ರಾಜ್ಯದಲ್ಲಿ 2023ರ ವಿಧಾನಸಭೆ ಚುನಾವಣೆಗೆ ಇನ್ನೇನು ನಾಲ್ಕೈದು ತಿಂಗಳು ಮಾತ್ರ ಬಾಕಿ ಇದ್ದು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳು ಚುನಾವಣೆಗೆ ಸನ್ನದ್ದವಾಗಿರುವಂತೆ ಇತ್ತ ಎಐಎಂಐಎಮ್ ಪಕ್ಷವು ಸಹ ಈ ಬಾರಿ ರಾಜ್ಯಾದ್ಯಂತ ಸ್ಪರ್ಧೆ ಮಾಡಲು ನಿರ್ಧರಿಸಿದೆ.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬಾಗಲಕೋಟೆ
ಬಾಗಲಕೋಟೆ(ನ.09): ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಇನ್ನೇನು ನಾಲ್ಕೈದು ತಿಂಗಳು ಬಾಕಿ ಇರುವಾಗಲೇ ರಾಜಕೀಯ ಆಟ ಮೇಲಾಟಗಳು ಶುರುವಾಗಿರೋ ಬೆನ್ನಲ್ಲೆ ಎಐಎಂಐಎಂ ಪಕ್ಷವು ಸಹ ಈ ಬಾರಿ ಸಂಪೂರ್ಣ ಕಣಕ್ಕಿಳಿಯಲು ಸಜ್ಜಾಗಿದ್ದು, ಇವುಗಳ ಮಧ್ಯೆ ಎಐಎಂಐಎಂ ಪಕ್ಷದ ಸ್ಪರ್ಧೆಯಿಂದ ಒಂದೆಡೆ ಕಾಂಗ್ರೆಸ್‌ಗೆ ನಷ್ಟ, ಬಿಜೆಪಿಗೆ ಲಾಭವೆಂದೇ ಚರ್ಚೆಯಾಗುತ್ತಿದೆ. ಆದ್ರೆ ಎಐಎಂಐಎಂ ಪಕ್ಷದ ಲೆಕ್ಕಾಚಾರವೇ ಬೇರೆ. ಈ ಕುರಿತ ವರದಿ ಇಲ್ಲಿದೆ.
undefined
ಒಂದೆಡೆ ನಿರಂತರ ಸಭೆಗಳ ಮೂಲಕ ಪಕ್ಷ ಸಂಘಟನೆಗೆ ಮುಂದಾಗಿರೋ ಎಐಎಂಐಎಮ್ ಪಕ್ಷದ ಮುಖಂಡರು, ಇತ್ತ ರಾಜ್ಯದಲ್ಲಿ ಸ್ಪರ್ಧೆಗೆ ಸಿದ್ದವಾಗಿರೋ ಬಗ್ಗೆ ಮಾಹಿತಿ ನೀಡಿದ ಎಐಎಂಐಎಮ್ ಪಕ್ಷದ ರಾಜ್ಯಾಧ್ಯಕ್ಷ ಉಸ್ಮಾನ್ ಗಣಿ, ಅತ್ತ ಪಕ್ಷದ ಪ್ರವರ್ಧನಮಾನದ ಬಗ್ಗೆ ಚರ್ಚೆ ಮಾಡ್ತಿರೋ ಕಾರ್ಯಕರ್ತರು, ಅಂದಹಾಗೆ ಇಂತಹವೊಂದು ರಾಜಕೀಯ ಚಟುವಟಿಕೆಗಳು ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆಯಲ್ಲಿ.
ಸಿದ್ದರಾಮಯ್ಯ ಕ್ಷೇತ್ರಕ್ಕೆ ಡಿಕೆಶಿ ಭೇಟಿ: ಏನಿದು 'ನಿಗೂಢ' ರಹಸ್ಯ?
ಹೌದು, ರಾಜ್ಯದಲ್ಲಿ 2023ರ ವಿಧಾನಸಭೆ ಚುನಾವಣೆಗೆ ಇನ್ನೇನು ನಾಲ್ಕೈದು ತಿಂಗಳು ಮಾತ್ರ ಬಾಕಿ ಇದ್ದು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳು ಚುನಾವಣೆಗೆ ಸನ್ನದ್ದವಾಗಿರುವಂತೆ ಇತ್ತ ಎಐಎಂಐಎಮ್ ಪಕ್ಷವು ಸಹ ಈ ಬಾರಿ ರಾಜ್ಯಾದ್ಯಂತ ಸ್ಪರ್ಧೆ ಮಾಡಲು ನಿರ್ಧರಿಸಿದೆ. ಇದಕ್ಕೆ ಪೂರಕವೆಂಬಂತೆ ಈಗಾಗಲೇ ಸಭೆ ಮೇಲೆ ಸಭೆ ನಡೆಸುತ್ತಿರೋ ಎಐಎಂಐಎಮ್ ಪಕ್ಷದ ರಾಜ್ಯಾದ್ಯಕ್ಷ ಉಸ್ಮಾನಗಣಿ ಹುಮ್ನಾಬಾದ್ ಪಕ್ಷ ಸಂಘಟನೆ ಜೊತೆಗೆ 2023ರ ಚುನಾವಣೆಯಲ್ಲಿ 100 ಮತಕ್ಷೇತ್ರಗಳಲ್ಲಿ ಎಐಎಂಐಎಮ್ ಪಕ್ಷದ ಅಭ್ಯರ್ಥಿಗಳನ್ನ ಸ್ಪರ್ಧೆಗಿಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದು, ಈ ಮಧ್ಯೆ ಮೀಸಲಾತಿ ಇರುವ 52 ಮತಕ್ಷೇತ್ರಗಳಲ್ಲಿ ಈ ಬಾರಿ ಎಐಎಂಐಎಮ್ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದು, ಸಂವಿಧಾನ ರಕ್ಷಣೆ ಜೊತೆಗೆ ಜನರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಒಳ್ಳೆಯ ಅಭ್ಯರ್ಥಿಗಳನ್ನ ನಿಲ್ಲಿಸಿ ಈ ಬಾರಿ ಹೆಚ್ಚು ಅಭ್ಯರ್ಥಿಗಳನ್ನ ಗೆಲ್ಲಿಸುವ ಗುರಿ ಹೊಂದಿದ್ದೇವೆ ಎಂದಿದ್ದಾರೆ.
ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧೆ ಮಾಡುವುದು ಖಚಿತ: ಪ್ರಮೋದ್ ಮುತಾಲಿಕ್
ಇನ್ನು ಈಗಿನ ರಾಜ್ಯ ರಾಜಕಾರಣದ ಲೆಕ್ಕಾಚಾರದ ಪ್ರಕಾರ ಒಂದೊಮ್ಮೆ ಎಐಎಂಐಎಮ್ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಲ್ಲಿ ಮುಸ್ಲಿಂ ಸಮುದಾಯದ ಮತಗಳು ಒಡೆದು ಕಾಂಗ್ರೆಸ್ ಪಕ್ಷಕ್ಕೆ ನಷ್ಟ ಉಂಟಾದ್ರೂ ಅಚ್ಚರಿ ಇಲ್ಲ, ಈ ಮಧ್ಯೆ ಇತ್ತ ಎಐಎಂಐಎಮ್ ಪಕ್ಷದ ಸ್ಪರ್ಧೆಯಿಂದ ಬಿಜೆಪಿಗೆ ಮತ್ತಷ್ಟು ಲಾಭ ತರಲಿದೆ ಎಂಬ ಲೆಕ್ಕಾಚಾರಗಳು ಕೇಳಿ ಬರುತ್ತಿದ್ದು, ಆದ್ರೆ ಇದ್ಯಾವುದನ್ನ ಲೆಕ್ಕಿಸದ ಎಐಎಂಐಎಮ್ ಪಕ್ಷದ ರಾಜ್ಯ ಮುಖಂಡರು ಕೆಲವರು ಆರೋಪಿಸುವಂತೆ ನಾವ್ಯಾರು ಬಿ ಟೀಮ್ ಅಲ್ಲ, ಬದಲಾಗಿ ಎ ಟೀಮ್ ಆಗಿದ್ದು, ನಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವುದು ಒಂದೇ ನಮ್ಮ ಗುರಿ ಅಂತಿದ್ದಾರೆ. ಇನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಈಗಾಗಲೇ ಜಮಖಂಡಿ ಮತ್ತು ತೇರದಾಳ ಮತಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನ ನಿಲ್ಲಿಸುವುದಕ್ಕೆ ಮುಂದಾಗಿದ್ದು, ಇನ್ನು ಕೆಲವಡೆ ಸರ್ವೆ ಮಾಡಿ ಒಟ್ಟಿನಲ್ಲಿ ರಾಜ್ಯದ 100 ಕಡೆಗೆ ಈ ಬಾರಿ ಎಐಎಂಐಎಮ್ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆಂದು ಪಕ್ಷದ ಮುಖಂಡ, ಎಐಎಂಐಎಮ್ ಪಕ್ಷದ ಬಾಗಲಕೋಟೆ ಜಿಲ್ಲಾಧ್ಯಕ್ಷ ಅಬ್ದುಲ್ಸಾಬ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ರಾಜಕೀಯ ಪಕ್ಷಗಳು ಮುಂಬರುವ ವಿಧಾನಸಭಾ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳುತ್ತಿರುವುದರ ಮಧ್ಯೆಯೇ ಎಐಎಂಐಎಮ್ ಪಕ್ಷವು ಸಹ ತನ್ನ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಮುಂದಾಗಿದ್ದು, ಇದರ ಎಫೆಕ್ಟ್ ಇನ್ನುಳಿದ ರಾಜಕೀಯ ಪಕ್ಷಗಳಿಗೆ ಲಾಭ ಮತ್ತು ನಷ್ಟ ತರಲಿರುವುದಂತೂ ಸುಳ್ಳಲ್ಲ.