ಕೇಂದ್ರ ಸರ್ಕಾರದ ಯೋಜನೆ ಜನರಿಗೆ ತಿಳಿಸಿ: ಮಾಜಿ ಸಚಿವ ಬಿ.ಸಿ.ಪಾಟೀಲ್

By Kannadaprabha News  |  First Published Mar 2, 2024, 8:17 PM IST

ಹಿರೇಕೆರೂರು ಮಂಡಲದ ಫಲಾನುಭವಿಗಳ ಸಂಪರ್ಕ ಅಭಿಯಾನದ ಅಂಗವಾಗಿ ಮಾಜಿ ಸಚಿವ ಬಿ.ಸಿ.ಪಾಟೀಲ್ ತಾಲೂಕಿನ ಬಾಳಂಬೀಡ ಗ್ರಾಮದ ಬೂತ್ ಸಂಖ್ಯೆ-೯೮ ಸಂಚಾಲಕರಾಗಿ ಫಲಾನುಭವಿಗಳ ನಿವಾಸಕ್ಕೆ ತೆರಳಿ ಕೇಂದ್ರ ಸರ್ಕಾರದ ಯೋಜನೆ ಪಡೆದವರ ಅಭಿಪ್ರಾಯ ಸಂಗ್ರಹಿಸಿ ಸರಳ ಆಪ್‌ನಲ್ಲಿ ಮೊಬೈಲ್ ಸಂಖ್ಯೆ, ಅವರ ಪಡೆದ ಯೋಜನೆ ಅಭಿಪ್ರಾಯ ಅವರ ಜತೆಗೆ ಸೆಲ್ಫಿ ತೆಗೆದು ಅಪ್ಲೋಡ್ ಮಾಡುವ ಮೂಲಕ ಚಾಲನೆ ನೀಡಿದರು.


ಹಿರೇಕೆರೂರು (ಮಾ.02): ಹಿರೇಕೆರೂರು ಮಂಡಲದ ಫಲಾನುಭವಿಗಳ ಸಂಪರ್ಕ ಅಭಿಯಾನದ ಅಂಗವಾಗಿ ಮಾಜಿ ಸಚಿವ ಬಿ.ಸಿ.ಪಾಟೀಲ್ ತಾಲೂಕಿನ ಬಾಳಂಬೀಡ ಗ್ರಾಮದ ಬೂತ್ ಸಂಖ್ಯೆ-೯೮ ಸಂಚಾಲಕರಾಗಿ ಫಲಾನುಭವಿಗಳ ನಿವಾಸಕ್ಕೆ ತೆರಳಿ ಕೇಂದ್ರ ಸರ್ಕಾರದ ಯೋಜನೆ ಪಡೆದವರ ಅಭಿಪ್ರಾಯ ಸಂಗ್ರಹಿಸಿ ಸರಳ ಆಪ್‌ನಲ್ಲಿ ಮೊಬೈಲ್ ಸಂಖ್ಯೆ, ಅವರ ಪಡೆದ ಯೋಜನೆ ಅಭಿಪ್ರಾಯ ಅವರ ಜತೆಗೆ ಸೆಲ್ಫಿ ತೆಗೆದು ಅಪ್ಲೋಡ್ ಮಾಡುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಪ್ರಧಾನಿ ಮೋದಿ ಕಾರ್ಯ ವೈಖರಿ ಕುರಿತು ಜನತೆಗೆ ತಿಳಿಸಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡುವುದು ನಮ್ಮ ಜವಾಬ್ದಾರಿ, ಕಿಸಾನ್ ಸನ್ಮಾನ, ಮಾತೃ ವಂದನ, ಆಯುಷ್ಮಾನ್ ಭಾರತ, ಸ್ವಚ್ಛ ಭಾರತ ಅಭಿಯಾನ, ಮೇಕ್ ಇನ್ ಇಂಡಿಯಾ, ಜಲಜೀವನ್ ಮಷೀನ್, ಮುದ್ರಾ ಯೋಜನೆ, ಪ್ರಧಾನ ಮಂತ್ರಿ ಸಡಕ್ ಯೋಜನೆ, ಗರೀಬ್ ಕಲ್ಯಾಣ ಹೀಗೆ ಹಲವು ಯೋಜನೆ ಕೊಟ್ಟ ಮೋದಿ ಅವರಿಗೆ ಮತ ನೀಡುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಬೆಂಬಲಿಸುವಂತೆ ಕರೆ ನೀಡಿದರು.

Tap to resize

Latest Videos

ರಾಷ್ಟ್ರ ಹೊರ ರಾಷ್ಟ್ರಗಳಲ್ಲಿ ಇಂದು ಪ್ರಧಾನಿ ಮೋದಿಯವರ ಆಡಳಿತದ ಕಾರ್ಯವೈಖರಿಯಿಂದ ಭಾರತದ ಗೌರವ, ಘನತೆ ಹೆಚ್ಚಾಗಿದ್ದು, ಇಂತಹ ಜನಸಂಖ್ಯೆಯ ನಡುವೆಯೂ ಈ ದೇಶದ ಆರ್ಥಿಕತೆ ಸುಸ್ಥಿರವಾಗಿದೆ. ಭ್ರಷ್ಟಾಚಾರ ಮುಕ್ತ ಆಡಳಿತ, ಯಾವುದೆ ಒಂದು ಕಪ್ಪು ಚುಕ್ಕೆ ಬಾರದಂತೆ ದೇಶವನ್ನು ಮುನ್ನಡಿಸಿಕೊಂಡು ಹೋಗುತ್ತಿರುವ ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನತೆಗೆ ಮನಮುಟ್ಟುವಂತೆ ತಿಳಿಸಬೇಕಿದೆ ಎಂದರು.

ಜಾತಿಗಣತಿ ವರದಿ ಅತ್ಯಂತ ಅವೈಜ್ಞಾನಿಕ: ಮಾಜಿ ಶಾಸಕ ಸೋಮಶೇಖರ ರೆಡ್ಡಿ

ಈ ವೇಳೆ ಸಹಕಾರಿ ಧುರೀಣ ಎಸ್.ಎಸ್. ಪಾಟೀಲ್, ಬಸವರಾಜ ಭರಮಗೌಡ್ರು, ಗ್ರಾಪಂ ಸದಸ್ಯರಾದ ಹೂನಗೌಡ ನಿಂಗನಗೌಡ್ರ, ರವಿಶಂಕರ ಬಾಳಿಕಾಯಿ, ಸುರೇಶ ತಡಗಣಿ, ಹನಮಗೌಡ ಜೋಗಿಹಳ್ಳಿ, ಶೇಖಪ್ಪ ಶಿನಕ್ಕನವರ, ಕವಿತಾ ಭರಮಗೌಡ್ರ, ಸಣ್ಣ ಈಶಪ್ಪ ತಡಗಣಿ, ನಾಗೇಂದ್ರಪ್ಪ ಹಂಚಿನಮನಿ, ಪ್ರೇಮಾ ಆರ್ ಎಂ, ಗಣೇಶಪ್ಪ ಶಿವನಕ್ಕನವರ, ಕಲ್ಲಪ್ಪ ದೋಪದಹಳ್ಳಿ, ಸಂಪರ್ಕ ಅಭಿಯಾನದ ಸಂಚಾಲಕ ಮಂಜುನಾಥ ಚಲವಾದಿ, ಸಹ ಸಂಚಾಲಕ ಮಹೇಶ್ ರಾಜೇರ, ಬಿ.ಟಿ.ಚಿಂದಿ, ಮಹೇಂದ್ರ ಜೋಗಿಹಳ್ಳಿ, ಹೂವಪ್ಪ ಚಿಕ್ಕಮ್ಮನವರ, ಮಲ್ಲನಗೌಡ ಭರಮಗೌಡ್ರ, ಈರಪ್ಪ ಬಣಕಾರ, ಸುರೇಶ ಗಡದಾರ, ಈಶಪ್ಪ ದಿವಿಗೀಹಳಿ, ದೇವಿಂದ್ರಪ್ಪ ಹಾಲುಂಡೇರ್, ಹರೀಶ್ ಬಣಕಾರ, ಮಂಜು ಜೋಗೀಹಳ್ಲಿ, ಕರಬಸಪ್ಪ ಬಣಕಾರ, ಮನೋಜ್ ಹಾರ್ನಹಳ್ಳಿ ಗ್ರಾಮದ ಮುಖಂಡರು ಇದ್ದರು.

click me!