ದೇಶದಲ್ಲಿ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಜೋಡು ಯಾತ್ರೆ ಮಾಡುತ್ತಿದ್ದಾರೆ, ಅದು ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ಜೋಡು ಮಾಡಿದ್ದಾರೆ, ಇವರೇನು ಮಾಡುವುದು ಏನು ಅವಶ್ಯಕತೆ ಇಲ್ಲಾ ಎಂದ ಅರುಣ ಸಿಂಗ್
ಕಲಬುರಗಿ(ಸೆ.30): ಕಳೆದ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಮಾತು ಕಲಬುರಗಿ ಜನಾನೇ ಮಾತು ಕೇಳಿಲ್ಲಾ, ಆದರೇ ರಾಜಸ್ಥಾನದಲ್ಲಿನ ಕಾಂಗ್ರೆಸ್ ಪಕ್ಷದ ಶಾಸಕರು ತನ್ನ ಮಾತು ಕೇಳುತ್ತಾರಾ ಕೇಳಲ್ಲಿಲ್ಲ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯದ ಉಸ್ತುವಾರಿಯಾದ ಅರುಣ ಸಿಂಗ್ ಅವರು ಖರ್ಗೆ ಅವರ ವಿರುದ್ಧ ವ್ಯಂಗ್ಯ ವಾಡಿದ್ದಾರೆ. ಜೇವರ್ಗಿ ಪಟ್ಟಣದ ಹೊರವಲಯ ಭೂತಪುರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಭಾರತೀಯ ಜನತಾ ಪಾರ್ಟಿ ಜೇವರ್ಗಿ ಮಂಡಲದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಜೋಡು ಯಾತ್ರೆ ಮಾಡುತ್ತಿದ್ದಾರೆ, ಅದು ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ಜೋಡು ಮಾಡಿದ್ದಾರೆ, ಇವರೇನು ಮಾಡುವುದು ಏನು ಅವಶ್ಯಕತೆ ಇಲ್ಲಾ ಎಂದರು ದೇಶದಲ್ಲಿ ಅನೇಕ ರಾಜ್ಯಗಳಲ್ಲಿ ನಮ್ಮ ಬಿಜೆಪಿ ಸರಕಾರ ಇದೇ ಮುಂದಿನ ಚುನಾವಣೆಯಲ್ಲಿ ಮತ್ತೇ ರಾಜ್ಯದಲ್ಲಿ ಬಿಜೆಪಿ ಸರಕಾರ ಬರುತ್ತದೆ ಎಂದು ಭವಿಷ್ಯ ನುಡಿದರು.ತಾವು ಮಂಡಲದ ಪದಾಧಿಕಾರಿಗಳು ಮುಂದಿನ ಚುನಾವಣೆಯಲ್ಲಿ ತಾವು ಸಂಕಲ್ಪ ತೊಟ್ಟು ಬಿ ಜೆ ಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ರಾಹುಲ್ ಗಾಂಧಿಯೇ AICC ಅಧ್ಯಕ್ಷರಾಗಲಿ: ಮಲ್ಲಿಕಾರ್ಜುನ ಖರ್ಗೆ ಆಗ್ರಹ
ಈ ಕಾರ್ಯಕ್ರಮದಲ್ಲಿ ಸಂಸದರಾದ ಉಮೇಶ್ ಜಾದವ್, ದೊಡ್ಡಪ್ಪಗೌಡ ಎಸ್ ಪಾಟೀಲ್ ನರಿಬೋಳ, ಮಾಲೀಕಯ್ಯ ಗುತ್ತೇದಾರ, ಎನ್ ರವಿಕುರ್ಮಾ, ರಾಜಕುಮಾರ ಪಾಟೀಲ್, ಬಸವರಾಜ ಮತ್ತಿಮಡು, ಧರ್ಮಣ್ಣ ದೊಡ್ಡಮನಿ, ಅಮರಾನಾಥ್ ಪಾಟೀಲ್, ಶಿವರಾಜ್ ಪಾಟೀಲ್ ರದ್ದೇವಾಡಿಗಿ, ರೇವಣಸಿದ್ಧಪ್ಪ ಸಂಕಾಲಿ, ಸಾಯಬಣ್ಣ ದೊಡ್ಡಮನಿ, ಶೋಭಾ ಭಾಣಿ, ರಮೇಶ್ ಬಾಬು ವಕೀಲ್, ಮಲ್ಲಿನಾಥ್ ಯಲಗೋಡ, ಭೀಮರಾಯ ಗುಜಗುಂಡ, ಮರೆಪ್ಪ ಬಡಿಗೇರ್, ಶಿವಾನಂದ ಮಾಕಾ ಸೊನ್ನ, ತಿಪ್ಪಣ್ಣ ರಾಠೋಡ್, ವಿಶ್ವರಾಧ್ಯ ಬಡಿರ್ಗೇ, ಹಳ್ಳೆಪ್ಪ ಆಚರ್ಯ, ಧರ್ಮಣ್ಣ ಇಟಗಾ, ಸಂಗಣ್ಣಗೌಡ ರದ್ದೇವಾಡಿಗಿ, ಸಂತೋಷ ಮಲ್ಲಾಬಾದ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.