ಹಿಟ್ಲರ್‌ನನ್ನೂ ಮೀರಿಸಿದ ಬಿಜೆಪಿ ಸರ್ವಾಧಿಕಾರ: ಗಣಿಹಾರ ಆರೋಪ

By Kannadaprabha News  |  First Published Jun 20, 2023, 10:00 PM IST

ಬಿಜೆಪಿ ಸರ್ಕಾರ ಅವಧಿಯಲ್ಲಿಯೇ ವಿದ್ಯುತ್‌ ಬೆಲೆ ಏರಿಕೆಯಾಗಿತ್ತು. ವಿದ್ಯುತ್‌ ನಿಯಂತ್ರಣ ಆಯೋಗ ಬೆಲೆ ಏರಿಕೆ ಮಾಡಿದೆ. ಅದರಲ್ಲಿ ಈಗಿನ ಕಾಂಗ್ರೆಸ್‌ ಸರ್ಕಾರದ ಪಾತ್ರ ಎಳ್ಳಷ್ಟೂ ಇಲ್ಲ. ಉಚಿತ ವಿದ್ಯುತ್‌ಗೂ ಅದಕ್ಕೂ ಸಂಬಂಧವೇ ಇಲ್ಲ. ಆದರೂ ಬಾಡಿಗೆ ಜನರನ್ನು ಬಳಸಿಕೊಂಡು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದೆ: ಎಸ್‌.ಎಂ.ಪಾಟೀಲ ಗಣಿಹಾರ 


ವಿಜಯಪುರ(ಜೂ.20):  ಹಿಟ್ಲರ್‌ ಜೀವಂತವಾಗಿದ್ದರೆ ಭಾರತದಲ್ಲಿರುವ ಈಗಿನ ಕೇಂದ್ರ ಸರ್ಕಾರದ ಆಡಳಿತ ವೈಖರಿ ನೋಡಿ ಅವನಿಗೆ ನಾಚಿಕೆ ಆಗುತ್ತಿತ್ತು. ಈ ರೀತಿ ಕೇಂದ್ರ ಹಾಗೂ ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹಿಟ್ಲರ್‌ನನ್ನೂ ಮೀರಿ ಸರ್ವಾಧಿಕಾರಿ ಆಡಳಿತ ನಡೆಸಿವೆ ಎಂದು ಅಹಿಂದ ಮುಖಂಡ ಎಸ್‌.ಎಂ.ಪಾಟೀಲ ಗಣಿಹಾರ ವ್ಯಂಗ್ಯವಾಡಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಸರ್ಕಾರದ ಇದ್ದ ಸಮಯದಲ್ಲಿ ಲದ್ದಿಜೀವಿಗಳ ಮೂಲಕ ರಚಿಸಿದ ಪಠ್ಯಕ್ರಮವನ್ನು ಈವಾಗ ಕಾಂಗ್ರೆಸ್‌ ಸರ್ಕಾರ ಬುದ್ಧಿಜೀವಿಗಳ ಮೂಲಕ ತಿದ್ದುವ ಕೆಲಸ ಮಾಡುತ್ತಿದೆ ಎಂದರು.

Tap to resize

Latest Videos

ಕಾಂಗ್ರೆಸ್‌ ಕೈಬಿಟ್ಟ ಪಠ್ಯಕ್ಕೆ ವಿಜಯಪುರ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಪಾಠವನ್ನು ಸೇರಿಸಿ

ಹೊಸ ಪಠ್ಯಕ್ರಮ ರಚನೆಗೆ ಕಾಂಗ್ರೆಸ್‌ ಸರ್ಕಾರ ಸುಖಾಸುಮ್ಮನೇ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಆದರೆ, ಬಿಜೆಪಿ ಸರ್ಕಾರ ಖರ್ಚು ಮಾಡಿ ಪಠ್ಯಕ್ರಮ ಪರಿಷ್ಕರಣೆ ಮಾಡಿದ್ದನ್ನು ಅವರು ಮರೆತಂತಿದೆ. ಪಠ್ಯಕ್ರಮ ರಚನೆಗೆ ಶಾಶ್ವತವಾದ ಆಯೋಗವನ್ನು ರಚಿಸುವ ಮೂಲಕ ಪಠ್ಯಕ್ರಮ ರಚಿಸಬೇಕಿದೆ. ಲವ್‌ಜಿಹಾದ್‌ ಪ್ರಕರಣಗಳು ದೇಶದಲ್ಲಿಲ್ಲ ಎಂದು ಸುಪ್ರೀಂಕೋರ್ಚ್‌ ಹೇಳಿದೆ. ಆದರೆ, ರಾಜಕೀಯ ಕಾರಣಕ್ಕಾಗಿ ಲವ್‌ಜಿಹಾದ್‌ ವಿವಾದ ಸೃಷ್ಟಿಸಲಾಗುತ್ತಿದೆ. ಪ್ರೀತಿ ಜಾತಿ, ಧರ್ಮದ ಎಲ್ಲೆ ಮೀರಿದ ವಿಷಯವಾಗಿದೆ ಎಂದು ಹೇಳಿದರು.

ಬಿಜೆಪಿ ಸರ್ಕಾರ ಅವಧಿಯಲ್ಲಿಯೇ ವಿದ್ಯುತ್‌ ಬೆಲೆ ಏರಿಕೆಯಾಗಿತ್ತು. ವಿದ್ಯುತ್‌ ನಿಯಂತ್ರಣ ಆಯೋಗ ಬೆಲೆ ಏರಿಕೆ ಮಾಡಿದೆ. ಅದರಲ್ಲಿ ಈಗಿನ ಕಾಂಗ್ರೆಸ್‌ ಸರ್ಕಾರದ ಪಾತ್ರ ಎಳ್ಳಷ್ಟೂ ಇಲ್ಲ. ಉಚಿತ ವಿದ್ಯುತ್‌ಗೂ ಅದಕ್ಕೂ ಸಂಬಂಧವೇ ಇಲ್ಲ. ಆದರೂ ಬಾಡಿಗೆ ಜನರನ್ನು ಬಳಸಿಕೊಂಡು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದೆ ಎಂದು ದೂರಿದರು. ಬಿಜೆಪಿಗೆ ನಿಜವಾಗಿಯೂ ಗೋವುಗಳ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಗೋಮುಕ್ತಿ ಕಾನೂನು ಜಾರಿಗೊಳಿಸಿ ಅನುಷ್ಠಾನಗೊಳಿಸಲಿ ಎಂದು ಆಗ್ರಹಿಸಿದರು.

click me!