
ಶಿವಮೊಗ್ಗ (ಮಾ.02): ಹಲವರ ವಿರೋಧದ ನಡುವೆಯೂ ಸಿಎಂ ಸಿದ್ದರಾಮಯ್ಯ ಹಠ ಮಾಡಿ, ಜಾತಿ ಜನಗಣತಿ ವರದಿ ಸ್ವೀಕಾರ ಮಾಡಿದ್ದಾರೆ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಟೀಕಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಜಾತಿ ಗಣತಿ ವರದಿ ಸ್ವೀಕಾರ ಮಾಡಬಾರದು. ಹಿಂದುಳಿದ ವರ್ಗಕ್ಕೆ ಅನ್ಯಾಯ ಆಗ್ತದೆ. ಸಮುದಾಯಗಳ ನಡುವೆ ವೈಷಮ್ಯ ಬೆಳೆಯುತ್ತದೆ ಎಂದು ಮಠಾಧೀಶರು, ಒಕ್ಕಲಿಗ ನಾಯಕರು, ಲಿಂಗಾಯಿತ ನಾಯಕರು ವಿರೋಧ ಮಾಡಿದ್ದಾರೆ. ಇದ್ಯಾವುದನ್ನೂ ಲೆಕ್ಕಿಸದ ಸಿಎಂ ಸಿದ್ದರಾಮಯ್ಯ ಅವರು ವರದಿ ಸ್ವೀಕಾರ ಮಾಡಿ ಜಾತಿ, ಉಪ ಜಾತಿ ಒಡೆಯುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಸಿದ್ಧಾಂತಕ್ಕೆ ಬದ್ಧರಾಗಿದ್ದ ಕೋಣಂದೂರು ಲಿಂಗಪ್ಪ: ರಾಜಕೀಯ ಕ್ಷೇತ್ರದಲ್ಲಿ ಸಿದ್ಧಾಂತ ಇಸಂ ಮುಂತಾದ ಎಲ್ಲ ಶಬ್ದಗಳು ಭಾಷಣಕ್ಕೆ ಸೀಮಿತವಾಗಿವೆ. ಸಮಾಜವಾದಿ ಧುರೀಣ ಶಾಂತವೇರಿ ಗೋಪಾಲಗೌಡರಂತೆ ಕೋಣಂದೂರು ಲಿಂಗಪ್ಪ ಕೂಡ ತಾವು ನಂಬಿದ ಸಿದ್ಧಾಂತಕ್ಕೆ ಬದ್ಧರಾಗಿದ್ದವರು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಪಟ್ಟಣದ ಕನ್ನಡ ಭವನದಲ್ಲಿ ಸಂಜೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕೋಣಂದೂರು ಲಿಂಗಪ್ಪ ಅಭಿನಂದನಾ ಸಮಿತಿ ವತಿಯಿಂದ ಲಿಂಗಪ್ಪ ಅವರಿಗೆ 90ನೇ ವರ್ಷದ ಅಭಿನಂದನೆ ಮತ್ತು ಸಾಹಿತಿ ಡಾ. ಜೆ.ಕೆ.ರಮೇಶ್ ಸಂಪಾದಿಸಿದ ಕೋಲಿಂ ಎಂಬ ಕೌತುಕ ಅಭಿನಂದನಾ ಗ್ರಂಥದ ದ್ವಿತೀಯ ಆವೃತ್ತಿಯ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಅನುಭವಿ ಶಾಸಕರ ಕ್ಷೇತ್ರದಲ್ಲಿ ಬಂದು ನಾನೇನು ಮಾಡಲಿ?: ಸಚಿವ ಮಂಕಾಳ ವೈದ್ಯ
ಸೆಕ್ಯುಲರ್ ಎಂಬ ಪದವೇ ಮೋಸದಿಂದ ಕೂಡಿದೆ. ಜಾತಿಯೇ ಪ್ರಧಾನವಾಗಿದ್ದು, ಜಾತ್ಯತೀತತೆ ಎಂಬುದು ಈಗ ಹಳಸಲು ಪದವಾಗಿದೆ. ಕೇವಲ ಭಾಷಣಕ್ಕೆ ಸೀಮಿತವಾಗಿದೆ. ಈ ಹಿಂದೆ ರಾಜಕೀಯ ಕ್ಷೇತ್ರದಲ್ಲಿ ಬಡವರ ಪರ ಅಭ್ಯರ್ಥಿ ಎಂಬ ಮಾತಿತ್ತು. ಪ್ರಸ್ತುತ ಚುನಾವಣೆ ಮಾಡುವ ತಾಕತ್ತು ಇದೆಯೇ ಎಂಬಂತ ಸ್ಥಿತಿ ನಿರ್ಮಾಣವಾಗಿದೆ. ಲಿಂಗಪ್ಪ ಅವರು ಬಿಟ್ಟ ಜಾಗಕ್ಕೆ ನಾವು ಬಂದವರು. ಆ ಸಂದರ್ಭದಲ್ಲಿ ಅವರು ಆಕ್ಟೀವ್ ಆಗಿದ್ದರೆ ನಮಗೆ ಅವಕಾಶವೇ ಇರುತ್ತಿರಲಿಲ್ಲ ಎಂದೂ ಹೇಳಿದರು.
ಲಿಂಗಪ್ಪ ಅವರನ್ನು ಅಭಿನಂದಿಸಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಸಮಾಜದಲ್ಲಿ ತುಳಿತಕ್ಕೊಳಗಾದವರ ಬಗೆಗೆ ಕಾಳಜಿಯನ್ನು ಹೊಂದಿರುವ ಶ್ರೀಯುತರು ರಾಜಕೀಯ ಕ್ಷೇತ್ರದ ಅಪ್ಪಟ ಚಿನ್ನದಂತಹ ವ್ಯಕ್ತಿಯಾಗಿದ್ದಾರೆ. ಸದನದಲ್ಲಿ ಇವರು ತಮಗೆ ಅನಿಸಿದ್ದನ್ನು ನಿರ್ಭಯವಾಗಿ ಪ್ರತಿಪಾದಿಸುತ್ತಿದ್ದ ರೀತಿ ಅನುಕರಣೀಯ. ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದಾರೆ. ಜಾತಿ, ಹಣ ಯಾವುದರ ಪ್ರಭಾವವೂ ಇಲ್ಲದ ಅವರನ್ನು ಗೆಲ್ಲಿಸಿದ್ದ ಈ ಕ್ಷೇತ್ರದ ಮತದಾರರ ಪ್ರಭುದ್ಧತೆಯೂ ಮೆಚ್ಚುವಂತಹುದು ಎಂದರು.
ಕೇಂದ್ರ ಸರ್ಕಾರದ ಯೋಜನೆ ಜನರಿಗೆ ತಿಳಿಸಿ: ಮಾಜಿ ಸಚಿವ ಬಿ.ಸಿ.ಪಾಟೀಲ್
ಕೋಲಿಂ ಗ್ರಂಥದ ಕುರಿತು ಮಾತನಾಡಿದ ಸಾಹಿತಿ ಬಿ.ಚಂದ್ರೇಗೌಡ, ಇತಿಹಾಸದ ಮೌಲ್ಯವಾಗಿ ನಮ್ಮೊಂದಿಗಿರುವ ಕೋಣಂದೂರು ಲಿಂಗಪ್ಪ ಅವರು ಶುದ್ಧ ಚಾರಿತ್ರ್ಯ ಹೊಂದಿರುವ ಅಪರೂಪದ ರಾಜಕಾರಣಿ ಆಗಿದ್ದಾರೆ. ನವೋದಯದ ಕಾಲಘಟ್ಟದ ಘಟಾನುಘಟಿ ಸಾಹಿತಿಗಳ ಒಡನಾಟವನ್ನು ಹೊಂದಿದ್ದ ಲಿಂಗಪ್ಪ ಅವರು ಕನ್ನಡ ಚಳವಳಿಯ ರೂವಾರಿಗಳಲ್ಲಿ ಒಬ್ಬರಾಗಿದ್ದಾರೆ. ಶಾಸಕರಾಗಿದ್ದ ಅವಧಿಯಲ್ಲಿ ಅತಿ ಹೆಚ್ಚು ಸಾಗುವಳಿ ಚೀಟಿ ವಿತರಿಸಿದವರು. ತಮ್ಮ ರಾಜಕೀಯ ಜೀವನದಲ್ಲಿ ಸಾಕಷ್ಟು ನೋವನ್ನು ಅನುಭವಿಸಿದ್ದರೂ ಕೀಳಾಗಿ ಕಂಡವರನ್ನು ಕ್ಷಮಿಸಿದ್ದಾರೆ. ಈ ಗ್ರಂಥ ಬಾರದಿದ್ದರೆ ಓರ್ವ ಅನುಕರಣೀಯ ವ್ಯಕ್ತಿಯ ಪ್ರಾಮಾಣಿಕ ವ್ಯಕ್ತಿತ್ವದ ಪರಿಚಯ ಆಗುತ್ತಿರಲಿಲ್ಲ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.