ಕಾಂಗ್ರೆಸ್‌ನ ಎಲ್ಲಾ ಪ್ರಣಾಳಿಕೆ ನನ್ನ ಗಮನಕ್ಕಿವೆ: ಡಾ.ಜಿ.ಪರಮೇಶ್ವರ್

By Kannadaprabha News  |  First Published Feb 5, 2023, 6:09 AM IST

ಕಾಂಗ್ರೆಸ್‌ ಹೊರಡಿಸಿದ ಎಲ್ಲಾ ಪ್ರಣಾಳಿಕೆಗಳು ನನ್ನ ಗಮನಕ್ಕೆ ಬಂದಿದ್ದು ಎಲ್ಲರೂ ಒಟ್ಟಿಗೆ ಸೇರಿ ಮಾಡಿದ್ದಾಗಿ ಮಾಜಿ ಡಿಸಿಎಂ ಹಾಗೂ ಕೊರಟಗೆರೆ ಶಾಸಕ ಡಾ.ಜಿ. ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ.


ತುಮಕೂರು (ಫೆ.5) : ಕಾಂಗ್ರೆಸ್‌ ಹೊರಡಿಸಿದ ಎಲ್ಲಾ ಪ್ರಣಾಳಿಕೆಗಳು ನನ್ನ ಗಮನಕ್ಕೆ ಬಂದಿದ್ದು ಎಲ್ಲರೂ ಒಟ್ಟಿಗೆ ಸೇರಿ ಮಾಡಿದ್ದಾಗಿ ಮಾಜಿ ಡಿಸಿಎಂ ಹಾಗೂ ಕೊರಟಗೆರೆ ಶಾಸಕ ಡಾ.ಜಿ. ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ.

ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೆಲವರು ನಮ್ಮಲ್ಲಿ ಅಸಮಾಧಾನ ಮೂಡಿಸುವುದಕ್ಕೆ ಈ ರೀತಿ ಮಾಡುತ್ತಿದ್ದಾರೆ ಎಂದರು. ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ತಾವು ರಾಜೀನಾಮೆ ನೀಡಿದ್ದಾಗಿ ಸುದ್ದಿ ಹರಿದಾಡಿತ್ತು. ಆದರೆ ಅದೆಲ್ಲಾ ಸುಳ್ಳು. ಕೆಲ ವಿಚಾರಗಳ ಬಗ್ಗೆ ಸುರ್ಜೆವಾಲಾ ಅವರ ಜೊತೆ ಚರ್ಚೆ ಮಾಡಿದ್ದೇನೆ. ನಾವು ಯಾವ ರೀತಿ ಚುನಾವಣೆಗೆ ಹೋಗಬೇಕು, ಚುನಾವಣೆಗೆ ನಮ್ಮ ನೀತಿ ಏನು ಇರಬೇಕು. ಅಲ್ಲದೇ ಚುನಾವಣಾ ಪ್ರಣಾಳಿಕೆಗಳು ಹೇಗೆ ಇರಬೇಕು ಎನ್ನುವುದರ ಬಗ್ಗೆ ಚರ್ಚೆ ನಡೆಸಿದ್ದೇವೆ. ಆದರೆ ಇದನ್ನೇ ಬೇರೆ ರೀತಿ ಬಿಂಬಿಸಲಾಗಿದೆ. ಗೃಹಲಕ್ಷ್ಮೀ ಭಾಗ್ಯಕ್ಕೆ ಕೆಲವರು ಎಲ್ಲಿಂದ ಹಣ ತರುತ್ತೀರ ಎಂದರು. ಅದಕ್ಕೆಲ್ಲಾ ನಾವು ಉತ್ತರ ಕೊಟ್ಟಿದ್ದೇವೆ. ನಾವು ಜನರಿಗೆ ಪ್ರಣಾಳಿಕೆ ಕೊಟ್ಟಮೇಲೆ ಅದನ್ನು ಜಾರಿಗೆ ತರಬೇಕು ಎಂದ ಅವರು ಇದರ ಬಗ್ಗೆ ಚರ್ಚೆ ಮಾಡಿದ್ದಾಗಿ ತಿಳಿಸಿದರು.

Latest Videos

undefined

Assembly election: ಕಲಾಪ ಬಳಿಕ 4 ದಿಕ್ಕಿನಿಂದ ಬಿಜೆಪಿ ಜನಸಂಕಲ್ಪ ಯಾತ್ರೆ!

1ನೇ ತರಗತಿಯಿಂದ 5 ನೇ ತರಗತಿಯವರೆಗೆ ಯಾರು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಾರೆ. ಅಂತಹ ಎಸ್‌ಸಿ, ಎಸ್‌ಟಿ ಸಮುದಾಯದ ಕುಟುಂಬಕ್ಕೆ ಹಣ ಬಿಡುಗಡೆ ಮಾಡುತ್ತೇವೆಂದು ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ ಎಂದ ಅವರು ಇದಕ್ಕೆ ವರ್ಷಕ್ಕೆ 3600 ಕೋಟಿ ಹಣ ಬೇಕಾಗುತ್ತದೆ ಎಂದರು.

ಹೊಸ ಮುಖಗಳಿಗೆ ಮೊದಲ ಆದ್ಯತೆ:

ಜೆಡಿಎಸ್‌ ಅವರು 224 ಕ್ಷೇತ್ರಕ್ಕೆ ಅಭ್ಯರ್ಥಿ ಹಾಕುತ್ತಾರೆ ಅನ್ನುವುದು ನನಗೆ ಗೊತ್ತಿಲ್ಲ. ಆದರೆ ಬಿಜೆಪಿ ಅವರು ಕೆಲ ಅತೃಪ್ತರಿಗೆ ಟಿಕೆಚ್‌ ಕೊಟ್ಟರೆ ಕೊಡಬಹುದು. ನಮ್ಮಲ್ಲಿ ಜಾಸ್ತಿ ಹೊಸ ಮುಖಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದ ಪರಮೇಶ್ವರ್‌ ಈಗಾಗಲೇ 110 ಮಹಿಳೆಯರು ಅರ್ಜಿ ಹಾಕಿದ್ದಾರೆ. ಕೆಲ ಮಾನದಂಡಗಳ ಮೇಲೆ ಟಿಕೆಚ್‌ ಹಂಚಿಕೆಯಾಗುತ್ತದೆ ಎಂದರು.

ಎಚ್‌ಎಎಲ್‌ನಲ್ಲಿ ನಮ್ಮ ಜಿಲ್ಲೆಯವರಿಗೆ ಉದ್ಯೋಗ ನೀಡಿ:

ಗುಬ್ಬಿ ಎಚ್‌ಎಎಲ್‌ ಉತ್ಪಾದನಾ ಘಟಕ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್‌ ಅವರು ಅವರೇ ¶ೌಂಡೇಷನ್‌ ಹಾಕಿದ್ದರು. ಇನ್ನು ಎರಡು ವರ್ಷಗಳಲ್ಲಿ ಇಲ್ಲಿಂದ ಹೆಲಿಕಾಪ್ಟರ್‌ ಹಾರಾಡುತ್ತೆ ಅಂದಿದ್ದರು. ಕಾರಣಾಂತರಗಳಿಂದ 7 ವರ್ಷಗಳ ಬಳಿಕ ಉದ್ಘಾಟನೆ ಆಗುತ್ತಿದೆ. ಅದನ್ನು ಅವರನ್ನೆ ಕೇಳಬೇಕು. ಎಚ್‌ಎಎಲ… ಉತ್ಪಾದನಾ ಘಟಕಕ್ಕೆ ಒಟ್ಟು 6500 ಜನಕ್ಕೆ ಉದ್ಯೋಗ ಕೊಡುವುದಾಗಿ ಹೇಳಿದ್ದಾರೆ. ಆದಷ್ಟುತುಮಕೂರು ಜಿಲ್ಲೆಯ ಜನರಿಗೆ ಹೆಚ್ಚಿನ ಉದ್ಯೋಗ ಕೊಡಬೇಕು. ನಮ್ಮಲ್ಲಿ ಐಟಿಐ, ಎಂಜಿನಿಯರ್‌ ಸೇರಿದಂತೆ ಅನೇಕ ವಿದ್ಯಾಭ್ಯಾಸ ಮಾಡಿದವರು ಇದ್ದಾರೆ. ಅವರನ್ನು ಆಯ್ಕೆ ಮಾಡಿ ತರಬೇತಿ ಕೊಟ್ಟು ಕೆಲಸ ಕೊಡಿ ಎಂದರು.

ಪ್ರಜಾಧ್ವನಿ ಯಾತ್ರೆಗೆ ಒಳ್ಳೆ ರೆಸ್ಪಾನ್ಸ್‌: ಪರಂ

ಪ್ರಜಾಧ್ವನಿ ಯಾತ್ರೆಯಲ್ಲಿ ಒಳ್ಳೆಯ ರೆಸ್ಪಾನ್ಸ್‌ ಸಿಕ್ತಿದೆ. ಇಡೀ ರಾಜ್ಯ ಕಾಂಗ್ರೆಸ್‌ ಪರವಾಗಿದ್ದು ಜನ ಕಾಂಗ್ರೆಸ್‌ ಕೈ ಹಿಡಿಯುತ್ತಾರೆ. ತುಮಕೂರು ನಗರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಉದ್ಯಮಿ ಅಟಿಕಾ ಬಾಬು ಸ್ಪರ್ಧೆ ಮಾಡುವ ಬಗ್ಗೆ ನನಗೆ ಗೊತ್ತಿಲ್ಲ. ನಾವು ಯಾರ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಮಾತಾನಾಡಬಾರದು. ಕೆಲ ದಿನಗಳ ಹಿಂದೆ ನನ್ನ ಮನೆಗೆ ಅಟಿಕಾ ಬಾಬು ಬಂದಿದ್ದರು. ನಾನು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುವುದಾಗಿ ತಿಳಿಸಿದರು. ಅದಕ್ಕೆ ನಮ್ಮ ಹೈಕಮಾಂಡ್‌ ತೀರ್ಮಾನ ಮಾಡುವುದಾಗಿ ತಿಳಿಸಿದೆ. ಎಲ್ಲರನ್ನು ಒಟ್ಟಿಗೆ ತಗೊಂಡು ಹೋಗುವ ಪಾರ್ಟಿ ಕಾಂಗ್ರೆಸ್‌. ಪಕ್ಷದಲ್ಲಿ ದುಡಿದವರಿಗೆ ಮಾನ್ಯತೆ ಇದೆ. ಕೆಲವರು ಪ್ರೀತಿ ವಿಶ್ವಾಸ ಗೆದ್ದಿರುತ್ತಾರೆ. ಅಂತವರು ನಮ್ಮ ಪಕ್ಷಕ್ಕೆ ಬರೋದೆ ಒಂದು ತರ ನಮಗೆ ಹೆಮ್ಮೆ ಎಂದು ಶಾಸಕ ಪರಮೇಶ್ವರ್‌ ಹೇಳಿದರು.

ಮತ್ತೆ ಕರ್ನಾಟಕದಲ್ಲಿ ನಾಳೆ ಮೋದಿ ಹವಾ..!

ನನ್ನನ್ನು ಯಾರು ಸೈಡ್‌ ಲೈನ್‌ ಮಾಡಿಲ್ಲ:

ಎಲ್ಲಾ 224 ಕ್ಷೇತ್ರದಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳಿದ್ದಾರೆ. ಅದರಲ್ಲಿ ಯಾರು ಸ್ಪರ್ಧಿಸುತ್ತಾರೆ ಅಂತಾ ತೀರ್ಮಾನ ಆಗಬೇಕು. ಈ ಸಂಬಂಧ ಮುಖಂಡರ ಸಭೆ ನಡೆದಿದ್ದು, ಕೆಲ ತೀರ್ಮಾನ ಮಾಡಲಾಗಿದೆ. ಕಾಂಗ್ರೆಸ್‌ ಪಕ್ಷದಲ್ಲಿ ನನ್ನನ್ನು ಯಾರು ಸೈಡ್‌ ಲೈನ್‌ ಮಾಡಿಲ್ಲ. ಹಾಗೆ ಮಾಡಿದರೆ ಪ್ರಣಾಳಿಕೆ ಸಮಿತಿ ಅಧ್ಯಕ್ಷರನ್ನಾಗಿ ಮಾಡುತ್ತಿದ್ದರಾ ಎಂದು ಪರಂ ಹೇಳಿದರು. ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಮ್ಮ ಪಕ್ಷದಿಂದ ಈಗಾಗಲೇ ಒಂದು ಸ್ಯಾಂಪಲ್‌ ಸಮೀಕ್ಷೆ ನಡೆಸಿದ್ದು, ಆ ಸಮೀಕ್ಷೆಯಲ್ಲಿ ಬಂದ ಫಲಿತಾಂಶದಿಂದ ಕೆಲ ಬದಲಾವಣೆ ಮಾಡಲು ತೀರ್ಮಾನ ಮಾಡಲಾಗಿದೆ. ನಾವು ಈ ಬಾರಿ ಗೆಲ್ಲಲೇ ಬೇಕು ಎಂದರು.

click me!