
ಮಸ್ಕಿ (ಜು.9) : ಮುಖ್ಯಮಂತ್ರಿ ಸಿದ್ದರಾಮಯ್ಯ ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಐದು ಸಾವಿರÜ ಕೋಟಿ ರುಪಾಯಿಗಳ ಅನುದಾನ ಕೊಡಲು ಒಪ್ಪಿ ಬಜೆಟ್‌ನಲ್ಲಿ ಮಂಡಿಸಿದ್ದಾರೆ. ಈ ಭಾಗದ ಅಭಿವೃದ್ಧಿಗಾಗಿ ಪಕ್ಷ ಬೇಧ ಮರೆತು ಎಲ್ಲಾ ಶಾಸಕರು ಶ್ರಮಿಸುವುದು ಅವಶ್ಯಕವಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ಮಸ್ಕಿ ತಾಲೂಕಿನ ಹಾಲಾಪುರ ಗ್ರಾಮದಲ್ಲಿ ಶನಿವಾರ ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟವರ್ಗಗಳ ಕಲ್ಯಾಣ ಇಲಾಖೆಯಿಂದ ಮಂಜೂರಾಗಿದ್ದ ಡಾ. ಮಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಹಾಲಾಪುರ ಗ್ರಾಮದಲ್ಲಿ 250 ವಿದ್ಯಾರ್ಥಿಗಳಿಗಾಗಿ 23 ಕೋಟಿ ರು. ವೆಚ್ಚದಲ್ಲಿ ಶಾಲೆ, ವಸತಿನಿಲಯ, ಅಡುಗೆ ಕೊಠಡಿ, ಶಿಕ್ಷಕರಿಗೆ ಮನೆಗಳನ್ನು ನಿರ್ಮಿಸುವ ಮೂಲಕ ಹೊಸ ಶಕೆ ಆರಂಭವಾಗಿದೆ. ವಿದ್ಯಾರ್ಥಿಗಳು ಚನ್ನಾಗಿ ಓದಿ ವಿದ್ಯಾವಂತರಾಗಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.
ಹೊಡೆದಾಟ ಮರೆಮಾಚಿಕೊಳ್ಳಲು ಬಿಜೆಪಿಯಿಂದ ಸಲ್ಲದ ಆರೋಪ: ಸಚಿವ ಭೋಸರಾಜ್
ಜನರ ಬಯಕೆಯಂತೆ ಹೊಸ ಸರ್ಕಾರ ರಚನೆಗೊಂಡು ಚುನಾವಣೆಯಲ್ಲಿ ಭರವಸೆ ಕೊಟ್ಟಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ. ಎರಡು ಯೋಜನೆಗಳನ್ನು ಜಾರಿಗೊಳಿಸಿದ್ದು, ಬರುವ ದಿನಗಳಲ್ಲಿ ಮೂರು ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡುವುದಕ್ಕಾಗಿ ಈ ಹಿಂದೆ ಜಿಲ್ಲೆಯ ಜನಪ್ರತಿನಿಧಿಗಳು, ಸಂಸದರು ಸೇರಿ 500 ಶಾಲಾ ಕೊಠಡಿ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದೇವು. ಅದರಂತೆ ವರ್ಷದೊಳಗಾಗಿ 493 ಶಾಲೆಗಳನ್ನು ಕಟ್ಟುವ ಮೂಲಕ ಸರ್ಕಾರಕ್ಕೆ ಹೋಸ ರೀತಿಯ ಆಲೋಚನೆ ಮಾಡಲು ರಾಯಚೂರು ಜಿಲ್ಲೆ ಮಾದರಿಯಾಗಿತ್ತು. ಬಿಸಿಯೂಟ ಯೋಜನೆ ಕೂಡ ರಾಯಚೂರು ಜಿಲ್ಲೆಯಿಂದ ಆರಂಭವಾಗಿತ್ತು. ಮಕ್ಕಳು ಮಧ್ಯಾಹ್ನ ಉಪವಾಸ ಇರಬಾರದು ಎಂದು ಸರ್ಕಾರ ದಿಟ್ಟಕಾರ್ಯಕ್ರಮ ಕೊಟ್ಟಿದೆ ಎಂದು ಸಚಿವ ಎನ್.ಎಸ್.ಬೋಸರಾಜು ಮೆಲಕು ಹಾಕಿದರು.
ಕೆಂಪೇಗೌಡರ ಆಡಳಿತ ಇಡೀ ವಿಶ್ವಕ್ಕೆ ಮಾದರಿ: ಸಚಿವ ಬೋಸರಾಜು
ಶಾಸಕ ಆರ್.ಬಸನಗೌಡ ತುರ್ವಿಹಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಡವರ ಮಕ್ಕಳ ಕಲಿಕೆಗಾಗಿ ಸರ್ಕಾರ ಹತ್ತು ಹಲವು ಯೋಜನೆ ರೂಪಿಸಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಪಾಲಕರು ತಮ್ಮ ಕಷ್ಟನಷ್ಟಗಳಿಗಾಗಿ ಮಕ್ಕಳನ್ನು ಶಾಲೆಯಿಂದ ಹೊರಗುಳಿಯುವಂತೆ ಮಾಡಬಾರದು. ವಿದ್ಯೆ ಕೊಡಿಸುವ ಮೂಲಕ ಮಕ್ಕಳ ಭವಿಷ್ಯವನ್ನು ರೂಪಿಸಬೇಕು ಎಂದರು.
ಮಾನ್ವಿ ಶಾಸಕ ಹಂಪಯ್ಯ ಸಾಹುಕಾರ ಮಾತನಾಡಿದರು. ತಹಸೀಲ್ದಾರ್ ಅರಮನೆ ಸುಧಾ, ಗ್ರಾಪಂ ಅಧ್ಯಕ್ಷ ರವಿ ದೇಸಾಯಿ, ಮೌನೇಶ ತಾತ ಜಂಗಮರಹಳ್ಳಿ, ಪರಿಶಿಷ್ಟವರ್ಗಗಳ ಕಲ್ಯಾಣಾಧಿಕಾರಿ ರಾಜೇಂದ್ರ ಜಲ್ದಾರ್ , ಪ್ರಾಚಾರ್ಯ ವೆಂಕೋಬ ದೇವಾಪುರ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.