ಆಪ್‌ಗೆ ಕೆಟ್ಟ ಹೆಸರು ತರಲು ದೆಹಲಿಗೆ ಹರಿದು ಬರುವ ಯಮುನಾ ನದಿಗೆ ಹರ್ಯಾಣದ ಬಿಜೆಪಿಗರು ವಿಷ ಸೇರಿಸಿದ್ದಾರೆ ಎಂದು ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದರೆ, ಅದಕ್ಕೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ, 'ನಾನು ಕುಡಿಯುವ ನೀರಿಗೆ ಬಿಜೆಪಿಗರು ವಿಷ ಹಾಕುತ್ತಾರಾ?' ಎಂದು ಪ್ರಶ್ನಿಸಿದ್ದಾರೆ.
ನವದೆಹಲಿ(ಜ.30): ದೆಹಲಿ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ಬಿಜೆಪಿ ನಡುವೆ 'ವಿಷ ಯುದ್ಧ' ಆರಂಭವಾಗಿದೆ.
ಆಪ್‌ಗೆ ಕೆಟ್ಟ ಹೆಸರು ತರಲು ದೆಹಲಿಗೆ ಹರಿದು ಬರುವ ಯಮುನಾ ನದಿಗೆ ಹರ್ಯಾಣದ ಬಿಜೆಪಿಗರು ವಿಷ ಸೇರಿಸಿದ್ದಾರೆ ಎಂದು ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದರೆ, ಅದಕ್ಕೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ, 'ನಾನು ಕುಡಿಯುವ ನೀರಿಗೆ ಬಿಜೆಪಿಗರು ವಿಷ ಹಾಕುತ್ತಾರಾ?' ಎಂದು ಪ್ರಶ್ನಿಸಿದ್ದಾರೆ.
ದೆಹಲಿ ಚುನಾವಣೆ: ಎಎಪಿ ಭರ್ಜರಿ ಭರವಸೆ, ವಿದ್ಯಾರ್ಥಿಗಳಿಗೆ ಉಚಿತ ಬಸ್, ಮೆಟ್ರೋದಲ್ಲಿ ಅರ್ಧ ರೇಟ್!
ಇನ್ನೊಂದೆಡೆ ಹರ್ಯಾಣ ಸಿಎಂ ನಯಬ್ ಸಿಂಗ್ ಸೈನಿ ಬುಧವಾರ ಯಮುನಾ ನದಿ ನೀರು ಕುಡಿದು ತೋರಿಸುವ ಮೂಲಕ ಹರ್ಯಾಣದಲ್ಲಿ ನದಿ ನೀರು ಸುರಕ್ಷಿತ ಎಂದು ಸವಾಲು ಹಾಕಿದ್ದಾರೆ. ಜೊತೆಗೆ ಯಮುನೆ ವಿಷವಾಗಿಲ್ಲ, ಆಪ್ ನಾಯಕರ ಮನಸ್ಥಿತಿ ವಿಷಪೂರಿತವಾಗಿ ಎಂದು ಕಿಡಿಕಾರಿದ್ದಾರೆ. ಜೊತೆಗೆ ಹೇಳಿಕೆ ವಿರುದ್ದ ಸ್ವತಃ ಹರ್ಯಾಣ ಸರ್ಕಾರ ಕೇಜ್ರವಾಲ್ ವಿರುದ್ಧ ಪ್ರಕರಣ ದಾಖಲಿಸಿದೆ.
ಮೋದಿ ಕಿಡಿ:
ದೆಹಲಿ ವಿಧಾನಸಭೆ ಚುನಾವಣೆಯ ಭಾಗವಾಗಿ ಕರ್ತಾರ್ ನಗರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮೋದಿ, 'ಸೋಲಿಗೆ ಹೆದರಿ ಆಪ್ -ದಾ(ವಿಪತ್ತು)ದ ಜನರು ಹತಾಶರಾಗಿದ್ದಾರೆ. ಕಳೆದೆರಡು ಬಾರಿ ಯಮುನಾ ನದಿಯನ್ನು ಸ್ವಚ್ಛಗೊಳಿಸುವ ಭರವಸೆ ನೀಡಿದ ಅವರು ಅಧಿಕಾರಕ್ಕೇರಿದರು. ಆದರೆ ಈಗ ಆ ತಂತ್ರ ನಡೆಯುವುದಿಲ್ಲ ಎಂದು ತಿಳಿದಿದೆ. ಜನರು ನೀರಿಗಾಗಿ ಹಾತೊರೆದು, ಛರ್ ಪೂಜೆಯನ್ನು ಕಸದ ನಡುವೆಯೇ ಮಾಡುವಂತೆಮಾಡಿದ್ದಾರೆ. ಈಪಾಪವನ್ನುಹರ್ಯಾಣ ಹಾಗೂ ದೇಶದ ಜನ ಮರೆಯುವುದಿಲ್ಲ' ಎಂದರು.
ಅಂತೆಯೇ, 'ಹರ್ಯಾಣ ಹಾಗೂ ದೆಹಲಿ ಬೇರೆಯಲ್ಲ. ಅವರ ಮಕ್ಕಳೂ ಇಲ್ಲಿದ್ದಾರೆ. ನಾನು, ರಾಜತಾಂತ್ರಿಕರು, ನ್ಯಾಯಾಧೀಶರು ಸೇರಿದಂತೆ ದೆಹಲಿಯಲ್ಲಿವಾಸವಿರುವ ಎಲ್ಲರೂಹರ್ಯಾಣದಿಂದ ಬರುವನೀರನ್ನೇಕುಡಿಯುತ್ತಿದ್ದಾರೆ.ಹರ್ಯಾಣದವರು ತಮ್ಮ ಜನರಿಗೇ ವಿಷ ಉಣಿಸುತ್ತಾರೆಯೇ?' ಎಂದು ಪ್ರಶ್ನಿಸಿದ ಮೋದಿ, ಆಪ್ ಕ್ಷಮಿಸಲಾಗದ ಅಪರಾಧವೆಸಗಿದೆ ಎಂದರು. ಅಲ್ಲದೆ ಆಪ್ ಇದೇ ಯಮುನಾ ನದಿಯಲ್ಲಿ ಮುಳುಗಲಿದೆ ಎಂದು ಆಕ್ರೋಶ ಭರಿತರಾಗಿ ಹೇಳಿದ್ದಾರೆ.
ಉಚಿತ ಕೊಡುಗೆ ಪರಿಣಾಮ: ದಿಲ್ಲಿ ಸರ್ಕಾರದ ಬೊಕ್ಕಸ ಖಾಲಿ?
ಕೇಜ್ರಿವಾಲ್ ಹೇಳಿದ್ದೇನು?
ಚುನಾವಣೆ ಹೊತ್ತಿನಲ್ಲಿ ಆಪ್‌ಗೆ ಕಳಂಕ ಹೊರಿಸಲು ಬಿಜೆಪಿ ಸಂಚು ರೂಪಿಸಿದೆ. ಇದಕ್ಕಾಗಿಯೇ ಯಮುನಾ ನದಿಗೆ ವಿಷಪೂರಿತ ಕೈಗಾರಿಕಾ ತ್ಯಾಜ್ಯವನ್ನು ಉದ್ದೇಶಪೂರ್ವಕವಾಗಿಸೇರಿಸುತ್ತಿದೆ. ಈ ಮೂಲಕ ನದಿಯನ್ನು ವಿಷಪೂರಿತವಾಗಿ ಮಾಡುತ್ತಿದೆ ಎಂದು ಚುನಾವಣಾ ಪ್ರಚಾರದ ವೇಳೆ ಆರೋಪಿಸಿದ್ದರು.
ಚಾರ್ಲ್ಸ್ ಶೋಭರಾಜ್‌ಗೆ ಹೋಲಿಕೆ!
ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಅವರನ್ನು ಸರಣಿ ಕೊಲೆಗಾರ ಚಾರ್ಲ್ಸ್ ಶೋಭರಾಜ್ ಗೆ ಹೋಲಿಸಿದ್ದಾರೆ. 'ಶೋಭರಾಜ್ ಅಮಾಯಕರನ್ನು ವಂಚಿಸುವುದರಲ್ಲಿ ನುರಿತವ. ಜನರು ಆತನಿಂದ ಸುಲಭವಾಗಿ ಮೋಸ ಹೋಗುತ್ತಿದ್ದರು. ಅಂತಹವರೊಂದಿಗೆ ಎಚ್ಚರಿಕೆಯಿಂದ ಇರುವುದು ಅಗತ್ಯ' ಎನ್ನುತ್ತಾ, ಕೇಜ್ರವಾಲ್ ಹಾಗೂ ಅವರ ಪಕ್ಷ ಜನರ ಸುಲಿಗೆ ಮಾಡುತ್ತಿದೆ ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ.