ಜಾತಿ, ಧರ್ಮ ಮೀರಿದ ಸಮಾಜ ನಿರ್ಮಾಣವಾಗಬೇಕು: ಸಚಿವ ಮಹದೇವಪ್ಪ

By Kannadaprabha News  |  First Published Jun 10, 2024, 9:05 AM IST

ಜಾತಿ ಮತ್ತು ಧರ್ಮವನ್ನು ಮೀರಿದ ಸಮಾಜ ನಿರ್ಮಿಸಿದರೆ ಜಾತಿ ವಿನಾಶಕ್ಕೆ ಕಾರಣವಾಗುತ್ತದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು. 
 


ಮೈಸೂರು (ಜೂ.10): ಜಾತಿ ಮತ್ತು ಧರ್ಮವನ್ನು ಮೀರಿದ ಸಮಾಜ ನಿರ್ಮಿಸಿದರೆ ಜಾತಿ ವಿನಾಶಕ್ಕೆ ಕಾರಣವಾಗುತ್ತದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಬಸವ ಜಯಂತಿಯಲ್ಲಿ ಮಾತನಾಡಿದ ಅವರು, ಜಾತಿಯ ಶ್ರೇಷ್ಠತೆ ಅಳಿಯದಿದ್ದರೆ ಜಾತಿ ಎಂದಿಗೂ ವಿನಾಶವಾಗದು ಎಂದರು.

ಬಸವಣ್ಣನವರು ಕಂಡ ಕನಸಿನಂತೆ ಸುಖಿ ರಾಜ್ಯದ ಕಲ್ಪನೆಯಲ್ಲಿ ಸಿದ್ಧರಾಮಯ್ಯ ಅವರು ಆಡಳಿತ ನಡೆಸುತ್ತಿದ್ದಾರೆ. ಬಸವ ಜಯಂತಿ ಎಂದರೆ ಜನರ ಜಯಂತಿ, ಜಾತಿ ವಿನಾಶದ ಜಯಂತಿ, ವೈಜ್ಞಾನಿಕ, ವೈಚಾರಿಕತೆ ಮೂಡಿಸುವ ಜಯಂತಿಯಾಗಿದೆ ಎಂದು ಅವರು ಹೇಳಿದರು. 12ನೇ ಶತಮಾನದಲ್ಲಿ ಬಸವಣ್ಣ ಅವರು ಸಾಮಾಜಿಕ ಕ್ರಾಂತಿಯ ಮೂಲಕ ವೈದಿಕ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿ, ಜನರಲ್ಲಿ ಜಾಗೃತಿ ಮೂಡಿಸಿದರು. ಬಸವಣ್ಣನವರ ಹಾದಿಯಲ್ಲಿಯೇ 20ನೇ ಶತಮಾನದಲ್ಲಿ ಅಂಬೇಡ್ಕರ್ ಮುಂದುವರಿಸಿದರು. ಇಂದಿನ ಸಂಸತ್ತು ಬಸವಣ್ಣ ಅವರ ಅನುಭವ ಮಂಟಪವಾಗಿದೆ ಎಂದರು.

Latest Videos

undefined

ಬಿಜೆಪಿ ಮೈತ್ರಿಯಿಂದ ಜೆಡಿಎಸ್‌ಗೆ ಭರ್ಜರಿ ಲಾಭ: ಎಚ್‌.ಡಿ.ಕುಮಾರಸ್ವಾಮಿಗೆ ಕೇಂದ್ರ ಸಚಿವ ಸ್ಥಾನ

ಹಲವು ಕಾರಣಗಳಿಂದ ಜಾತೀಯತೆ ಪಾರುಪತ್ಯ ಆಗಿದೆ. ಬಸವಣ್ಣ ಜಾತೀಯತೆ ತೊಡೆದು ಹಾಕಲು ನಾನು ಮಾದರ ಚನ್ನಯ್ಯನ ಮಗನೆಂದು ಹೇಳಿದರು. ಆದರೆ, ಇಂದು ಜಾತಿ ಗಟ್ಟಿಗೊಳಿಸುವ ಕೆಲಸ ಆಗುತ್ತಿರುವುದು ಮನಸ್ಸಿಗೆ ಬೇಸರವಾಗುತ್ತಿದೆ ಎಂದು ಅವರು ಹೇಳಿದರು. ಚರಿತ್ರೆ ಗೊತ್ತಿಲ್ಲದವರಿಗೆ ಇತಿಹಾಸದ ದಿನಗಳನ್ನು ತಿಳಿಸಬೇಕು. ಬಸವಣ್ಣ ಧರ್ಮವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯದರು. ಮಾನವ ಧರ್ಮ ಸಾರಿದರು. ಇಂದು ಅದೇ ಮಾನವ ಧರ್ಮದಂತೆ ನಾವೆಲ್ಲರೂ ಸಾಗಬೇಕಿದೆ ಎಂದರು.

click me!