Assembly election: ಚಾಮುಂಡೇಶ್ವರಿ ಕ್ಷೇತ್ರದಲ್ಲಿ 20ಕ್ಕೆ ಸಿದ್ದು ಶಕ್ತಿಪ್ರದರ್ಶನ

By Kannadaprabha NewsFirst Published Jan 17, 2023, 12:41 PM IST
Highlights

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜ. 20ರಂದು ನಡೆಯುವ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ ಹಾಗೂ ಸೇರ್ಪಡೆ ಕಾರ್ಯಕ್ರಮದಲ್ಲಿ 25 ಸಾವಿರ ಜನರನ್ನು ಸೇರಿಸುವ ಮೂಲಕ ಸಿದ್ದರಾಮಯ್ಯ ಅವರ ಶಕ್ತಿಪ್ರದರ್ಶನ ನಡೆಸಲಾಗುವುದು ಎಂದು ಜಿಪಂ ಮಾಜಿ ಅಧ್ಯಕ್ಷ ಕೆ. ಮರಿಗೌಡ ತಿಳಿಸಿದರು.

ಮೈಸೂರು (ಜ.17) : ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜ. 20ರಂದು ನಡೆಯುವ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ ಹಾಗೂ ಸೇರ್ಪಡೆ ಕಾರ್ಯಕ್ರಮದಲ್ಲಿ 25 ಸಾವಿರ ಜನರನ್ನು ಸೇರಿಸುವ ಮೂಲಕ ಸಿದ್ದರಾಮಯ್ಯ ಅವರ ಶಕ್ತಿಪ್ರದರ್ಶನ ನಡೆಸಲಾಗುವುದು ಎಂದು ಜಿಪಂ ಮಾಜಿ ಅಧ್ಯಕ್ಷ ಕೆ. ಮರಿಗೌಡ ತಿಳಿಸಿದರು.

ನಗರದ ಕಾಂಗ್ರೆಸ್‌ ಭವನದಲ್ಲಿ ನಡೆದ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕ್ರರ್ತರ ಸಭೆಯಲ್ಲಿ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷ ಬಲಿಷ್ಠವಾಗಿದ್ದು, ಜೆಡಿಎಸ್‌ ಪಕ್ಷ ತೊರೆದು ಕಾಂಗ್ರೆಸ್‌ ಪಕ್ಷ ಸೇರುತ್ತಿರುವ ನಾಯಕರು ಯಾವುದೇ ಷರತ್ತಿಲ್ಲದೆ ಪಕ್ಷವನ್ನು ಸೇರುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್‌ ಮುಖಂಡರು ಆತಂಕ ಪಡಬೇಕಿಲ್ಲ. ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿಯಲ್ಲಿನ ಸೋಲು ತುಂಬಾ ನೋವುಂಟುಮಾಡಿದೆ. ಆ ನೋವನ್ನು ಮರೆಸಬೇಕಾದರೆ 2023ರ ಚುನಾವಣೆಯಲ್ಲಿ ಅಭ್ಯರ್ಥಿಯಾರೇ ಆದರೂ 50 ಸಾವಿರ ಮತಗಳ ಅಂತರದಿಂದ ಗೆದ್ದುತೋರಿಸಬೇಕು. ಆದ್ದರಿಂದ ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್‌, ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆ ಮಾಡುವ ಅಭ್ಯರ್ಥಿಯನ್ನು ಎಲ್ಲರೂ ಒಗ್ಗಟ್ಟಿನಿಂದ ಗೆಲ್ಲಿಸಬೇಕು ಎಂದರು.

4 ದಶಕ ರಾಜಕೀಯ ಮಾಡಿದ್ದರೂ ಸಿದ್ದುಗೆ ಸೋಲಿನ ಭೀತಿ: ಸಿ.ಟಿ.ರವಿ

ಲಿಂಗದೇವರಕೊಪ್ಪಲು ಬಳಿ ನಡೆಯುವ ಸಮಾವೇಶಕ್ಕೆ ಹಿನಕಲ್‌ನ ಗಣಪತಿ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭವಾಗುತ್ತದೆ. 2 ಸಾವಿರ ಬೈಕ್‌ಗಳಲ್ಲಿ ಕಾರ್ಯಕರ್ತರು ರಾರ‍ಯಲಿ ಮೂಲಕ ಸಾವಿರದ ಒಂದು ಕಳಸ ಹೊತ್ತ ಮಹಿಳೆಯರು ಹಾಗೂ 180 ಜನರ ಕಲಾತಂಡದೊಂದಿಗೆ ಮೆರವಣಿಗೆ ಪ್ರಾರಂಭವಾಗುತ್ತದೆ. ಈ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಸೇರ್ಪಡೆಯಾಗುತ್ತಿದ್ದು, ಕಾರ್ಯಕ್ರಮಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌ ಮಾತನಾಡಿ, 2023ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಅಧಿಕಾರಕ್ಕೆ ಬಂದೇ ಬರುತ್ತದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಲ್ಲರು ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣೆ ಬೆನ್ನಲ್ಲೇ ಜಿಟಿಡಿ ಕಾರ್ಯ ಶುರು

ಸಭೆಯಲ್ಲಿ ಜಿಪಂ ಮಾಜಿ ಸದಸ್ಯರಾದ ಪಟೇಲ್‌ ಜವರೇಗೌಡ, ಕೂರ್ಗಳ್ಳಿ ಮಹಾದೇವ್‌, ಅರುಣ್‌ಕುಮಾರ್‌, ಕೃಷ್ಣಕುಮಾರ್‌ ಸಾಗರ್‌, ಜೆ.ಜೆ. ಆನಂದ್‌, ಕೆಂಚಪ್ಪ, ಕೋಟೆಹುಂಡಿ ಮಹದೇವ, ಟಿ.ಬಿ. ಚಿಕ್ಕಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು, ಶ್ರೀಕಂಠ ತೊಂಡೇಗೌಡ, ನಾಗವಾಲ ನರೇಂದ್ರ, ಹೊಸಹುಂಡಿ Ãಘು, ಮೆಲ್ಲಹಳ್ಳಿ ಮಹಾದೇವಸ್ವಾಮಿ, ನಾರಾಯಣ, ಬೆಳವಾಡಿ ಲಕ್ಷ್ಮಣ್‌, ಲೋಕೇಶ್‌, ಧನಗಳ್ಳಿ ಬಸವರಾಜು, ಹಿನಕಲ್‌ ಪ್ರಕಾಶ್‌, ಉಮಾಶಂಕರ್‌, ಸಿದ್ದರಾಜು, ಹಂಚ್ಯಾ ಸಣ್ಣಸ್ವಾಮಿ, ರವಿಗೌಡ, ಜಿ.ಕೆ. ಬಸವಣ್ಣ, ನಾಡನಹಳ್ಳಿ ರವಿ, ರಫಿಕ್‌ಪಾಷ, ವಿಜಯಲಕ್ಷ್ಮಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ. ಗುರುಸ್ವಾಮಿ, ಸತೀಶ್‌ಕುಮಾರ್‌ ಇದ್ದರು.

click me!