ಕುಮಾರಸ್ವಾಮಿ ಹೆಚ್ಚಿಗೆ ನೀರು ಕುಡಿಯೊಲ್ಲ. ಊಟದ ವಿಚಾರದಲ್ಲಿ ಮಕ್ಕಳ ರೀತಿ ಹಠ ಮಾಡ್ತಾರೆ. ಬರೀ ಮೊಸರನ್ನ ತಿಂತಾರೆ, ಸರಿಯಾಗಿ ಊಟ ಮಾಡಲ್ಲ. ಹಾಗಾಗಿ ಅನಾರೋಗ್ಯ ಆಗಿತ್ತು ಎಂದು ಅವರ ಪತ್ನಿ ಹೇಳಿಕೆ ನೀಡಿದ್ದಾರೆ.
ಚನ್ನಪಟ್ಟಣ (ಏ.25): ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಅನಾರೋಗ್ಯ ಹಿನ್ನೆಲೆ ಪತಿ ಪರ ಪತ್ನಿ ಅನಿತಾ ಕುಮಾರಸ್ವಾಮಿ ಪ್ರಚಾರಕ್ಕಿಳಿದಿದ್ದಾರೆ. ಈ ನಡುವೆ ಹೆಚ್‌ಡಿಕೆ ಅನಾರೋಗ್ಯದ ಬಗ್ಗೆ ಮಾತನಾಡಿದ ಶಾಸಕಿ ಅನಿತಾ, ಕುಮಾರಸ್ವಾಮಿ ರಾಜ್ಯದ ಹಲವೆಡೆ ಪ್ರಚಾರ ಮಾಡಿದರು. ಹಾಗಾಗಿ ಚನ್ನಪಟ್ಟಣದಲ್ಲಿ ಅವರ ಪರವಾಗಿ ನಾನು ಪ್ರಚಾರ ಮಾಡ್ತಿದ್ದೇನೆ. ಅವರಿಗೆ ಸ್ವಲ್ಪ ಆಯಾಸ ಆಗಿತ್ತು. ಹಾಗಾಗಿ ಒಂದು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅವರು ಹೆಚ್ಚಿಗೆ ನೀರು ಕುಡಿಯೊಲ್ಲ. ಊಟದ ವಿಚಾರದಲ್ಲಿ ಮಕ್ಕಳ ರೀತಿ ಹಠ ಮಾಡ್ತಾರೆ. ಬರೀ ಮೊಸರನ್ನ ತಿಂತಾರೆ, ಸರಿಯಾಗಿ ಊಟ ಮಾಡಲ್ಲ. ಹಾಗಾಗಿ ಅನಾರೋಗ್ಯ ಆಗಿತ್ತು ಈಗ ಚೇತರಿಸಿಕೊಂಡಿದ್ದಾರೆ.
ನಾನು ಚನ್ನಪಟ್ಟಣದಾದ್ಯಂತ ಪ್ರಚಾರ ಮಾಡ್ತಿದ್ದೇನೆ. ಕ್ಷೇತ್ರದ ಜನರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಅಲ್ಲದೇ ಜನ ಕೂಡಾ ಬುದ್ಧಿವಂತರಿದ್ದಾರೆ. ಅವರು ಕುಮಾರಸ್ವಾಮಿ ಅವರನ್ನ ಅರ್ಥ ಮಾಡಿಕೊಂಡಿದ್ದಾರೆ. ಕುಮಾರಸ್ವಾಮಿ ಸಿಎಂ ಕ್ಯಾಂಡಿಡೇಟ್ ಹಾಗಾಗಿ ಅವರು ಗೆದ್ದರೆ ಕ್ಷೇತ್ರಕ್ಕೆ ಅನ್ಲಿಮಿಟೆಡ್ ಅನುದಾನ ಸಿಗುತ್ತೆ. ಹಾಗಾಗಿ ನಮಗೆ ಮತ್ತೊಮ್ಮೆ ಅವಕಾಶ ಕೊಡ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಚನ್ನಪಟ್ಟಣಕ್ಕೆ ಪ್ರಧಾನಿ ಮೋದಿ ಆಗಮನ ವಿಚಾರದ ಬಗ್ಗೆ ಮಾತನಾಡಿದ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ, ಮೋದಿ ಅವರು ದೇಶದ ಪ್ರಧಾನಿ, ಅವರ ಮೇಲೆ ಗೌರವ ಇದೆ. ಅವರು ಪ್ರಚಾರ ಮಾಡಿದ್ರೂ ಜನತೆಗೆ ಎಲ್ಲಾ ಗೊತ್ತಿದೆ. ಅವರು ಯಾರನ್ನ ಆಯ್ಕೆ ಮಾಡಬೇಕೆಂಬುದನ್ನ ಅರ್ಥ ಮಾಡಿಕೊಂಡಿದ್ದಾರೆ. ಚನ್ನಪಟ್ಟಣಕ್ಕೆ ಪ್ರಧಾನಿ ಮೋದಿ ಬರ್ತಿರೋದಕ್ಕೆ ಸ್ವಾಗತ ಇದೆ ಎಂದು ಹೇಳಿದ್ದಾರೆ.
ನಾನು ವಿಶ್ರಾಂತಿ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿಲ್ಲ: ಹೆಚ್‌ಡಿಕೆ
ಇಂದು ಚನ್ನಪಟ್ಟಣ ಕ್ಷೇತ್ರದಾದ್ಯಂತ ಅನಿತಾ ಕುಮಾರಸ್ವಾಮಿ ಪ್ರಚಾರ ನಡೆಸಿದ್ದಾರೆ. ಕ್ಷೇತ್ರದ ಹಲವು ಗ್ರಾಮಗಳಿಗೆ ಭೇಟಿ ನೀಡಿ, ನೀವು ಆಶೀರ್ವಾದ ಮಾಡಿದ್ರೆ ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಆಗ್ತಾರೆ. ರೈತರಿಗಾಗಿ ಜೆಡಿಎಸ್ ಬೆಂಬಲಿಸಿ ಎಂದು ಮನವಿ ಮಾಡಿದ್ದಾರೆ. ತಾಲೂಕಿನ ಕೆಂಗಲ್, ಕರಿಕಲ್ ದೊಡ್ಡಿ, ಹನುಮಂತಪುರ, ತೆಗಚಿಪಾಳ್ಯ, ನೀಲಸಂದ್ರ, ತಿಮ್ಮಸಂದ್ರ ಗ್ರಾಮದಲ್ಲಿ ಅನಿತಾ ಕುಮಾರಸ್ವಾಮಿ ಪ್ರಚಾರ ಮಾಡಿದ್ದಾರೆ.
ಮೋದಿಯಾದರೂ ಬರಲಿ, ಅಮೆರಿಕ ಅಧ್ಯಕ್ಷನಾದರೂ ಬರಲಿ, ಭಾಷಣ ಮಾಡಿ ಹೋಗ್ತಾರೆ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.