ಖಾತೆಗಾಗಿ ಅಜಿತ್‌- ಶಿಂಧೆ ಬಣ ಜಟಾಪಟಿ : ಹಣಕಾಸು, ಗೃಹ ಖಾತೆಗೆ ಅಜಿತ್‌ ಬೇಡಿಕೆ

By Kannadaprabha NewsFirst Published Jul 12, 2023, 9:12 AM IST
Highlights

ಎನ್‌ಸಿಪಿಯಿಂದ ಬಂಡೆದ್ದು, ಬಿಜೆಪಿ-ಶಿವಸೇನೆ ಸರ್ಕಾರ ಸೇರಿರುವ ಅಜಿತ್‌ ಪವಾರ್‌ ಬಣ, ಇದೀಗ ಮಹತ್ವದ ಖಾತೆಗಳಿಗೆ ಪಟ್ಟು ಹಿಡಿದಿದೆ. ಅಜಿತ್‌ ತಮಗೆ ಹಣಕಾಸು, ನಗರಾಭಿವೃದ್ಧಿ, ಗೃಹ ಇಲಾಖೆ ನೀಡಬೇಕು. ತಮ್ಮ ಬೆಂಬಲಿಗರಿಗೆ ಪ್ರವಾಸೋದ್ಯಮ, ನೀರಾವರಿ, ಸಾಮಾಜಿಕ ನ್ಯಾಯ, ಗ್ರಾಮೀಣಾಭಿವೃದ್ಧಿ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆ ನೀಡುವಂತೆ ಬೇಡಿಕೆ ಇರಿಸಿದ್ದಾರೆ

 ಮುಂಬೈ: ಎನ್‌ಸಿಪಿಯಿಂದ ಬಂಡೆದ್ದು, ಬಿಜೆಪಿ- ಶಿವಸೇನೆ ಸರ್ಕಾರ ಸೇರಿರುವ ಅಜಿತ್‌ ಪವಾರ್‌ ಬಣ, ಇದೀಗ ಮಹತ್ವದ ಖಾತೆಗಳಿಗೆ ಪಟ್ಟು ಹಿಡಿದಿದೆ. ಅಜಿತ್‌ ತಮಗೆ ಹಣಕಾಸು, ನಗರಾಭಿವೃದ್ಧಿ, ಗೃಹ ಇಲಾಖೆ ನೀಡಬೇಕು. ತಮ್ಮ ಬೆಂಬಲಿಗರಿಗೆ ಪ್ರವಾಸೋದ್ಯಮ, ನೀರಾವರಿ, ಸಾಮಾಜಿಕ ನ್ಯಾಯ, ಗ್ರಾಮೀಣಾಭಿವೃದ್ಧಿ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆ ನೀಡುವಂತೆ ಬೇಡಿಕೆ ಇರಿಸಿದ್ದಾರೆ. ಆದರೆ ಮುಖ್ಯಮಂತ್ರಿ ಏಕನಾಥ ಶಿಂಧೆ ಅಜಿತ್‌ ಅವರಿಗೆ ಕಂದಾಯ, ಇಂಧನ ಇಲಾಖೆ ನೀಡುವ ಬಗ್ಗೆ ಮಾತ್ರ ಒಲವು ಹೊಂದಿದ್ದಾರೆ. ಮತ್ತೊಂದೆಡೆ ಪ್ರಸ್ತುತ ಗೃಹ ಖಾತೆ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರ ಬಳಿ ಇದ್ದು, ಅದನ್ನು ಹಸ್ತಾಂತರಿಸಲು ತಮ್ಮ ಅಸಮ್ಮತಿ ಇದೆ ಎಂದು ಮೂಲಗಳು ತಿಳಿಸಿದೆ

ಎನ್‌ಸಿಪಿ ಶಾಸಕರು ಸರ್ಕಾರ ಸೇರಿ 9 ದಿನಗಳಾದರೂ ಖಾತೆ ಹಂಚಿಕೆ ಆಗಿಲ್ಲ. ಈ ಹಿನ್ನೆಲೆಯಲ್ಲಿ ಸೋಮವಾರ ಮೂರು ಪಕ್ಷಗಳ ನಾಯಕರ ನಡುವೆ ತಡರಾತ್ರಿ ಸಭೆ ನಡೆದಿದ್ದು, ಅಲ್ಲಿ ಖಾತೆ ಹಂಚಿಕೆ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಜೊತೆಗೆ ಒಂದೆರಡು ದಿನಗಳಲ್ಲಿ ಖಾತೆ ಹಂಚಿಕೆ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ನಾನು ಟೈರ್ಡೂ ಆಗಿಲ್ಲ, ರಿಟೈರ್ಡೂ ಆಗಿಲ್ಲ: ಅಜಿತ್‌ ಪವಾರ್‌ಗೆ ಚಿಕ್ಕಪ್ಪನ ಟಾಂಗ್‌

ಬಿಜೆಪಿಗರು 75ಕ್ಕೆ ನಿವೃತ್ತಿ ಆಗ್ತಾರೆ, ನಿಮ್ದು 83 ಆಯ್ತು, ಇನಿಂಗ್ಸ್‌ ಮುಗಿಸಿ: ಶರದ್‌ ಪವಾರ್‌ಗೆ ಅಜಿತ್‌ ಟಾಂಗ್‌

click me!