ಸಚಿವ ಬಿ.ಸಿ‌. ಪಾಟೀಲ್‌ ಕಿರುಕುಳಕ್ಕೆ ಬಿಜೆಪಿ ಬಿಡುವ ನಿರ್ಧಾರ; ರಾಜೀನಾಮೆಗೆ ಮಾಜಿ ಶಾಸಕ ಯು.ಬಿ. ಬಣಕಾರ ಸ್ಪಷ್ಟನೆ

By BK AshwinFirst Published Nov 9, 2022, 7:58 PM IST
Highlights

ಬೆಂಗಳೂರಿನಲ್ಲಿ ತಮ್ಮ ರಾಜೀನಾಮೆ ಕುರಿತು ಯು.ಬಿ. ಬಣಕಾರ ಅವರು ಸ್ಪಷ್ಟನೆ ನೀಡಿದ್ದು, ಹಿರೇಕೆರೂರು ಕ್ಷೇತ್ರದಲ್ಲಿ ನಾವು ಇಬ್ಬರು ನಾಯಕರು ಇದ್ದೆವು. ಆದರೆ, ಇಬ್ಬರೂ ಒಟ್ಟಿಗೆ ಹೋಗಲು ಆಗಲಿಲ್ಲ ಎಂದು ಮಾಜಿ ಶಾಸಕ ಹೇಳಿದ್ದಾರೆ. 

ಹಿರೇಕೆರೂರು ಮಾಜಿ ಶಾಸಕ ಯು.ಬಿ. ಬಣಕಾರ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಕುರಿತು ಬೆಂಗಳೂರಲ್ಲಿ ಯು.ಬಿ. ಬಣಕಾರ ಅವರು ಸ್ಪಷ್ಟನೆಯನ್ನೂ ನೀಡಿದ್ದಾರೆ. ಯಡಿಯೂರಪ್ಪನವರು ನಮ್ಮಿಬ್ಬರು ನಾಯಕರನ್ನು ಪಕ್ಷದ ಎರಡು ಕಣ್ಣುಗಳು ಅಂದ್ರು. ಆದರೆ, ನಾವಿಬ್ರೂ ಒಟ್ಟಿಗೆ ಹೋಗಲು ಆಗಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಬಿಜೆಪಿ ಸಂಸದೀಯ ಮಂಡಳಿ ನಾಯಕ ಯಡಿಯೂರಪ್ಪನವರ ಮೇಲೆ ನನಗೆ ಬೇಸರವಿಲ್ಲ. ಅವರು ಮುಖ್ಯಮಂತ್ರಿ ಆಗಬೇಕಿತ್ತು. ಅದಕ್ಕೆ ನಾನು ಅಂದು ಏನೂ ಹೇಳಲಿಲ್ಲ ಎಂದೂ ಯು.ಬಿ. ಬಣಕಾರ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ತಮ್ಮ ರಾಜೀನಾಮೆ ಕುರಿತು ಯು.ಬಿ. ಬಣಕಾರ ಅವರು ಸ್ಪಷ್ಟನೆ ನೀಡಿದ್ದು, ಹಿರೇಕೆರೂರು ಕ್ಷೇತ್ರದಲ್ಲಿ ನಾವು ಇಬ್ಬರು ನಾಯಕರು ಇದ್ದೆವು. ಆದರೆ, ಇಬ್ಬರೂ ಒಟ್ಟಿಗೆ ಹೋಗಲು ಆಗಲಿಲ್ಲ ಎಂದು ಮಾಜಿ ಶಾಸಕ ಹೇಳಿದ್ದಾರೆ. 

ಇದನ್ನು ಓದಿ: ಬಿಜೆಪಿಗೆ ಹಿರೇಕೆರೂರು ಮಾಜಿ ಶಾಸಕ ಯು.ಬಿ.ಬಣಕಾರ ಗುಡ್‌ಬೈ : ಕಾಂಗ್ರೆಸ್‌ನತ್ತ ಹೆಜ್ಜೆ..?

ಅಲ್ಲದೆ, ಸಚಿವ ಬಿ.ಸಿ‌. ಪಾಟೀಲ್‌ರಿಂದ ನನಗೆ ಕಿರುಕುಳ ಇತ್ತು. ಹಾಗಾಗಿ ನಾನು ಪಕ್ಷ ಬಿಡುವ ನಿರ್ಧಾರ ಮಾಡಿದ್ದೇನೆ. ಆದರೆ, ನನಗೆ ಯಡಿಯೂರಪ್ಪನವರ ಮೇಲೆ ಬೇಸರ ಇಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಬೇಕಿತ್ತು. ಈ ಹಿನ್ನೆಲೆ ನಾನು ಅಂದು ಏನು ಹೇಳಿರಲಿಲ್ಲ ಎಂದೂ ಯು.ಬಿ ಬಣಕಾರ ಅವರು ಹೇಳಿದ್ದಾರೆ.

ಹಾಗೂ, ನಾನು ಕಾರ್ಯಕರ್ತರ ಜೊತೆ ಚರ್ಚೆ ಮಾಡಿದ್ದೇನೆ. ಕಾರ್ಯಕರ್ತರ ಮಾತು ಕೇಳಿಯೇ ನಿರ್ಧಾರ ಮಾಡಿದ್ದೇನೆ. ಇನ್ನು, ಕಾರ್ಯಕರ್ತರ ಮಾತಿನ ಪ್ರಕಾರ ನಾನು 6 ತಿಂಗಳ ಹಿಂದೆಯೇ ರಾಜೀನಾಮೆ ನೀಡಬೇಕಿತ್ತು ಎಂದೂ ಹಿರೇಕೆರೂರು ಮಾಜಿ ಶಾಸಕರು ಹೇಳಿದ್ದಾರೆ. 

ಇದನ್ನೂ ಓದಿ: ಹಿರೇಕೆರೂರಲ್ಲೂ ಬಿಜೆಪಿಗೆ ಬಿಸಿ: ಯಡಿಯೂರಪ್ಪ ಸಂಧಾನ ವಿಫಲ!

ಸಿಎಂ ಸದಾ ಬಹಳ ಬ್ಯುಸಿ ಇರ್ತಾರೆ - ಬಣಕಾರ
ಈ ಮಧ್ಯೆ, ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಸಹ ಬಣಕಾರ ಅವರು ಕಾಲೆಳೆದಿದ್ದಾರೆ.  ನನ್ನ ಸಮಸ್ಯೆ ಬಗ್ಗೆ ಸಿಎಂಗೂ ಗೊತ್ತಿದೆ. ಆದ್ರೆ,  ಸಿಎಂ ಸದಾ ಬಹಳ ಬ್ಯುಸಿ ಇರ್ತಾರೆ. ಅವರ ಜತೆ ಮಾತಾಡಲು ಬಂದಾಗಲೆಲ್ಲ ಬಹಳ ಬ್ಯುಸಿ ಇರ್ತಾರೆ ಎಂದು ಮುಖ್ಯಮಂತ್ರಿಯನ್ನು ಮಾಜಿ ಶಾಸಕರು ಕಾಲೆಳೆದಿದ್ದಾರೆ. 
 
ಅಲ್ಲದೆ, ಭಾರತೀಯ ಜನತಾ ಪಾರ್ಟಿಗೆ ನೀಡಿರುವ ರಾಜೀನಾಮೆಯಿಂದ ಹಿಂದೆ ಸರಿಯಲ್ಲ ಎಂದೂ ಅವರು ಸ್ಪಷ್ಟನೆ ನೀಡಿದ್ದಾರೆ. ನಾನು ನನ್ನ ನಿರ್ಧಾರದಿಂದ ಹಿಂದೆ ಸರಿಯಲ್ಲ. ಇಲ್ಲಿಯ ತನಕ ನನಗೆ ಯಾರೂ ಕರೆ ಮಾಡಿಲ್ಲ. ಇನ್ಮುಂದೆ ಕರೆ ಮಾಡಬಹುದು ಎಂದೂ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಯು.ಬಿ. ಬಣಕಾರ ಹೇಳಿದ್ದಾರೆ. 
 
ಇನ್ನು, ನವೆಂಬರ್‌ 11 ರಂದು ನಾನು ಊರಿಗೆ ಹೋಗ್ತೇನೆ. ಬಳಿಕ, ಮತ್ತೆ ಕಾರ್ಯಕರ್ತರನ್ನು ಭೇಟಿ ಮಾಡ್ತೀನಿ ಎಂದೂ ಬಿಜೆಪಿಗೆ ರಾಜೀನಾಮೆ ನೀಡಿದ ಮಾಜಿ ಶಾಸಕ ಯು. ಬಿ. ಬಣಕಾರ ಅವರು ಮಾಹಿತಿ ನೀಡಿದ್ದಾರೆ. ಬಣಕಾರ ಅವರು ಭಾರತೀಯ ಜನತಾ ಪಕ್ಷದ ಸದಸ್ಯತ್ವಕ್ಕೆ ಮಾತ್ರವಲ್ಲದೆ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕ ಸ್ಥಾನಕ್ಕೆ ಸಹ ರಾಜೀನಾಮೆ ನೀಡಿದ್ದಾರೆ. 

ಇದನ್ನು ಓದಿ: ಮೂಲ ಬಿಜೆಪಿ VS ಅನರ್ಹರ ಫೈಟ್, ಹಿರೇಕೆರೂರಿನಲ್ಲಿ ಯಾರಿಗೆ ಟಿಕೆಟ್?

ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದ ಬಿ.ಸಿ. ಪಾಟೀಲ್‌ ಅವರಿಗೆ ಉಪ ಚುನಾವಣೆಯಲ್ಲಿ ಹಿರೇಕೆರೂರು ಕ್ಷೇತ್ರದಿಂದ ಕೇಸರಿ ಪಕ್ಷದ ಟಿಕೆಟ್‌ ನೀಡಲಾಗಿತ್ತು. ಆ ವೇಳೆ ಯು.ಬಿ. ಬಣಕಾರ ಅವರು ಬಿ.ಸಿ. ಪಾಟೀಲ್‌ ಅವರಿಗೆ ಬೆಂಬಲ ನೀಡಿದ್ದರು. 

click me!