ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶ ಬಿಜೆಪಿಗೆ ಒಂದು ಕೆಟ್ಟಕನಸಾಗಿದೆ ಎಂದು ವಿಷಾಧಿಸಿದ ಬಿಜೆಪಿ ರಾಜ್ಯ ನಾಯಕ ಕೆ.ಎಸ್. ಈಶ್ವರಪ್ಪ, 2024ರ ಲೋಕಸಭಾ ಚುನಾವಣೆಯಲ್ಲಿ ವಿಶ್ವ ನಾಯಕ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಈ ದೇಶದ ಪ್ರಧಾನಮಂತ್ರಿ ಮಾಡಲೇಬೇಕೆಂದು ತೀರ್ಮಾನ ತೆಗೆದುಕೊಂಡು ಬಿಜೆಪಿ ಒಂದು ದಿಟ್ಟಹೆಜ್ಜೆ ಇಟ್ಟಿದೆ ಎಂದರು.
ಗದಗ (ಜೂ.24): ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶ ಬಿಜೆಪಿಗೆ ಒಂದು ಕೆಟ್ಟಕನಸಾಗಿದೆ ಎಂದು ವಿಷಾಧಿಸಿದ ಬಿಜೆಪಿ ರಾಜ್ಯ ನಾಯಕ ಕೆ.ಎಸ್. ಈಶ್ವರಪ್ಪ, 2024ರ ಲೋಕಸಭಾ ಚುನಾವಣೆಯಲ್ಲಿ ವಿಶ್ವ ನಾಯಕ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಈ ದೇಶದ ಪ್ರಧಾನಮಂತ್ರಿ ಮಾಡಲೇಬೇಕೆಂದು ತೀರ್ಮಾನ ತೆಗೆದುಕೊಂಡು ಬಿಜೆಪಿ ಒಂದು ದಿಟ್ಟಹೆಜ್ಜೆ ಇಟ್ಟಿದೆ ಎಂದರು. ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ನಾಯಕರು 7 ತಂಡಗಳಲ್ಲಿ ಎಲ್ಲ ಜಿಲ್ಲೆಗಳಿಗೂ ಪ್ರವಾಸ ಮಾಡುತ್ತಿದ್ದೇವೆ. ಜಿಲ್ಲಾ ಕಾರ್ಯಕರ್ತರ ಸಂಘಟನೆ ಗಟ್ಟಿಗೊಳಿಸುವುದು.
ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ದಿಕ್ಕಿನಲ್ಲಿ ಕಾರ್ಯಕರ್ತರನ್ನು ಸಜ್ಜಗೊಳಿಸಿ, ಮೋದಿ ನಾಯಕತ್ವವನ್ನು ಉಪಯೋಗ ಮಾಡಿಕೊಳ್ಳಲಾಗುವುದು. ಸಂಘಟನೆ, ಸಾಧನೆ, ನಾಯಕತ್ವ ಈ ಮೂರು ಅಂಶಗಳನ್ನು ಇಟ್ಟುಕೊಂಡು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ತರಬೇಕು ಎನ್ನುವ ದೃಢ ನಿರ್ಧಾರ ಮಾಡಿಕೊಂಡು ಪ್ರವಾಸ ಕೈಗೊಂಡಿದ್ದೇವೆ ಎಂದರು. ನಮೋ ವಿರುದ್ಧ ಕಾಂಗ್ರೆಸ್ ಸೇರಿ ಎಲ್ಲ ಪಕ್ಷಗಳು ಒಟ್ಟಾಗುವ ಪ್ರಯತ್ನ ನಡೆದಿದೆ. ಇದು ಹೊಸದೇನು ಅಲ್ಲ, ವಿಪಕ್ಷದವರು ಈ ಹಿಂದೆಯೂ ಇಂಥ ಪ್ರಯತ್ನ ನಡೆಸಿ ವಿಫಲರಾಗಿದ್ದಾರೆಂದರು. ಕುಟುಂಬವೊಂದರ ವಶಕ್ಕೆ ದೇಶದ ಆಡಳಿತ ಕೊಡಬಾರದು ಎಂದು ಜನ ತೀರ್ಮಾನಿಸಿದ್ದಾರೆ ಎಂದರು.
undefined
ಕೆಲಸ ಮಾಡಲು ಇಷ್ಟ ಇಲ್ಲದಿದ್ದರೆ ಹೊರಡಿ: ಅಧಿಕಾರಿಗಳಿಗೆ ಶಾಸಕ ಇಕ್ಬಾಲ್ ತರಾಟೆ
ರಾಜ್ಯದಲ್ಲಿ ಬಿಜೆಪಿ ಸೋತು ಸುಣ್ಣವಾಗಿದೆ. ಯಾವ ಮುಖ ಇಟ್ಟುಕೊಂಡು ಲೋಕಸಭಾ ಚುನಾವಣೆಗೆ ಬರುತ್ತಾರೆ, ಯಾವ ಸಾಧನೆ ಇಟ್ಟುಕೊಂಡು ಬರುತ್ತಾರೆ ಎನ್ನುವ ವಿರೋಧ ಪಕ್ಷಗಳ ಆರೋಪಗಳಿಗೆ ಉತ್ತರಿಸಿದ ಅವರು, ಇದೇ ಮಾತನ್ನು ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಲೋಕಸಭಾ ಚುನಾವಣೆ ಮುಂಚೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಿಜೆಪಿಗೆ ಎರಡು ಸೀಟು ತೆಗೆದುಕೊಳ್ಳಲ್ಲ ಎಂದು ಹೇಳಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ತೆಗೆದುಕೊಂಡಿದ್ದು ಒಂದೇ ಸೀಟು, ಬಿಜೆಪಿ ಸರ್ಕಾರವಿರಲಿಲ್ಲ ಆದರೂ 25 ಸೀಟು ನಾವು ಗೆದಿದ್ವಿ. ಅದನ್ನು ನೆನಪು ಇಟ್ಟಕೊಂಡು ಕಾಂಗ್ರೆಸ್ಸಿನವರು ಮಾತನಾಡಬೇಕು. ಕಾಂಗ್ರೆಸ್ಸಿನವರು ಯಾವ ಮುಖ ಇಟ್ಟುಕೊಂಡು ಚುನಾವಣೆ ಮಾಡುತ್ತಾರೆ ಎನ್ನುವುದನ್ನುರಾಜ್ಯದ ಜನ ಕಾಯುತ್ತಿದ್ದಾರೆ ಎಂದರು.
ಯಾರನ್ನು ಕೇಳಿ ಘೋಷಿಸಿದ್ದೀರಿ?: ಕೇಂದ್ರ ಬಿಜೆಪಿ ಸರ್ಕಾರ ಬಡವರಿಗೆ ಅಕ್ಕಿ ಕೊಡುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಚುನಾವಣಾ ಪ್ರಣಾಳಿಕೆಯಲ್ಲಿ ಹೇಳುವಾಗ ಜ್ಞಾನವಿರಲಿಲ್ಲವಾ? ಯಾರನ್ನ ಕೇಳಿ ಘೋಷಣೆ ಮಾಡಿದ್ದೀರಿ, ಕೇಂದ್ರ ಸರ್ಕಾರ ಕೇಳಿದ್ದರಾ? ನರೇಂದ್ರ ಮೋದಿ ಕೇಳಿ ಘೋಷಣೆ ಮಾಡಿದ್ದರಾ? 5 ಗ್ಯಾರಂಟಿ ಘೋಷಣೆಯಲ್ಲಿ 5 ಕೆಜಿ ಅಕ್ಕಿಯನ್ನು ಮುಂಚಿನಿಂದಲೂ ಕೇಂದ್ರ ಸರ್ಕಾರ ನರೇಂದ್ರ ಮೋದಿ ಕೊಡುತ್ತಲೇ ಬಂದಿದ್ದಾರೆ ಎಂದು ಒಮ್ಮೆಯಾದರೂ ಹೇಳಿದ್ದಾರಾ? ಇಲ್ಲವಲ್ಲ. ಕೇಂದ್ರದಿಂದ ಬರುವ 5 ಕೆಜಿ ಅಕ್ಕಿ ನಮ್ಮದೇ ಎಂದುಕೊಂಡು ‘ಅನ್ನರಾಮಯ್ಯ’ ಎಂದು ಹೆಸರು ಇಟ್ಟಕೊಂಡಿರುವುದು ಯಾವ ಪುರುಷಾರ್ಥಕ್ಕೆ ಎಂದು ಲೇವಡಿ ಮಾಡಿದರು ಈಶ್ವರಪ್ಪ.
‘ಅಕ್ಕಿಭಾಗ್ಯ’ದಲ್ಲಿ ಕಾಂಗ್ರೆಸ್ ಬಣ್ಣ ಬಯಲು: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ
ಸಿಂಗಲ್ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಹೊರಟ್ಟಿದ್ದೇವೆ ನಾವು ಎಂದು ಹೇಳಾತ್ತಾ ಇದ್ದಾರೆ. ಈ ಸಿದ್ದರಾಮಯ್ಯನವರು ಯಾವ ಕಾರಣಕ್ಕೂ ಮುಖ್ಯಮಂತ್ರಿ ಆಗುವುದು ಬೇಡ ಮಲ್ಲಿಕಾರ್ಜುನ ಖರ್ಗೆ ಆಗಲಿ ಅಂತಾ ಯಾಕೆ ಹೇಳಿದಿರೀ. 135 ಜನ ಗೆದ್ದು ಎಷ್ಟುದಿನ ಆದ ಮೇಲೆ ಮುಖ್ಯಮಂತ್ರಿ ಮಾಡಿದರು. ಯಾವ ಯಾವ ಕಾರಣಕ್ಕೆ ಸಿದ್ದರಾಮಯ್ಯ ಬೇಡ ಎಂದು 15 ಅಂಶಗಳ ಪಟ್ಟಿಮಾಡಿಕೊಟ್ಟರು. ಈಗ 5 ವರ್ಷಕ್ಕೂ ಅವರೇ ಸಿಎಂ ಎಂದು ಎಂ.ಬಿ. ಪಾಟೀಲ, ಮಹಾದೇವಪ್ಪ ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರು ಬಾಯಿ ಬಿಡುತ್ತಿಲ್ಲ, ಅವರು ಬಾಯಿ ಬಿಟ್ಟರೆ ಇವರ ಸರ್ಕಾರವಿರುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಶಾಸಕರಾದ ಸಿ.ಸಿ. ಪಾಟೀಲ, ಡಾ. ಚಂದ್ರು ಲಮಾಣಿ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಬಿಜೆಪಿ ಜಿಲ್ಲಾಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ, ಮುಖಂಡ ರವಿ ದಂಡಿನ ಸೇರಿದಂತೆ ಪ್ರಮುಖರು ಇದ್ದರು.