
ಮಂಗಳೂರು (ಆ.23): ಐವನ್ ಡಿಸೋಜಾ ಓರ್ವ ಭಯೋತ್ಪಾದಕ. ತಾಕತ್ತಿದ್ದರೆ ನನ್ನ ಮೇಲೆ ರೌಡಿಶೀಟರ್ ಹಾಕಲಿ ನೋಡೋಣ ಎಂದು ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಸವಾಲು ಹಾಕಿದ್ದಾರೆ.
ಬಾಂಗ್ಲಾ ಮಾದರಿ ದಾಳಿ ಮಾಡುತ್ತೇವೆ ಎಂಬ ಡಿಸೋಜಾ ಹೇಳಿಕೆ ಸಂಬಂಧ ಇಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರತಿನಿಧಿಯೊಂದಿಗೆ ಮಾತನಾಡಿದ ಶಾಸಕರು, ಕಾಂಗ್ರೆಸ್ ನ ನಾಯಕರಿಗೆ ತಾಕತ್ತಿದ್ರೆ ನನ್ನ ಮೇಲೆ ರೌಡಿಶೀಟ್ ಓಪನ್ ಮಾಡಲಿ. ಕಾಂಗ್ರೆಸ್ ತಪ್ಪನ್ನು ತೋರಿಸಿದವರಿಗೆ ರೌಡಿಶೀಟರ್ ತೆರೆಯೋದು ಇವರ ಜಾಯಮಾನ. ಇಂತಹ ದೇಶದ್ರೋಹಿಗಳ ವಿರುದ್ಧ ಧ್ವನಿಯೆತ್ತಿದ್ರೆ ರೌಡಿಶೀಟರ್ ಕೇಸ್ ಹಾಕುವುದು ನಿಮ್ಮ ಡಿಎನ್‌ಎಯಲ್ಲೇ ಇದೆ. ಇದಕ್ಕೆಲ್ಲ ನಾವು ಹೆದರಲ್ಲ ಎಂದು ವಾಗ್ದಾಳಿ ನಡೆಸಿದರು.
ಬಾಂಗ್ಲಾ ಮಾದರಿ ದಾಳಿ ನಡೆಸುತ್ತೇವೆ ಅನ್ನೋದಕ್ಕೆ ಎಷ್ಟು ಧೈರ್ಯ ಅವನಿಗೆ ; ಐವನ್ ಡಿಸೋಜಾ ವಿರುದ್ಧ ಶಾಸಕ ಎ ಮಂಜು ಕೆಂಡ
ದೇಶದ್ರೋಹದ ಹೇಳಿಕೆ ನೀಡಿದ್ದನ್ನು ವಿರೋಧಿಸುವವರ ಮೇಲೆ ರೌಡಿಶೀಟರ್ ಹಾಕುತ್ತಿರಲ್ಲ ಹಾಗಿದ್ರೆ ರಾಜ್ಯಪಾಲರ ವಿರುದ್ಧ ಮಾತನಾಡಿದ, ರಾಜಭವನದ ಮೇಲೆ ಬಾಂಗ್ಲಾ ಮಾದರಿ ಉಗ್ರದಾಳಿ ನಡೆಸುವ ಬೆದರಿಕೆ ಹಾಕಿದ ಐವನ್ ಡಿಸೋಜಾ ಮೇಲೆ ಯಾವ ಶೀಟರ್ ಹಾಕಬೇಕು? ಅವರ ಮೇಲೆ ರೌಡಿ ಶೀಟರ್ ಅಲ್ಲ, ಐವನ್ ಓರ್ವ ಭಯೋತ್ಪಾದಕ ಎಂದೇ ಹೇಳಬೇಕು. ಭಯೋತ್ಪಾದಕರು ಬಾಂಗ್ಲಾದಿಂದ ನುಸುಳಿ ಬಂದು ಇಲ್ಲಿ ಇರ್ತಾರೆ. ಹಾಗಾಗಿ ವೇದವ್ಯಾಸ ಕಾಮತ್ ರೌಡಿಶೀಟರ್ ಆದ್ರೆ ಐವನ್ ಡಿಸೋಜ್ ಭಯೋತ್ಪಾದಕ. ಭಯೋತ್ಪಾದಕ ಐವನ್ ಡಿಸೋಜಾರಿಂದ ಬಿಜೆಪಿ ಕಲಿತುಕೊಳ್ಳುವಂತದ್ದು ಏನೂ ಇಲ್ಲ. ನೀವೇ ದೊಂಬಿ ಗಲಾಟೆ ಎಬ್ಬಿಸ್ತಿರಿ ಅನ್ನೋದು ರಾಜ್ಯಕ್ಕೆ ಗೊತ್ತಿದೆ ಎಂದು ತಿರುಗೇಟು ನೀಡಿದರು.
ನನ್ನ ವಿರುದ್ದ ಕಾನೂನು ಹೋರಾಟ ಮಾಡಿ, ಕಲ್ಲು ಎಸೆಯೋದಲ್ಲ: ಕಾಂಗ್ರೆಸ್ ಎಂಎಲ್ಸಿ ಐವನ್ ಡಿಸೋಜಾ ಕಿಡಿ
ಇವತ್ತು ಬಿಜೆಪಿ ಕಚೇರಿಗೆ ಮುತ್ತಿಗೆ ಅಂತ ಹೇಳಿ ಕಂಕನಾಡಿ ತನಕ ಅನುಮತಿ ಪಡೆದಿದ್ರಿ. ಯಾಕೆ ಸ್ವಾಮಿ ನಿಮ್ಮ ಈ ರೀತಿಯ ಪಾಲಿಟಿಕ್ಸ್ ಸ್ಟಂಟ್. ಐವನ್ ಡಿಸೋಜಾ ಒಬ್ಬ ಭಯೋತ್ಪಾದಕ ಮನಸ್ಥಿತಿಯ ವ್ಯಕ್ತಿ. ಐವನ್ ಡಿಸೋಜಾ ವಿರುದ್ಧ ನಮ್ಮ ಹೋರಾಟ ಬೀದಿಬೀದಿಯಲ್ಲಿ ನಡೆಯಲಿದೆ. ಅದರ ಜೊತೆಗೆ ನಾವು ಕಾನೂನು ಹೋರಾಟ ನಡೆಸುತ್ತೇವೆ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ಭರತ್ ಶೆಟ್ಟಿ ಜೊತೆ ಸೇರಿ ಕಾನೂನು ಹೋರಾಟ ನಡೆಸುತ್ತೇವೆ. ಈಗಾಗಲೇ ಮಾಹಿತಿ ಹಕ್ಕಲ್ಲಿ ಪೊಲೀಸರ ಬಳಿ ದಾಖಲೆ ಕೇಳಿದ್ದೇವೆ. ಅದು ಸಿಕ್ಕ ಕೂಡಲೇ ಬೆಂಗಳೂರಿನ ಜನಪ್ರತಿನಿಧಿ ಕೋರ್ಟ್ ಹಾಗೂ ಜಿಲ್ಲಾ ಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತೇವೆ ಈ ಮೂಲಕ ಕೋರ್ಟ್ ಪೊಲೀಸ್ ಇಲಾಖೆಗೆ ನಿರ್ದೇಶನ ಕೊಡೋವರೆಗೂ ನಾವು ವಿರಮಿಸಲ್ಲ ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.