ಅಧ್ಯಕ್ಷ ಎಲೆಕ್ಷನ್‌ಗೆ ಯತ್ನಾಳ್ ಸ್ಪರ್ಧೆ ಬಗ್ಗೆ ನಾಳೆ ಬಿಜೆಪಿ ಭಿನ್ನರಿಂದ ಸಭೆ

ಬಿಜೆಪಿ ಕಾರ್ಯಕರ್ತರ ಪಕ್ಷ. ಎಲ್ಲರನ್ನೂ ವಿಶ್ವಾಸದಿಂದ ತೆಗೆದುಕೊಂಡು ಹೋಗುವವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಆಗ್ರಹಿಸಿದ ಮಾಜಿ ಸಚಿವ ಕುಮಾರ್ ಬಂಗಾರಪ್ಪ

BJP factions to meet Jan 31st regarding Basanagouda Patil Yatnal's contest for the President Election

ಬೆಂಗಳೂರು(ಜ.30):  ಪಕ್ಷದ ರಾಜ್ಯಾಧ್ಯಕ್ಷಸ್ಥಾನದ ಚುನಾವಣೆಗೆ ಹಿರಿಯ ನಾಯಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಕಣಕ್ಕಿಳಿಸುವ ಬಗ್ಗೆ ಶುಕ್ರವಾರ ಸಭೆ ಸೇರಿ ಚರ್ಚಿಸುತ್ತೇವೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರ ಪಕ್ಷ. ಎಲ್ಲರನ್ನೂ ವಿಶ್ವಾಸದಿಂದ ತೆಗೆದುಕೊಂಡು ಹೋಗುವವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಆಗ್ರಹಿಸಿದರು. ಪಕ್ಷದ ರಾಜ್ಯ ಉಸ್ತುವಾರಿ ರಾಧಾ ಮೋಹನ ದಾಸ್ ಅಗರವಾಲ್ ಅವರು ರಾಜ್ಯಕ್ಕೆ ಬಂದು ಸಭೆ ಮಾಡಿ ಹಲವು ಸೂಚನೆಗಳನ್ನು ನೀಡಿದರು. ಆದರೂ ಜಿಲ್ಲಾ ಧ್ಯಕ್ಷರ ಆಯ್ಕೆ ವಿಚಾರದಲ್ಲಿ ನಮ್ಮ ಅಭಿಪ್ರಾಯ ಕೇಳಲಿಲ್ಲ. ಅನೇಕ ಜಿಲ್ಲೆಗಳಲ್ಲಿ ಇನ್ನೂ ಗೊಂದಲವಿದೆ. ಮಂಡಲ, ಜಿಲ್ಲಾಧ್ಯಕ್ಷರ ಚುನಾವಣೆಯಲ್ಲಿ ಪಾರದರ್ಶಕತೆ ಇರಲಿಲ್ಲ ಎಂದು ಆರೋಪಿಸಿದರು.

Latest Videos

ರಾಧಾಮೋಹನ್‌ ಸಭೆಯ ಬಳಿಕ ವಿಜಯೇಂದ್ರ ಪರ ಹೆಚ್ಚಿದ ಬೆಂಬಲ!

ಜೆಪಿಸಿ ಅಧ್ಯಕ್ಷರ ಮೆಚ್ಚುಗೆ: 

ವಕ್ಫ್‌ ಆಸ್ತಿ ವಿವಾದ ಸಂಬಂಧ ಬಸನಗೌಡ ಪಾಟೀಲ್‌ ಯತ್ನಾಳ, ರಮೇಶ್‌ ಜಾರಕಿಹೊಳಿ, ಅರವಿಂದ ಲಿಂಬಾವಳಿ ಅವರ ನೇತೃತ್ವದ ಹೋರಾಟಕ್ಕೆ ಒಂದು ಹಂತದ ಯಶಸ್ಸು ಸಿಕ್ಕಿದೆ. ನಾವು ನೀಡಿದ ವರದಿ ಯನ್ನು ಸಂಸತ್ತಿನ ಜಂಟಿ ಸ್ಥಾಯಿ ಸಮಿತಿ ಅಧ್ಯಕ್ಷ ಜಗದಾಂ ಬಿಕ ಪಾಲ್ ಅವರು ಮೆಚ್ಚಿದ್ದಾರೆ ಎಂದು ಇದೇ ವೇಳೆ ಕುಮಾ‌ರ್ ಬಂಗಾರಪ್ಪ ತಿಳಿಸಿದರು. ವಕ್ಸ್‌ಗೆ ಬೇಕಾದ ತಿದ್ದು ಪಡಿಗಳನ್ನು ಜಗದಾಂಬಿಕ ಪಾಲ್ ಅವರು ಯಶಸ್ವಿಯಾಗಿ ಮಾಡಿಕೊಂಡು ಬರುತ್ತಿದ್ದಾರೆ. ನಮ್ಮ ತಂಡದಿಂದ ಜಗದಾಂಬಿಕ ಪಾಲ್ ಅವರನ್ನು ಎರಡು ಸಲ ಭೇಟಿ ಮಾಡಿ ದ್ದೆವು. ವಕ್ಸ್ ಕುರಿತು ನಾವು ವಿವರವಾದ ವರದಿ ಸಲ್ಲಿಸಿ ದ್ದೆವು. ಪಾಲ್ ಅವರು ನಮ್ಮ ವರದಿಗೆ ವಿಶೇಷ ಗಮನ ಕೊಟ್ಟು ವಿವರ ಅವರೇ ಪರಿಶೀಲಿಸಿದರು ಎಂದರು.

ವಕ್ಫ್‌ ಆಸ್ತಿ ವಿವಾದ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಿಕೊಟ್ಟ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಣದ ಮುಖಂಡರ ಕಾರ್ಯವೈಖರಿಗೆ ಸಂಸತ್ತಿನ ಜಂಟಿ ಸ್ಥಾಯಿ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ವಕ್ಫ್‌ ಆಸ್ತಿ ವಿವಾದದ ಕುರಿತು ಮಾಹಿತಿ ಸಂಗ್ರಹಿಸುತ್ತಿರುವ ಪಾಲ್ ಅವರು ಯತ್ನಾಳ ಬಣದ ಮುಖಂಡರಾದ ಮಾಜಿ ಸಚಿವರಾದ ಕುಮಾರ್‌ ಬಂಗಾರಪ್ಪ, ಅರವಿಂದ್ ಲಿಂಬಾವಳಿ ಅವರಿಗೆ ಕರೆ ಮಾಡಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ವಕ್ಫ್‌ ಆಸ್ತಿ ವಿವಾದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಯತ್ನಾಳ ಬಣದ ಮುಖಂಡರು ವಾರ್‌ರೂಂ ಸ್ಥಾಪಿಸಿ ಸಾರ್ವಜ ನಿಕರಿಂದ ಮಾಹಿತಿ, ದೂರಿಗೆ ಅವಕಾಶ ಮಾಡಿಕೊಟ್ಟಿದ್ದಲ್ಲದೆ ಅದರ ಸಂಬಂಧ ರಾಜ್ಯದ ಹಲವೆಡೆ ಪ್ರವಾಸ ಮಾಡಿ ಎಲ್ಲಿ, ಹೇಗೆ ತೊಂದರೆಯಾಗಿದೆ ಎಂಬುದರ ಕುರಿತು ಎಳೆಎಳೆಯಾಗಿ ವಿವರ ಸಂಗ್ರಹಿಸಿದ್ದರು.

ಬಿಜೆಪಿ ರಾಜ್ಯಾಧ್ಯಕ್ಷ ಚುನಾವಣೆ ಸ್ಪರ್ಧೆಗೆ ನಾನೂ ಸಿದ್ದ: ಯತ್ನಾಳ್ ಹೇಳಿಕೆಗೆ ವಿಜಯೇಂದ್ರ ತಿರುಗೇಟು

ಲಿಂಬಾವಳಿ ಜಾಲದಿಂದ ಸಂಗ್ರಹ: 

ಈ ವಕ್ಫ್‌ ಹೋರಾಟ ರೂಪಿಸುವಲ್ಲಿ ಅರವಿಂದ್ ಲಿಂಬಾವಳಿ ಪ್ರಮುಖ ಪಾತ್ರ ವಹಿಸಿದ್ದರು. ಎಬಿವಿಪಿ ಸಂಘಟನೆಯ ಹೋರಾಟದಿಂದ ರಾಜಕೀಯ ಪ್ರವೇಶಿಸಿದ್ದ ಲಿಂಬಾವಳಿ ಅವರು ಸುದೀರ್ಘ ಕಾಲ ಪಕ್ಷದ ಪ್ರಧಾನ ಕಾವ್ಯದರ್ಶಿಯಾಗಿದ್ದರು. ಜತೆಗೆ, ಶಾಸಕರಾಗಿ, ಸಚಿವರಾಗಿ ಅನುಭವ ಹೊಂದಿದ್ದಲ್ಲದೆ ರಾಜ್ಯದುದ್ದಕ್ಕೂ ಪ್ರಬಲ ಸಂಪರ್ಕ ಜಾಲ ಹೊಂದಿದ್ದರು. ಇದನ್ನು ಸಮರ್ಥವಾಗಿ ಬಳಸಿಕೊಂಡು ಲಿಂಬಾವಳಿ ಅವರು ವಕ್ಸ್ ಹೋರಾಟವನ್ನು ಯಶಸ್ವಿಯಾಗಿ ನಡೆಸುವಲ್ಲಿ ನೀಲನಕ್ಷೆ ರೂಪಿಸಿದ್ದರು.

ಇದರ ಪರಿಣಾಮ ವಕ್ಫ್‌ ಆಸ್ತಿ ವಿವಾದ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿದ ಯತ್ನಾಳ ಬಣದ ಮುಖಂಡರು ಅದನ್ನು ದೆಹಲಿಗೆ ತೆರಳಿ ಸಂಸತ್ತಿನ ಜಂಟಿ ಸ್ಥಾಯಿ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರಿಗೆ ಸಲ್ಲಿಸಿದ್ದರು. ಇಷ್ಟು ವಿವರವಾದ ಮಾಹಿತಿ ಕಂಡು ಅಚ್ಚರಿಗೊಂಡ ಪಾಲ್ ಅವರು ಲಿಂಬಾವಳಿ, ಕುಮಾರ್‌ ಬಂಗಾರಪ್ಪ, ಯತ್ನಾಳ ಸೇರಿ ಇತರ ಮುಖಂಡರ ಕಾರ್ಯವೈಖರಿಯನ್ನು ಪ್ರಶಂಸಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

vuukle one pixel image
click me!
vuukle one pixel image vuukle one pixel image