ಮೋದಿ ಸರ್ಕಾರದಿಂದ ಸರ್ಕಾರಿ ಉದ್ದಿಮೆಗಳ ಖಾಸಗೀಕರಣ: ಅಬ್ದುಲ್‌ ಜಬ್ಬಾರ್‌

By Kannadaprabha NewsFirst Published Oct 9, 2022, 10:00 PM IST
Highlights

ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ ಎಲ್ಲವನ್ನೂ ಈಡೇರಿಸಿದ ಏಕೈಕ ಮುಖ್ಯಮಂತ್ರಿ ಎಂದರೆ ಅದು ಸಿದ್ದರಾಮಯ್ಯ ಅವರೊಬ್ಬ ಅಪರೂಪದ ನಾಯಕರು ಎಂದು ಹೇಳಿದ ಅಬ್ದುಲ್‌ ಜಬ್ಬಾರ್‌ 

ಹೊನ್ನಾಳಿ(ಅ.09):  ದೇಶದಲ್ಲಿ ಬಿಜೆಪಿ ಸರ್ಕಾರಗಳ ಆಡಳಿತದಿಂದ ದೇಶದ ಸಂಪತ್ತು ಶ್ರೀಮಂತರ ಪಾಲಾಗಿದೆ. ಸಂವಿಧಾನ ಉಳಿಯುವುದೇ ಕಷ್ಟಕರವಾಗುತ್ತಿದ್ದು, ದೇಶ ಸಂಘಟನೆಯಾಗಬೇಕೇ ಹೊರತು ವಿಘಟನೆಯಾಗಬಾರದು ಎಂದು ವಿಧಾನಪರಿಷತ್‌ ಸದಸ್ಯ ಕೆ.ಅಬ್ದುಲ್‌ ಜಬ್ಬಾರ್‌ ಹೇಳಿದರು.

ಪಟ್ಟಣದ ಶಾದಿ ಮಹಲ್‌ ಆವರಣದಲ್ಲಿ ಕಾಂಗ್ರೆಸ್‌ ಹಾಗೂ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳು ಹಮ್ಮಿಕೊಂಡಿದ್ದ ವಿಧಾನಪರಿಷತ್‌ಗೆ ನೂತನ ಸದಸ್ಯರಾಗಿ ಆಯ್ಕೆಯಾದ ಕೆ.ಅಬ್ದುಲ್‌ ಜಬ್ಬಾರ್‌ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ ಎಲ್ಲವನ್ನೂ ಈಡೇರಿಸಿದ ಏಕೈಕ ಮುಖ್ಯಮಂತ್ರಿ ಎಂದರೆ ಅದು ಸಿದ್ದರಾಮಯ್ಯಅವರೊಬ್ಬ ಅಪರೂಪದ ನಾಯಕರು ಎಂದು ಹೇಳಿದರು.

ಹುಬ್ಬಳ್ಳಿಯಲ್ಲಿ ಬಿಜೆಪಿ ರೈತ ಮೋರ್ಚಾ ಸಮಾವೇಶ; 10 ಲಕ್ಷ ಜನ ಬರುವ ನಿರೀಕ್ಷೆ: ಈರಣ್ಣ ಕಡಾಡಿ

ಕೇಂದ್ರದ ನರೇಂದ್ರ ಮೋದಿ ಸರ್ಕಾರ ಹಂತ ಹಂತವಾಗಿ ಸರ್ಕಾರಿ ಉದ್ದಿಮೆಗಳ ಖಾಸಗೀಕರಣ ಮಾಡುತ್ತಿದ್ದು ಇದರಿಂದ ಎಸ್ಸಿ, ಎಸ್ಟಿ, ಹಿಂದುಳಿದ, ಶೋಷಿತ ಜನಾಂಗದರನ್ನು ಮೀಸಲಾತಿಯಿಂದ ವಂಚಿತರಾಗಿ ಮಾಡಿ ಕೇವಲ ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡುವ ಹುನ್ನಾರ ನಡೆಸುತ್ತಿದ್ದು ಈ ಬಗ್ಗೆ ಅಲ್ಪಸಂಖ್ಯಾತರು ಸೇರಿ ಹಿಂದುಳಿದ ಜನಾಂಗದವರು ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಸರ್ಕಾರಗಳನ್ನು ಮನೆಗೆ ಕಳುಹಿಸುವ ಕೆಲಸ ಮಾಡಬೇಕು ಎಂದರು.

ಸಿದ್ದು ಹೊನ್ನಾಳಿಯಿಂದ ಸ್ಪರ್ಧಿಸಲಿ:

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಗೆಲುವಿಗೆ ಸಿದ್ದರಾಮಯ್ಯಯವರು ರಾಜ್ಯಕ್ಕೆ ನೀಡಿದ ಅನೇಕ ಜನಪರ ಯೋಜನೆಗಳೇ ಪ್ರಮುಖ ಕಾರಣವಾಗಲಿದೆ. ಒಂದು ವೇಳೆ ಸಿದ್ದರಾಮಯ್ಯನವರು ಹೊನ್ನಾಳಿ ಕ್ಷೇತ್ರದಿಂದ ಸ್ಪರ್ಧಿಸುವುದಾದರೇ ನಾನೇ ಸೂಚಕನಾಗುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಸುಭಾಷ್‌ ಮಾತನಾಡಿ ಮುಸ್ಲಿಮರಿಗೆ ಕೆಲವು ಕ್ಷೇತ್ರಗಳಲ್ಲಿ ಗೆಲ್ಲುವ ಶಕ್ತಿ ಇಲ್ಲದೇ ಇರಬಹುದು. ಆದರೇ ಸಲ್ಲದ ಅಭ್ಯರ್ಥಿಯ ಸೋಲಿಸುವ ಶಕ್ತಿ ಇದ್ದೇ ಇದೆ,ಸಿದ್ದರಾಮಯ್ಯ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುವುದಾದರೆ ಸ್ವಾಗತವಿದೆ ಎಂದ ಅವರು ಬಿಜೆಪಿ ಸರ್ಕಾರದಿಂದ ಸಂವಿಧಾನಕ್ಕೆ ಅಪಾಯ ಕಟ್ಟಿಟ್ಟಬುತ್ತಿ ಎಂದರು.

Davanagere: ಡಿ.23ರಿಂದ ಡಿ.25ರವರೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಅಧಿವೇಶನ

ಕಾಂಗ್ರೆಸ್‌ ಹಿರಿಯ ಮುಖಂಡ ಬಿ. ಸಿದ್ದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಅಬ್ದುಲ್‌ ಜಬ್ಬಾರ್‌ 3 ಬಾರಿ ಜಿಲ್ಲಾಧ್ಯಕ್ಷರಾಗಿ ಪಕ್ಷ ಗೆಲ್ಲಿಸುವಲ್ಲಿ ಸಫಲರಾಗಿದ್ದಾರೆ. ಇದೇ ರೀತಿ 3 ಬಾರಿ ಎಂಎಲ್‌ಸಿ ಆದ ಇವರ ಸೇವಾತತ್ಪರತೆಗೆ ಸಾಕ್ಷಿ. ಪಕ್ಷದಲ್ಲಿ ಅಧಿಕಾರ ಪಡೆದವರು ಪಕ್ಷದ ಒಳಿತು ಬಯಸಬೇಕೇ ಹೊರತು ಸ್ವಾರ್ಥಿಗಳಾಗದರೆ ಪಕ್ಷಕ್ಕೆ ಮಾರಕ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದಾವಣಗರೆ ನಗರ ಸಭೆ ಮಾಜಿ ಅಧ್ಯಕ್ಷ ವೀರಣ್ಣ, ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್‌.ಎ. ಉಮಾಪತಿ, ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಡಾ. ಈಶ್ವರ ನಾಯ್ಕ , ಅಲ್ಪಸಂಖ್ಯಾತ ಘಟಕದ ವಾಜೀದ್‌ ಮಾತನಾಡಿದರು. ಜಿ.ಪಂ.ಮಾಜಿ ಸದಸ್ಯ ಡಿ.ಜಿ.ವಿಶ್ವನಾಥ್‌, ಎಂ.ರಮೇಶ್‌ ಎಚ್‌.ಬಿ.ಶಿವಯೋಗಿ, ಜಿಲ್ಲಾ ವಕ್ಫ ಮಂಡಳಿ ಅಧ್ಯಕ್ಷ ಸಿರಾಜ್‌, ಜಿಲ್ಲಾ ಮುಖಂಡ ಹಾಲೇಶಪ್ಪ, ತಾಲೂಕು ಬ್ಲಾಕ್‌ ಸಮಿತಿ ಅಧ್ಯಕ್ಷರಾಗಿದ ಸಣ್ಣಕ್ಕಿ ಬಸವನಗೌಡ. ಎಚ್‌.ಎ.ಗದ್ದಿಗೇಶ್‌,ಪೀರ್ಯಾನಾಯ್ಕ, ಯಂಕ್ಯಾನಾಯ್ಕ,ಸೇರಿದಂತೆ ಅನೇಕ ಮುಖಂಡರು ಇದ್ದರು.
 

click me!