Congress Election ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವ ಏಕೈಕ ಪಕ್ಷ ಕಾಂಗ್ರೆಸ್‌: ಅಜಯ್‌ ಮಾಕೆನ್‌

Published : Sep 02, 2022, 03:27 PM IST
Congress Election ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವ ಏಕೈಕ ಪಕ್ಷ ಕಾಂಗ್ರೆಸ್‌: ಅಜಯ್‌ ಮಾಕೆನ್‌

ಸಾರಾಂಶ

ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡುವ ಚುನಾವಣೆಯು ಪಕ್ಷದ ನಿಯಮಗಳ ಪ್ರಕಾರ ನಡೆಯುತ್ತದೆ ಎಂದು ಹೇಳಿದ ಅಜಯ್ ಮಾಕನ್, ಯಾವುದೇ ರಾಜಕೀಯ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವುದಿಲ್ಲ. ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ ಅದಕ್ಕಾಗಿ ತೃಪ್ತಿ ಪಡಬೇಕು ಎಂದು ಹೇಳಿದ್ದಾರೆ.  

ಜೈಪುರ (ಸೆ.2): ಪಕ್ಷದ ಮುಖ್ಯಸ್ಥರನ್ನು ಆಯ್ಕೆ ಮಾಡುವ ಚುನಾವಣಾ ಪ್ರಕ್ರಿಯೆಯ ಕುರಿತು ಕೆಲವು ಕಾಂಗ್ರೆಸ್ ನಾಯಕರು ಆಕ್ಷೇಪಣೆಗಳನ್ನು ಎತ್ತಿರುವ ನಡುವೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್ ಅವರು ಕಾಂಗ್ರೆಸ್ ಹೊರತುಪಡಿಸಿ ಯಾವುದೇ ಪಕ್ಷವು ಅದರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವುದಿಲ್ಲ ಎಂದು ಗುರುವಾರ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡುವ ಚುನಾವಣೆಯು ಪಕ್ಷದ ನಿಯಮಗಳ ಪ್ರಕಾರ ನಡೆಯುತ್ತದೆ ಎಂದು ಹೇಳಿದ ಮಾಕೆನ್, ಪ್ರಸ್ತುತ ದೇಶದಲ್ಲಿ ಯಾವ ಪಕ್ಷಗಳು ಕೂಡ ತನ್ನ ಅಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡುವುದಿಲ್ಲ. ಕಾಂಗ್ರೆಸ್‌ ಪಕ್ಷ ಇದನ್ನು ಮಾಡುತ್ತದೆ ಹಾಗಾಗಿ ಎಲ್ಲರೂ ಇದರಲ್ಲಿ ತೃಪ್ತಿ ಕಾಣಬೇಕು ಎಂದಿದ್ದಾರೆ. ಕಾಂಗ್ರೆಸ್‌ನ ರಾಜಸ್ಥಾನ ಉಸ್ತುವಾರಿಯಾಗಿರುವ ಮಾಕನ್ ಅವರು ಸೆಪ್ಟೆಂಬರ್ 4 ರಂದು ದೆಹಲಿಯಲ್ಲಿ ಪಕ್ಷದ ಉದ್ದೇಶಿತ 'ಹಲ್ಲಾ ಬೋಲ್' ಸಮಾವೇಶ್ ಸಿದ್ಧತೆಗಳನ್ನು ಪರಿಶೀಲಿಸಲು ರಾಜ್ಯಕ್ಕೆ ಬಂದಿದ್ದರು. "ಯಾವುದೇ ರಾಜಕೀಯ ಪಕ್ಷದಲ್ಲಿ ಚುನಾವಣೆ ಇಲ್ಲದಿರುವುದರಿಂದ ಎಲ್ಲರೂ ತೃಪ್ತರಾಗಬೇಕು. ಬಿಜೆಪಿಯಲ್ಲಿ ಜೆಪಿ ನಡ್ಡಾ ಆಯ್ಕೆಯಾದ ಬಗ್ಗೆ ಯಾರಾದರೂ ಕೇಳಿದ್ದೀರಾ, ಅಮಿತ್ ಶಾ ಆಯ್ಕೆ ಬಗ್ಗೆ ಯಾರಾದರೂ ಕೇಳಿದ್ದೀರಾ?" ಅವರು ಹೇಳಿದರು. ನಡ್ಡಾ ಪ್ರಸ್ತುತ ಬಿಜೆಪಿಯ ಅಧ್ಯಕ್ಷರಾಗಿದ್ದರೆ, ಅಮಿತ್‌ ಶಾ ಅದಕ್ಕೂ ಹಿಂದಿನ ಅಧ್ಯಕ್ಷರಾಗಿದ್ದರು.

ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡುವ ಹೈಕಮಾಂಡ್‌ನ ಕಸರತ್ತಿನ ಬಗ್ಗೆ ಮಾತನಾಡಿದ ಅಜಯ್‌ ಮಾಕನ್‌ (Ajay Maken), ಪಕ್ಷದ ಸಂಪ್ರದಾಯ ಮತ್ತು ನಿಯಮಗಳ ಪ್ರಕಾರ ಚುನಾವಣೆ ನಡೆಯುತ್ತಿದೆ ಎಂದು ಹೇಳಿದರು.ಅಕ್ಟೋಬರ್ 17 ರಂದು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ(Congress President  Election)  ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಸಂಸದ ಮನೀಶ್ ತಿವಾರಿ(Manish Tiwari) ಅವರು ಪಕ್ಷದ ಅಧ್ಯಕ್ಷರ ಚುನಾವಣೆಗೆ ಮತದಾರರ ಹೆಸರನ್ನು ಬಹಿರಂಗಗೊಳಿಸದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಅದನ್ನು ಎಐಸಿಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಹೇಳಿದ್ದರು. ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸಲು ಬಯಸುವ ಯಾರಾದರೂ ಪಿಸಿಸಿ ಕಚೇರಿಗೆ ಮತದಾರರ ಪಟ್ಟಿಯನ್ನು ಪಡೆಯಲು ಏಕೆ ಹೋಗಬೇಕು ಎಂದು ಅವರು ಸರಣಿ ಟ್ವೀಟ್‌ಗಳಲ್ಲಿ ಪ್ರಶ್ನೆ ಮಾಡಿದ್ದರು. ಏಕೆಂದರೆ ಇದು ಕ್ಲಬ್ ಚುನಾವಣೆಯಲ್ಲಿಯೂ ಆಗುವುದಿಲ್ಲ ಎಂದಿದ್ದರು.

"ಮಧುಸೂದನ್ ಮಿಸ್ತ್ರಿ ಜೀ ಬಹಳ ಗೌರವದಿಂದ ಸಾರ್ವಜನಿಕವಾಗಿ ಲಭ್ಯವಿರುವ ಮತದಾರರ ಪಟ್ಟಿಯಿಲ್ಲದೆ ನ್ಯಾಯಸಮ್ಮತ ಮತ್ತು ಮುಕ್ತ ಚುನಾವಣೆ ಹೇಗೆ ನಡೆಯುತ್ತದೆ? ನ್ಯಾಯಯುತ ಮತ್ತು ಮುಕ್ತ ಪ್ರಕ್ರಿಯೆಯ ಮೂಲತತ್ವವೆಂದರೆ ಮತದಾರರ ಹೆಸರು ಮತ್ತು ವಿಳಾಸಗಳನ್ನು ಕಾಂಗ್ರೆಸ್ ವೆಬ್‌ಸೈಟ್‌ನಲ್ಲಿ (Congress Website) ಪಾರದರ್ಶಕವಾಗಿ ಪ್ರಕಟಿಸಬೇಕು" ಎಂದು ಮನೀಷ್‌ ತಿವಾರಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು.

ಭಾರತ್‌ ಜೋಡೋ ಯಾತ್ರೆಗೆ ಎಲ್ಲರಿಗೂ ಅವಕಾಶ: ಡಿಕೆಶಿ

2020ರ ಆಗಸ್ಟ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರಿಗೆ ಸಾಂಸ್ಥಿಕ ಪುನರ್‌ಪರಿಶೀಲನೆಗಾಗಿ ಪತ್ರ ಬರೆದಿರುವ ಜಿ23 ನಾಯಕರಲ್ಲಿ ಒಬ್ಬರಾಗಿರುವ ತಿವಾರಿ, ಸಿಡಬ್ಲ್ಯುಸಿ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯ ವೇಳಾಪಟ್ಟಿಯನ್ನು 28 ಪ್ರದೇಶ ಕಾಂಗ್ರೆಸ್ ಸಮಿತಿಗಳು (ಪಿಸಿಸಿ) ಮತ್ತು ಎಂಟು ಪ್ರಾದೇಶಿಕ ಕಾಂಗ್ರೆಸ್ ಸಮಿತಿಗಳಿಗೆ (ಟಿಸಿಸಿ) ಪ್ರಕಟಿಸಿದೆ ಎಂದು ಹೇಳಿದರು. ಇದಕ್ಕೂ ಮುನ್ನ ಮತ್ತೊಬ್ಬ ಜಿ-23 ನಾಯಕ ಆನಂದ್ ಶರ್ಮಾ ಅವರು ಚುನಾವಣಾ ಪ್ರಕ್ರಿಯೆಗೆ ಆಕ್ಷೇಪಣೆಗಳನ್ನು ಎತ್ತಿದರು ಮತ್ತು ಪಕ್ಷದ ಸಂವಿಧಾನದ ಪ್ರಕಾರ ಚುನಾವಣೆಯ ಪವಿತ್ರತೆಯನ್ನು ಅನುಸರಿಸಲಾಗಿದೆಯೇ ಎಂದು ಕೇಳಿದರು. ಜಿ-23 ನಾಯಕರೂ ಆಗಿರುವ ಶಶಿ ತರೂರ್ ಕೂಡ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಭಾರತ ಏಕತಾ ಯಾತ್ರೆ ವೇಳೆ ಕಂಟೈನರ್‌ ಕ್ಯಾಬಿನ್‌ನಲ್ಲಿ ಮಲಗ್ತಾರೆ Rahul Gandhi

ಚುನಾವಣೆಗಳಲ್ಲಿ ಸಾಲು ಸಾಲು ಸೋಲುಗಳಿಂದ ಸಂಕಷ್ಟ ಎದುರಿಸುತ್ತಿರುವ ಕಾಂಗ್ರೆಸ್‌ ಪಕ್ಷ (Congress Party) ಇತ್ತೀಚೆಗೆ ಮತ್ತೊಂದು ದೊಡ್ಡ ಆಘಾತ ಎದುರಿಸಿತ್ತು. ಹಿರಿಯ ನಾಯಕ ಗುಲಾಬ್‌ ನಬಿ ಆಜಾದ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಅದರ ಬೆನ್ನಲ್ಲಿಯೇ ಜಮ್ಮು ಕಾಶ್ಮೀರದಲ್ಲಿ ಪ್ರಮುಖ ಕಾಂಗ್ರೆಸ್‌ ನಾಯಕರು ರಾಜೀನಾಮೆ ಸಲ್ಲಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ