ಕೃಷಿ ಸಚಿವ ಚಲುವಗೆ ಕ್ಲೀನ್‌ಚಿಟ್‌ ಕೊಡಲೆಂದು ಸಿಐಡಿ ತನಿಖೆ: ಮುಖ್ಯಮಂತ್ರಿ ಚಂದ್ರು

By Kannadaprabha News  |  First Published Aug 11, 2023, 9:08 PM IST

ರಾಜ್ಯ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಇಲಾಖೆಯ ಅಧಿಕಾರಿಗಳ ಬಳಿ ಲಂಚ ತೆಗೆದುಕೊಂಡ ಪ್ರಕರಣ ಸಂಬಂಧ ತರಾತುರಿ ಸಿಐಡಿ ತನಿಖೆ ನಡೆಸುವ ಬದಲು ನ್ಯಾಯಾಂಗ ತನಿಖೆ ಮಾಡಬೇಕು ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ. 


ಬೆಂಗಳೂರು (ಆ.11): ರಾಜ್ಯ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಇಲಾಖೆಯ ಅಧಿಕಾರಿಗಳ ಬಳಿ ಲಂಚ ತೆಗೆದುಕೊಂಡ ಪ್ರಕರಣ ಸಂಬಂಧ ತರಾತುರಿ ಸಿಐಡಿ ತನಿಖೆ ನಡೆಸುವ ಬದಲು ನ್ಯಾಯಾಂಗ ತನಿಖೆ ಮಾಡಬೇಕು ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಈ ಲಂಚ ಪ್ರಕರಣ ಸಂಬಂಧ ತರಾತುರಿಯಲ್ಲಿ ಸಿಐಡಿ ತನಿಖೆಗೆ ಮುಂದಾಗಿರುವುದನ್ನು ಗಮನಿಸಿದರೆ, ಪ್ರಕರಣದಲ್ಲಿ ಸಚಿವರಿಗೆ ಕ್ಲೀನ್‌ ಚೀಟ್‌ ನೀಡುವ ಇಂಗಿತ ಇದ್ದಂತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಸಿಐಡಿ ಅಧಿಕಾರಿಗಳು ಕೃಷಿ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿರುವುದು ಹಾಗೂ ಮೈಸೂರಿನಲ್ಲಿ ಅಂಚೆ ಪೆಟ್ಟಿಗೆಯ ಬಳಿ ತನಿಖೆ ಮಾಡುತ್ತಿರುವುದನ್ನು ಗಮನಿಸಿದರೆ ಸಚಿವರನ್ನು ಪ್ರಕರಣದಿಂದ ಮುಕ್ತ ಗೊಳಿಸು ವುದೇ ಸರ್ಕಾರದ ಉದ್ದೇಶವಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದಲ್ಲಿ ಮಾತ್ರ ಸಚಿವರ ಲಂಚಾವತಾರ ಬೆಳಕಿಗೆ ಬರುತ್ತದೆ. ಸರ್ಕಾರ ಈ ಕೂಡಲೇ ಈ ಬಗ್ಗೆ ಕಾರ್ಯಪ್ರವೃತ್ತರಾ ಗಬೇಕು ಎಂದು ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾಗಿ 80 ದಿನಗಳಾಗಿವೆ. 

Tap to resize

Latest Videos

ಕಮಿಷನ್ ಆರೋಪ: ಸರ್ಕಾರಕ್ಕೆ ಆರ್‌.ಅಶೋಕ್‌ 10 ಪ್ರಶ್ನೆ

ಈ ಹಿಂದಿನ ಭಷ್ಟ ಬಿಜೆಪಿ ಸರ್ಕಾರದ ಶೇ.40ರಷ್ಟುಕಮಿಷನ್‌ ಹಗರಣವನ್ನು ಮುಂದಿರಿಸಿಕೊಂಡು ಹಾಗೂ ಆಮ್‌ ಆದ್ಮಿ ಪಕ್ಷದ ಕಾರ್ಯಕ್ರಮಗಳನ್ನು ಕದ್ದು ತನ್ನ ಗ್ಯಾರಂಟಿಗಳಿಗಾಗಿ ಪರಿಶಿಷ್ಟರ ಹಣವನ್ನು ದುರುಪಯೋಗಪಡಿಸಿಕೊಂಡಿದೆ. ಈ ಮುಖಾಂತರ ಸಾಮಾಜಿಕ ನ್ಯಾಯಕ್ಕೆ ಎಳ್ಳು-ನೀರು ಬಿಟ್ಟಿರುವ ಕಾಂಗ್ರೆಸ್‌ ಸರ್ಕಾರ, ಈಗ ಗುತ್ತಿಗೆದಾರರ ಬಾಕಿ ಬಿಲ್‌ ಪಾವತಿಗೆ ನಾಚಿಕೆ ಇಲ್ಲದೆ ಶೇ.15ರಷ್ಟುಕಮಿಷನ್‌ಗೆ ಬೇಡಿಕೆ ಇರಿಸಿದೆ. ಭ್ರಷ್ಟಕಾಂಗ್ರೆಸ್‌ ಕಂಡೀಷನ್‌ ಸರ್ಕಾರದಿಂದಾಗಿ ರಾಜ್ಯದ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ತಲುಪಿರುವುದು ಈ ರಾಜ್ಯದ ದುರಂತ. ಸರ್ಕಾರದ ವಿರುದ್ಧ ಆಮ್‌ ಆದ್ಮಿ ಪಕ್ಷವು ಮುಂದಿನ ದಿನಗಳಲ್ಲಿ ಪ್ರತಿಭಟನೆಗೆ ಇಳಿಯಲಿದೆ ಎಂದು ಚಂದ್ರು ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.

click me!