ಚಿತ್ರದುರ್ಗ ನಗರದ ಆಟೋಗಳ ಮೇಲೆ ಅಂಟಿಸಿದ್ದ ತಮ್ಮ ಭಾವಚಿತ್ರಗಳ ತೆರವಿಗೆ ಅಧಿಕಾರಿಗಳು ಕೈಗೊಂಡ ಹಿನ್ನೆಲೆಯಲ್ಲಿ ಚಿತ್ರದುರ್ಗ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವೀರೇಂದ್ರ ಪಪ್ಪಿ ಅಸಮಧಾನ ಹೊರ ಹಾಕಿದ್ದಾರೆ. ತಮ್ಮ ಜನಪ್ರಿಯತೆ ಸಹಿಸಿಕೊಳ್ಳಲಾಗದವರು ಮಾಡಿದ ಷಡ್ಯಂತ್ರವೆಂದು ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗ (ಏ.1) : ಚಿತ್ರದುರ್ಗ ನಗರದ ಆಟೋಗಳ ಮೇಲೆ ಅಂಟಿಸಿದ್ದ ತಮ್ಮ ಭಾವಚಿತ್ರಗಳ ತೆರವಿಗೆ ಅಧಿಕಾರಿಗಳು ಕೈಗೊಂಡ ಹಿನ್ನೆಲೆಯಲ್ಲಿ ಚಿತ್ರದುರ್ಗ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವೀರೇಂದ್ರ ಪಪ್ಪಿ(Veerendra pappi) ಅಸಮಧಾನÜ ಹೊರ ಹಾಕಿದ್ದಾರೆ. ತಮ್ಮ ಜನಪ್ರಿಯತೆ ಸಹಿಸಿಕೊಳ್ಳಲಾಗದವರು ಮಾಡಿದ ಷಡ್ಯಂತ್ರವೆಂದು ವಾಗ್ದಾಳಿ ನಡೆಸಿದ್ದಾರೆ.
ನಗರದ ಕಲ್ಯಾಣ ಮಂಟಪವೊಂದರಲ್ಲಿ ಆಟೋ ಚಾಲಕರ ಸಂಘದವರೊಂದಿಗೆ ಸಭೆ ನಡೆಸಿದರು. ವೀರೇಂದ್ರ ಪಪ್ಪಿ, ಚಾಲಕರ ಯೂನಿಫಾರಂ ತೊಟ್ಟು ಸಭೆಯಲ್ಲಿ ಭಾಗವಹಿಸಿದ್ದರು. ಪಕ್ಕಾ ಸಿನಿಮೀಯ ಶೈಲಿಯಲ್ಲಿ ಸಭೆ ನಡೆಸಿದ ವೀರೇಂದ್ರ ಪಪ್ಪಿ ಮುಂದಿನ ಚುನಾವಣೆ(Karnataka assembly election)ಯಲ್ಲಿ ತಮ್ಮನ್ನು ಬೆಂಬಲಿಸುವಂತೆ ವಿನಂತಿಸಿದರು.
undefined
Ticket fight: ಎರಡನೆ ಪಟ್ಟಿ ಬಿಡುಗಡೆ ಮುನ್ನವೇ ಮೊಳಕಾಲ್ಮುರು ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಭಿನ್ನಮತ!
ಆಟೋಗಳ ಮೇಲೆ ಪೋಸ್ಟರ್(Auto poster) ಅಂಟಿಸಿರವುದಕ್ಕೆ ಅಧಿಕಾರಿಗಳು 1,000 ರು. ದಂಡ ವಿಧಿಸುತ್ತಿದ್ದಾರೆಂಬ ಸಂಗತಿಯನ್ನು ಆಟೋ ಚಾಲಕರು ವೀರೇಂದ್ರ ಪಪ್ಪಿ ಅವರ ಗಮನಕ್ಕೆ ತಂದಿದ್ದಾರೆ. ನನಗೆ ಆಗದವರು ಮಾಡುತ್ತಿರುವ ಕೆಲಸ ಇದೆಂದು ಶಾಸಕ ತಿಪ್ಪಾರೆಡ್ಡಿ ವಿರುದ್ಧ ಪರೋಕ್ಷವಾಗಿ ಪಪ್ಪಿ ವಾಗ್ದಾಳಿ ನಡೆಸಿದ್ದಾರೆ. ವೀರೇಂದ್ರ ಪಪ್ಪಿ ಅಭಿಮಾನಿಗಳ ಬಳಗದಿಂದ ಸಮಾವೇಶ ಆಯೋಜಿಸಲಾಗಿತ್ತು.
ಚಿತ್ರದುರ್ಗವನ್ನು ಮಾದರಿ ನಗರವನ್ನಾಗಿಸಲು ಬೆಂಬಲಿಸಿ: ಪಪ್ಪಿ
ಕೋಟೆ ನಾಡು ಐತಿಹಾಸಿಕ ಚಿತ್ರದುರ್ಗ ನಗರವನ್ನು ಮಾದರಿ ನಗರವನ್ನಾಗಿಸುವ ಚಿಂತನೆ ಇಟ್ಟುಕೊಂಡಿದ್ದು ಹಾಗಾಗಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ಜಯಶಾಲಿಯನ್ನಾಗಿಸಿ ನಿಮ್ಮಗಳ ಋುಣ ತೀರಿಸುತ್ತೇನೆಂದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸ್ಪರ್ಧಾಕಾಂಕ್ಷಿ ಕೆ.ಸಿ.ವೀರೇಂದ್ರಪಪ್ಪಿ ಮನವಿ ಮಾಡಿದರು.
ಅಭಿಮಾನಿಗಳೆ ನಾಯಕರು. ನಿಮ್ಮೆಲ್ಲರ ಪ್ರತಿನಿಧಿಯಾಗಿ ಬಂದಿದ್ದೇನೆ. ಬೂತ್ ಮಟ್ಟದಲ್ಲಿ 50 ಸದಸ್ಯರುಗಳನ್ನು ನೊಂದಾಯಿಸಿದ್ದೀರಿ. ಅದರ ಜೊತೆಗೆ ಇನ್ನೂ 50 ಮತಗಳನ್ನು ಸೇರಿಸಿ ಒಂದೊಂದು ಬೂತ್ ಮಟ್ಟದಲ್ಲಿ 100 ಮತ ಸಿಗುವಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ. ಅವೈಜ್ಞಾನಿಕ ರಸ್ತೆ ಹಾಗೂ ಡಿವೈಡರ್‌ಗಳನ್ನು ನೋಡಿದರೆ ಕಮಿಷನ್ ಎಷ್ಟುಮೀತಿ ಮೀರಿದೆ ಎನ್ನುವುದು ಗೊತ್ತಾಗುತ್ತದೆ ಎಂದರು.
Chitradurga: ರಂಗೇರಿದ ಹೊಳಲ್ಕೆರೆ ಚುನಾವಣಾ ಅಖಾಡ: ಮಾಜಿ ಸಚಿವ ಎಚ್.ಆಂಜನೇಯಗೆ ಅದ್ದೂರಿ ಸ್ವಾಗತ
ಭ್ರಷ್ಟಾಚಾರ, ದೌರ್ಜನ್ಯ, ಬೆದರಿಕೆಯಿಂದ ಚಿತ್ರದುರ್ಗದ ಜನ ಬೇಸತ್ತಿದ್ದಾರೆ. ದೊಡ್ಡ ಹಳ್ಳಿಯಂತಿರುವ ಚಿತ್ರದುರ್ಗ ಸಾಕಷ್ಟುಅಭಿವೃದ್ಧಿಯಾಗಬೇಕಿದೆ. ನಿಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿ. ನಿಮ್ಮ ಸೇವೆ ಮಾಡುವ ಮೂಲಕ ಮತದಾನದ ಋುಣ ತೀರಿಸುವೆ. ಬಡವರ ಹಸಿವು ನೀಗಿಸಲು ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲೇಬೇಕು. ಅಡುಗೆ ಅನಿಲ, ಅಕ್ಕಿ, ಬೇಳೆ, ಪೆಟ್ರೋಲ್, ಡೀಸೆಲ್ ಬೆಲೆ ಜಾಸ್ತಿಯಾಗಿದೆ. ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್‌ನಲ್ಲಿ ಘೋಷಿಸಿರುವಂತೆ ಪ್ರತಿ ಮನೆಯ ಮಹಿಳೆಗೆ 2,000 ರು.ಗಳನ್ನು ಪ್ರತಿ ತಿಂಗಳು ಉಚಿತವಾಗಿ ನೀಡಲಾಗುವುದು ಎಂದರು.