ಸತ್ಯ ಹರಿಶ್ಚಂದ್ರನ ತರಹ ಮಾತನಾಡಬೇಡ, ಮಿನಿಸ್ಟರ್ ಆಗಿ ಏನೇನು ಮಾಡಿದ್ದೆ ಎಂಬುದ ಸ್ವಲ್ಪ ಹಿಂತಿರುಗಿ ನೋಡಿಕೋ. ಗಾಜಿನ ಮನೆಯಲ್ಲಿ ಕುಳಿತುಕೊಂಡು ಇನ್ನೊಬ್ಬರಿಗೆ ಕಲ್ಲು ಹೊಡೆಯವ ಪ್ರಯತ್ನ ಮಾಡಬೇಡ ಎಂದು ಮಾಜಿ ಸಚಿವ ಆಂಜನೇಯಗೆ ಶಾಸಕ ಎಂ.ಚಂದ್ರಪ್ಪ ಟಾಂಗ್ ನೀಡಿದರು.
ಹೊಳಲ್ಕೆರೆ (ಏ.30) : ಸತ್ಯ ಹರಿಶ್ಚಂದ್ರನ ತರಹ ಮಾತನಾಡಬೇಡ, ಮಿನಿಸ್ಟರ್ ಆಗಿ ಏನೇನು ಮಾಡಿದ್ದೆ ಎಂಬುದ ಸ್ವಲ್ಪ ಹಿಂತಿರುಗಿ ನೋಡಿಕೋ. ಗಾಜಿನ ಮನೆಯಲ್ಲಿ ಕುಳಿತುಕೊಂಡು ಇನ್ನೊಬ್ಬರಿಗೆ ಕಲ್ಲು ಹೊಡೆಯವ ಪ್ರಯತ್ನ ಮಾಡಬೇಡ ಎಂದು ಮಾಜಿ ಸಚಿವ ಆಂಜನೇಯಗೆ ಶಾಸಕ ಎಂ.ಚಂದ್ರಪ್ಪ (M Chandrappa MLA)ಟಾಂಗ್ ನೀಡಿದರು.
ಹೊಳಲ್ಕೆರೆ(Holalkere assembly constituency) ಹೊರ ವಲಯದ ಒಂಟಿ ಕಂಬದ ಮಠ(Ontikambada mutta)ದಲ್ಲಿ ಶನಿವಾರ ಪಟ್ಟಣದ ಹದಿನೆಂಟು ವಾರ್ಡ್‌ಗಳ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ರಾಜಕಾರಣದಲ್ಲಿ ಅಧಿಕಾರ ಮಾಡುವುದು ಮುಖ್ಯವಲ್ಲ. ಮುಂದಿನ ಪೀಳಿಗೆಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವ ಬದ್ಧತೆ, ಜವಾಬ್ದಾರಿ ಇರಬೇಕು ಎಂದರು.
undefined
ಮಾದಿಗರಿಗೆ ಒಳಮೀಸಲಾತಿ ನೀಡಿದ ಬಿಜೆಪಿಗೆ ಮತ ಹಾಕಿ, ಋುಣ ತೀರಿಸಿ: ನಾರಾಯಣಸ್ವಾಮಿ
ಕಳೆದ ಚುನಾವಣೆಯಲ್ಲಿ ಇಲ್ಲಿಂದ ಗೆದ್ದು ಹೋಗಿ ಸಮಾಜ ಕಲ್ಯಾಣ ಇಲಾಖೆ ಮಂತ್ರಿಯಾಗಿದ್ದ ಎಚ್.ಆಂಜನೇಯ(H Anjaneya)ನಿಗೆ ವರ್ಷಕ್ಕೆ 26 ಸಾವಿರ ಕೋಟಿ ರು.ಗಳ ಅನುದಾನ ಬರುತ್ತಿತ್ತು. ರಾಜ್ಯದಲ್ಲಿ ಶೇಕಡ 62 ಪರ್ಸೆಂಟ್ ಜನರಿಗೆ ಅನುಕೂಲ ಮಾಡಬಹುದಿತ್ತು. ಹೊಳಲ್ಕೆರೆ ಪಟ್ಟಣದಲ್ಲಿರುವ ಮೂರು ಲಕ್ಷ ಜನಸಂಖ್ಯೆಯಲ್ಲಿ ಎರಡು ಲಕ್ಷ ಜನರ ಉದ್ಧಾರ ಮಾಡಬಹುದಿತ್ತು. ಅದ್ಯಾವುದನ್ನು ಮಾಡದೆ ಕಮಿಷನ್ ಹೊಡೆದು ಶಾಸಕನಾದ ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸುತ್ತಿರುವುದು ಯಾವ ನ್ಯಾಯ? ಕ್ಷೇತ್ರದ ಜನ ಇದನ್ನು ಅರಿಯದಷ್ಟುಮೂರ್ಖರೇನಲ್ಲವೆಂದರು.
ಸಚಿವನಾಗಿ ಏನೂ ಮಾಡದೆ, ಈಗ ಮತ್ತೆ ಚುನಾವಣೆಯಲ್ಲಿ ಮತ ಕೇಳಲು ಬಂದಿರುವೆ. ನನ್ನ ಬಗ್ಗೆ ಅನಗತ್ಯವಾಗಿ ಎಲ್ಲಿಯೂ ಮಾಡಬೇಡ. ನಿನ್ನ ಗೌರವ ಕಡಿಮೆಯಾಗುತ್ತದೆ. ನಾನು ಎಲ್ಲಾ ವರ್ಗದವರಿಗೂ ಸಾಮಾಜಿಕ ನ್ಯಾಯ ಕೊಟ್ಟಿದ್ದೇನೆ. ಚುನಾವಣೆಯಲ್ಲಿ ಮತ ಹಾಕುವುದು ಒಂದು ನಿಮಿಷದ ಕೆಲಸ. ಕಷ್ಟ-ಸುಖಗಳಿಗೆ ಯಾರು ಸ್ಪಂದಿಸುತ್ತಾರೆಂಬುದನ್ನು ಆಲೋಚಿಸಿ ಓಟು ಹಾಕುತ್ತಾರೆ. ಪಕ್ಷದ ಕಾರ್ಯಕರ್ತರು ಕಳೆದ ಬಾರಿಯಂತೆ ಈ ಬಾರಿಯೂ ಆಂಜನೇಯ ಅವರನ್ನು ಸೋಲಿಸಿ ಹೊಳಲ್ಕೆರೆಯತ್ತ ಮುಖ ಮಾಡದಂತೆ ನೋಡಿಕೊಳ್ಳಿ ಎಂದು ಚಂದ್ರಪ್ಪ ವಿನಂತಿಸಿದರು.
ನಾಲ್ಕು ಜನರನ್ನ ಕಟ್ಟಿಕೊಂಡು ಗಲಾಟೆ ಮಾಡಿದ್ರೆ ನಾನು ಹೆದರಲ್ಲ: ರಘು ಆಚಾರ್
ವಾರಕ್ಕೆ ಒಂದು ಸಾರಿ ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟಮಂತ್ರಿಗಳನ್ನು ಕಂಡು ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದೇನೆ ಹೊರತು ಒಂದು ದಿನವೂ ಕುಟುಂಬದವರೊಂದಿಗೆ ಕಾಲ ಕಳೆಯಲಿಲ್ಲ. ಹೈಟೆಕ್ ಆಸ್ಪತ್ರೆ, ಮಿನಿ ವಿಧಾನಸೌಧ, ಮುನ್ಸಿಪಾಲಿಟಿ ಕಟ್ಟಡ ನಿರ್ಮಿಸಿದ್ದೇನೆ. ಬ್ರಿಟಿಷರ ಕಾಲದ ಹಳೆ ಶಾಲೆಗಳನ್ನು ಕೆಡವಿ ಗುಣಮಟ್ಟದ ಕಟ್ಟಡ ಕಟ್ಟಿಸಿದ್ದೇನೆ. ಕ್ಷೇತ್ರದಲ್ಲಿ ಶೇ. 90 ಪರ್ಸೆಂಟೇಜ್ ಹೆಣ್ಣು ಮಕ್ಕಳು ನನಗೆ ಮತ ಹಾಕಲು ಕಾದು ಕುಳಿತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇನೆಂಬ ವಿಶ್ವಾಸ ವ್ಯಕ್ತಪಡಿಸಿದರು.
ಪುರಸಭೆ ಅಧ್ಯಕ್ಷ ಆರ್.ಅಶೋಕ್, ಸದಸ್ಯರುಗಳಾದ ರಾಜಪ್ಪ, ಮುರುಗೇಶ್, ಶಿವಲಿಂಗಣ್ಣ, ಹೇಮಲತಾ, ಬಸಯ್ಯ, ಬಸವರಾಜಯ್ಯ, ತಿರುಮಲದೇವಿ, ಮಾರುತೇಶ್, ರಂಗಸ್ವಾಮಿ, ಶಿವಕುಮಾರ್, ಸಿದ್ದರಾಮಣ್ಣ, ಮಲ್ಲಿಕಾರ್ಜುನ್, ಜಾಕಿರ್, ಸ್ವಾಮಿ, ಗಂಗಾಧರಪ್ಪ ಸಭೆಯಲ್ಲಿ ಹಾಜರಿದ್ದರು.