'ದೆಹಲಿಗೆ ನಮ್ಮ ನಾಯಕರು ಹೋಗಿದ್ದಾರಲ್ಲ, ನಾನು ನಮ್ಮ ಊರು ಕಡೆ ಹೋಗ್ತಿನಿ': ಸಚಿವ ಸತೀಶ್ ಜಾರಕಿಹೊಳಿ

By Ravi Janekal  |  First Published Aug 23, 2024, 3:21 PM IST

ನಮ್ಮ ಸರ್ಕಾರ ಕೆಡುವುದಾಗಿ ಅಮಿತ್ ಶಾಗೆ ದೇವೇಗೌಡರು, ಕುಮಾರಸ್ವಾಮಿ ಮಾತು ಕೊಟ್ಟಿರಬಹುದು ಆದರೆ ಈ ವಿಚಾರದಲ್ಲಿ ನಾವು ಎಚ್ಚರಿಕೆಯಿಂದ ಇರಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.


ಬೆಂಗಳೂರು (ಆ.23): ನಮ್ಮ ಸರ್ಕಾರ ಕೆಡುವುದಾಗಿ ಅಮಿತ್ ಶಾಗೆ ದೇವೇಗೌಡರು, ಕುಮಾರಸ್ವಾಮಿ ಮಾತು ಕೊಟ್ಟಿರಬಹುದು ಆದರೆ ಈ ವಿಚಾರದಲ್ಲಿ ನಾವು ಎಚ್ಚರಿಕೆಯಿಂದ ಇರಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಇಂದು ಬೆಂಗಳೂರಿನಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರತಿನಿಯೊಂದಿಗೆ ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದಲೂ ಈ ಪ್ರಯತ್ನ ನಡೆಯುತ್ತಿದೆ. ಇದನ್ನ ಸ್ವತಃ ಸಿಎಂ ಕೂಡ ಹೇಳಿದ್ದಾರೆ. ಈ ಹಿಂದೆಯೇ ಸರ್ಕಾರದ ಪತನದ ಬಗ್ಗೆ ಪ್ರಯತ್ನ ನಡೆದಿರುವ ವಿಚಾರ ತಿಳಿಸಿದ್ದರು. ನಿನ್ನೆಯೂ ಸಿಎಲ್‌ಪಿ ಸಭೆಯಲ್ಲೂ ಸಿಎಂ ಹೇಳಿದ್ದಾರೆ ಎಂದರು.

Tap to resize

Latest Videos

ಇನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ ದೆಹಲಿಗೆ ಭೇಟಿ ನೀಡಿರುವ ವಿಷಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ದೆಹಲಿಗೆ ಯಾಕೆ ಹೋಗಿದ್ದಾರೆ ಎಂಬುದರ ಬಗ್ಗೆ ನನಗೆ ಅಷ್ಟು ಗೊತ್ತಿಲ್ಲ. ವಿಷ್ಯ ಏನೂ ಗೊತ್ತಿಲ್ಲ. ಸಾಮಾನ್ಯವಾಗಿ ಇಲ್ಲಿ ನಡೆತಿರೋ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತರೋ ಕೆಲಸ ಆಗ್ತಿದೆ. ಅದೇ ಕಾರಣಕ್ಕೆ ದೆಹಲಿಗೆ ಹೋಗಿರಬಹುದು ಎಂದರು.

ನನ್ನ ವಿರುದ್ದ ಕಾನೂನು ಹೋರಾಟ ಮಾಡಿ, ಕಲ್ಲು ಎಸೆಯೋದಲ್ಲ: ಕಾಂಗ್ರೆಸ್ ಎಂಎಲ್ಸಿ ಐವನ್ ಡಿಸೋಜಾ ಕಿಡಿ

ಇನ್ನು ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನಂತರ ಈ ಬಗ್ಗೆ ಹೈಕಮಾಂಡ್ ಏನು ತೀರ್ಮಾನ ಕೈಗೊಂಡಿದೆ ಎಂಬ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಇದರ ಬಗ್ಗೆ ಯಾವುದೇ ಕ್ಲಾರಿಫಿಕೇಷನ್ ಬಂದಿಲ್ಲ. ಕೋರ್ಟ್‌ನಲ್ಲಿ ಆದೇಶ ಬಂದಮೇಲೆ ಮುಂದಿನ ತೀರ್ಮಾನ. ಇಂಡಿಯಾ ಒಕ್ಕೂಟ ಏನು ತೀರ್ಮಾನ ಕೈಗೊಳ್ಳುತ್ತದೆ ನೋಡಬೇಕು. ಬೇರೆ ಕಡೆ ಕೂಡ ಈ ರೀತಿ ಕೆಲಸ ಆಗ್ತಿದೆ. ಹಲವು ರಾಜ್ಯಗಳಲ್ಲಿ ರಾಜ್ಯಪಾಲರು ಮತ್ತು ಸರ್ಕಾರ ನಡುವೆ ಸಂಘರ್ಷ ನಡೆದಿವೆ. ತಮಿಳನಾಡು, ಪ.ಬಂಗಾಳ ಸೇರಿ ನಮ್ಮ ರಾಜ್ಯದಲ್ಲೂ ಘರ್ಷಣೆ ನಡೆದಿದೆ.  ರಾಜ್ಯಪಾಲರು ಕೆಲ ಬಿಲ್ ಗಳನ್ನು ವಾಪಸ್ ಕಳಿಸಿದ್ದಾರೆ. ಅವರು ಬಿಲ್‌ ಕುರಿತು ಸ್ಪಷ್ಟನೆ ಕೇಳೋಕೆ ಹಕ್ಕಿದೆ. ಅದಕ್ಕೆ ಸರ್ಕಾರ ಕೂಡ ಉತ್ತರ ಕೊಡುತ್ತೆ ಎಂದರು.

ಇನ್ನು ಸರ್ಕಾರ ಅಸ್ಥಿರಗೊಳಿಸುವ ಹೇಳಿಕೆ ಹಳೆಯದ್ದು. ಹಿಂದಿನಿಂದಲೂ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ಆದ್ರೆ ಯಾವುದೇ ಬದಲಾವಣೆ  ಮಾಡಲಾಗಿಲ್ಲ.  ಮುಂದಿನ ನಾಲ್ಕು ವರ್ಷವೂ ನಮ್ಮ ಸರ್ಕಾರ ಆಡಳಿತ ಇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ವರಿಷ್ಠರು ಕರೆದಿದ್ದಾರೆ ನಾನು ಸಿಎಂ ಡಿಸಿಎಂ ದೆಹಲಿಗೆ ಹೊರಟಿದ್ದೇವೆ: ಗೃಹ ಸಚಿವ

ನಾಯಕರು ದೆಹಲಿಗೆ ಹೋಗಿದ್ದಾರೆ ನಿಮ್ಮನ್ನೇಕೆ ಕರೆದಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ದೆಹಲಿಗೆ ಯಾಕೆ ಹೋಗಲಿ. ನಮ್ಮ ನಾಯಕರು ದೆಹಲಿಗೆ ಹೋಗಿದ್ದಾರಲ್ಲ. ನಾನು ನಮ್ಮ ಊರು ಕಡೆ ಹೋಗಬೇಕು. ನಮ್ಕ ಊರು ನೋಡದೇ ಇದ್ರೆ ನಮಗೆ ಸಮಾಧಾನ ಆಗಲ್ಲ. ಎಂದರು. ಇದೇ ವೇಳೆ ಪ್ರಾಸಿಕ್ಯೂಷನ್ ವಿಚಾರದ ನಡುವೆ ಆಡಳಿತಕ್ಕೆ ಹೊಡೆತ ಬಿದ್ದಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಹಾಗೇನಿಲ್ಲ ಕಾನೂನು ಹೋರಾಟ ಒಂದು ಕಡೆ ನಡೆಯುತ್ತೆ, ಇನ್ನೊಂದುಕಡೆ ಆಡಳಿತ ನಡೆಯುತ್ತೆ. ಸದ್ಯ ಕಾನೂನು ಜೊತೆ ರಾಜಕೀಯ ಹೋರಾಟವೂ ನಡೆದಿದೆ. ಇದರ ಜೊತೆ ನಮ್ಮ ನಮ್ಮ ಜವಾಬ್ದಾರಿ ಇರೋ ಕೆಲಸ ಮಾಡುತ್ತಿದ್ದೇವೆ. 

click me!