ಬಿಜೆಪಿ ಮೈತ್ರಿಯಿಂದ ಜೆಡಿಎಸ್‌ಗೆ ಭರ್ಜರಿ ಲಾಭ: ಎಚ್‌.ಡಿ.ಕುಮಾರಸ್ವಾಮಿಗೆ ಕೇಂದ್ರ ಸಚಿವ ಸ್ಥಾನ

By Kannadaprabha News  |  First Published Jun 10, 2024, 8:42 AM IST

ಲೋಕಸಭಾ ಚುನಾವಣೆಯಲ್ಲಿ ಕೇವಲ 2 ಸ್ಥಾನಗಳನ್ನು ಗಳಿಸಿದರೂ ಮಂಡ್ಯ ಕ್ಷೇತ್ರದಿಂದ ಜಯಭೇರಿ ಬಾರಿಸಿದ ಪಕ್ಷದ ರಾಜ್ಯಾಧ್ಯಕ್ಷರಾಗಿರುವಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ಲಭಿಸಿದೆ.
 


ಬೆಂಗಳೂರು (ಜೂ.10): ಸುಮಾರು 8 ತಿಂಗಳ ಹಿಂದೆ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲು ಒಲವು ತೋರಿದ ಜೆಡಿಎಸ್‌ಗೆ ಆ ದೋಸ್ತಿ ಅಂತಿಮ ವಾಗಿ ಒಳ್ಳೆಯ ಲಾಭವನ್ನೇ ತಂದುಕೊಟ್ಟಿದೆ. ಲೋಕಸಭಾ ಚುನಾವಣೆಯಲ್ಲಿ ಕೇವಲ 2 ಸ್ಥಾನಗಳನ್ನು ಗಳಿಸಿದರೂ ಮಂಡ್ಯ ಕ್ಷೇತ್ರದಿಂದ ಜಯಭೇರಿ ಬಾರಿಸಿದ ಪಕ್ಷದ ರಾಜ್ಯಾಧ್ಯಕ್ಷರಾಗಿರುವಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ಲಭಿಸಿದೆ. ಇದರಿಂದ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಬಲಪಡಿಸಲು ಆನೆಬಲ ಬಂದಂತಾಗಿದೆ. ಬರುವ ವಿವಿಧ ಸ್ಥಳೀಯ ಸಂಸ್ಥೆಗಳ ಚು ನಾವಣೆಯಲ್ಲಿ ಜೆಡಿಎಸ್ ಪಕ್ಷ ರಾಜ್ಯಾದ್ಯಂತ ಅಲ್ಲದಿದ್ದರೂ ಹಳೆ ಮೈಸೂರು ಭಾಗದಲ್ಲಿ ತನ್ನ ನೆಲೆ ಗಟ್ಟಿ ಮಾಡಿಕೊಳ್ಳಲು ಈಗ ಕೇಂದ್ರದ ಎನ್‌ಡಿಎ ಸರ್ಕಾರದಲ್ಲಿ ಪಾಲುದಾರನಾಗಿರುವುದು ಸಹಕಾರಿಯಾಗಲಿದೆ. 

ಕುಮಾರಸ್ವಾಮಿ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ಸಿಕ್ಕಿರುವುದರಿಂದ ಪಕ್ಷದ ಕಾರ್ಯ ಕರ್ತರಲ್ಲಿನ ಉತ್ಸಾಹ ಹೆಚ್ಚಲಿದೆ. ಮುಂದಿನ ದಿನಗಳಲ್ಲಿ ನಡೆಯಲಿವೆ ಎನ್ನಲಾದ ವಿವಿಧ ಸ್ಥಳೀಯ ಸಂಸ್ಥೆ ಗಳ ಚುನಾವಣೆಯಲ್ಲಿ ಕಾರ್ಯಕರ್ತರ ಜತೆಗೆ ಸ್ಥಳೀಯ ಮುಖಂಡರು, ಶಾಸಕರು ಹೊಸ ಹುಮ್ಮಸ್ಸಿನಿಂದ ಓಡಾಡಲು ನೆರವಾಗಲಿದೆ ಎಂಬ ನಿರೀಕ್ಷೆಯಿದೆ. ವಿಧಾನಸಭಾ ಚುನಾವಣೆ ಬಳಿಕ ಒಕ್ಕಲಿಗ ಸಮುದಾಯದಲ್ಲಿನ ನಾಯಕತ್ವಕ್ಕಾಗಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ಒಂದು ರೀತಿಯಲ್ಲಿ ಶೀತಲ ಯುದ್ಧವೇ ಆರಂಭವಾಗಿತ್ತು. ಶಿವಕುಮಾರ್‌ ಅವರಿಗೆ ಉಪಮುಖ್ಯಮಂತ್ರಿ ಸ್ಥಾನದಂಥ ಅಧಿಕಾರ ಸಿಕ್ಕಿದ್ದರಿಂದ ಸಹಜವಾಗಿಯೇ ಮುಂದಿದರು. 

Tap to resize

Latest Videos

ಸಂವಿಧಾನ ಬದಲಿಸ ಹೊರಟಿದ್ದವರು ಈಗ ಕಣ್ಣಿಗೆ ಒತ್ತಿಕೊಳಿದ್ದಾರೆ: ಸಚಿವ ಸತೀಶ್ ಜಾರಕಿಹೊಳಿ

ಇದೀಗ ಕುಮಾರಸ್ವಾಮಿ ಅವರಿಗೂ ಕೇಂದ್ರ ಸಚಿವ ಸ್ಥಾನ ಲಭಿಸಿದ್ದರಿಂದ ಶಿವಕುಮಾರ್‌ಗ್ರೆ ಸಮಬಲದ ಟಕ್ಕರ್‌ ನೀಡುವುದು ನಿಶ್ಚಿತವಾಗಿದೆ. ಮೈತ್ರಿ ಕುರಿತು ಚರ್ಚೆ ನಡೆದ ವೇಳೆ ರಾಜಕೀಯ ವಲಯದಲ್ಲಿ ಪರ-ವಿರೋಧದ ಟೀಕೆಗಳು ಕೇಳಿಬಂದಿದ್ದವು. ಆದರೆ, ಜೆಡಿ ಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ತಲೆಕೆಡಿಸಿಕೊಳ್ಳಲಿಲ್ಲ. ಅವರಿಗೆ ಮುಂದಿನ ಲೆಕ್ಕಾಚಾರ ಸ್ಪಷ್ಟವಾಗಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವಗೆಲುವುಸಾಧಿಸಿ, ಜೆಡಿಎಸ್‌ ನಿರೀಕ್ಷೆ ಹುಸಿಯಾದ ಬಳಿಕ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಬೀಜ ನೆಡಲಟ್ಟಿತು. ದಿನಗಳೆದಂತೆ ತಮ್ಮ ಪಕ್ಷವನ್ನು ಕಾಂಗ್ರೆಸ್ ನಾಯಕರು ವಿಭಜಿಸಬಹುದು ಎಂಬ ಆತಂಕ ಶುರುವಾಯಿತು. 

ಪಕ್ಷ ಉಳಿಸಿಕೊಳ್ಳಲು ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವುದೇ ಸೂಕ್ತ ಎಂಬ ಚಿಂತನೆ ದಿನೇ ದಿನೇ ಸಸಿಯಂತೆ ಬೆಳೆಯತೊಡಗಿತು. ದೇವೇಗೌಡರು ಸದ್ದಿಲ್ಲದೇ ಪ್ರಧಾನಿ ಮೋದಿ ಅವರಿಗೆ ಸಂದೇಶ ರವಾನಿಸಿದರು. ಇದೇ ವೇಳೆ ಬಿಜೆಪಿಗೂ ಕರ್ನಾಟಕದಲ್ಲಿನ ವಿಧಾನಸಭಾ ಫಲಿತಾಂಶದ ಬಳಿಕ ಜೆಡಿಎಸ್‌ ಜತೆಮೈತ್ರಿ ಮಾಡಿಕೊಳ್ಳುವುದರಿಂದ ಲೋಕಸಭಾ ಚುನಾವಣೆಗೆ ಅನುಕೂಲವಾಗಬಹುದು ಎಂಬ ಭಾವನೆ ದಟ್ಟವಾಗತೊಡಗಿತ್ತು. ಅಂತಿಮವಾಗಿ ಮೈತ್ರಿಯ ನಿರ್ಧಾರ ಹೊರಬಿತ್ತು. ಆರಂಭದಲ್ಲಿ ಈ ಮೈತ್ರಿಯಿಂದ ಯಾರಿಗೆ ಲಾಭವಾಗುತ್ತದೆ ಎಂಬುದರ ಬಗ್ಗೆ ಜಿಜ್ಞಾಸೆ  ಇತ್ತು. 

Lok Sabha Election: ಸಚಿವರ ಕ್ಷೇತ್ರಗಳ ಹಿನ್ನಡೆ ಬಗ್ಗೆ ಆತ್ಮಾವಲೋಕನ ಅಗತ್ಯ: ಸಚಿವ ಪರಮೇಶ್ವರ್‌

ಬಿಜೆಪಿಗೇನೂ ಲಾಭವಾಗುವುದಿಲ್ಲ. ಜೆಡಿಎಸ್‌ಗೆ ಲಾಭ ಮಾಡಿಕೊಡುವುದಕ್ಕಾಗಿಯೇ ಮೈತ್ರಿ ಏರ್ಪಟ್ಟಂತಿದೆ ಎಂಬ ಮಾತು ಕೇಳಿಬಂದಿತ್ತು. ಆದರೆ, ಅಂತಿಮವಾಗಿ ಫಲಿ ತಾಂಶಹೊರಬಿದ್ದ ಬಳಿಕ ಜೆಡಿಎಸ್ ಜತೆಗಿನ ಮೈತ್ರಿಯಿಂದ ಬಿಜೆಪಿಗೂ ಲಾಭವಾಗಿರುವುದು ಸ್ಪಷ್ಟವಾಗಿ ಕಂಡು ಬಂತು. ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈತಿ ಬಿಜೆಪಿ 25ರಲ್ಲಿ ಮತ್ತು ಜೆಡಿಎಸ್ ಕೇವಲ ಮೂರರಲ್ಲಿ ಸ್ಪರ್ಧಿಸಿತ್ತು. ಈ ಪೈಕಿ ಬಿಜೆಪಿ 17ರಲ್ಲಿ ಜಯ ಗಳಿಸಿದರೆ, ಜೆಡಿಎಸ್ ಎರಡರಲ್ಲಿ ಗೆಲುವು ಸಾಧಿಸಿತು. ಇಬ್ಬರು ಸಂಸದರು ಆಯ್ಕೆಯಾದರೂ ಕುಮಾರಸ್ವಾಮಿ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡಿದ್ದು, ಒಳ್ಳೆಯ ಖಾತೆ ಸಿಗುವ ನಿರೀಕ್ಷೆಯೂ ಇದೆ. ಒಟ್ಟಿನಲ್ಲಿ ಮೈತ್ರಿ ನಿರ್ಣಯ ಜೆಡಿಎಸ್‌ ಶಕ್ತಿ ತಂದು ಕೊಟ್ಟಂತಾಗಿದೆ.

click me!