ಪರಿಷತ್‌ ಚುನಾವಣೆಗೆ 98000 ಮತದಾರರು : ಚುನಾವಣೆ ಆಯೋಗ

By Kannadaprabha News  |  First Published Nov 14, 2021, 6:51 AM IST
  • ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆ
  • ವಿಧಾನಪರಿಷತ್‌ಗೆ ನಡೆಯುವ ಚುನಾವಣೆಯ 25 ಕ್ಷೇತ್ರಗಳಲ್ಲಿ ಒಟ್ಟು 98,846 ಮತದಾರರು

 ಬೆಂಗಳೂರು (ನ.14):  ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಯ 25 ಕ್ಷೇತ್ರಗಳಲ್ಲಿ ಒಟ್ಟು 98,846 ಮತದಾರರಿದ್ದು, 6,073 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ.

98,846 ಮತದಾರರ ಪೈಕಿ 51,474 ಪುರುಷ ಮತ್ತು 51,474 ಮಹಿಳಾ ಮತದಾರರಿದ್ದಾರೆ. ಮೂವರು ಇತರೆ ಮತದಾರರಿದ್ದಾರೆ. ಚುನಾವಣೆಗೆ ಆಯೋಗವು ಸಿದ್ಧತೆ ಕೈಗೊಂಡಿದ್ದು, ಶಾಂತಿಯುತವಾಗಿ ನಡೆಯಲು ಕ್ರಮ ಕೈಗೊಂಡಿದೆ. ಕೋವಿಡ್‌ ನಿಯಮನ್ವಯ ಚುನಾವಣೆ ನಡೆಸಲು ಆಯೋಗವು ಸೂಚನೆ ನೀಡಿದೆ.

Tap to resize

Latest Videos

undefined

ಜಿ.ಪಂ, ತಾ.ಪಂ ಸದಸ್ಯರಿಲ್ಲದೇ ಪರಿಷತ್ ಫೈಟ್  : 

ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್‌(Vidhan Parishat) 25 ಸ್ಥಾನಗಳಿಗೆ ಚುನಾವಣೆ(Election) ಘೋಷಣೆಯಾಗಿದ್ದರಿಂದ ಅಖಾಡ ರಂಗೇರತೊಡಗಿದೆ. ಆದರೆ ಈ ಚುನಾವಣೆಯಲ್ಲಿ ಪ್ರಮುಖವಾಗಿ ಮತದಾನ ಮಾಡುವ ಜಿಲ್ಲಾ(Zilla Panchayat) ಹಾಗೂ ತಾಲೂಕು ಪಂಚಾಯ್ತಿಗಳಿಗೆ(Taluk Panchayat) ಸದಸ್ಯರೇ ಇಲ್ಲದಂತಾಗಿದೆ.

ಈ ಎರಡೂ ಪ್ರಮುಖ ಸ್ಥಳೀಯ ಸಂಸ್ಥೆಗಳಿಗೆ(Local Body) ಇನ್ನೂ ಚುನಾವಣೆ ನಡೆದಿಲ್ಲ. ಘೋಷಣೆಯಾಗಿದ್ದ ಚುನಾವಣೆ ಕ್ಷೇತ್ರ ಪುನರ್‌ವಿಂಗಡಣೆ ದೋಷಗಳಿಂದಾಗಿ ತೀವ್ರ ಆಕ್ಷೇಪಕ್ಕೊಳಗಾಗಿ ಮುಂದೂಡಲ್ಪಟ್ಟಿದೆ. ಕ್ಷೇತ್ರ ಪುನರ್‌ ವಿಂಗಡಣೆ ವಿವಾದಕ್ಕೊಳಗಾಗಿ ರಾಜ್ಯಾದ್ಯಂತ(Karnataka) 2,000 ದಷ್ಟುತಕರಾರು ಅರ್ಜಿಗಳು ಬಂದಿರೋದರಿಂದ ರಾಜ್ಯ ಸರಕಾರ(Government of Karnataka) ಜಿಪಂ, ತಾಪಂ ಚುನಾವಣೆಗಳನ್ನು ಮುಂದೂಡಿ ಕ್ಷೇತ್ರಗಳ ಪುನರ್‌ವಿಂಗಡ ಆಯೋಗ ಕೂಡಾ ರಚಿಸಿದೆ.

ಆದರೆ ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದ ಎಲ್ಲಾ ಜಿಪಂ, ತಾಪಂ ಗಳ ಅಧಿಕಾರಾವಧಿ ಮುಗಿದು ಹೋಗಿದೆ, ಪ್ರಯುಕ್ತ ಯಾವುದೇ ಜಿಪಂ, ತಾಪಂ ಸದಸ್ಯರು ತಮ್ಮ ಹಕ್ಕು ಚಲಾಯಿಸುವಂತಿಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಚುನಾವಣೆ ಆಯೋಗ ಡಿಸೆಂಬರ್‌ನಲ್ಲಿ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗುವ ವಿಧಾನ ಪರಿಷತ್‌ ಸ್ಥಾನಗಳಿಗೆ ಚುನಾವಣೆಗೆ ಮುಂದಾಗಿ ಸುದ್ದಿಗೆ ಗ್ರಾಸವಾಗಿದೆ.

Karnataka Politics| ಸಿಎಂ ಬೊಮ್ಮಾಯಿ ಅವಧಿ ಪೂರೈಸುತ್ತಾರೆ: ಬಿಎಸ್‌ವೈ!

ಪರಿಷತ್‌ ಚುನಾವಣೆಗೆ ಮತದಾನ ಮಾಡಬೇಕಾಗಿರುವ ಜಿಪಂ ಹಾಗೂ ತಾಪಂ ಗಳಿಗೆ ಚುನಾವಣೆಯೇ ನಡೆಸಿಲ್ಲ, ಏತನ್ಮಧ್ಯೆ ಚುನಾವಣೆ ಆಯೋಗ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ ಚುನಾವಣೆ ಘೋಷಣೆ ಮಾಡಿರುವುದು ಜಿಪಂ ಹಾಗೂ ತಾಪಂ ಸದಸ್ಯರ ಮತದಾನದ(Vote) ಮೂಲ ಹಕ್ಕನ್ನು ಕಿತ್ತುಕೊಡಂತಾಗಿದೆ, ಈ ನಡೆ ಅಧಿಕಾರ ವಿಕೇಂದ್ರೀಕರಣದ ವಿರುದ್ಧವಾಗಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.

ಜಿಪಂ, ತಾಪಂಗಳಿಗೆ ಚನಾವಣೆ ನಡೆಸದೆ ಪರಿಷತ್‌ ಚುನಾವಣೆ ನಡೆಸುವುದು ಸರಿಯಾದ ಕ್ರಮವಲ್ಲ, ಜಿಪಂ, ತಾಪಂ ಚುನಾವಣೆಗಳು ನಡೆಸೋವರೆಗೂ ಪರಿಷತ್‌ನ ಚುನಾವಣೆಗಳನ್ನು ಮುಂದೂಡುವಂತೆ ಅನೇಕರು ಚುನಾವಣಾ ಆಯೋಗದ(Election Commission) ಗಮನ ಸೆಳೆದಿದ್ದಾರೆ.

ಚುನಾವಣಾ ಆಯೋಗಕ್ಕೆ ಮಾಜಿ ಉಪಸಭಾಪತಿ ಬಿಆರ್‌ ಪಾಟೀಲ್‌ ಪತ್ರ

ಜಿಪಂ, ತಾಪಂ ಚುನಾವಣೆ ನಡೆಸದೆ ಪರಿಷತ್‌ಗೆ ಸ್ಥಳೀಯ ಸಂಸ್ಥೆಗಳಿಂದ ಚುನಾವಣೆ ನಡೆಸುವುದು ಸರಿಯಲ್ಲ ಎಂದು ಮಾಜಿ ಉಪ ಸಭಾಪತಿ ಬಿಆರ್‌ ಪಾಟೀಲ್‌(BR Patil) ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಆಕ್ಷೇಪಿಸಿದ್ದಾರೆ. ಅಧಿಕಾರ ವಿಕೇಂದ್ರೀಕರಣಕ್ಕಾಗಿ ಸಂವಿಧಾನದ ಅನುಚ್ಛೇದ 73, 74 ನೇ ವಿಧಿಗೆ ತಿದ್ದುಪಡಿ ತಂದು ಗ್ರಾಪಂ, ಕಾಪಂ ಹಾಗೂ ಜಿಪಂ ಗಳನ್ನು ಮಾಡಲಾಗಿದೆ, ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದ ಎಲ್ಲಾ ಜಿಪಂ ಹಾಗೂ ತಾಪಂ ಗಳ ಅಧಿಕಾರಾವಧಿ ಮುಗಿದು ಹೋದ ಹಂತದಲ್ಲಿ ಪರಿಷತ್‌ ಫೈಟ್‌ ಸಾಗಿದೆ. ಯಾವುದೇ ಜಿಪಂ, ತಾಪಂ ಸದಸ್ಯರಿಲ್ಲ, ಇಂತಹ ಸ್ಥಿತಿಯಲ್ಲಿ ಚುನಾವಣೆ ನಡೆಸೋದು ಜಿಪಂ, ತಾಪಂ ಸದಸ್ಯರ ಮತದಾನದ ಮೂಲ ಹಕ್ಕನ್ನು ಕಿತ್ತುಕೊಂಡಂತೆ, ಈ ನಡೆ ಅಧಿಕಾರ ವಿಕೇಂದ್ರೀಕರಣದ ವಿರುದ್ಧವಾಗಿದೆ. ಜಿಪಂ, ತಾಪಂ ಚುನಾವಣೆಗಳು ಮುಗಿಯುವ ವರೆಗೂ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ ಚುನಾವಣೆ ಮುಂದೂಡುವಂತೆ ಆಯೋಗಕ್ಕೆ ಬಿಆರ್‌ ಪಾಟೀಲ್‌ ಆಗ್ರಹಿಸಿದ್ದಾರೆ.

click me!