ಚಾಮರಾಜನಗರ ಜಿಲ್ಲೆಗೆ ಎಂಪಿ ಆಗುವ ಕನಸು ಹೊಂದಿದ್ದ ಶಿವರಾಂ: ಸಂಸದನಾಗುವ ಕನಸು ನನಸಾಗಲಿಲ್ಲ!

By Kannadaprabha NewsFirst Published Mar 1, 2024, 4:00 AM IST
Highlights

ಕನ್ನಡದಲ್ಲೇ ಯುಪಿಎಸ್‌ಸಿ ಪರೀಕ್ಷೆಯನ್ನು ಬರೆದು ಐಎಎಸ್ ಅಧಿಕಾರಿಯಾಗಿ ತಮ್ಮದೇ ಛಾಪು ಮೂಡಿಸಿದ್ದ ಕೆ.ಶಿವರಾಂ ಅನಾರೋಗ್ಯ ಕಾರಣದಿಂದ ನಿಧನರಾಗಿದ್ದಾರೆ. ಆದರೆ, ಅವರ ಬದುಕು ಯುವಕರಿಗೆ ಸ್ಫೂರ್ತಿ ಸೆಲೆಯಾಗಿದೆ. 

ದೇವರಾಜು ಕಪ್ಪಸೋಗೆ

ಚಾಮರಾಜನಗರ (ಮಾ.01): ಕನ್ನಡದಲ್ಲೇ ಯುಪಿಎಸ್‌ಸಿ ಪರೀಕ್ಷೆಯನ್ನು ಬರೆದು ಐಎಎಸ್ ಅಧಿಕಾರಿಯಾಗಿ ತಮ್ಮದೇ ಛಾಪು ಮೂಡಿಸಿದ್ದ ಕೆ.ಶಿವರಾಂ ಅನಾರೋಗ್ಯ ಕಾರಣದಿಂದ ನಿಧನರಾಗಿದ್ದಾರೆ. ಆದರೆ, ಅವರ ಬದುಕು ಯುವಕರಿಗೆ ಸ್ಫೂರ್ತಿ ಸೆಲೆಯಾಗಿದೆ. ರಾಮನಗರ ಜಿಲ್ಲೆಯ ಬಿಡದಿ ಬಳಿಯ ಊರುಗಹಳ್ಳಿಯಲ್ಲಿ ಜನಿಸಿದ ಶಿವರಾಂ ಅವರ ಆರಂಭಿಕ ಬದುಕು ಬಡತನದಿಂದಲೇ ಕೂಡಿತ್ತು. ಊರಿನಲ್ಲಿ ಆರಂಭಿಕ ಶಿಕ್ಷಣ ಮುಗಿಸಿ ಹೈಸ್ಕೂಲಿಗೆ ಬೆಂಗಳೂರಿಗೆ ಬಂದು ಹಾಸ್ಟೆಲ್‌ನಲ್ಲಿದ್ದು ಓದುತ್ತಿದ್ದರು.‌ ಆದರೆ, ಎಸ್‌ಎಸ್‌ಎಲ್‌ಸಿಯಲ್ಲಿ ಒಂದು ವಿಷಯದಲ್ಲಿ ನಪಾಸಾಗಿದ್ದರು. ಪಾಸಾಗಲೇಬೇಕೆಂದು ಛಲ ತೊಟ್ಟು ಪೂರಕ ಪರೀಕ್ಷೆಯಲ್ಲಿ ಬರೆದು ತೇರ್ಗಡೆ ಹೊಂದಿದ್ದರು.

ಬೆಂಗಳೂರಿನಲ್ಲಿ ಇದ್ದುಕೊಂಡು ಬದುಕುಕಟ್ಟಿಕೊಂಡು ಅಧಿಕಾರಿಯಾಗಿ ವಿವಿಧೆಡೆ ಕೆಲಸ ಮಾಡಿ ನಿವೃತ್ತಿ ಹೊಂದಿದ್ದು, ಮುಂದೆ ಜನಪ್ರತಿನಿಧಿಯಾಗಿ ಮಾಡಬೇಕಾದ ಕೆಲಸಗಳ ಬಗ್ಗೆಯೂ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ಚಾಮರಾಜನಗರ ಜಿಲ್ಲಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಕೆ. ಶಿವರಾಂ ಆಗಾಗ್ಗೆ ಜಿಲ್ಲೆಗೆ ಭೇಟಿ ನೀಡುವ ವಿವಿಧ ಕಾರ್ಯಕ್ರಮಗಳಲ್ಲಿ ತಾವು ಅನುಭವಿಸಿದ ಸಂಕಷ್ಟಗಳ ಸರಮಾಲೆಗಳನ್ನು ಬಿಚ್ಚಿಡುವ ಮೂಲಕ ಕಷ್ಟಗಳ ನಡುವೆ ತಾವು ಬೆಳೆದುಬಂದ ಹಾದಿಯ ವಿಚಾರಗಳನ್ನು ಹೇಳುತ್ತಾ ವಿದ್ಯಾರ್ಥಿಗಳು ಮತ್ತು ಯುವಜನತೆಗೆ ಸ್ಫೂರ್ತಿಯ ಸೆಲೆಯಾಗಿದ್ದರು.

ನರೇಂದ್ರ ಮೋದಿ ಆಶಯದಂತೆ ಸ್ವಾವಲಂಬಿ ಭಾರತ ನಿರ್ಮಿಸೋಣ: ಶಾಸಕ ಯಶ್ಪಾಲ್ ಸುವರ್ಣ

ತಹಸೀಲ್ದಾರ್‌ರಿಂದ ಉಸ್ತುವಾರಿ ಕಾರ್ಯದರ್ಶಿತನಕ: ಕೆ. ಶಿವರಾಂ ಅವರು ಐಎಎಸ್‌ ಅಧಿಕಾರಿಯಾಗಿ ಸೇವೆಗೆ ಆಯ್ಕೆಯಾದ ಬಳಿಕ ಚಾಮರಾಜನಗರ ತಾಲೂಕು ತಹಸೀಲ್ದಾರ್‌ ಆಗಿ ಸೇವೆಸಲ್ಲಿಸುವ ಮೂಲಕ ಜೀತ ವಿಮುಕ್ತರಿಗೆ ಜೀತ ವಿಮುಕ್ತರ ಗುರುತಿನ ಚೀಟಿ ವಿತರಣೆ ಮಾಡುವ ಮೂಲಕ ನೆರವಾಗಿದ್ದರು. ಸಮಾಜಕಲ್ಯಾಣ ಇಲಾಖೆ ಆಯುಕ್ತರಾಗಿದ್ದ ವೇಳೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿಯೂ ಕೆಲಸ ಮಾಡುವ ಮೂಲಕ ಜಿಲ್ಲೆಯ ಜನತೆ ಜೂತೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವ ಮೂಲಕ ಜಿಲ್ಲೆಯಿಂದ ಜನಪ್ರತಿಯಾಗಬೇಕೆಂಬ ಕನಸು ಕಟ್ಟಿಕೊಂಡಿದ್ದರು.

ಸಂಸದನಾಗುವ ಕನಸು ನನಸಾಗಲಿಲ್ಲ: 2019 ಹಾಗೂ ಈಗಿನ 2024ರ ಚುನಾವಣೆಯಲ್ಲೂ ಚಾಮರಾಜನಗರದ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದರು. 2019 ರಲ್ಲಿ ಕ್ಷೇತ್ರದಲ್ಲಿ ನಿರಂತರ ಓಡಾಟ ನಡೆಸಿ ಚಾಮರಾಜನಗರದಲ್ಲಿ ಮನೆಯನ್ನೂ ಮಾಡಿ ಟಿಕೆಟ್ ಪಡೆಯಲು ಸಾಕಷ್ಟು ಕಸರತ್ತು ನಡೆಸಿದ್ದರು. ಆದರೆ, ಕೊನೆ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿತ್ತು. ಈಗಿನ ಚುನಾವಣೆಯಲ್ಲೂ ಟಿಕೆಟ್ ನ ಪ್ರಬಲ ಆಕಾಂಕ್ಷಿಯಾಗಿ ಗುರುತಿಸಿಕೊಂಡು ಓಡಾಟ ನಡೆಸಿದ್ದರು‌.

ದೇಶದ್ರೋಹಿ ಕೃತ್ಯ ಯಾರೇ ಮಾಡಿದರೂ ಕ್ಷಮಿಸಲ್ಲ: ಶಾಸಕ ಶರತ್ ಬಚ್ಚೇಗೌಡ

ಈ ನಡುವೆ ಆರೋಗ್ಯ ಹದಗೆಟ್ಟಿದ್ದರೂ ಮುಖಂಡರ ಜೊತೆ ನಿರಂತರ ಮೊಬೈಲ್‌ ಸಂಪರ್ಕ ಇಟ್ಟುಕೊಂಡಿದ್ದರು. ಐಎಎಸ್ ಅಧಿಕಾರಿಯಾಗುವ ಕನಸು, ಸಿನಿಮಾ ಹೀರೋ ಆಗುವ ಕನಸು ಈಡೇರಿದರೂ ಸಂಸದನಾಗುವ ಕನಸು ಮಾತ್ರ ಹಾಗೇ ಉಳಿಯಿತು. ಚಾಮರಾಜನಗರ ಜಿಲ್ಲೆಯಲ್ಲೂ ಅಪಾರ ಅಭಿಮಾನಿ ಬಳಗ ಹೊಂದಿದ್ದ ಶಿವರಾಂ ದಲಿತರನ್ನು ಸಂಘಟನೆ ಮಾಡುವ ಮೂಲಕ ಗಮನ ಸೆಳೆದಿದ್ದರು. ಯುವಕರಿಗೆ ಸ್ಪೂರ್ತಿ ಮಾತುಗಳ ಮೂಲಕ ಹುರಿದುಂಬಿಸುವ ಕೆಲಸ ಮಾಡುತ್ತಿದ್ದರು.

click me!