ಮಂಡ್ಯ ಜಿಲ್ಲೆಯ ಜನರು ಅಂಬರೀಶ್‌ಗೆ ನೀಡಿದಷ್ಟೆ ಸ್ಥಾನ ನೀಡಿದ್ದಾರೆ: ಸಂಸದೆ ಸುಮಲತಾ

By Kannadaprabha News  |  First Published Mar 1, 2024, 3:30 AM IST

ಮಂಡ್ಯಕ್ಕೆ ಸೊಸೆಯಾಗಿ ಬಂದ ನನ್ನನ್ನು ಜಿಲ್ಲೆಯ ಜನ ಪ್ರೀತಿ ಕೊಟ್ಟು ಅಂಬರೀಶ್ ಅವರಿಗೆ ನೀಡಿದಷ್ಟೇ ಸ್ಥಾನ ನೀಡಿದ್ದೀರಿ. ಇದಕ್ಕೆ ನಿಮಗೆ ನಾನು ಕೃತಜ್ಞತೆ ಸಲ್ಲಿಸುವುದಾಗಿ ಸಂಸದೆ ಸುಮಲತಾ ಅಂಬರೀಶ್‌ ಹೇಳಿದರು. 


ಶ್ರೀರಂಗಪಟ್ಟಣ (ಮಾ.01): ಮಂಡ್ಯಕ್ಕೆ ಸೊಸೆಯಾಗಿ ಬಂದ ನನ್ನನ್ನು ಜಿಲ್ಲೆಯ ಜನ ಪ್ರೀತಿ ಕೊಟ್ಟು ಅಂಬರೀಶ್ ಅವರಿಗೆ ನೀಡಿದಷ್ಟೇ ಸ್ಥಾನ ನೀಡಿದ್ದೀರಿ. ಇದಕ್ಕೆ ನಿಮಗೆ ನಾನು ಕೃತಜ್ಞತೆ ಸಲ್ಲಿಸುವುದಾಗಿ ಸಂಸದೆ ಸುಮಲತಾ ಅಂಬರೀಶ್‌ ಹೇಳಿದರು. ಪಟ್ಟಣದಲ್ಲಿ ಕೃಷಿಕ ಸಮಾಜದಿಂದ ನಿರ್ಮಿಸಿರುವ ಎಸ್.ಜಿ ನಾಗರತ್ನ ಗಿರಿಗೌಡ ಭವನದ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯ ಸಂಸದರನ್ನಾಗಿ ಮಾಡಿದ್ದೀರಿ. ಅದರಂತೆ ನನ್ನ ಕೈಲಾದ ಮಟ್ಟಿಗೆ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂಬ ಆತ್ಮತೃಪ್ತಿ ನನ್ನಲ್ಲಿದೆ ಎಂದರು.

ಜಿಲ್ಲೆಯಲ್ಲಿ ಎಲ್ಲರ ಪರಿಚಯವು ನನಗೆ ಗೊತ್ತಿದೆ. ಶ್ರೀರಂಗಪಟ್ಟಣದ ಜನರ ಬಗ್ಗೆ ಅಂಬರೀಶ್‌ ಅವರಿಗೆ ಹೆಚ್ಚಿನ ಒಲವು ಇತ್ತು. ಅದರಂತೆ ನನಗೂ ಹೆಚ್ಚಿನ ಪ್ರೀತಿ ವಿಶ್ವಾಸಗಳ ನೀಡಿ ಈ ಒಂದು ಸ್ಥಾನ ಮಾನಗಳ ನೀಡಿದ್ದೀರಿ. ಇದನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು. ರಾಜಕಾರಣಕ್ಕೆ ಬರುವ ಉದ್ದೇಶ ನನ್ನಲ್ಲಿ ಇರಲಿಲ್ಲ. ಆದರೂ ನೀವು ನೀಡಿದ ಪ್ರೀತಿಯಿಂದ ಮಂಡ್ಯ ಘನತೆ ಎತ್ತಿ ಹಿಡಿದಿದ್ದೇನೆ. ಇನ್ನು ಮುಂದೆಯೂ ಕೂಡ ಅದೇ ಪ್ರೀತಿಯಿಂದ ಇರುತ್ತೇನೆ. ಈ ನಿಮ್ಮ ಸೇವೆಗೆ ಮತ್ತೇ ನೀವು ನನಗೆ ಅವಕಾಶ ಮಾಡಬೇಕು ಎಂದು ಕೋರಿದರು. ಇದೇ ವೇಳೆ ನಿಶಾಂತ್ ಕೀಲಾರ ಹಾಗೂ ಪಾಲಹಳ್ಳಿ ಗಿರಿಗೌಡ ಕುಟುಂಬಸ್ಥರನ್ನು ಅಭಿನಂದಿಸಲಾಯಿತು.

Latest Videos

undefined

ನಮ್ಮ ಸರ್ಕಾರಿ ಕನ್ನಡ ಶಾಲೆಗಳು ಅಪರಂಜಿ ಇದ್ದಂತೆ: ಡಾ.ನಾಗತಿಹಳ್ಳಿ ಚಂದ್ರಶೇಖರ್

ಸಹಕಾರ ಸಂಘಗಳಲ್ಲಿ ಮಹಿಳಾ ಮೀಸಲು ಹೆಚ್ಚಳಕ್ಕೆ ಬೆಂಬಲವಿದೆ: ಸಹಕಾರ ಸಂಘಗಳಲ್ಲಿ ಹಾಲಿ ಇರುವ ಶೇ.33ರಷ್ಟು ಮೀಸಲಾತಿಯನ್ನು ಶೇ.50ಕ್ಕೆ ಹೆಚ್ಚಿಸುವ ಸಂಬಂಧದ ಮಹಿಳೆಯರ ಹೋರಾಟಕ್ಕೆ ನನ್ನ ಸಹಮತವಿದೆ ಎಂದು ಸಂಸದೆ ಸುಮಲತಾ ಹೇಳಿದರು. ತಾಲೂಕಿನ ಗೆಜ್ಜಲಗೆರೆ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಚೇರಿ ಹಾಗೂ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿ, ಮೀಸಲು ಹೆಚ್ಚಳಕ್ಕೆ ಒತ್ತಾಯಿಸಿ ಮಹಿಳೆಯರು ಬಹಳ ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಇದಕ್ಕೆ ನನ್ನ ಬೆಂಬಲವಿದೆ. ಮಹಿಳಾ ಸಂಘಟನೆಗಳು ಸಹಕಾರ ಸಂಘದ ಮೂಲಕ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಹಲವರಿಗೆ ಉದ್ಯೋಗ ಕಲ್ಪಿಸುವಲ್ಲಿ ಸಹಕಾರಿಯಾಗಿದೆ ಎಂದರು.

click me!