Loyalty Oath : "ದೇವ್ರ ಮೇಲೆ ಆಣೆ ಮಾಡಿ ಹೇಳಿ, ಬೇರೆ ಪಕ್ಷಕ್ಕೆ ಹೋಗಲ್ಲ ಅಂತ" ಮಣಿಪುರ, ಗೋವಾದಲ್ಲಿ ಪ್ರಮಾಣ ಪವರ್

Suvarna News   | Asianet News
Published : Feb 03, 2022, 09:19 PM IST
Loyalty Oath : "ದೇವ್ರ ಮೇಲೆ ಆಣೆ ಮಾಡಿ ಹೇಳಿ, ಬೇರೆ ಪಕ್ಷಕ್ಕೆ ಹೋಗಲ್ಲ ಅಂತ" ಮಣಿಪುರ, ಗೋವಾದಲ್ಲಿ ಪ್ರಮಾಣ ಪವರ್

ಸಾರಾಂಶ

ಮಂದಿರ, ಮಸೀದಿ, ಚರ್ಚ್ ಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪ್ರಮಾಣ ಅಭ್ಯರ್ಥಿಗಳಿಂದ "ಸಹಕಾರ ಒಪ್ಪಂದ" ಪತ್ರ ಪಡೆದುಕೊಂಡ  ಬಿಜೆಪಿ ಪಕ್ಷಾಂತರ ತಡೆಯಲು ರಾಜಕೀಯ ಪಕ್ಷಗಳ ಭಿನ್ನ ಕ್ರಮಗಳು  

ನವದೆಹಲಿ (ಫೆ.3): ರಾಜಕೀಯ ಪಕ್ಷಗಳಿಗೆ ಚುನಾವಣೆ ಎದುರಿಸುವುದು ದೊಡ್ಡ ಸವಾಲಾದರೆ, ಚುನಾವಣೆ ಮುಗಿದ ಬಳಿಕ ಗೆದ್ದ ಎಂಎಲ್ ಎ(MLA)ಗಳನ್ನು ವಿರೋಧ ಪಕ್ಷದಿಂದ ರಕ್ಷಣೆ ಮಾಡಿಕೊಳ್ಳುವುದು ಇನ್ನೂ ದೊಡ್ಡ ಸವಾಲಿನ ಕೆಲಸ. ಈ ನಿಟ್ಟಿನಲ್ಲಿ ಜಾಗೃತವಾಗಿರುವ ಮಣಿಪುರ (Manipur) ಹಾಗೂ ಗೋವಾದ (Goa) ಬಿಜೆಪಿ (BJP) ಹಾಗೂ ಕಾಂಗ್ರೆಸ್ (Congress) ಪಕ್ಷಗಳು ತಮ್ಮ ಅಭ್ಯರ್ಥಿಗಳಿಂದ "ನಿಷ್ಠೆಯ ಪ್ರಮಾಣ" (Loyalty Oath) ತೆಗೆದುಕೊಳ್ಳುತ್ತಿದೆ. ಗೋವಾದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳಿಂದ "ಸಹಕಾರ ಒಪ್ಪಂದ" (agreement of cooperation)ಪತ್ರವನ್ನು ಪಡೆದಿದ್ದರೆ, ಕಾಂಗ್ರೆಸ್ ಪಕ್ಷವು ಮಂದಿರ, ಮಸೀದಿ ಹಾಗೂ ಚರ್ಚ್ ಗಳಿಗೆ ತನ್ನ ಅಭ್ಯರ್ಥಿಗಳನ್ನು ಕರೆದುಕೊಂಡು ಹೋಗಿದ್ದು, ಅಲ್ಲಿ ನಿಷ್ಠೆಯ ಪ್ರಮಾಣವನ್ನು ಮಾಡಿಸಿದೆ. ಗೋವಾದ ಬೆನ್ನಲ್ಲಿಯೇ ಮಣಿಪುರ ಕಾಂಗ್ರೆಸ್ ಕೂಡ ತನ್ನ ಅಭ್ಯರ್ಥಿಗಳನ್ನು ಮಂದಿರ, ಮಸೀದಿ ಹಾಗೂ ಚರ್ಚ್ ಗಳ ಟೂರ್ ಮಾಡಿಸಿದೆ.

ಮಣಿಪುರ ವಿಧಾನಸಭಾ ಚುನಾವಣೆಗೆ (Manipur Election) ಟಿಕೆಟ್ ಪಡೆದುಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿಗಳು ಗುರುವಾರ  ರಾಜ್ಯದ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದರು. ಅಭ್ಯರ್ಥಿಗಳು ಮೊದಲು ಇಂಫಾಲ್‌ನ ಕಂಗ್ಲಾ ಕೋಟೆಗೆ ನಿಷ್ಠೆಯ ಪ್ರತಿಜ್ಞೆ ಸ್ವೀಕರಿಸಲು ಭೇಟಿ ನೀಡಿದರೆ, , ನಂತರ ಅವರು ಚರ್ಚ್, ಮಸೀದಿ ಮತ್ತು ನಂತರ ಮತ್ತೆ ದೇವಸ್ಥಾನಕ್ಕೆ ಭೇಟಿ ನೀಡಿದರು. ಪಕ್ಷದ ರಾಜ್ಯ ಘಟಕದ ಉಸ್ತುವಾರಿ ಭಕ್ತ ಚರಣ್ ದಾಸ್ (Bhakta Charan Das) ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಒಕ್ರಾಮ್ ಇಬೋಬಿ ಸಿಂಗ್ (Okram Ibobi Singh) ಅವರು ನಿಷ್ಠೆಯ ಪ್ರತಿಜ್ಞೆಯ ನೇತೃತ್ವ ವಹಿಸಿದ್ದರು. ಗೋವಾ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳು ಅದೇ ಪ್ರಕ್ರಿಯೆಯನ್ನು ಅನುಸರಿಸಿದ ಒಂದು ವಾರದ ನಂತರ ಮಣಿಪುರದ ಕಾಂಗ್ರೆಸ್ ಈ ಪ್ರಕ್ರಿಯೆಯನ್ನು ಅನುಸರಿಸಿದೆ.

ಕಾಂಗ್ಲಾ ಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಇಬೋಬಿ ಸಿಂಗ್, ಕಾಂಗ್ರೆಸ್ ಪಕ್ಷವು ದೇಶದ ಜಾತ್ಯತೀತ ರಚನೆಯಲ್ಲಿ ನಂಬಿಕೆ ಇಟ್ಟಿದೆ, ಅದಕ್ಕಾಗಿಯೇ ಪಕ್ಷವು ರಾಜ್ಯದ ವಿವಿಧ ಸಮುದಾಯಗಳ ಎಲ್ಲಾ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಪ್ರತಿಜ್ಞೆ ಮಾಡಲು ನಿರ್ಧರಿಸಿದೆ. ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ನಂತರ ಬೇರೆ ರಾಜಕೀಯ ಪಕ್ಷಗಳಿಗೆ ಪಕ್ಷಾಂತರ ಮಾಡುವುದಿಲ್ಲ ಎಂದು ಅಭ್ಯರ್ಥಿಗಳು ಪ್ರತಿಜ್ಞೆ ಮಾಡಿದರು. ಪಕ್ಷದ ನಿಯಮಗಳು ಮತ್ತು ನಿಬಂಧನೆಗಳಿಗೆ ಬದ್ಧರಾಗಿರುತ್ತೇವೆ ಎಂದು ಪ್ರತಿಜ್ಞೆ ಕೈಗೊಂಡಿದ್ದಾರೆ ಎಂದು ತಿಳಿಸಿದರು. 2017 ರ ಚುನಾವಣೆಯ ನಂತರ ಅನೇಕ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಪಕ್ಷಾಂತರಗೊಂಡಿದ್ದರಿಂದ ಈ ಕ್ರಮವು ಮಹತ್ವದ್ದಾಗಿದೆ. 

Attack On Owaisi: ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ!
ಮಣಿಪುರದ ಜನತೆಯ ಜನಾದೇಶವನ್ನು ಪ್ರತಿಯೊಂದು ರಾಜಕೀಯ ಪಕ್ಷಗಳು ಗೌರವಿಸಬೇಕು ಎಂದು ಚರಣ್ ದಾಸ್ ಹೇಳಿದರು. "2017 ರ ಚುನಾವಣೆಯಲ್ಲಿ, ನಮ್ಮ ಕೆಲವು ಶಾಸಕರು ಪಕ್ಷಾಂತರ ಮಾಡಿದ್ದಾರೆ ಮತ್ತು ಜನರ ಆದೇಶಕ್ಕೆ ಅಗೌರವ ತೋರಿದ್ದರು. ಇನ್ನು ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಕಾಂಗ್ರೆಸ್ ಅನ್ನು ವಿಭಜಿಸಲು ಎಲ್ಲಾ ದುರುದ್ದೇಶ ನಡೆಯನ್ನೂ ಮಾಡಿದೆ" ಎಂದು ಭಕ್ತ ಚರಣ್ ದಾಸ್ ಹೇಳಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಜನಾದೇಶದಿಂದಲ್ಲ, ತನ್ನದೇ ವಿಧಾನಗಳಿಂದ ಅಧಿಕಾರ ಹಿಡಿಯಿತು. ಆದ್ದರಿಂದ ಮಣಿಪುರದ ಜನರ ಆದೇಶವನ್ನು ಗೌರವಿಸಲು ಈ ಪ್ರತಿಜ್ಞೆ ಅಗತ್ಯವಿದೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ಜೆಡಿಯುಗೆ ಸ್ಥಾನವಿಲ್ಲ. ಆದರೆ, ಅವರ ಪ್ರವೇಶದ ನಂತರ, ಬಿಜೆಪಿ ಅದನ್ನು ಕಾಂಗ್ರೆಸ್ ಪಕ್ಷವನ್ನು ಒಡೆಯಲು ಬಳಸುತ್ತಿದೆ ಎಂದು ಹೇಳಿದರು.

UP Elections: ನಾಮಪತ್ರ ಸಲ್ಲಿಸಲು ಹೊರಟಿದ್ದ ಯೋಗಿ ಸಂಪುಟ ಸಚಿವ ಸಿದ್ಧಾರ್ಥನಾಥ್ ಸಿಂಗ್ ಮೇಲೆ ದಾಳಿ!
ಗೋವಾದಲ್ಲಿ ಕಾಂಗ್ರೆಸ್ ಪಕ್ಷ ಈಗಾಗಲೇ ಇಂಥದ್ದೊಂದು ನಿಷ್ಠೆಯ ಪ್ರಮಾಣವನ್ನು ತನ್ನ ಅಭ್ಯರ್ಥಿಗಳಿಗೆ ಮಾಡಿಸಿದ್ದರೆ, ಬಿಜೆಪಿ ಕೂಡ ಸಹಕಾರ ಒಪ್ಪಂದ ಪತ್ರವನ್ನು ಪಡೆದಿದೆ. ಹಾಗೇನಾದರೂ ಫಲಿತಾಂಶ ಬಂದ ಬಳಿಕ ಪಕ್ಷ ಬದಲಾವಣೆ ಮಾಡಿದರೆ ಆಗಲಿರುವ ಪರಿಣಾಮವನ್ನೂ ಅದರಲ್ಲಿ ವಿವರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!