Kalaburagi: ನ.14ರಂದು ಸೇಡಂನಲ್ಲಿ ಸಹಕಾರಿ ಸಪ್ತಾಹ: ಉದ್ಘಾಟನೆಗೆ ಸಿಎಂ ಬೊಮ್ಮಾಯಿ ಆಗಮನ

By Govindaraj S  |  First Published Nov 4, 2022, 7:24 PM IST

ರಾಷ್ಟ್ರಕೂಟರ ನಾಡು, ಸಾಂಸ್ಕೃತಿಕ ನಗರಿ ಸೇಡಂದಲ್ಲಿ ಬರುವ ನವೆಂಬರ್ 14ರಂದು ನಡೆಯುವ 69ನೇ ಅಖಿಲ ಭಾರತ ಸಹಕಾರ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮ ಮಾದರಿಯಾಗಿ ನಡೆಯಲು ನಾವೆಲ್ಲರೂ ಹಗಲಿರುಳು ಶ್ರಮಿಸಬೇಕಾಗಿದೆ ಎಂದು ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಹೇಳಿದರು.


ಕಲಬುರಗಿ (ನ.04): ರಾಷ್ಟ್ರಕೂಟರ ನಾಡು, ಸಾಂಸ್ಕೃತಿಕ ನಗರಿ ಸೇಡಂದಲ್ಲಿ ಬರುವ ನವೆಂಬರ್ 14ರಂದು ನಡೆಯುವ 69ನೇ ಅಖಿಲ ಭಾರತ ಸಹಕಾರ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮ ಮಾದರಿಯಾಗಿ ನಡೆಯಲು ನಾವೆಲ್ಲರೂ ಹಗಲಿರುಳು ಶ್ರಮಿಸಬೇಕಾಗಿದೆ ಎಂದು ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ ( ಡಿಸಿಸಿ) ಬ್ಯಾಂಕ್ - ಕೆಕೆಆರ್‌ಟಿಸಿ ಅಧ್ಯಕ್ಷರಾಗಿರುವ ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಹೇಳಿದರು. ಅಖಿಲ ಭಾರತ ಸಹಕಾರಿ ಸಪ್ತಾಹ ಅಂಗವಾಗಿ ನಗರದ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಪೂರ್ವ ಸಿದ್ದತಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸಹಕಾರ ಸಪ್ತಾಹ ಉದ್ಘಾಟನಾ ಸಮಾರಂಭದಲ್ಲಿ 50 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಹೀಗಾಗಿ ಶಿಸ್ತು ಬದ್ದ ಅಂದರೆ ಸಹಕಾರಿ ಶಿಕ್ಷಣ ತಿಳುವಳಿಕೆ, ಉತ್ತಮ ಅತಿಥಿ ಸತ್ಕಾರ ಹಾಗೂ ಸಾಂಸ್ಕೃತಿಕ ವಾಗಿ ನಡೆಸಲು ಉದ್ದೇಶಿಸಲಾಗಿದೆ. ಆದ್ದರಿಂದ ಸಹಕಾರಿ ಕ್ಷೇತ್ರದ ಎಲ್ಲ ಅಧಿಕಾರಿಗಳು, ಸಹಕಾರಿ ಕ್ಷೇತ್ರದ ಸದಸ್ಯರು ಸಪ್ತಾಹ ಯಶಸ್ವಿಗೆ ಸರ್ವ ನಿಟ್ಟಿನಲ್ಲಿ ಕೈ ಜೋಡಿಸಬೇಕೆಂದರು. ಸಹಕಾರ ಸಪ್ತಾಹ ಮಾದರಿ ನಿಟ್ಟಿನಲ್ಲಿ ಈಗಲೇ ಅತಿಥಿ ಗೃಹಗಳನ್ನು ಕಾಯ್ದಿರಿಸುವುದು, ಸಾರಿಗೆ ವ್ಯವಸ್ಥೆ ಕಲ್ಪಿಸುವ, ಬಂದವರಿಗೆಲ್ಲರಿಗೂ ಉತ್ತಮ ಊಟ ಹಾಕಿಸುವ ಜತೆಗೆ ಉತ್ತಮ ರೀತಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡುವುದು.‌

Latest Videos

undefined

ಅಪ್ರಾಪ್ತ ಬಾಲಕಿಯ ರೇಪ್ & ಮರ್ಡರ್: ಬೆಚ್ಚಿಬಿದ್ದ ಕಲಬುರಗಿ

ಇಡೀ ಸಪ್ತಾಹಕ್ಕೆ ಕಿರೀಟ ಎನ್ನುವಂತ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವುದು ಕಾರ್ಯಸೂಚಿಗಳಾಗಿವೆ ಎಂದು ತೇಲ್ಕೂರ ವಿವರಣೆ ನೀಡಿದರು. ಸಹಕಾರಿ ಸಪ್ತಾಹ ಉದ್ಘಾಟನೆಗೆ ಮುಖ್ಯಮಂತ್ರಿ ಸೇರಿದಂತೆ ಸಚಿವರ ದಂಡು ಆಗಮಿಸಲಿದ್ದು, ಸಪ್ತಾಹದಲ್ಲಿ ಸಹಕಾರಿ ಧುರೀಣರನ್ನು ಸನ್ಮಾನಿಸಲಾಗುತ್ತಿದೆ. ಪ್ರಮುಖವಾಗಿ ನಮ್ಮೆಲ್ಲರ ಒತ್ತಾಯ ಹಾಗೂ ಮನವಿ ಮೇರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಹಕಾರ ಸಚಿವ ಎಸ್.ಟಿ.‌ಸೋಮಶೇಖರ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ ಅವರು ಸೇಡಂದಲ್ಲಿ ಸಹಕಾರ ಸಪ್ತಾಹ ನಡೆಸಲು ಒಪ್ಪಿಗೆ ಹಾಗೂ ಮೆಚ್ಚುಗೆ ಸೂಚಿಸಿದ್ದಾರೆ. ಹೀಗಾಗಿ ಸರ್ವ ನಿಟ್ಟಿನಲ್ಲಿ ಯಾವುದಕ್ಕೂ ಕೊರತೆಯಾಗದಂತೆ ಸಿದ್ದತೆ ಮಾಡಿಕೊಳ್ಳಬೇಕೆಂದರು. 

ಒಗ್ಗಟ್ಟಿನಲ್ಲಿ ಬಲವಿದೆ ಎಂಬುದೇ ಸಹಕಾರಿ ತತ್ವವಾಗಿದೆ.‌ ಆದ್ದರಿಂದ ಸಹಕಾರಿ ಕ್ಷೇತ್ರ ಬಲಪಡಿಸಲು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹತ್ತಾರು ಯೋಜನೆಯಳನ್ನು ಜಾರಿಗೆ ತಂದಿದ್ದಾರೆ.‌ ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಪರಿಸ್ಥಿತಿ ಈಗ ಸುಧಾರಣೆಯಾಗಿದೆ. ಇದಕ್ಕೆಲ್ಲ ಸಹಕಾರಿ ತತ್ವ ಮತ್ತು ಪ್ರಮಾಣಿಕತೆಯೇ ಕಾರಣವಾಗಿದೆ ಎಂದು ರಾಜಕುಮಾರ ಪಾಟೀಲ್ ತೇಲ್ಕೂರ ಹೇಳಿದರು. ಸಹಕಾರಿ ಇಲಾಖೆಯ ಅಪರ ನಿಬಂಧಕರಾದ ಕೆ.ಎಂ ಆಶಾ ಅವರು ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಅಖಿಲ ಭಾರತ ಸಹಕಾರ ಸಪ್ತಾಹ ನಡೆಸಲಿಕ್ಕಾಗಿಲ್ಲ. ಆದ್ದರಿಂದ ಕಲ್ಯಾಣ ಕರ್ನಾಟಕದ ಸೇಡಂದಲ್ಲಿ ನಡೆಯುವ ಸಪ್ತಾಹ ಉದ್ಘಾಟನಾ ಸಮಾರಂಭ ಯಾವುದಕ್ಕೂ ಕೊರತೆಯಾಗದಂತೆ ನೆರವೇರಲು ಎಲ್ಲರೂ ತನು ಮನದಿಂದ ಕೈ ಜೋಡಿಸಬೇಕೆಂದರು. 

ಕಲಬುರಗಿ: ಲಾರಿ, ಬೈಕ್‌ ಡಿಕ್ಕಿಯಾಗಿ ಇಬ್ಬರಿಗೆ ಗಾಯ, ಬಾರದ 108 ಆ್ಯಂಬುಲೆನ್ಸ್‌

ಸಭೆಯಲ್ಲಿ ಜಂಟಿ ನಿಬಂಧಕ ಎ.ಜೆ. ಕಾಂತರಾಜ, ಡಿಸಿಸಿ ಬ್ಯಾಂಕ್ ನಿರ್ದೇಶಕರುಗಳಾದ ಶರಣಬಸಪ್ಪ ಪಾಟೀಲ್ ಅಷ್ಠಗಿ, ಅಶೋಕ ಸಾವಳೇಶ್ವರ, ಕಲ್ಯಾಣರಾವ್ ಪಾಟೀಲ್ ಮಳಖೇಡ, ಚಂದ್ರಶೇಖರ ತಳ್ಳಳ್ಳಿ, ಬಳ್ಳಾರಿ ಡಿಸಿಸಿ ಬ್ಯಾಂಕ್ ಎಂಡಿ ಬಿ.ಸಿ. ಹರೀಶ್, ಬೀದರ್ ಡಿಸಿಸಿ ಬ್ಯಾಂಕ್ ಎಂಡಿ ಮಲ್ಲಿಕಾರ್ಜುನ ಮಹಾಜನ್, ಕಲಬುರಗಿ- ಯಾದಗಿರಿ ಡಿಸಿಸಿ ಬ್ಯಾಂಕ್ ಎಂಡಿ ಶರಣಬಸಪ್ಪ ಬೆಣ್ಣೂರು, ಕಲಬುರಗಿ- ಯಾದಗಿರಿ ಸಹಕಾರಿ ಯೂನಿಯನ್ ಅಧ್ಯಕ್ಷ ದೀಪಾರೆಡ್ಡಿ, ಬಳ್ಳಾರಿ, ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು, ಉಪನಿಬಂಧಕರು, ಸಹಾಯಕ ನಿಬಂಧಕರು ಸೇರಿದಂತೆ ಮುಂತಾದವರಿದ್ದರು.

click me!