
ಚಿಕ್ಕಮಗಳೂರು (ಏ.22): ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ಹೆಚ್.ಡಿ.ತಮ್ಮಯ್ಯ ವಿರುದ್ಧ ಮುಸ್ಲಿಮರು ರೆಬೆಲ್ ಆಗಿದ್ದಾರೆ. ನಮಾಜ್ ವೇಳೆ ಈದ್ಗಾ ಮೈದಾನದಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ಮುಸ್ಲಿಮರು ಕಿಡಿಕಾರಿದ್ದು, ಎರಡು ಮುಸ್ಲಿಂ ಗುಂಪುಗಳ ನಡುವೆ ವಾಕ್ಸಮರ ನಡೆದಿದೆ. ಎರಡು ಗುಂಡುಗಳ ನಡುವಿನ ಜಟಾಪಟಿ ವೇಳೆ ಕಾಂಗ್ರೆಸ್ ಅಭ್ಯರ್ಥಿ ಹೆಚ್. ಡಿ. ತಮ್ಮಯ್ಯ ಮೂಕ ಪ್ರೇಕ್ಷಕನಾಗಿ ನಿಂತಿದ್ದರು. ಚಿಕ್ಕಮಗಳೂರು ನಗರದ ಕೆಇಬಿ ಸರ್ಕಲ್ ನಲ್ಲಿ ಈದ್ಗಾ ಮೈದಾನ ವಿದ್ದು, ರಂಜಾನ್ ಹಬ್ಬದ ಹಿನ್ನೆಲೆ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವ ವೇಳೆ ಈ ಘಟನೆ ನಡೆದಿದೆ.
ಎರಡು ಗುಂಪುಗಳ ನಡುವೆ ಗಲಾಟೆ ತಾರಕಕೇರುತ್ತಿದ್ದಂತೆಯೇ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಡಿ. ತಮ್ಮಯ್ಯ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಮುಸ್ಲಿಮರ ಸಮಾಧಾನಕ್ಕೆ ಮುಂದಾದರು. ಅಲ್ಪಸಂಖ್ಯಾತರ ಅಸಮಾಧಾನದಿಂದ ಕಾಂಗ್ರೆಸ್ ಅಭ್ಯರ್ಥಿ ತಮ್ಮಯ್ಯ ಮುಜುಗರಕ್ಕೀಡಾದರು. ಚಿಕ್ಕಮಗಳೂಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಟಿ.ರವಿ ಮತ್ತು ಹೆಚ್.ಡಿ.ತಮ್ಮಯ್ಯ ನಡುವೆ ನೇರಾನೇರ ಹಣಾಹಣಿ ಇದೆ.
ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.
ವಿದ್ಯುತ್ ಸರಬರಾಜು ಮಾರ್ಪಾಡು
ಚಿಕ್ಕಮಗಳೂರು: ಗ್ರಾಮೀಣ ಉಪ ವಿಭಾಗದ ವ್ಯಾಪ್ತಿಯ ಎಲ್ಲಾ ಫೀಡರ್‌ಗಳಲ್ಲಿ ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ ಹೊರೆ ಅಧಿಕಗೊಂಡಿದ್ದು, ಇದರಿಂದ ಫೀಡರ್‌ಗಳು ಟ್ರೀಪ್ ಆಗುತ್ತಿದ್ದು, ನಿಗಧಿ ಪಡಿಸಿದ ವೇಳಾ ಪಟ್ಟಿಯಂತೆ ವಿದ್ಯುತ್ ಸರಬರಾಜು ಮಾಡುವುದು ಕಷ್ಟಕರವಾಗಿದೆ.
ನಾನು ಭೂತನೂ ಅಲ್ಲ ಪಿಶಾಚಿಯೂ ಅಲ್ಲ, ವರುಣಾದಲ್ಲಿ ಸಿದ್ದರಾಮಯ್ಯ ನಿರಂತರ ಪ್ರಚಾರ
ಫೀಡರ್‌ಗಳಿಗೆ ವಿದ್ಯುತ್ ಹೊರೆ ಕಡಿಮೆಯಾಗುವವರೆಗೂ ವಿದ್ಯುತ್ ಸರಬರಾಜು ಅವಧಿಯನ್ನು ಮಾರ್ಪಡಿಸಲು ಕ್ರಮ ವಹಿಸಲಾಗಿದೆ. ಮಲ್ಲೇನಹಳ್ಳಿ, ಐಡಿ ಪೀಠ, ಹಿರೇಕೊಳಲೆ ಫೀಡರ್‌ಗಳಿಗೆ ಬೆಳಿಗ್ಗೆ 5 ರಿಂದ ಸಂಜೆ 7 ಗಂಟೆ ವರೆಗೆ, ಮೂಗ್ತಿಹಳ್ಳಿ, ಜೋಳ್ದಾಳ್, ಶಿರವಾಸೆ ಭಾಗಗಳಿಗೆ ಮಧ್ಯಾಹ್ನ 12 ಗಂಟೆಯಿಂದ ಸಂಜೆ 7 ಗಂಟೆವರೆಗೆ, ಮರು ದಿನ ಬೆಳಿಗ್ಗೆ 5 ರಿಂದ ಮಧ್ಯಾಹ್ನ 12 ಗಂಟೆವರೆಗೆ 15 ದಿನಗಳಿಗೊಮ್ಮೆ ಪಾಳಿ ಬದಲಾವಣೆಯಾಗುವುದು ಎಂದು ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್‌ಡಿಕೆಗೆ ಅನಾರೋಗ್ಯ, ಚುನಾವಣಾ ಪ್ರಚಾರ ಕಾರ್ಯಕ್ರಮಗಳು ದಿಢೀರ್ ರದ್ದು!
ಮೌಲ್ಯಮಾಪನಾ ಕೇಂದ್ರಸುತ್ತ ನಿಷೇಧಾಜ್ಞೆ ಜಾರಿ
ಚಿಕ್ಕಮಗಳೂರು: ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೇಂದ್ರಗಳ ಸುತ್ತಮುತ್ತ ಏ.21 ರಿಂದ ಮೌಲ್ಯ ಮಾಪನ ಮುಗಿಯುವವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಆದೇಶ ಹೊರಡಿಸಿದ್ದಾರೆ. ಚಿಕ್ಕಮಗಳೂರಿನ ಸಂತ ಜೋಸೆಫ್‌ರ ಬಾಲಿಕಾ ಪ್ರೌಢಶಾಲೆ, ಸಂತ ಜೋಸೆಫ್‌ರ ಬಾಲಕರ ಪ್ರೌಢಶಾಲೆ, ವಾಸವಿ ಪ್ರೌಢಶಾಲೆ, ಟಿಎಂಎಸ್ ಶಾಲೆ, ಜೆವಿಎಸ್ ಪ್ರೌಢಶಾಲೆ, ಭುವನೇಂದ್ರ ಪ್ರೌಢಶಾಲೆಯಲ್ಲಿ ಮೌಲ್ಯ ಮಾಪನಾ ನಡೆಯಲಿದ್ದು, ಈ ನಿಷೇಧಾಜ್ಞೆ ಕರ್ತವ್ಯದ ಮೇಲಿರುವ ಅಧಿಕಾರಿಗಳು, ನೌಕರರಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.