ಹಣಮಂತಪ್ಪ ಸಂಜಪ್ಪ ಭೋವಿ, ಮಕ್ಕಳಾದ ಅಕ್ಷಿತಾ, ಓಂಕಾರ ಮೃತಪಟ್ಟಿರುವುದು ಅತ್ಯಂತ ದುಃಖಕರವಾದ ಸಂಗತಿಯಾಗಿದೆ. ಹಣಕಾಸು ಸಮಸ್ಯೆ ಎದುರಿಸುತ್ತಿದ್ದ ಹಣಮಂತಪ್ಪ ದುಡುಕಿನ ನಿರ್ಧಾರ ಕೈಕೊಂಡಿರುವುದು ಅತ್ಯಂತ ನೋವುಂಟು ಮಾಡಿದೆ. ಮೃತನ ಕುಟುಂಬಕ್ಕೆ ಸರ್ಕಾರದಿಂದ ಸಾಮಾಜಿಕ ಕುಟುಂಬ ಭದ್ರತಾ ಯೋಜನೆ ಅಡಿಯಲ್ಲಿ ಪರಿಹಾರ ಕೊಡಿಸಲಾಗುವುದು. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸಹ ಪರಿಹಾರ ಕೊಡಿಸಲಾಗುವುದು: ಉಮೇಶ ಜಾಧವ್
ಚಿಂಚೋಳಿ(ಜೂ.20): ತಾಲೂಕಿನ ಗಡಿಪ್ರದೇಶ ಕುಂಚಾವರಂ ಗ್ರಾಮದಲ್ಲಿ ರವಿವಾರ ಹಣಮಂತ ಸಂಜಪ್ಪ ಭೋವಿ ಎಂಬುವವರು ತನ್ನ ಇಬ್ಬರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈತನ ಕುಟುಂಬಕ್ಕೆ ಕಲಬುರಗಿ ಸಂಸದ ಡಾ.ಉಮೇಶ ಜಾಧವ್ ಭೇಟಿ ನೀಡಿ ಸಾಂತ್ವನ ಹೇಳಿ ಸರ್ಕಾರದಿಂದ ಸಿಗುವ ಎಲ್ಲ ಪರಿಹಾರಗಳನ್ನು ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.
ನಂತರ ಮಾತನಾಡಿದ ಸಂಸದರು, ಹಣಮಂತಪ್ಪ ಸಂಜಪ್ಪ ಭೋವಿ, ಮಕ್ಕಳಾದ ಅಕ್ಷಿತಾ(6), ಓಂಕಾರ(9) ಮೃತಪಟ್ಟಿರುವುದು ಅತ್ಯಂತ ದುಃಖಕರವಾದ ಸಂಗತಿಯಾಗಿದೆ. ಹಣಕಾಸು ಸಮಸ್ಯೆ ಎದುರಿಸುತ್ತಿದ್ದ ಹಣಮಂತಪ್ಪ ದುಡುಕಿನ ನಿರ್ಧಾರ ಕೈಕೊಂಡಿರುವುದು ಅತ್ಯಂತ ನೋವುಂಟು ಮಾಡಿದೆ. ಮೃತನ ಕುಟುಂಬಕ್ಕೆ ಸರ್ಕಾರದಿಂದ ಸಾಮಾಜಿಕ ಕುಟುಂಬ ಭದ್ರತಾ ಯೋಜನೆ ಅಡಿಯಲ್ಲಿ ಪರಿಹಾರ ಕೊಡಿಸಲಾಗುವುದು. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸಹ ಪರಿಹಾರ ಕೊಡಿಸಲಾಗುವುದು ಎಂದು ಹೇಳಿದರು.
undefined
ಗುಲ್ಬರ್ಗ ವಿಶ್ವವಿದ್ಯಾಲಯ ಘಟಿಕೋತ್ಸವ: ಬಡತನ ಮೆಟ್ಟಿ ಪದಕ ಬಾಚಿದ ವಿದ್ಯಾರ್ಥಿನಿಯರು
ತಾಯಿ ನಾಗಮ್ಮ ಭೋವಿ ಮಾತನಾಡಿ, ಉಪವಾಸ, ವನವಾಸ ಮಾಡಿ ನನ್ಮ ಮಕ್ಕಳನ್ನು ಸಾಕಿದ್ದೇನೆ. ಆದರೆ ನನ್ನ ಮಗ ಹಣಮಂತ ಈ ತರಹ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಎಂದು ನನಗೆ ತಿಳಿದಿಲ್ಲ. ಇದು ನನಗೆ, ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ ಎಂದು ಗೋಗರೆಳೆದಳು.
ಈ ವೇಳೆ ತಹಸೀಲ್ದಾರ್ ವಿರೇಶ ಮುಳಗುಂದಮಠ, ತಾಪಂ ಅಧಿಕಾರಿ ವೈ.ಎಲ್.ಹಂಪಣ್ಣ, ಡಾ.ಅಂಜನಯ್ಯ, ಸಂಜೀವ ಕೊಡಂ, ಗೋಪಾಲರಾವ ಕಟ್ಟಿಮನಿ, ಯೇಶಪ್ಪ, ಅಶೋಕ ಚವ್ಹಾಣ, ರಾಜೂ ಪವಾರ, ಪಿಎಸ್‌ಐ ಉದ್ದಂಡಪ್ಪ ಮಣ್ಣೂರಕರ ಇನ್ನಿತರಿದ್ದರು.