ್ರವಷ್ಟೆ. ಅವರು ಹೋಗಿ ಪೂಜೆ ಮಾಡಿಸುತ್ತಾರೆ, ನಾವು ಹೋಗಿ ಪೂಜೆ ಮಾಡಿಸುತ್ತೇವೆ. ಅವರು ಉರುಸ್ ಮಾಡುತ್ತಾರೆ, ನಾವು ದತ್ತಪೀಠ ಆಚರಣೆ ಮಾಡುತ್ತೇವೆ. ನಮ್ಮ ಜಾಗವೇ ಬೇರೆ, ಅವರಿಗೂ ಬೇರೆ ಜಾಗವಿದೆ. ಆದ್ರೆ, ಅದಕ್ಕೆ ಏನ್ ಕರೆದುಕೊಂಡು ಹೋಗೋದು, ಕುಂಕುಮ ಇಡೋದು, ಶಾಲು ಹೊಚ್ಚೋದು. ಅದೇನು ನಿಮಗೆ ಅನ್ನ ಕೊಡುತ್ತಾ ಎಂದು ಹಿಂದೂ ಸಂಘಟನೆಗಳಿಗೆ ಹಾಗೂ ದತ್ತಪೀಠಕ್ಕೆ ಹೋಗುವವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಅವರು ಮನೆಹಾಳರು. ಬೈಯೋದೆಲ್ಲಾ ಬೈದು... ಆಮೇಲೆ ಯಾರು ರೆಕಾರ್ಡ್ ಮಾಡಬೇಡಿ, ನಾನು ಬೈಯುತ್ತೇನೆ ಎಂದು ಹೇಳಿ ಬೈದಿದ್ದಾರೆ. ನಿಮ್ಮನ್ನ ಕರೆದುಕೊಂಡು ಅಯೋಧ್ಯೆಗೆ ಹೋಗಿ ಬಲಿಕೊಟ್ಟರು. ಅದು ನಿಮಗೆ ಗೊತ್ತಾ. ಅಲ್ಲಿಗೆ ಹೋಗಿ ನಿಮ್ಮ ಊರಲ್ಲಿ ಸತ್ತವರು ಯಾರಾದರೂ ಇದ್ದಾರಾ ಎಂದು ಪ್ರಶ್ನಿಸಿ, ಬಾಬ್ರಿ ಮಸೀದಿಯನ್ನ ಹೊಡೆಯಲು ಲಕ್ಷಾಂತರ ಜನರನ್ನ ಕರೆದುಕೊಂಡು ಹೋಗಿ, ಸಾಯಿಸಿದ್ರು ಎಂದು ಹಿಂದೂ ಸಂಘಟನೆಗಳ ವಿರುದ್ಧ ಆಕ್ರೋಶ ಹಾಕಿದ್ದಾರೆ.
ಅವಹೇಳನಕಾರಿಯಾಗಿ ಮಾತನಾಡಿರುವುದು ಇದೇ ಮೊದಲಲ್ಲ
ಜನ ನಾಯಕರು ದತ್ತಪೀಠದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಇದೇ ಮೊದಲಲ್ಲ. 2018ರ ವಿಧಾನಸಭಾ ಚುನಾವಣೆಯ ವೇಳೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಮೂಡಿಗೆರೆಯಲ್ಲಿ ಮಾತನಾಡುವ ವೇಳೆ ಮಾಲೆ ಹಾಕಿಕೊಂಡು ಬೀದಿ ಬೀದಿಯಲ್ಲಿ ಭಿಕ್ಷೆ ಎತ್ತಲು ಹೋಗುತ್ತಾರಂತೆ ಎಂದು ಮಾತನಾಡಿದರು. ಕಳೆದ ನಾಲ್ಕು ದಿನದಷ್ಟೇ ಕಾಂಗ್ರೆಸ್ಸಿನ ಪ್ರಜಾಧ್ವನಿ ಯಾತ್ರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ದತ್ತಪೀಠದ ಬಗ್ಗೆ ಮಾತನಾಡಿ, ನಿಮ್ಮನ್ನ ದಾರಿ ತಪ್ಪಿಸುತ್ತಿದ್ದಾರೆ ಎಂದಿದ್ದರು. ಇದೀಗ ಶಾಸಕ ರಾಚೇಗೌಡ ಇಬ್ಬರು ಮಾಜಿ ಸಿಎಂಗಳಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಇಂದು ಸಂಘಟನೆಗಳಿಗೆ ಅವತ್ತು ಶಬ್ದಗಳಿಂದ ನಿಂದಿಸಿದ್ದಾರೆ.
ನನ್ನನ್ನು ಟೀಕಿಸಿದ್ರೆ ಜನ ಕಾಂಗ್ರೆಸ್‌ಗೆ ಓಟ್ ಹಾಕೋದಿಲ್ಲ: ಸಿ.ಟಿ.ರವಿ
ರಾಜೇಗೌಡರ ಈ ಹೇಳಿಕೆಯಿಂದ ಕೆಂಡಮಂಡಲರಾಗಿರುವ ಹಿಂದು ಸಂಘಟನೆಗಳು ರಾಜೇಗೌಡ ವಿರುದ್ಧ ಹಾಕುವ ಹೊರಹಾಕುತ್ತಿತ್ತು, ನಾಳೆ ಜಿಲ್ಲಾಧ್ಯಂತ ಪ್ರತಿಭಟನೆ ನಡೆಸಿ ಸಾರ್ವಜನಿಕವಾಗಿ ಹಿಂದೂ ಸಂಘಟನೆಗೆ ಕ್ಷಮೆ ಕೋರುವಂತೆ ಆಗ್ರಹಿಸಿದ್ದಾರೆ.