ಡಿಕೆಶಿ ರಾಜಕೀಯ ಅಂತ್ಯಕ್ಕೆ ಮೊದಲ ಆಡಿಯೋ ಬಿಡುಗಡೆ- ಇನ್ನೂ 20 ಆಡಿಯೋಗಳಿವೆ: ರಮೇಶ್‌ ಜಾರಕಿಹೊಳಿ

By Sathish Kumar KH  |  First Published Jan 30, 2023, 2:41 PM IST

ಡಿಕೆ.ಶಿವಕುಮಾರ್‌ ರಾಜಕೀಯ ಅಂತ್ಯಗೊಳಿಸಲು ಮೊದಲ ಅಸ್ತ್ರವಾಗಿ ಮೊದಲನೆಯದಾಗಿ ಒಂದು ಆಡಿಯೋ ಬಿಡುಗಡೆ ಮಾಡಿದ್ದೇನೆ. ನನ್ನ ಬಳಿ ಇದೊಂದೇ ಆಡಿಯೋ ಮಾತ್ರವಲ್ಲ. ಇನ್ನೂ 20 ಆಡಿಯೋಗಳು ಇವೆ. 


ಬೆಳಗಾವಿ (ಜ.30): ಡಿಕೆ.ಶಿವಕುಮಾರ್‌ ರಾಜಕೀಯ ಅಂತ್ಯಗೊಳಿಸಲು ಮೊದಲ ಅಸ್ತ್ರವಾಗಿ ಮೊದಲನೆಯದಾಗಿ ಒಂದು ಆಡಿಯೋ ಬಿಡುಗಡೆ ಮಾಡಿದ್ದೇನೆ. ನನ್ನ ಬಳಿ ಇದೊಂದೇ ಆಡಿಯೋ ಮಾತ್ರವಲ್ಲ. ಇನ್ನೂ 20 ಆಡಿಯೋಗಳು ಇವೆ. ಡಿಕೆಶಿಗೆ ಆಡಿಯೋ ಮೂಲಕ ಝಲಕ್‌ ಮಾತ್ರ ಆಗಿದೆ. ನಮ್ಮ ಪಕ್ಷದ ವರಿಷ್ಠರ ಜೊತೆಗೆ ಚರ್ಚಿಸಿ ಡಿಕೆಶಿ ವಿರುದ್ಧ ಮುಂದಿನ ಹೋರಾಟದ ಬಗ್ಗೆ ಮುಂದುವರೆಯುತ್ತೇನೆ ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನೀಗ ಸಿಡಿ ಪ್ರಕರಣದ ಬಗ್ಗೆ ಮುಂದುವರೆಯುವ ಕುರಿತು ಬಿಜೆಪಿ ವರಿಷ್ಠರ ಅಭಿಪ್ರಾಯವನ್ನು ಪಡೆದುಕೊಳ್ಳುತ್ತೇನೆ. ಅವರು ಹೇಳಿದಂತೆ ಮುಮದುವರಯುತ್ತೇನೆ. ಅವರು ಒಂದು ವೇಳೆ ತಟಸ್ಥರಾದರೆ ನಾನು ವೈಯಕ್ತಿಕವಾಗಿ ಈ ಪ್ರಕರಣದಲ್ಲಿ ಮುಂದುವರೆಯುತ್ತೇನೆ. ನಾನು ಏನು ಮಾತನಾಡುತ್ತೇನೆಯೋ ಅದನ್ನು ಮಾಡಿಯೇ ತೀರುತ್ತೇನೆ. ಸಿಡಿ ವಿಚಾರವಾಗಿ ದಾಖಲೆ ಬಿಡುಗಡೆ ಮಾಡಲ್ಲ ಎಂದಿದ್ದ ರಮೇಶ್ ಜಾರಕಿಹೊಳಿ ಅವರು ಡಿಕೆಶಿವಕುಮಾರ್‌ ಮಾತನಾಡಿದ್ದಾರೆ ಎನ್ನಲಾದ ಆಡಿಯೋದ ಒಂದು ಝಲಕ್ ಬಿಡುಗಡೆ ಮಾಡುವುದಾಗಿ ರಮೇಶ್ ಜಾರಕಿಹೊಳಿ ತಿಳಿಸಿದ್ದರು. ಈಗ ಆಡಿಯೋ ಬಿಡುಗಡೆ ಮಾಡಿದ್ದಾರೆ.

Tap to resize

Latest Videos

10 ಸಾವಿರ ಕೋಟಿ ರೂ. ಹಗರಣಕ್ಕೆ ಸಹಕರಿಸದ ಹಿನ್ನೆಲೆ ಸಿಡಿ ಬಿಡುಗಡೆ: ಡಿಕೆಶಿ ವಿರುದ್ಧ ರಮೇಶ್‌ ಜಾರಕಿಹೊಳಿ ಆರೋಪ

ಆಡಿಯೋದಲ್ಲಿ ಏನಿದೆ?: ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್‌ ಅವರದ್ದು ಎನ್ನಲಾದ 19 ಸೆಕೆಂಡ್‌ಗಳ ಆಡಿಯೋವನ್ನು ರಮೇಶ್ ಜಾರಕಿಹೊಳಿ ಬಿಡುಗಡೆ ಮಾಡಿದ್ದಾರೆ. ಈ ಆಡಿಯೋದಲ್ಲಿ ತಮ್ಮ ಆಸ್ತಿ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವಿವರವಿದೆ. ನನಗೆ ದುಬೈನಲ್ಲಿ ಮನೆ ಇದೆ. ಲಂಡನ್‌ನಲ್ಲಿ ಮನೆ ಇದೆ. ದೆಹಲಿಯಲ್ಲಿ ಒಂದು ಮನೆ ತಗೊಳೋದಿದೆ. ಮುಂಬೈನಲ್ಲಿ ಒಂದು ಫ್ಲ್ಯಾಟ್ ಇದೆ. ನನ್ನ ಮನೆಗೆ ರೇಡ್ ಆದಾಗ ಅದರಲ್ಲಿ ಸೀಜ್ ಆಗಿದ್ದು 40 ರಿಂದ 50 ಕೋಟಿ ರೂಪಾಯಿ ಮಾತ್ರ ಎಂಬ ಮಾಹಿತಿಯಿದೆ.

100 ರೂಪಾಯಿಗೆ ಬ್ಲೂಫಿಲಂ ತೋರಿಸುತ್ತಿದ್ದ ಡಿಕೆಶಿ: ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ರಾಜಕೀಯ ಅಂತ್ಯಕ್ಕೆ ಈ ಆಡಿಯೋ ಬಿಡುಗಡೆ ಮೊದಲ ಅಸ್ತ್ರವಾಗಿದೆ. ಆಡಿಯೋ ಬಿಡುಗಡೆ ಮಾಡಿದ ನಂತರವೇ ಮತ್ತೊಮ್ಮೆ ಸುದ್ದಿಗೋಷ್ಠಿಯನ್ನು ರಮೇಶ್‌ ಜಾರಕಿಹೊಳಿ ಮಾತನಾಡಿದ್ದಾರೆ. ಡಿ.ಕೆ. ಶಿವಕುಮಾರ್‌ ಕನಕಪುರದಲ್ಲಿ 100 ರೂಪಾಯಿಗೆ ಬ್ಲೂಫಿಲಂ ತೋರಿಸುತ್ತಿದ್ದನು. ಇಂತಹ ಫ್ರಾಡ್‌ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ ಇತರೆ ನಾಯಕರು ಯಾರೊಬ್ಬರೂ ಮಾತನಾಡುತ್ತಿಲ್ಲ ಎಂದರು.

ನಾನು ಡಿಕೆಶಿ ಅಣ್ಣ ತಮ್ಮಂದಿರಂತೆ ಇದ್ದೆವು- ಗ್ರಾಮೀಣ ಶಾಸಕಿ ಸಂಬಂಧ ಹಾಳು ಮಾಡಿದಳು: ರಮೇಶ್‌ ಜಾರಕಿಹೊಳಿ

2000ದಿಂದಲೂ ಸಿಡಿ ಫ್ಯಾಕ್ಟರಿ ಆರಂಭ: ರಾಜ್ಯದಲ್ಲಿ ಭಾಗ್ಯಲಕ್ಷ್ಮೀ ಶುಗರ್‌ ಫ್ಯಾಕ್ಟರಿ ಆರಂಭವಾದ 2000ನೇ ಇಸವಿಯಿಂದಲೂ ಸಿಡಿ ದಂಧೆಯೂ ನಡೆಯುತ್ತಿದೆ. ನನ್ನ ಬಗ್ಗೆ ಒಟ್ಟು 20 ಸಿಡಿಗಳನ್ನು ಮಾಡಿದ್ದಾರೆ. ಈಗ ಕೇವಲ 1 ಸಿಡಿ ಬಿಡುಗಡೆ ಮಾಡಿದ್ದಾರೆ. ಇನ್ನೂ ಅವರ ಬಳಿ 11 ಸಿಡಿಗಳು ಬಾಕಿ ಉಳಿದುಕೊಂಡಿದ್ದಾರೆ. ಕಾಂಗ್ರೆಸ್‌ ನಾಯಕರ ಸಿಡಿಗಳೂ ನನ್ನ ಬಳಿ ಇವೆ. ಈಗ ಡಿಕೆಶಿ ಮತ್ತು ನನ್ನ ನಡುವೆ ವೈಯಕ್ತಿಕ ಯುದ್ಧ ಆರಂಭವಾಗಿದೆ. ನಾನು ರಾಜಕೀಯ ನಿವೃತ್ತಿ ಆಗುವುದರೊಳಗೆ ಡಿಕೆಶಿ ರಾಜಕಾರಣ ಅಂತ್ಯವನ್ನೂ ಮಾಡುತ್ತೇನೆ. ನನ್ನ ಬಳಿ ಇರುವ ಸಿಡಿ ಕುರಿತ ಷಡ್ಯಂತ್ರದ ದಾಖಲೆಗಳನ್ನು ಸಿಬಿಐಗೆ ಕೊಟ್ಟರೆ ಅವರ ರಾಜಕಾರಣ ಅಂತ್ಯವಾಗುತ್ತದೆ ಎಂದು ರಮೇಶ್‌ ಜಾರಕಿಹೊಳಿ ಕಿಡಿಕಾರಿದರು. 

click me!