ಭಾರತ ಜೋಡೋ ಯಾತ್ರೆಯಿಂದ ಕಾಂಗ್ರೆಸ್‌ ಬಣ್ಣ ಬಯಲು: ಬಸನಗೌಡ ಪಾಟೀಲ ಯತ್ನಾಳ

By Kannadaprabha News  |  First Published Oct 9, 2022, 8:00 PM IST

ಬೀದಿಗೆ ಬಂದ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಲೇವಡಿ


ವಿಜಯಪುರ(ಅ.09):  ಕಾಂಗ್ರೆಸ್‌ ಭಾರತ ಜೋಡೋ ಯಾತ್ರೆಯಿಂದ ಕಾಂಗ್ರೆಸ್‌ ಬಣ್ಣ ಬಯಲಾಗಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್‌ ಭಾರತ ಜೋಡೋ ಯಾತ್ರೆಯಿಂದ ನಮಗೆ ಒಳ್ಳೆಯದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟರನ್ನು ಬೀದಿಗೆ ತರುವುದಾಗಿ ಹೇಳಿದ್ದರು. ಈಗ ಆ ಮಾತು ನಿಜವಾಗಿದೆ. ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಬೀದಿಗೆ ಬಂದಿದ್ದಾರೆ. ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಕುಣಿಯುತ್ತಿದ್ದಾರೆ ಅವರಿಗೆ ಹುಚ್ಚು ಹಿಡಿದಂತಾಗಿದೆ. ಪ್ರಧಾನಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಇದು ನಮ್ಮ ಗೆಲವು ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿ.ಎಸ್‌.ಯಡಿಯೂರಪ್ಪನವರ ಜಂಟಿ ಯಾತ್ರೆಗೆ ಪ್ರತಿಕ್ರಿಯಿಸಿದ ಯತ್ನಾಳ, ನಮ್ಮನ್ನು ಕರೆದರೆ ಹೋಗುತ್ತೇವೆ. ಕರೆಯದಿದ್ದರೆ ಬಿಎಸ್‌ವೈ ಮೇಲೆ ಮುಗಿಸುತ್ತಿದ್ದರೆ ಮುಗಿಸಲಿ. ಬಿ.ಎಸ್‌.ಯಡಿಯೂರಪ್ಪನವರ ಮೇಲೆಯೇ ಬಿಜೆಪಿಗೆ 180 ಸ್ಥಾನಗಳು ಬರುತ್ತವೆ ಎಂದರೆ ಅದನ್ನೇ ಮಾಡಲಿ ಎಂದು ಯತ್ನಾಳ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Tap to resize

Latest Videos

ಕೇಜ್ರಿವಾಲ್ ಸರ್ಕಾರಕ್ಕೆ ಮತ್ತೊಂದು ಹಿನ್ನಡೆ, ವಿವಾದ ಸೃಷ್ಟಿಸಿದ ಸಚಿವ ರಾಜೇಂದ್ರ ಪಾಲ್ ಗೌತಮ್ ರಾಜೀನಾಮೆ!

ಬೀದರ್‌ ನಗರದಲ್ಲಿ ಮಹ್ಮದ ಗವಾನ್‌ ಮದರಸಾದಲ್ಲಿ ನವರಾತ್ರಿ ಪೂಜೆ ಮಾಡಿರುವುದರಲ್ಲಿ ತಪ್ಪೇನಿಲ್ಲ. ಪೂಜೆ ಮಾಡಿದವರನ್ನು ಬಂಧಿಸಿರುವುದು ಸರಿಯಲ್ಲ. ಪ್ರತಿ ವರ್ಷ ಅಲ್ಲಿ ದೇವಿಗೆ ಪೂಜೆ ಸಲ್ಲಿಸುಲಾಗುತ್ತಿತ್ತು. ಈ ಸತ್‌ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗಬೇಕು. ಸಂಪ್ರದಾಯಕ್ಕೆ ತೊಂದರೆ ಮಾಡಿದ ಅಧಿಕಾರಿಗಳ ಮೇಲೆ ಕ್ರಮ ತಗೆದುಕೊಳ್ಳಬೇಕು ಎಂದರು.

ಈಶ್ವರಪ್ಪನವರು ಸಚಿವ ಸ್ಥಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಯತ್ನಾಳ, ಮುಖ್ಯಮಂತ್ರಿಗಳು ತಮ್ಮ ಬಳಿ ಹಲವಾರು ಖಾತೆಗಳನ್ನು ಇಟ್ಟುಕೊಂಡು ಕೂರಬಾರದು. ಕೂಡಲೇ ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಈಶ್ವರಪ್ಪನವರ ಮೇಲೆ ಸುಳ್ಳು ಆರೋಪ ಮಾಡಿದ ಹಿನ್ನೆಲೆಯಲ್ಲಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಅವರಿಗೂ ಸಚಿವ ಸ್ಥಾನ ನೀಡಬೇಕು. ಬಸವರಾಜ ಹೊರಟ್ಟಿಅವರಿಗೆ ಸಭಾಪತಿ ಸ್ಥಾನ ನೀಡಬೇಕು. ಅವರಿಗೆ ಸಭಾಪತಿ ಸ್ಥಾನ ನೀಡುವುದಾಗಿ ಹೇಳಿಯೇ ಬಿಜೆಪಿಗೆ ಕರೆ ತರಲಾಗಿತ್ತು. ಈ ಮಾತನ್ನು ಬಿಜೆಪಿ ಉಳಿಸಿಕೊಳ್ಳಬೇಕಿದೆ ಎಂದರು.

ಅಭಿವೃದ್ಧಿ ಮಾಡುವ ಹುಚ್ಚು ನನ್ನನ್ನು ರಾಜಕೀಯಕ್ಕೆ ಕರೆತಂದಿದೆ; ಬಸವರಾಜ ರಾಯರೆಡ್ಡಿ

ರೈಲಿಗೆ ಇಡಲಾದ ಟಿಪ್ಪು ಸುಲ್ತಾನ ಹೆಸರನ್ನು ಬದಲಿಸಿದ್ದು ಒಳ್ಳೆಯ ವಿಚಾರ. ಟಿಪ್ಪು ಸುಲ್ತಾನ ಹಿಂದುಗಳನ್ನು ಕೊಲೆ ಮಾಡಿದ ಓರ್ವ ಮತಾಂಧ ಆಗಿದ್ದರು. ರಾಜನಾಗಿರಲಿಲ್ಲ. ಅದರ ಬದಲು ಒಡೆಯರ್‌ ಅವರ ಹೆಸರು ನಾಮಕರಣ ಮಾಡಿದ್ದು ಸೂಕ್ತ. ಶಿಕ್ಷಕರ ಅಕ್ರಮ ನೇಮಕಾತಿ ನಡೆದಿದೆ. ಇದಕ್ಕೆ ಕಡಿವಾಣ ಹಾಕಬೇಕು. ಸಿಒಡಿ ತನಿಖೆ ನಡೆಸಿ ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹೇಳಬೇಕಿದೆ ಎಂದು ತಿಳಿಸಿದರು.

ಕಾಂಗ್ರೆಸ್‌ ಭಾರತ ಜೋಡೋ ಯಾತ್ರೆಯಿಂದ ನಮಗೆ ಒಳ್ಳೆಯದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟರನ್ನು ಬೀದಿಗೆ ತರುವುದಾಗಿ ಹೇಳಿದ್ದರು. ಈಗ ಆ ಮಾತು ನಿಜವಾಗಿದೆ. ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಬೀದಿಗೆ ಬಂದಿದ್ದಾರೆ. ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಕುಣಿಯುತ್ತಿದ್ದಾರೆ ಅವರಿಗೆ ಹುಚ್ಚು ಹಿಡಿದಂತಾಗಿದೆ. ಪ್ರಧಾನಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಇದು ನಮ್ಮ ಗೆಲವು ಅಂತ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ. 
 

click me!