ಕಳೆದ ಮೂರುವರೆ ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಪ್ರತಿಯೊಂದು ವಿಷಯದಲ್ಲಿ ಜನರಿಗೆ ಮೋಸ ಮಾಡಿದೆ. ಆಮಿಷಗಳನ್ನು ಒಡ್ಡಿ, ಶಾಸಕರನ್ನು ಖರೀದಿಸಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಒಡೆದು ರಚನೆಯಾದ ಸರ್ಕಾರ ಇದಾಗಿದೆ ಎಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ.
ಹಿರಿಯೂರು/ಬಾಳೆಹೊನ್ನೂರು(ಏ.27): ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ಕೆಲಸ ಮಾಡಿದ್ದಕ್ಕಿಂತ ಲೂಟಿ ಹೊಡೆದದ್ದೇ ಹೆಚ್ಚು. ಗುತ್ತಿಗೆದಾರರ ಬಳಿ 40 ಪರ್ಸಂಟೇಜ್ ಕಮಿಷನ್ ಹೊಡೆದ ಸರ್ಕಾರ ಮತ್ತೆಂದೂ ಅಧಿಕಾರಕ್ಕೆ ಬರಬಾರದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಬುಧವಾರ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಿ ಮಾತನಾಡಿದ ಅವರು, ಕಳೆದ ಮೂರುವರೆ ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಪ್ರತಿಯೊಂದು ವಿಷಯದಲ್ಲಿ ಜನರಿಗೆ ಮೋಸ ಮಾಡಿದೆ. ಆಮಿಷಗಳನ್ನು ಒಡ್ಡಿ, ಶಾಸಕರನ್ನು ಖರೀದಿಸಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಒಡೆದು ರಚನೆಯಾದ ಸರ್ಕಾರ ಇದಾಗಿದೆ ಎಂದರು.
undefined
ರಕ್ತದ ಪತ್ರ ಬೇಡ, ಡಿಕೆಶಿಗೆ ರಕ್ತ ಕಮ್ಮಿ ಆಗುತ್ತೆ: ಎಚ್‌ಡಿಕೆ
ಕೆಎಂಎಫ್‌ಗೆ ಪ್ರಿಯಾಂಕಾ ಬೆಂಬಲ
ನಂದಿನಿಯಂಥ ಸಹಕಾರಿ ಸಂಸ್ಥೆ ಕಟ್ಟಿದ್ದು ಯಾರು? ಇಲ್ಲಿ ಉತ್ಪತ್ತಿಯಾದ ಹಾಲು ಶಾಲೆಗಳು ಸೇರಿ ವಿವಿಧೆಡೆಗೆ ಕೊಡಲಾಗುತ್ತಿತ್ತು. ಕಾಂಗ್ರೆಸ್ ಸರ್ಕಾರ ಕ್ಷೀರಭಾಗ್ಯ ಕಾರ್ಯಕ್ರಮ ಮಾಡಿತ್ತು. ಆದರೆ ಈಗ ಹಾಲು ಉತ್ಪಾದನೆ ಕಡಿಮೆಯಾಗುತ್ತಿದೆ ಎನ್ನುತ್ತಿದ್ದಾರೆ. ಹಾಲು ಉತ್ಪಾದನೆಯನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಿ ಗುಜರಾತ್ ಹಾಲನ್ನು ಕರ್ನಾಟಕಕ್ಕೆ ತರಲು ಭೂಮಿಕೆ ಸಿದ್ಧ ಮಾಡುವ ಪ್ರಯತ್ನದಲ್ಲಿದ್ದಾರೆ ಎಂದು ಹೇಳಿದರು.
ಇಂದಿರಾಗಾಂಧಿ, ಚಿಕ್ಕಮಗಳೂರು ಸ್ಮರಿಸಿದ ಪ್ರಿಯಾಂಕಾ
ಬಾಳೆಹೊನ್ನೂರು: ಈಗ ನಮ್ಮ ಪರಿವಾರ ಸಂಘರ್ಷದ ಸಮಯ ಎದುರಿಸುತ್ತಿದೆ. 1978-79ರಲ್ಲಿ ನನ್ನ ಅಜ್ಜಿ ಇಂದಿರಾ ಗಾಂಧಿ ಈ ಪ್ರದೇಶಕ್ಕೆ ಬಂದಾಗಲೂ ಸಂಘರ್ಷದ ಸಂದರ್ಭವಿತ್ತು. ಈಗ ನಾನು ಮತ್ತೊಂದು ಸಂಘರ್ಷದ ಸಮಯದಲ್ಲಿ ನಿಮ್ಮ ಮುಂದೆ ನಿಂತಿದ್ದೇನೆ ಎಂದು ಪ್ರಿಯಾಂಕಾಗಾಂಧಿ ಹೇಳಿದರು.
Karnataka election 2023: ಮಾನ್ವಿಗಿಂದು ಮಾಜಿ ಸಿಎಂ ಸಿದ್ದರಾಮಯ್ಯ: ಬೋಸರಾಜು
ಅಂದು ಕೂಡ ಇದೇ ರೀತಿಯ ಮಳೆಯ ವಾತಾವರಣವಿತ್ತು. ಮಳೆ ಎಂದರೆ ಶುಭ ಸಂಕೇತ, ಅಂದು ನನ್ನ ಅಜ್ಜಿ ಬಂದಾಗ ಯಾವ ವಾತಾವರಣವಿತ್ತೋ ಅದೇ ರೀತಿ ವಾತಾವರಣದಲ್ಲಿ ನಾನು ಇಂದು ನಿಮ್ಮ ಮುಂದೆ ನಿಲ್ಲುವ ಅವಕಾಶ ಸಿಕ್ಕಿದೆ. ಇದು ದೇವರ ಆಶೀರ್ವಾದ, ನನ್ನ ಭಾಗ್ಯ ಎಂದು ಭಾವಿಸುತ್ತೇನೆ ಎಂದರು.
ನನ್ನ ಅಜ್ಜಿ ಇಂದಿರಾ ಗಾಂಧಿಯವರಿಗೆ ಅಂದು ಚಿಕ್ಕಮಗಳೂರು ಜನ ಆಶೀರ್ವಾದ ಮಾಡಿ ಹರಸಿದರು. ಇದಕ್ಕಾಗಿ ನಮ್ಮ ಕುಟುಂಬ ಸದಾ ನಿಮಗೆ ಆಭಾರಿ. ಅವರ ವಿರುದ್ಧವೂ ಲೋಕಸಭೆಯಲ್ಲಿ ಒಂದು ಕೇಸ್ ಹಾಕಿ ಸಂಸತ್‌ನಿಂದ ಹೊರಗಿಡಲಾಗಿತ್ತು. ಅವರನ್ನು ಮತ್ತೆ ನೀವು ಲೋಕಸಭೆಗೆ ವಾಪಸ್ ಕಳುಹಿಸಿಕೊಟ್ಟಿರಿ. ಅವತ್ತು ನಮಗೆ ನೀವು ಆತ್ಮವಿಶ್ವಾಸ ತುಂಬಿದ್ದೀರಿ. ನಮ್ಮ ಅಜ್ಜಿ ಇಂದಿರಾಗಾಂಧಿ ಅವರು ನೀವಿಟ್ಟವಿಶ್ವಾಸಕ್ಕೆ ಯಾವತ್ತೂ ಭಂಗ ತರುವ ರೀತಿಯಲ್ಲಿ ನಡೆದುಕೊಂಡಿಲ್ಲ. ಈಗ ಅವರ ಮೊಮ್ಮಗನಾದ ರಾಹುಲ್ ಗಾಂಧಿ ಮೇಲೆ ಸುಳ್ಳು ಕೇಸ್ ಹಾಕಿ ಅದೇ ರೀತಿ ಲೋಕಸಭೆಯಿಂದ ಹೊರ ಕಳುಹಿಸಿರುವ ಸಂದರ್ಭದಲ್ಲಿ ನಾನು ನಿಮ್ಮ ಮುಂದೆ ಬಂದು ನಿಂತಿದ್ದೇನೆ ಎಂದು ಹೇಳಿದರು.