ಸಿದ್ದರಾಮಯ್ಯರ ಗೆಲುವಿಗೆ 1ಕ್ವಿಂಟಾಲ್ ಜೋಳದ ಚೀಲ ಹೊತ್ತು ದೀಡ ನಮಸ್ಕಾರ ಹಾಕಿದ ಬೆಂಬಲಿಗ!

By Kannadaprabha News  |  First Published Apr 22, 2023, 3:23 PM IST

ಮಾಜಿ ಸಿಎಂ ಸಿದ್ದರಾಮಯ್ಯ, ನರಗುಂದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಆರ್‌. ಯಾವಗಲ್‌ ಸೇರಿದಂತೆ ಕಾಂಗ್ರೆಸ್‌ ಎಲ್ಲ ಕ್ಷೇತ್ರಗಳ ಸ್ಪರ್ಧಾಳುಗಳ ಗೆಲುವಿಗಾಗಿ ಪ್ರಾರ್ಥಿಸಿ ತಾಲೂ​ಕಿನ ಲಕ್ಕುಂಡಿ ಗ್ರಾಮದ ಹನಮಂತಪ್ಪ ಜಗಟ್ಟಿಎಂಬುವವರು ಗ್ರಾಮದಲ್ಲಿ 1 ಕ್ವಿಂಟಲ್‌ ಭಾರದ ಜೋಳದ ಚೀಲ ಹೊತ್ತು ದೀಡ ನಮಸ್ಕಾರ ಹಾಕಿದರು.


ಗದಗ (ಏ.22) : ಮಾಜಿ ಸಿಎಂ ಸಿದ್ದರಾಮಯ್ಯ, ನರಗುಂದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಆರ್‌. ಯಾವಗಲ್‌ ಸೇರಿದಂತೆ ಕಾಂಗ್ರೆಸ್‌ ಎಲ್ಲ ಕ್ಷೇತ್ರಗಳ ಸ್ಪರ್ಧಾಳುಗಳ ಗೆಲುವಿಗಾಗಿ ಪ್ರಾರ್ಥಿಸಿ ತಾಲೂ​ಕಿನ ಲಕ್ಕುಂಡಿ ಗ್ರಾಮದ ಹನಮಂತಪ್ಪ ಜಗಟ್ಟಿ(Hanamantappa jagatti)ಎಂಬುವವರು ಗ್ರಾಮದಲ್ಲಿ 1 ಕ್ವಿಂಟಲ್‌ ಭಾರದ ಜೋಳದ ಚೀಲ ಹೊತ್ತು ದೀಡ ನಮಸ್ಕಾರ ಹಾಕಿದರು.

ಲಕ್ಕುಂಡಿಯ ವಿರೂಪಾಕ್ಷೇಶ್ವರ ದೇವಸ್ಥಾನದಿಂದ ಮಾರುತಿ ದೇವಾಲಯದ ತನಕವೂ ಅವರು ತಮ್ಮ ಬೆನ್ನಿನ ಮೇಲೆ 1 ಕ್ವಿಂಟಲ್‌ ಭಾರದ ಚೀಲ ಹೊತ್ತು ದೀಡ್‌ ನಮಸ್ಕಾರ ಹಾಕಿದ್ದಾರೆ. ಇದು ಸುಮಾರು 200 ಮೀಟರ್‌ ಅಂತರವಾಗುತ್ತದೆ.

Tap to resize

Latest Videos

undefined

ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಉಮಚಗಿ, ನಜೀರಸಾಬ ಕಿರಟಗೇರಿ, ವೀರಯ್ಯ ಗಂಧದ, ನಿಂಗಪ್ಪ ಗುಂಜಾಳ, ರಾಜುಗೌಡ ಪಾಟೀಲ, ದೇವಪ್ಪ ಖಂಡು, ಗ್ರಾಪಂ ಸದಸ್ಯರಾದ ಕೆ.ಎಸ್‌. ಪೂಜಾರ, ಕುಬ್ಬಣ್ಣ ಬೆಂತೂರ, ರಮೇಶ ಭಾವಿ, ಮಂಜುನಾಥ ಗುಡಿಸಲಮನಿ, ಅನಸಮ್ಮ ಅಂಬಕ್ಕಿ, ಪುಷ್ಪಾ ಪಾಟೀಲ, ಸುಮಿತ್ರಾ ರೋಣದ, ರಜೀಯಾಬೇಗಂ ತಹಶೀಲ್ದಾರ, ಶಾಂತಮ್ಮ ಮಣಕವಾಡ, ಅನ್ನಪೂರ್ಣ ರಿತ್ತಿ, ನೀಲಮ್ಮ ವಡ್ಡರ, ಅಂದಾನಪ್ಪ ಕಣವಿ, ಮರದಾನಲಿ ದೊಡ್ಡಮನಿ, ಗವಿ ಯಲಿಶಿರುಂದ, ಮಂಜುನಾಥ ಹಾಲಿನವರ, ಶಫಿ ಡಾಲಾಯತ್‌, ಮಹೇಶ ಪಾಟೀಲ, ವಾಸೀಂ ಮಸೂತಿಮನಿ, ಪ್ರಶಾಂತ ಗಂಧದ, ಪರಶುರಾಮ ಕರಿಯಲ್ಲಪ್ಪನವರ, ರಾಘು ವಿಠೋಜಿ, ಮಂಜುನಾಥ ಕರಿಯಲ್ಲಪ್ಪನವರ, ನಜೀರಅಹ್ಮದ ಮಾಲ್ದಾರ, ಮಲ್ಲಪ್ಪ ಬಿನ್ನಾಳ, ಶಂಕ್ರಪ್ಪ ಮಾಲ್ವಿ, ಈಶಣ್ಣ ತಿಮ್ಮಾಪುರ, ಮಂಜುನಾಥ ತಡಹಾಳ, ಮಂಜುನಾಥ ಕಟ್ಟಿಗಾರ, ಕರಿಯಪ್ಪ ರವಳೋಜಿ, ರಸೂಲ್‌ ದೌವಲತ್ತರ, ಮಲ್ಲಪ್ಪ ಸೊರಟೂರ, ರವಿ ಕಟ್ಟಿಗ್ಗಾರ, ವಿರುಪಾಕ್ಷಿ ಪತ್ರಿಮಠ, ರಿಯಾಜ್‌ ಮಸೂತಿ ಇದ್ದರು.

ವರುಣಾದಲ್ಲಿ ಎದುರಾಳಿ ಯಾರೇ ನಿಂತರೂ ಸಿದ್ದರಾಮಯ್ಯ ಗೆಲ್ಲುತ್ತಾರೆ: ಶಾಸಕ ಡಾ.ಯತೀಂದ್ರ

click me!